ಶೂದ್ರ ಕ೦ಡ ಪ್ರಸನ್ನ (ಭಾಗ ೩)

– ಶೂದ್ರ ಶ್ರೀನಿವಾಸ

(ಭಾಗ ೧ ಮತ್ತು ೨ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ) ಎಂಬತ್ತರ ದಶಕದ ಕೊನೆಯ ಭಾಗ ಆಗಿನ ಚಿತ್ರದುರ್ಗ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿ ಒಂದು ವಾರದ ನಾಟಕ ರಚನೆಯ ಶಿಬಿರವಿತ್ತು. ಇದನ್ನು ಬಿ.ವಿ.ಕಾರಂತರು ಮತ್ತು ಪ್ರಸನ್ನ ಅವರು ನಾಟಕ ಅಕಾಡೆಮಿಯ ಮೂಲಕ ವ್ಯವಸ್ಥೆ ಮಾಡಿದ್ದರು. ಆಗ ಕಾರಂತರು ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಪ್ರಸನ್ನ ಅವರು ಶಿಬಿರದ ನಿದರ್ೇಶಕರಾಗಿದ್ದರು. ಸುಮಾರು ಇಪ್ಪತ್ತೈದು ಮುವತ್ತು ಮಂದಿ ಕನರ್ಾಟಕದ ಬೇರೆ ಬೇರೆ ಕಡೆಯಿಂದ ಬಂದ ಲೇಖಕರು ಭಾಗವಹಿಸಿದ್ದರು. ಇವರೆಲ್ಲ ರಂಗಭೂಮಿಯ ಬಗ್ಗೆ ಕಳಕಳಿಯನ್ನು ಹೊಂದಿದವರು. ಈ ಶಿಬಿರದ ಜಾಗವನ್ನು ಆದರ್ಶ ರಾಜಕಾರಣಿ ಸ್ಕೌಟ್ಸ್ ಮತ್ತು ಗೈಡ್ಸ್ನ ಕನರ್ಾಟಕದ ಮುಖ್ಯಸ್ತರಾದ ಕೊಂಡಜ್ಜಿ ಬಸಪ್ಪನವರು ರೂಪಿಸಿದ್ದು. ಪ್ರಸನ್ನ ಅವರ ಅಭಿರುಚಿಗೆ ಹೇಳಿಮಾಡಿಸಿದ ಸ್ಥಳ. ವಿಶಾಲವಾದ ಪ್ರದೇಶ ಏರುತಗ್ಗುಗಳು. ಪಕ್ಕದಲ್ಲಿ ಮನಮೋಹಕವಾದ ಕೆರೆ. ಎಲ್ಲೆಂದರಲ್ಲಿ ನುಣುಪಾದ ವಿಧವಿಧವಾದ ಕಲ್ಲುಗಳು ಇವನ್ನು ಆರಿಸಿಕೊಳ್ಳುವುದರಲ್ಲಿಯೇ ಹಿರಿಯ ಲೇಖಕರು ಹಾಗೂ ರಂಗತಜ್ಞರಾದ ಪ್ರೊ.ಕ.ವೆಂ. ರಾಜಗೋಪಾಲ್ ಅವರು ಸುದ್ದಿಮಾಡಿದ್ದರು. ಇಂಥ ಶಿಬಿರದ ಲವಲವಿಕೆಗೆ ಬಂದು ಸೇರಿಕೊಂಡವರಂತೆ ಹಾ.ಸಾ.ಕೃ ಹಾಗೂ ಉಡುಪಿಯ ರಾಮದಾಸ್ ಅಂಥವರೂ ಇದ್ದರು. ಪ್ರಸನ್ನ ಸಮಯ ಪಾಲನೆಯ ದೃಷ್ಟಿಯಿಂದ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದರು. ಇದಕ್ಕಾಗಿ ನಾನು ಮತ್ತು ಹಾಸಾಕೃ ಸೇರಿಕೊಂಡು ಪ್ರಸನ್ನ ಅವರನ್ನು ನಮ್ಮ ಶಿಬಿರದ ಹೆಡ್ ಮಾಸ್ಟರ್ ಎಂದು ಸುದ್ದಿ ಮಾಡಿದೆವು. ಅದನ್ನು ನಗುನಗುತ್ತಲೇ ಸ್ವೀಕರಿಸಿದರು. ಆದರೆ ಯಾರ್ಯಾರೋ ತಜ್ಞರನ್ನು ಕರೆದು ನಾಟಕರಚನೆ ಕುರಿತು ಉಪನ್ಯಾಸ ಮತ್ತು ಚಚರ್ೆಯನ್ನು ಎಷ್ಟು ಅಚ್ಚುಕಟ್ಟಾಗಿ ಏರ್ಪಡಿಸುತ್ತಿದ್ದರು. ಪ್ರಸಿದ್ಧ ಮರಾಠಿ ನಾಟಕಕಾರ ವಿಜಯ ತೆಂಡ್ಕೋಲ್ಕರ್ ಅವರ ಮಾತನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಜೊತೆಯಲ್ಲಿ ನಮ್ಮ ನಟ ಅನಂತನಾಗ್ ಅವರೂ ಬಂದಿದ್ದರು. ಆ ಸಮಯದಲ್ಲಿ ಅನಂತನಾಗ್ ಅವರು ಪ್ರಿಯ ತೆಂಡೂಲ್ಕರ್ ಅವರನ್ನು ಮದುವೆಯಾಗುವರೆಂದು ಪತ್ರಿಕೆಗಳಲ್ಲಿ ಗಾಸಿಪ್ ಸುದ್ದಿ ಬರುತ್ತಿತ್ತು. ಶಿಬಿರದ ಕೆಲವರಿಗೆ ಅದೂ ಆಕರ್ಷಣೆಯೇ ಆಗಿತ್ತು. ತೆಂಡೂಲ್ಕರ್ ಅವರು ಎಂಥ ಚುರುಕಿನ ಮಾತುಗಾರರು. ಮಾತಿನ ಹಿಂದೆ ಚಿಂತನೆಯೂ ದಟ್ಟವಾಗಿತ್ತು. ಬಿ.ವಿ ಕಾರಂತರು, ಕೆ. ಮರುಳಸಿದ್ದಪ್ಪ ಮುಂತಾದವರು ತರಗತಿಗಳನ್ನು ತೆಗೆದುಕೊಂಡರು. ತಾಂತ್ರಿಕವಾಗಿ ಪ್ರಸನ್ನ ತಾವು ಕಲಿತ ಮತ್ತು ಅನುಭವದ ಪಾಠಗಳನ್ನು ನಮಗೆ ಧಾರೆಯೆರೆದರು. ನಾನು ಮತ್ತು ಹಾ.ಸಾ.ಕೃ ಎರಡು ಮೂರು ಬಾರಿ ಕೊಂಡಜ್ಜಿ ಊರಿಗೆ ಹೋಗಿದ್ದರಿಂದ ತೀವ್ರ ರೀತಿಯಲ್ಲಿ ಆಕ್ಷೇಪಣೆ ಎತ್ತಿದ್ದರು, ನಮ್ಮ ಹೆಡ್ ಮಾಸ್ಟರ್. ನಾವು ತುಟಿಪಿಟಕ್ಕೆನ್ನದೆ ಸುಮ್ಮನಿದ್ದೆವು. ಬೆಳ್ಳಿಗೆಯಿಂದ ಸಂಜೆಯವರೆವಿಗೆ ಶಿಬಿರ ಸಂಜೆ ಊಟವಾದ ಮೇಲೆ ಒಂದು ವಾರ ಪೂತರ್ಿ ಬೆಳದಿಂಗಳ ರಾತ್ರಿ. ಅಂಥ ಶೋಭಾಯ ಮಾನವಾದ ರಾತ್ರಿಯಲ್ಲಿ ಬೆಂಗಳೂರಿನ ಎನ್.ಎಮ್.ಕೆ.ಆರ್.ವಿ. ಯ ಅಧ್ಯಾಪಕಿ ಸುವರ್ಣ ಅವರು ಎಂತೆಂಥ ಹಾಡುಗಳನ್ನು ಹಾಡಿದರು. ಚಂದ್ರನೇ ಮೋಹಿತನಾಗಿ ಕೆಳಗಿಳಿದು ಬರುವಂತೆ. ಆದರೆ ಅಂಥ ಕ್ರಿಯಾಶೀಲ ಸುವರ್ಣ ಅವರು ಪಾಕರ್ಿನ್ಸನ್ ಕಾಯಿಲೆಯಿಂದ ಎಂಥ ಹಿಂಸೆಯನ್ನು ಅನುಭವಿಸುತ್ತ ಬಂದರು. ನಮ್ಮ ಆ ಶಿಬಿರದ ಅತ್ಯಂತ ಸ್ಪೂತರ್ಿದಾಯಕಿಯಾಗಿದ್ದವರು. ಇದೇ ಸಮಯದಲ್ಲಿ ಭಾರತ ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ವಲ್ಡರ್್ ಕಪ್ ಗೆದ್ದಿದ್ದರಿಂದ ಪ್ರಸನ್ನ ಮತ್ತು ಕಾರಂತರ ಅಧ್ಯಕ್ಷತೆಯಲ್ಲಿ ಸೆಲಿಬ್ರೇಟ್ ಮಾಡಿದ್ದೆವು. ಈ ಶಿಬಿರದಷ್ಟೇ ಒಂದು ಸ್ಮರಣೀಯ ಸಂಜೆಯೆಂದರೆ ಪ್ರಸನ್ನ ಅವರ ಹನುಮಂತನಗರದ ಮನೆಯಲ್ಲಿ ತುಂಬ ಉತ್ಸಾಹದಿಂದ ಮಾಲತಿಯವರು ಹಾಗೂ ಪ್ರಸನ್ನ ಅವರು ಏರ್ಪಡಿಸಿದ್ದರು. ಆಗ ಅವರು ಪತಿ-ಪತ್ನಿಯರಾಗಿ ತುಂಬ ಅನ್ಯೋನ್ಯವಾಗಿದ್ದರು. ಅಥವಾ ಆ ರೀತಿ ನಮಗೆ ಕಾಣಿಸುತ್ತಿದ್ದರು. ರಂಗಭೂಮಿಯಲ್ಲಿ ಇಬ್ಬರೂ ಕ್ರಿಯಾಶೀಲರಾಗಿದ್ದರು. ಸಂಜೆ ಆರೂವರೆಯಿಂದ ಒಂಬತ್ತೂವರೆವರೆಗೆ ಕೆಳಗೆ ವೈಭವದ ಗೋಷ್ಠಿ ನಡೆಯಿತು. ಗಿರೀಶ್ ಕನರ್ಾಡ್, ಕೆ.ವಿ.ಸುಬ್ಬಣ್ಣ, ಕಂಬಾರರು, ಮರುಳಸಿದ್ದಪ್ಪ ಸಂತೋಷ್ ಕುಮಾರ ಗುಲ್ವಾಡಿ ರಂಗಭೂಮಿಯ ನಟನಟಿಯರ ದೊಡ್ಡ ದಂಡು ಸೇರ್ಪಡೆಗೊಂಡಿದ್ದರು. ತುಂಬ ಚಳಿಗಾಲದ ಸಂಜೆ. ಕೆ.ವಿ.ಸುಬ್ಬಣ್ಣನವರು ಉಸಿರಾಟದ ಸಮಸ್ಯೆಯಿಂದ ಸಾಕಷ್ಟು ನರಳುತ್ತಿದ್ದರು. ಕೆಲವು ದೊಡ್ಡವರು ಮನೆಗೆ ಹೊರಟಮೇಲೆ ಮತ್ತೊಂದು ದೊಡ್ಡ ಗುಂಪು ಕಾರಂತರ ಮತ್ತು ಸತ್ಯಸಂಧ (ಅತ್ಯಂತ ಪ್ರತಿಭಾವಂತ ನಟ) ತಾತ್ಕಾಲಿಕ ಸಂಚಾಲಕತ್ವದಲ್ಲಿ ಹಾಡು, ಕುಣಿತ ಮತ್ತು ರಂಗಭೂಮಿಯ ಅಪರೂಪದ ಗಾಸಿಪ್ಗಳು ಮುಂದುವರಿದವು. ಇದನ್ನೆಲ್ಲ ಪ್ರಸನ್ನ ಮತ್ತು ಮಾಲತಿಯವರು ನಗುತ್ತ ಏನೇನೋ ಪರಿಕರಗಳನ್ನು ಉಪ್ಪರಿಗೆಯ ಮೇಲಕ್ಕೆ ರವಾನಿಸುತ್ತಿದ್ದರು. ರಾತ್ರಿ ಒಂದು ಗಂಟೆಯ ಸಮಯಕ್ಕೆ ಕಾರಂತರು ನಾನು ಭೂಪಾಲಿಗೆ ಹೋಗಬೇಕು, ನನಗೆ ಬೆಂಗಳೂರು ಬೇಡ ಎಂದು ದಡದಡ ಇಳಿದು ಓಡೇ ಬಿಟ್ಟರು. ಅದಕ್ಕಿಂತ ಮೊದಲು ಎಂತೆಂಥ ನೆನಪುಗಳನ್ನು ದಾಖಲಿಸಿದ್ದರು. ಹಳೆಯ ನಾಟಕಗಳ ಕೆಲವು ಹಾಡಿನ ಮಟ್ಟುಗಳನ್ನು ಎಷ್ಟು ಮೋಹಕವಾಗಿ ಹಾಡಿ ತೋರಿಸಿದ್ದರು. ನಾವೆಲ್ಲ ಅವರ ಕೈಗೆ ಹಾರ್ಮೋನಿಯಂ ಕೊಟ್ಟು ನುಡಿಸುವ ಆಶಯವನ್ನು ಹೊಂದಿದ್ದೆವು. ಒಂದು ದೃಷ್ಟಿಯಿಂದ ಭೂಪಾಲ್ ಅವರನ್ನು ತುಂಬ ಕಾಡುತ್ತಿತ್ತು. ತಮ್ಮ ಬಹುಪಾಲು ಕನಸುಗಳನ್ನು ಅಲ್ಲಿ ಬಿತ್ತಿದವರು. ಸಮಸ್ಯೆಗಳನ್ನು ತಮ್ಮ ಮುಗ್ಧತೆಯಿಂದಲೇ ಮೇಲೆಳೆದುಕೊಂಡರು. ಇಂಥ ಭೂಪಾಲಿನ ಕಾರಂತರನ್ನು ಸತ್ಯಸಂಧ, ಕಪ್ಪಣ್ಣ ಮುಂತಾದವರು ಉಪ್ಪರಿಗೆಯ ಮೇಲಕ್ಕೆ ಹೊತ್ತೇ ತಂದರು. ಎಂತೆಂಥದೋ ಗದ್ದಲ ನಡೆದರೂ ಪ್ರಸನ್ನ ಕೃಷ್ಣನಂತೆ ಸುಮ್ಮನೇ ನಗುತ್ತ ಓಡಾಡುತ್ತಲೇ ಇದ್ದರು. ಈ ರೀತಿಯ ಓಡಾಟವನ್ನು `ಚರಕ’ ಉತ್ಸವದಲ್ಲಿ ಕಂಡು ಖುಷಿಯಾಯಿತು. ಹಾಗೆಯೇ ಎಲ್ಲರನ್ನು ನಗುನಗುತ್ತ ಓಡಾಡಿಸುತ್ತಿದ್ದರು. ತುತರ್ು ಪರಿಸ್ಥಿತಿಯನ್ನು ಇಂದಿರಾಗಾಂಧಿಯವರು ಸಡಿಲಗೊಳಿಸಿದರು. ಎಲ್ಲೆಲ್ಲೂ ಚುನಾವಣೆಯ ಬಿಸಿ. ಅದಕ್ಕೆ ಕನರ್ಾಟಕವೇನು ಹೊರತಾಗಿರಲಿಲ್ಲ. ಇದೇ ಸಮಯದಲ್ಲಿ ಕನರ್ಾಟಕದಲ್ಲಿ ಜನತಾಪಕ್ಷ ಕ್ರಿಯಾಶೀಲವಾಗಿತ್ತು. ರಾಮಕೃಷ್ಣಹೆಗಡೆ. ವಿರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಮತ್ತು ಎಸ್. ವೆಂಕಟರಾಂ ಅವರು ಒಂದು ದಿವಸ ನಮ್ಮನ್ನು ಪಕ್ಷದ ಕಚೇರಿಗೆ ಕರೆಸಿದರು. ಡಿ.ಆರ್. ನಾಗರಾಜ್, ಪ್ರಸನ್ನ ಸಿ.ಜಿ.ಕೃಷ್ಣಸ್ವಾಮಿ ಮತ್ತು ನಾನು ಅವರನ್ನು ನೋಡಲು ಹೋದೆವು. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಚ್ಚುಗಾರಿಕೆ ಕುರಿತಂತೆ ಶೂದ್ರ ಒಂದು ವಿಶೇಷಾಂಕ ತನ್ನಿ. ನಮಗೆ ಮೂರು ಸಾವಿರ ಪ್ರತಿಗಳನ್ನು ಕೊಡಿ. ಹೀಗೆಯೇ ತನ್ನಿ ಎಂದು ನಿಮಗೆ ಹೇಳುವುದಿಲ್ಲ. ನಿಮಗೆ ತೋಚಿದ ರೀತಿಯಲ್ಲಿ ತನ್ನಿ ಎಂದಿದ್ದರು. ಕೊನೆಗೆ ನಾವೆಲ್ಲ ಎಂ.ಕೆ.ಭಟ್ ಅವರ ಅಧ್ಯಕ್ಷತೆಯಲ್ಲಿ ಗಾಂಧಿಬಜಾರ್ ಸರ್ಕಲ್ ಬಳಿಯ ಸಿ.ಜಿ.ಕೃಷ್ಣಸ್ವಾಮಿಯ ಕೊಠಡಿಯಲ್ಲಿ ಸಭೆ ಸೇರಿದವು. ಸಾಕಷ್ಟು ಚಚರ್ಿಸಿ ಆ ಸಂಚಿಕೆಯನ್ನು ಪ್ರಸನ್ನ ಅವರ ಜವಾಬ್ದಾರಿಗೆ ಕೊಟ್ಟೆವು. ಚಾಮರಾಜಪೇಟೆಯಲ್ಲಿ ಡಾ|| ವಿಜಯಮ್ಮ ಅವರ `ಇಳಾ’ ಮುದ್ರಣಾಲಯದಲ್ಲಿ ಮುದ್ರಣವಾಗತೊಡಗಿತ್ತು. ದಿನಾ ನಾವು ಅಲ್ಲಿ ಸೇರುತ್ತಿದ್ದೆವು. ನಮ್ಮ ಜೊತೆಗೆ ಚಲನಚಿತ್ರ ನಿದರ್ೇಶಕ ಕೆ.ಎಂ. ಶಂಕರಪ್ಪ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಸೇರಿಕೊಳ್ಳುತ್ತಿದ್ದರು. ಎಂತೆಂಥದೋ ಚಚರ್ೆಯಾಗುತ್ತಿತ್ತು. ಅದನ್ನೇ ಒಂದು ವಿಶೇಷಾಂಕವಾಗಿ ತರಬಹುದಾಗಿತ್ತು. `ಶೂದ್ರ’ ವಿಶೇಷಾಂಕ ಚೆನ್ನಾಗಿ ಬಂತು. ಡಾ|| ವಿಜಯಮ್ಮನವರು ತಮ್ಮ ಆತಿಥ್ಯಕ್ಕೆ ಕೊರತೆ ಮಾಡಲಿಲ್ಲ. `ಶೂದ್ರ’ದ ಎಲ್ಲ ಪ್ರತಿಗಳನ್ನು `ಆರಾಧನೆ’ಯೆನ್ನುವ ರೀತಿಯಲ್ಲಿ ನಾವೆಲ್ಲ ತಲೆಯ ಮೇಲಿಟ್ಟುಕೊಂಡು ರಾತ್ರಿ ಒಂದು ಗಂಟೆಯ ಸಮಯದಲ್ಲಿ ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆ, ಎಂಟನೇ ಅಡ್ಡರಸ್ತೆಯಿಂದ ಹೊರಟೆವು. ಸಂಭ್ರಮದ ಪುಟ್ಟ ಘೋಷಣೆಗಳು ನಮ್ಮಲ್ಲಿ ಉಲ್ಲಾಸ ತುಂಬಿತ್ತು. ಪ್ರಸನ್ನ ಅವರು ಒಟ್ಟು ಸಂಚಿಕೆಯ ಪ್ರೂಫ್ ತಿದ್ದುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ನಾನು ಹಿರಿಯ ರಾಜಕೀಯ ಮತ್ಸದ್ಧಿಗಳಾದ ಕಡಿದಾಳ ಮಂಜಪ್ಪನವರನ್ನು ಭೇಟಿಯಾಗಿ ಅವರೊಡನೆಯ ಚಚರ್ೆಯನ್ನು ಲೇಖನವಾಗಿ ಸಿದ್ಧಪಡಿಸಿದ್ದೆ. ಪ್ರತಿಗಳನ್ನು ಜನತಾಪಕ್ಷಕ್ಕೆ ಕೊಡುವ ಮುನ್ನ ಐನೂರು ಪ್ರತಿಗಳನ್ನು ಪ್ರಸನ್ನ ಕೆಲವು ಹುಡುಗರ ಜೊತೆ ಮೈಸೂರು ಬ್ಯಾಂಕು ವೃತ್ತದ ಬಳಿ ಮಾರಾಟ ಮಾಡಲಾಗಿತ್ತು. ಇದಕ್ಕೆ `ಶೂದ್ರ’ದ ಜೊತೆಗಿದ್ದ ಅವೆನ್ಯೂ ರೋಡಿನ ಟೈಪಿಸ್ಟ್ ವಿಜಯೇಂದ್ರ ಕೂಡಿಕೊಂಡಿದ್ದರು. ಕಡಿದಾಳ ಮಂಜಪ್ಪ ಅವರ ಲೇಖನದಲ್ಲಿ ದಿವಂಗತ ಕಡಿದಾಳ ಮಂಜಪ್ಪ ಎಂದು ಮುದ್ರಣಗೊಂಡಿತ್ತು. ಇದು ನಮಗೆ ಸಾಕಷ್ಟು ಗಾಬರಿಯನ್ನು ಹುಟ್ಟಿಸಿತ್ತು. ಒಮ್ಮೆ ಎಲ್ಲವನ್ನು ಪರಿಶೀಲಿಸುವ ಮುನ್ನ ಡಿಸ್ಟ್ರಿಬ್ಯೂಟ್ ಮಾಡಬಾರದಾಗಿತ್ತು ಎಂದು ಮಾತಾಡಿಕೊಳ್ಳುತ್ತಿದ್ದೆವು. ಅದೇ ಸಮಯಕ್ಕೆ ಪ್ರೊ.ಎಂ.ಡಿ.ಎನ್. ಅವರು ನಮ್ಮ ಜೊತೆ ಕೂಡಿಕೊಂಡರು. ಮತ್ತು ಪ್ರಸನ್ನ ಅವರ ಬಗೆ ತುಂಬ ಸಿಟ್ಟಿನಿಂದ ಮಾತಾಡಿದರು. ಕೊನೆಗೆ ಆರು ಸಾವಿರ ಪ್ರತಿಗಳಲ್ಲಿ `ದಿವಂಗತ’ ಎನ್ನುವುದನ್ನು ತಿದ್ದಿದೆವು. ಪ್ರೊ.ಎಂ.ಡಿ.ಎನ್. ಅವರು ನನ್ನನ್ನು ಕಡಿದಾಳ ಮಂಜಪ್ಪ ಅವರ ಬಳಿಗೆ ಕಳಿಸಿದರು. ಈ ತಪ್ಪಿಗೆ ಕ್ಷಮೆಯಾಚಿಸಲು. ನಾನು ಶೂದ್ರದ ಸಂಪಾದಕ ವರ್ಗದಲ್ಲಿದ್ದ ನಿರ್ಮಲಾರೆಡ್ಡಿಯವರನ್ನು ಕರೆದುಕೊಂಡು ಶಾಂತಿನಗರದ ಕಡಿದಾಳ ಮಂಜಪ್ಪನವರ ಮನೆಗೆ ಹೋದೆ. ಪ್ರೀತಿಯಿಂದ ಬರಮಾಡಿಕೊಂಡರು. ತಿಂಡಿಕೊಟ್ಟರು. ನಿರ್ಮಲಾ ರೆಡ್ಡಿಯವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕೌಟುಂಬಿಕ ಹಿನ್ನಲೆಯನ್ನೆಲ್ಲ ಕೇಳಿದರು. ನಾನು ಒಟ್ಟು ವಿಷಯವನ್ನು ಹೇಗೆ ತಿಳಿಸುವುದೆಂದು ಒದ್ದಾಡುತ್ತಿದ್ದೆ. ಕೊನೆಗೆ ಸುತ್ತಿ ಬಳಸಿ `ದಿವಂಗತ’ದ ವಿಷಯ ತಿಳಿಸಿದೆ ಅವರು ನಗುತ್ತ ಇರಲಿ ಬಿಡಪ್ಪ, ಅದಕ್ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ತೀರಿ. ಇವತ್ತಲ್ಲ ನಾಳೆ `ದಿವಂಗತ’ ಆಗಲೇ ಬೇಕಲ್ಲ ಎಂದರು. ಒಂದು ಕ್ಷಣ ಎಂಥ ವಿಶಾಲ ಮನಸ್ಸಿನ ನಾಯಕರು ಅನ್ನಿಸಿತು. ಇದನ್ನು ಎಲ್ಲರಿಗೂ ತಿಳಿಸಿದಾಗ ತುಂಬಾ ರಿಲ್ಯಾಕ್ಸ್ ಆಗಿದ್ದರು. ಪ್ರೊ. ಎಂ.