ಶಂಕರ ಮೊಕಾಶಿ ಪುಣೇಕರ – ಒ೦ದು ಕೃತಿ ಪರಿಚಯ

ಪರ್ಯಾಯ ಚಿಂತನೆಯ ಗಟ್ಟಿ ಕೃತಿ

ಬಸವರಾಜ ಕಲ್ಗುಡಿ

ಕೃಪೆ : ದ ಸ೦ಡೆ ಇ೦ಡಿಯನ್

  ಸುಮಾರು ನಲವತ್ತು ವರ್ಷಗಳ ಹಿಂದಿನ ಕೃತಿ ಇದು. ಇಂಗ್ಲಿಷ್ ಮೂಲದಲ್ಲಿ ಶ್ರೀ ಶಂಕರ ಮೊಕಾಶಿ ಪುಣೇಕರ ಅವರು ಬರೆದ ಈ ಕೃತಿ ಮಧ್ಯಕಾಲೀನ ಭಾರತದಲ್ಲಿನ ತಳ ಸಮುದಾಯಗಳ ತತ್ವ ಚಿಂತನೆಯ ಸ್ವರೂಪಗಳು, ವಿಭಿನ್ನ ನೆಲೆಗಳು, ಚಾರಿತ್ರಿಕ ಬೆಳವಣಿಗೆ, ತಿಕ್ಕಾಟಗಳು ಮೊದಲಾದ ವಿಷಯಗಳನ್ನು ಬೃಹತ್ ಆಕರ ವಿಶ್ಲೇಷಣೆಗಳ ಮೂಲಕ ಸಾದರಪಡಿಸುತ್ತದೆ. ಆಧುನಿಕ ಭಾರತದ ಚಿಂತನೆಯ ಸಂದರ್ಭದಲ್ಲಿ ಇಷ್ಟು ಪ್ರಖರವಾಗಿ ಇಂಥ ಪರ‍್ಯಾಯ ಚಿಂತನೆಯ ಸ್ವರೂಪವನ್ನು ತಾತ್ವಿಕವಾಗಿ ಗಟ್ಟಿಯಾಗಿ ಹಿಡಿದ ಕೃತಿಗಳು ಇಲ್ಲ. ಎಲ್ಲವನ್ನೂ ’ಹಿಂದೂ’ ಎಂಬ ವೈದಿಕ ಛಾಯೆಯ ನೆಲೆಯಲ್ಲಿಯೇ ಅಥವಾ ಅಕ್ಷರ ಪ್ರಪಂಚದಲ್ಲಿ ದಾಖಲಾಗಿ, ಹೆಚ್ಚು ಪ್ರಚಾರ ಗಳಿಸಿದ ರಾಜಪ್ರಭುತ್ವ ಹಾಗೂ ಮಾರ್ಗ ಧರ್ಮಗಳ (ಜೈನ, ಬೌದ್ಧ) ನೆಲೆಯಲ್ಲಿಯೇ ಭಾರತೀಯ ಚರಿತ್ರೆಯನ್ನು ನೋಡಿದ ಧಾಟಿಯೇ ಪ್ರಧಾನವಾಗಿತ್ತು. ಅದಕ್ಕಿಂತ ಸಂಪೂರ್ಣ ಭಿನ್ನವಾಗಿ, ನಲವತ್ತು ವರ್ಷಗಳ ಹಿಂದೆಯೇ ಪುಣೇಕರ್ ಅವರು ಚಿಂತಿಸಿದ್ದರು ಎಂಬುದನ್ನು ಗಮನಿಸಿದರೆ ಅವರ ಚಿಂತನೆಯ ಹೊಳಹುಗಳು ಅರ್ಧ ಶತಮಾನಗಳಷ್ಟು ಮುಂದೆ ಇದ್ದವು ಎನ್ನುವುದು ಗೊತ್ತಾಗುತ್ತದೆ. ಕನ್ನಡದಲ್ಲಿ ಈ ಬಗೆಯ ಚಿಂತನೆಯನ್ನು ಮಾಡಲು ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಪ್ರಯತ್ನಪಟ್ಟವರು ಶಂ.ಬಾ.ಜೋಶಿಯವರು. ಪ್ರಾಚೀನ ಭಾರತದಲ್ಲಿ ತತ್ವಚಿಂತನೆಯನ್ನು ಬದುಕಿನ ಅತ್ಯುನ್ನತ ಮೌಲ್ಯಗಳ ವಿಸ್ತರಣೆಯೆಂಬಂತೆ ಮಾಡಿದವರು ತಳ ಸಮುದಾಯಗಳು ಎನ್ನುವ ಪ್ರಮುಖ ವಿಶ್ಲೇಷಣೆ ಪುಣೇಕರ್ ಅವರ ಈ ಕೃತಿಯಲ್ಲಿ ಇದೆ. ಕೆಲವು ಚಿಂತನೆಗಳನ್ನು ಹೀಗೆ ಪಟ್ಟಿ ಮಾಡಬಹುದು: * ಇದುವರೆಗೂ ಆರ‍್ಯನ್ ಪ್ರಭುತ್ವದ ಚಿಂತನೆಯೇ ಪ್ರಧಾನವಾಗಿದೆ. ದ್ರಾವಿಡ ಸಮುದಾಯವು ಆರ‍್ಯನ್ ಪ್ರಭಾವಕ್ಕೆ ಒಳಗಾಗಿ, ತಮ್ಮನ್ನು ಸಂಸ್ಕೃತೀಕರಿಸಿಕೊಂಡವು ಎನ್ನುವ ವಿಚಾರದ ಹಿನ್ನೆಲೆಯಲ್ಲಿಯೇ ಭಾರತದ ಸಾಮಾಜಿಕ ಚರಿತ್ರೆಯು ರೂಪುಗೊಂಡಿದೆ. ಆದರೆ, ಈ ಆರ‍್ಯೀಕರಣದ ಏಕಮುಖ ಚಲನೆಯನ್ನು ಪುಣೇಕರ್ ಅವರು ನಿವಾರಿಸಿ, ಆರ‍್ಯರೂ ದ್ರಾವಿಡೀಕರಣಗೊಂಡ ಬಗೆಯನ್ನು ವಿವರಿಸುತ್ತಾರೆ. ನಾವು ಈಗ ಯಾವುದನ್ನು ವೈದಿಕ ದೇವತೆಗಳು ಎಂದು ಗುರುತಿಸುತ್ತೇವೋ ಅವುಗಳೆಲ್ಲವೂ ತಳಸಮುದಾಯದ ವಿಭಿನ್ನ ಗುಂಪುಗಳ ಸಗುಣ ದೈವಗಳಾಗಿದ್ದವು ಎನ್ನುವುದನ್ನು ಪುಣೇಕರ್ ವಿಭಿನ್ನ ಆಕರಗಳ ಮೂಲಕ ಚರ್ಚಿಸುತ್ತಾರೆ. * ಗುರುವಿನ ಕಲ್ಪನೆ ಮೂಲತಃ ಬುಡಕಟ್ಟಿನದಾಗಿದ್ದು ನಂತರ ಮೇಲುಜಾತಿಯ ನಂಬಿಕೆಯ ಭಾಗವಾಗಿರುವುದನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ. ಕೊರವ > ಗೊರವ > ಗುರುವ > ಗುರು ಆಗಿರುವುದು ಮತ್ತು ’ಕಾಲಜ್ಞಾನ’ದ ಕೊರಮರು ಈ ಚಿಂತನೆಯ ಗುರುಗಳಾಗಿರುವುದನ್ನೂ ಇಲ್ಲಿ ವಿವರಿಸಲಾಗಿದೆ. * ’ಪಂಚಮ’ ಎನ್ನುವ ಪದವು ಆಧುನಿಕ ಸಂದರ್ಭದಲ್ಲಿ ಅಪಾರ್ಥಕ್ಕೊಳಗಾಗಿರುವುದನ್ನು ಪುಣೇಕರ್ ಸಮರ್ಥವಾಗಿ ವ್ಯಾಖ್ಯಾನಕ್ಕೆ ಗುರಿಪಡಿಸಿದ್ದಾರೆ. ’ಪಂಚಮ’ರು ಎನ್ನುವುದನ್ನು ಈಗ ನಾಲ್ಕು ವರ್ಣದ ಆಚೆಯವರು, ಅಸ್ಪೃಶ್ಯರು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಪುಣೇಕರ್ ಅವರು ’ಪನ್’ ನಿಂದ ಉಗಮವಾಗುವ ಈ ಪದ ಕಾಯಕ ಜೀವಿಗಳ ಸಮುದಾಯವನ್ನು ಸೂಚಿಸುತ್ತದೆ, ’ಪಂಚ’ ಎನ್ನುವುದಕ್ಕೆ ಹತ್ತಿಬಟ್ಟೆ ಎನ್ನುವ ಅರ್ಥ ಇರುವುದರಿಂದ ಬಟ್ಟೆಯನ್ನು ತಯಾರಿಸುವ ಕುರುಬರೋ, ಜಾಡರೋ ಇವರು ಆಗಿದ್ದಿರಬೇಕೆಂಬ ವಾದವನ್ನು ಮಂಡಿಸುತ್ತಾರೆ. ಈಗಲೂ ತಳ ಸಮುದಾಯದಿಂದ ಬಂದ ’ಪಂಚಮಸಾಲಿ’ ಲಿಂಗಾಯತರು ಬಹುಶಃ ಮೂಲತಃ ಕಾಯಕಜೀವಿಗಳೇ ಆಗಿರಬೇಕು ಎನ್ನುವ ವಾದವೂ ಈ ಕೃತಿಯಲ್ಲಿದೆ. ಈ ಕೃತಿಯು ನಮ್ಮ ನಡುವಣ ಅನೇಕ ಭ್ರಮೆಗಳನ್ನು ಕಳಚಿ ಹಾಕುವಲ್ಲಿ ಅಗಾಧವಾದ ವಿದ್ವತ್ ಪ್ರತಿಭೆಯನ್ನು ತೋರಿದೆ. ಹಿಂದೂ ಎಂದರೆ ವೈದಿಕವೆಂಬ ಏಕಘನ ಮಾದರಿಯ ಆಕೃತಿಯನ್ನು ಇದು ಒಡೆದುಹಾಕಿದೆ. ಸಂಸ್ಕೃತ ಭಾಷೆಯೂ ಈ ಸಮುದಾಯಗಳ ಸೃಷ್ಟಿ ಮತ್ತು ಬಳಕೆಯ ಭಾಗವಾಗಿ ವೈವಿಧ್ಯಮಯವಾಗಿ ರೂಪುಗೊಂಡಿದೆ ಎನ್ನುವುದು ಈ ಕೃತಿ ಓದಿದಾಗ ಹೊಳೆಯದಿರದು. ಭಾರತದ ಇತಿಹಾಸಜ್ಞರು ಹಾಗೂ ಸಂಸ್ಕೃತಿ ಚಿಂತಕರು ಎತ್ತಿಕೊಳ್ಳದ ಮೂಲಭೂತ ಪ್ರಶ್ನೆಗಳನ್ನು ಪುಣೇಕರ್ ಎತ್ತಿಕೊಂಡಿದ್ದಾರೆ. ಪಾಂಡಿತ್ಯ ಮತ್ತು ಸಂಶೋಧನೆಯಲ್ಲಿ ಇರಬೇಕಾದ ಮೂಲಭೂತ ಶೋಧದ ಅಲೆಮಾರಿತನ ಪುಣೇಕರ್ ಅವರಲ್ಲಿ ಗೋಚರಿಸುತ್ತದೆ. ಕನ್ನಡಕ್ಕೆ ಬಂಜಗೆರೆ ಜಯಪ್ರಕಾಶ್ ಅವರು ಈ ಕೃತಿಯನ್ನು ತಂದು ನಮ್ಮ ಕಾಲಕ್ಕೆ ಸಮುದಾಯವು ಎತ್ತಬೇಕಾದ ಪ್ರಶ್ನೆಗಳು ಯಾವುವು ಎನ್ನುವುದನ್ನು ಕೇಳಿಕೊಳ್ಳುವಂತೆ ಮಾಡಿದ್ದಾರೆ. ಸಮುದಾಯದ ಧಾರ್ಮಿಕ, ಸಾಮಾಜಿಕ ಹಕ್ಕೊತ್ತಾಯದ ಪ್ರಶ್ನೆಯೂ ಇದರಲ್ಲಿ ಸೇರಿದೆ. ಉಚಿತ ಶೀರ್ಷಿಕೆಗಳಿಂದ ಈ ಪುಸ್ತಕವು ಓದುಗರ ಹಾಗೂ ಸಂಸ್ಕೃತಿ ಚಿಂತಕರಲ್ಲಿ ಹೊಸ ಚೇತನ ಮೂಡಿಸಲಿದೆ. ಟಿಎಸ್‌ಐ ಕೃತಿಯ ಪುಟಗಳಿಂದ “ವಿಭಿನ್ನ ಕಾಯಕ ಜಾತಿಗಳ ಉಗಮಕ್ಕೆ ಕಾರಣ ಬೌದ್ಧ ಧರ್ಮದ ಅವನತಿ. ಬೌದ್ಧ ಧರ್ಮದ ಅವನತಿಯಿಂದ ಸೈನಿಕ ವೃತ್ತಿಯನ್ನು ಕಳೆದುಕೊಂಡ ಬಹುಸಂಖ್ಯಾತ ವರ್ಗವು ವಿಭಿನ್ನ ವೃತ್ತಿಗಳ ಕಡೆಗೆ ಮುಖಮಾಡಿತು; ಆರ್ಥಿಕವಾಗಿ ಇಂಥ ಸಂದರ್ಭಗಳಲ್ಲಿ ಜಯಿಸಿದವರು ವರ್ತಕ, ವ್ಯಾಪಾರಿ, ಕೃಷಿಕರಾದರು. ಹಾಗೆ, ಜಯಿಸಲಾರದವರು ಕೆಳದರ್ಜೆಯ ಕಾಯಕಗಳನ್ನು ಮಾಡಿ ಜಾತಿಯಲ್ಲಿ ಹೀನರೆನಿಸಿದರು. ಅನೇಕ ಸೈನಿಕ ವೃತ್ತಿ ಮಾಡುತ್ತಿದ್ದವರನ್ನು ವೈದಿಕ ಸಮಾಜವು ಒಂದುಗೂಡಿಸಿ, ಬೌದ್ಧ ಧರ್ಮದ ವಿರುದ್ಧ ಸಂಘಟಿತವಾಗುವ ಹಾಗೆ ಮಾಡಿತು]]>

‍ಲೇಖಕರು G

May 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This