ಡಿ.ಎನ್.ಅವರು ನೀವೆಲ್ಲಾ ಅಂಥ ದೊಡ್ಡ ಮನುಷ್ಯರಿಂದ ಬದುಕನ್ನು ಕಲಿಯಬೇಕು ಎಂದಿದ್ದರು ಗಂಭೀರವಾಗಿ. ಡಿ.ಆರ್. ನಾಗರಾಜು ಮತ್ತು ನಾನು ಲಂಕೇಶ್ ಅವರಿಗೆ ಈ ವಿಷಯ ತಿಳಿಸಿದಾಗ, ನಿಜವಾಗಿಯೂ ದೊಡ್ಡ ಮನುಷ್ಯ ಎಂದು ಒಂದು ಕ್ಷಣ ಮೌನದ ಮೊರೆ ಹೋಗಿದ್ದ. ಪ್ರಸನ್ನ ಅಂಥವರು ಯಾವಾಗಲೂ ವಿರೋಧ ಪಕ್ಷಲ್ಲಿರುವುದಕ್ಕೆ ಲಾಯಕ್ಕು. ಯಾಕೆಂದರೆ ಸಾಂಸ್ಕೃತಿಕವಾಗಿ ವಿರೋಧ ಹಾಗೂ ಜಗಳವೆಂದರೆ ತುಂಬ ಪ್ರಿಯ. ಗಂಬೀರ ನಾಟಕಗಳ ಜೊತೆಗೆಯೇ ಬೀದಿನಾಟಕಗಳ ಪರಿಕಲ್ಪನೆಗೆ ಒಂದು ಅರ್ಥಪೂರ್ಣ ಆಯಾಮವನ್ನು ತಂದುಕೊಟ್ಟವರು. ಇದಕ್ಕೆ ಸಮುದಾಯದಂಥ ವೇದಿಕೆ ರಾಜ್ಯದ ಉದ್ದಗಲಕ್ಕೂ ಇದ್ದಿದ್ದರಿಂದ ಅದರ ವ್ಯಾಪ್ಯತೆ ಮತ್ತಷ್ಟು ಹೆಚ್ಚಾಯಿತು. ಈ ದೃಷ್ಟಿಯಿಂದ ಚಿಕ್ಕಮಂಗಳೂರು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬೀದಿನಾಟಕಗಳ ನೆಪದಲ್ಲಿ ಎಷ್ಟೊಂದು ಸುತ್ತಾಡಿದೆವು. ಆದರೆ ನನ್ನಂಥವರಿಗೆ ಅದು ಆಕರ್ಷಕ ಮಾಧ್ಯಮವಲ್ಲ. ಆದರೆ ಒಂದು ಸೀಮಿತ ಅರ್ಥದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೂ ಕೆಲಸಮಾಡುತ್ತದೆ. ಇದೇ ಚಿಕ್ಕಮಗಳೂರಿನಲ್ಲಿ ಬೀದಿನಾಟಕ ಮುಗಿಸಿಕೊಂಡು ಮತ್ತೊಂದು ಜಾಗಕ್ಕೆ ಹೋಗುವಾಗ ತ್ರಿಪುರದ ಮುಖ್ಯಮಂತ್ರಿಗಳಾಗಿದ್ದ ನೃಪೇನ್ ಚಕ್ರವತರ್ಿಯವರ ಜೊತೆ ನಮ್ಮ ಮಾತುಕತೆಯನ್ನು ಈಗಲೂ ಮೆಲುಕು ಹಾಕಿಕೊಳ್ಳುವೆ. ಅವರು ಪುಸ್ಸ್ ಪುಸ್ಸ್ ಎಂದು ಬೀಡಿ ಸೇದುತ್ತ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಜನಸಾಮಾನ್ಯರಲ್ಲಿ ಮಿಕ್ಸ್ ಆಗುತ್ತಿದ್ದುದು, ಒಂದು ವಿಧದಲ್ಲಿ ಬಹುಪಾಲು ಮಂದಿಗೆ ದೊಡ್ಡ ಆಕರ್ಷಣೆಯಾಗಿತ್ತು. ಇದು ಪ್ರಜಾಪ್ರಭುತ್ವದ ಮುಂದುವರಿದ ಭಾಗವೂ ಆಗಿರುತ್ತದೆ. ಯಾವುದೇ ಸಾಮಾಜಿಕ ಸಂಘಟನೆ ಬಗೆಗೆ ಜನರಿಗೆ ಈಗಲೂ ಆಕರ್ಷಣೆ ಕುಗ್ಗಿಲ್ಲ. ಯಾಕೆಂದರೆ ಎಷ್ಟೋ ಫೇಕ್ ಕ್ಯಾರೆಕ್ಟಸರ್್ ಕ್ರಿಯಾಶೀಲರಾಗಿದ್ದರೂ ಅವರ ನಡುವೆ ಯಾವಾಗಲೂ ಪ್ರಸನ್ನ ಅಂಥವರು ಗೌರವದಿಂದ ಎದ್ದು ಕಾಣುವಂತವರಾಗಿರುತ್ತಾರೆ. ಆದ್ದರಿಂದಲೇ ಇವರ ದೇಸಿ `ಚರಕ’ ಉತ್ಸವ ಹಾಗೂ ಒಂದು ನಾಟಕ ನಿದರ್ೇಶಿಸಿದರೆ ಧ್ವನಿಯಿಂದ ಧ್ವನಿ ಯಾರ್ಯಾರಿಗೋ ತಲುಪಿ ಬಂದು ನೋಡಿ ಹೋಗುವರು. ಅಷ್ಟರ ಮಟ್ಟಿಗೆ ನಮ್ಮ ಸಮಾಜ ಇನ್ನೂ `ಕಲ್ಚಡರ್್’ ಆಗಿ ಉಳಿದಿದೆ. ನನಗೆ ಈಗಲೂ ನೆನಪಿದೆ. ಪ್ರಸನ್ನ ಅವರು ಸಮುದಾಯದ ಮೂಲಕ ಬೀದಿ ನಾಟಕಗಳ ವಕರ್್ಷಾಪ್ ಮಾಡಿದ್ದರು. ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಅದರ ಸಮಾರೋಪ ಭಾಷಣದ ಸಂದರ್ಭದಲ್ಲಿ `ಬಾಕಿ ಇತಿಹಾಸದ `ಏವಂ ಇಂದ್ರಜಿತ್’ ಮತ್ತು ಪಗಲಾ ಘೋಡಾ’ ನಾಟಕಕಾರ ಬಾದಲ್ ಸಕರ್ಾರ್ ಅವರು ಬೀದಿನಾಟಕಗಳು ತೃತೀಯ ಜಗತ್ತಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಕುರಿತಂತೆ ಎಂಥ ಅದ್ಭುತ ಅರಿವನ್ನು ಮೂಡಿಸುವುದು ಮಾತ್ರವಲ್ಲ ನಮ್ಮನ್ನೆಲ್ಲ ಒಳಗೊಳ್ಳುವಂತೆ ಮಾಡುವುದೂ ಮುಖ್ಯವಾಗಿರುತ್ತದೆ. ಲೇಖಕನಾದವನಿಗೆ ಏಕಾಂತ ಎಷ್ಟು ಮುಖ್ಯವೋ ಅಷ್ಟೇ ಸಾರ್ವಜನಿಕತೆಯೂ ಬೇಕಾಗುತ್ತದೆ. ಇದು ಕೇವಲ ಕಮಿಟ್ಮೆಂಟ್ನಿಂದ ಮಾತ್ರ ಬರಬೇಕಾಗಿಲ್ಲ. ಸುಮ್ಮನೇ ಬದುಕುವವನಿಗೂ ಇದರ ಅರಿವು ಅತ್ಯಗತ್ಯ. ಇಲ್ಲದಿದ್ದರೆ ಬಹುಮುಖೀ ಸಂಸ್ಕೃತಿಯ ಹೆಚ್ಚುಗಾರಿಕೆ ಗೊತ್ತಾಗುವುದೇ ಇಲ್ಲ. ಎಂದು ಹೇಳಿದಾಗ ನಾನು ಥ್ರಿಲ್ ಆಗಿದ್ದೆ. ಪ್ರಸನ್ನ ಈ ನಾಲ್ಕು ದಶಕಗಳ ಜೀವನ `ಗಾಥ’ದಲ್ಲಿ ಶ್ರೀಮಂತವಾದದ್ದನ್ನು ಈ ಸಮಾಜಕ್ಕೆ ಕೊಡುತ್ತ ಬಂದಿದ್ದಾರೆ. ಈ ಕೊಡುವಿಕೆಯಲ್ಲಿಯೇ ಬಾದಲ್ ಸಕರ್ಾರ್ ಅವರನ್ನು ಗ್ರಹಿಸುವ ಕ್ರಮವೂ ಮಹತ್ವಪೂರ್ಣದ್ದಾಗಿರುತ್ತದೆ. ಕಳೆದ ವರ್ಷ ಬಾದಲ್ ಸಕರ್ಾರ್ ಅವರು ನಿಧನರಾದಾಗ ಅವರನ್ನು ಕುರಿತು ನೀನಾಸಮ್ನ `ಮಾತುಕತೆ’ಗೆ ಬರೆದ ಲೇಖನದ ಈ ಸಾಲುಗಳು ವಿಷಾದದ ನೆರಳನ್ನು ದಟ್ಟಗೊಳಿಸಿತು. ದುರಂತವೆನ್ನಿ ಅಥವಾ ಮಹತ್ವವೆನ್ನಿ, ಏನೇ ಅನ್ನಿ, ಬಾದಲ್ ಸಕರ್ಾರ್ರ ಪ್ರಮುಖ ಗುಣವೇ ಒಂಟಿತನವಾಗಿತ್ತು ಎಂಬುದಂತೂ ನಿಜ. ಬಾದಲ್ ಸಕರ್ಾರ್ರು ಭಿನ್ನರಾದದ್ದು ಇತರರಿಂದ ಮಾತ್ರವೇ ಅಲ್ಲ, ತನ್ನಿಂದಲೇ ತಾನು ಬೇರ್ಪಟ್ಟು ಭಿನ್ನರಾದವರು ಅವರು; ಅವರ ಬದುಕಿನ ಉತ್ತುಂಗದಲ್ಲಿ ಉತ್ತುಂಗವನ್ನೆ ತಿರಸ್ಕರಿಸಿದವರು. ಮನುಷ್ಯನೊಬ್ಬನ ಮಾನಸಿಕ ಸ್ಥಿಮಿತವನ್ನೇ ಹಾಳು ಮಾಡಬಲ್ಲಷ್ಟು ಅಪಾಯಕಾರಿಯಾದ ನಿಧರ್ಾರವಿದು. ಬಾದಲ್ ಸಕರ್ಾರರು ಅರಿವಿದ್ದೇ ಅಪಾಯವನ್ನೆದುರಿಸಿದರು. ಇಂಥ ವಾಕ್ಯಗಳು ಒಟ್ಟು ಲೇಖನದುದ್ದಕ್ಕು ಸಾಕಷ್ಟಿವೆ. ಅವೆಲ್ಲ ಬಾದಲ್ ಸಕರ್ಾರ್ ಅಂಥವರನ್ನು ಪ್ರಾಮಾಣಿಕವಾಗಿ ಪರಿಚಯಿಸುವಂಥವು. ಪ್ರಸನ್ನ ಅವರು ಏನಾದರೂ ಮಾಡುತ್ತಿರಲೇಬೇಕು. ಇಲ್ಲದಿದ್ದರೆ ಸುಮ್ಮನೆ ತ್ರಿಲೋಕ ಸಂಚಾರಿಯಾಗಿ ಸುತ್ತಾಡುತ್ತಿರಲೇಬೇಕು. ಆ ಸುತ್ತಾಟಕ್ಕೆ ಒಂದು ಉದ್ದೇಶದ ಬೇಲಿಯನ್ನು ಬಿಗಿದುಕೊಂಡು ಅದರೊಳಗೆ ಒಟ್ಟು ತಮ್ಮ ಬದುಕನ್ನು ಮೌಲ್ಯಮಾಪನ ಮಾಡಿಕೊಳ್ಳುವ ಮನಸ್ಥಿತಿಯವರು. ಇಲ್ಲೆಲ್ಲ ರಂಗಭೂಮಿ, ಸಾಹಿತ್ಯ, `ಚರಕಸಂಸ್ಥೆ’ `ದೇಸಿ’ ಪರಿಕಲ್ಪನೆಗಳ ಹುಡುಕಾಟ ಎಲ್ಲವೂ ಸೇರಿಕೊಳ್ಳುತ್ತದೆ. ಹಾಗೆಯೇ ಇಷ್ಟು ದೀರ್ಘಕಾಲದ ವ್ಯಾಪಕಾರ್ಥದ ನಡಿಗೆಯಲ್ಲಿ ಏನನ್ನೋ ಕಳೆದುಕೊಂಡಿದ್ದೇನೆ ಎಂಬ ವಿಷಾದಯೋಗವೂ ಒಳಗೊಳಗೆ ಕೆಲಸ ಮಾಡುತ್ತಲೇ ಇರುತ್ತದೆ. ಇಂಥದ್ದು ಪ್ರತಿಯೊಬ್ಬ ಸೃಜನಶೀಲ ಸೂಕ್ಷ್ಮ ಸಂವೇದಿಗೆ ಇರುವುದು ಸ್ವಾಭಾವಿಕವಾಗಿರಬಹುದು. ಒಂದು ರೀತಿಯಲ್ಲಿ ಇದು ಗುಣಾತ್ಮಕವೂ ಆಗಿರುತ್ತದೆ. ಸಂಸ್ಕೃತಿ ಚಿಂತಕರಾಗಿ, ಗಾಂಧೀಜಿಯವರ ಚಿಂತನೆಗಳಿಂದ ಸ್ವಲ್ಪಮಟ್ಟಿಗೆ ಪ್ರಣೀತಗೊಳ್ಳದಿದ್ದರೆ ಒಟ್ಟು `ದೇಸಿ’ ಮತ್ತು `ಚರಕ’ ಸಂಸ್ಥೆಯ ಘನ ಉದ್ದೇಶಗಳಿಗೆ ಪುಡಾರಿತನದ ಲೇಪನ ಆವರಿಸಿಕೊಂಡು ಬಿಡುತ್ತಿತ್ತು. ಬಹಳ ಹಿಂದೆ ನಾವೆಲ್ಲ ಬಿ.ವಿ.ಕಾರಂತರ ಆಹ್ವಾನದ ಮೇರೆಗೆ ಅವರ `ಚಂದ್ರಹಾಸ’ ನಾಟಕ ನೋಡಲು ಮೈಸೂರಿಗೆ ಹೋಗಿದ್ದೆವು. ಅದರ ಮಾರನೆಯ ದಿವಸ `ರಂಗಾಯಣ’ದ ಒಟ್ಟು ಸಮಸ್ಯೆಗಳನ್ನು ಕುರಿತಂತೆ ಚಚರ್ಿಸಿ ಸಕರ್ಾರದ ಮೇಲೆ ಒತ್ತಡ ತರುವ ಉದ್ದೇಶವೂ ಇತ್ತು. ಆಗ ನಾಟಕದ ಹಿಂದಿನ ದಿವಸ ಪ್ರಸನ್ನ ಡಿ.ಆರ್.ನಾಗರಾಜ್ ಮತ್ತು ನಾನು ಹಾಗೂ ಪ್ರಸನ್ನ ಅವರ ಎರಡನೆಯ ಹೆಂಡತಿ ಬೆಳದಿಂಗಳ ರಾತ್ರಿಯಲ್ಲಿ ರಂಗಾಯಣದ ಮುಂದಿನ ಕಟ್ಟೆಯ ಮೆಲೆ ಜಗತ್ತನ್ನೆಲ್ಲ ನಮ್ಮ ಬೊಗಸೆಯಲ್ಲಿಟ್ಟುಕೊಂಡು ಪರಿಶೀಲಿಸುವಂತೆ ಚಚರ್ಿಸಿದ್ದೆವು. ಆಗ ಪ್ರಸನ್ನ ಅವರು ರಂಗಭೂಮಿಯಿಂದ ಹೊರಗೆ ನಿಂತು `ದೇಸಿ ಮತ್ತು `ಚರಕ’ ಕುರಿತು ಗಟ್ಟಿಯಾಗಿ ಬೇರುಬಿಡುತ್ತದೆ ಎಂಬುದನ್ನು ನಾನು ನಿಜವಾಗಿಯೂ ಗ್ರಹಿಸಿರಲಿಲ್ಲ. ಬೆಳದಿಂಗಳ ರಾತ್ರಿಗಳು ಸಾವಿರಾರು ವರ್ಷಗಳಿಂದ ಎಂತೆಂಥವರಿಗೋ ಕನಸುಗಳನ್ನು ಬಿತ್ತಿರುವುದಕ್ಕೆ ಕೊರತೆಯಿಲ್ಲ. ಆದರೆ ಕೆಲವರು ಆ ಕನಸುಗಳನ್ನು ಸಾಕಾರಗೊಳಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇತಿಹಾಸದ ಚಲನಶೀಲತೆಯೆಂದರೆ ಕೊನೆಗೂ ಇದೇ ಆಗಿರಬಹುದು. ಅತೃಪ್ತಿಯನ್ನು ಬಿತ್ತುತ್ತಲೇ ಸದಾ ಕ್ರಿಯಾಶೀಲತೆಯನ್ನು ಜೀವಂತವಾಗಿಡುವುದೂ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಪ್ರಸನ್ನ ಅವರು ಕಾದಂಬರಿಯೊಂದನ್ನು ಬರೆದು ಅದರ ಬಿಡುಗಡೆಯ ದಿವಸ `ಕಾದಂಬರಿ ಕುರಿತು ಅನಂತಮೂತರ್ಿಯವರು ಸರಿಯಾಗಿ ಮಾತಾಡಲಿಲ್ಲ ಎಂದು ಗೊಣಗಾಡುವುದು ಕೂಡ ಸ್ವಾಭಾವಿಕವಾಗಿರುತ್ತದೆ. ಆದರೆ ಈ ಸಾರಿಯ `ಶೂದ್ರ’ ಸಂಚಿಕೆ ಚೆನ್ನಾಗಿದೆ. ಕಂಬಾರರ ಬಗ್ಗೆ ಹಾಗೂ ಅನಂತಮೂತರ್ಿಯವರ ಬಗ್ಗೆ `ಆಪ್ತ ಓದು ಲೇಖನಗಳು ಚೆನ್ನಾಗಿದೆ ಎಂದು ಹೇಳುತ್ತಲೇ ಶೂದ್ರ ನಿಮ್ಮ ಆಚಾರ್ಯರು ಇದ್ದಾರಲ್ಲ . . . ಎಂದು ವ್ಯಂಗ್ಯವಾಗಿ ಮಾತಾಡಿದಾಗ ನಕ್ಕು ಸುಮ್ಮನಾಗಿದ್ದೇನೆ. ಯಾಕೆಂದರೆ ಇಂಥ ಹುಡುಕಾಟದ ಮನಸ್ಸಿನವರು ಲಂಕೇಶ್ ಅಂಥವರಿಂದ `ಗುಣಮುಖ’ ನಾಟಕ ಬರೆಸಿ ನಿದರ್ೇಶಿಸದಿರುವುದಕ್ಕೂ ಮತ್ತು ಅನಂತಮೂತರ್ಿಯವರು ಚೆನ್ನಾಗಿ ತರುತ್ತಿದ್ದ ರುಜುವಾತು ತ್ರೈಮಾಸಿಕ ನಿಂತಾಗ, ಮತ್ತೆ ಅದನ್ನು ತಮ್ಮ ಕೈಗೆ ತೆಗೆದುಕೊಂಡು ಕೆಲವು ಸಂಚಿಕೆಗಳನ್ನು ತಂದು ನಿಲ್ಲಿಸುವುದರ ಮದ್ಯೆ ಎಂತೆಂಥದೋ ಡೈಕಾಟಮಿಗಳು ಕೆಲಸ ಮಾಡಿರುತ್ತದೆ. ಆಗ ನಾನು ಅಂದುಕೊಳ್ಳುವುದು ನಮ್ಮ ಅಕ್ಕಪಕ್ಕದವರಿಂದ ತುಂಬ ನಿರೀಕ್ಷಿಸುತ್ತೇವೆ ಎಂದು. ಇಂಥ ನಿರೀಕ್ಷೆಗಳೇ ನಮ್ಮನ್ನು ದುರ್ಬಲರನ್ನಾಗಿ ಮಾಡುವುದು. ಇದನ್ನು ಬರೆಯುವ ಕಾಲದಲ್ಲಿ ದೀರ್ಘಕಾಲದ ನೆನಪುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಕೂತಿದ್ದಾಗ ನಿದ್ರೆಯ ಆಗಮನಕ್ಕಾಗಿ ತವಕಿಸುತ್ತಿದ್ದೆ. ಆಗ ಆಕಸ್ಮಿಕವಾಗಿ ನನಗೆ ಪ್ರಿಯಳಾದ ರಷ್ಯನ್ ಕವಯತ್ರಿ `ಆನಾ ಆಹ್ಮತೋವಾ ಶಾ. ಬಾಲೂರಾವ್ ಅವರ ಅನುವಾದ ಕೃತಿಯನ್ನು ಓದುತ್ತಿದ್ದೆ. ಎಷ್ಟೋ ವರ್ಷಗಳ ನಂತರ ಮತ್ತೊಮ್ಮೆ ಓದುವಾಗ `ಆನಾ’ ಜೊತೆಗೆ ಶಾ. ಬಾಲೂರಾವ್ ಅವರೂ ಸೇರಿಕೊಂಡರು. ಇವರೊಡನೆ `ಆನಾ’ಳ ಈ ಪದ್ಯವೂ ಸೇರಿಕೊಂಡಿತು. ಅದನ್ನು ಇಲ್ಲಿ ದಾಖಲಿಸಲು ಇಷ್ಟವಾಯಿತು. ಶಬ್ದಗಳ ತಾಜಾತನ, ಭಾವನೆಗಳ ಸರಳತೆ ನಾವು ಇವನ್ನು ಕಳೆದುಕೊಳ್ಳುವುದು ಕಲಾವಿದ ಕಣ್ಣನ್ನು, ನಟ ಧ್ವನಿ ಚಲನೆಗಳನ್ನು ಹೆಣ್ಣು ಚೆಲುವನ್ನು ಕಳೆದುಕೊಂಡಂತಲ್ಲವೇ? ಆದರೆ ದೈವದತ್ತವಾದ ಪ್ರತಿಭೆಯನ್ನು ನಿನ್ನ ಸ್ವಂತಕ್ಕಾಗಿಯೇ ಉಳಿಸಿಕೊಳ್ಳುವುದು ಬೇಡ: ನಾವೆಲ್ಲ ಬಲ್ಲೆವು-ಇಟ್ಟು ಕೂಡಿಸುವ ಬದಲು ಪೋಲು ಮಾಡುವುದು ನಮಗೆ ಸಿಕ್ಕ ಶಾಪವೆಂದು ಒಬ್ಬನೇ ಹೊರ ಬಾ, ಕುರುಡರ ಕಣ್ಣಿನ ಪೊರೆ ಕಳೆ ಆಗ ನೋಡು ತಿಳಿಯುತ್ತದೆ – ಆಪತ್ತಿನ ಅನಿಶ್ಚಿತ ವೇಳೆ ನಿನ್ನ ಅನುಯಾಯಿಗಳೇ ನಿನ್ನನ್ನು ಹೇಗೆ ಆಡಿಕೊಂಡು ಉಬ್ಬುತ್ತಾರೆಂದು ಮಂದಿ ಅದೆಷ್ಟು ಉದಾಸೀನಾರಾಗುತ್ತಾರೆಂದು ಈ ಪದ್ಯದ ಸಾಲುಗಳ ಜೊತೆಯಲ್ಲಿಯೇ ಪ್ರಸನ್ನ ಅವರು ಪಾರಂಪರ್ಯವಾಗಿ ಬಂದಿರುವ ವೃತ್ತಿಗಳನ್ನು ಉಳಿಸುವುದಕ್ಕಾಗಿ ಹಲ್ಲುಕಚ್ಚಿ ಹೋರಾಡುತ್ತಿರುವವರನ್ನು ಗುತರ್ಿಸಿ ಇತ್ತೀಚೆಗೆ ತಮ್ಮ ವಾಷರ್ಿಕ `ದೇಸಿ’ ಕಾರ್ಯಕ್ರಮದಲ್ಲಿ ಗೌರವಿಸಿದರು. ಆ ವಯೋವೃದ್ಧರು ಎಷ್ಟು ಪುನೀತರಾಗಿದ್ದರು. ಆಗ `ಆನಾ’ಳ ಒಬ್ಬನೇ ಹೊರ ಬಾ, ಕುರುಡರ ಕಣ್ಣಿನ ಪೊರೆಕಳೆ’ ಎಂಬ ಸಾಲು ಒಂದು ಧ್ವನಿಯಾಗಿ ನಿದ್ದೆಯ ಮನದಲ್ಲಿ ಗುನುಗುನಿಸತೊಡಗಿತು. ಅದರ ಜೊತೆಗೆಯೇ ಅವರ ಭೀಮನ ಕೋಣೆಯ ಆ ಒಂಟಿಮನೆ ಪ್ರವೇಶಿಸುವ ಮುನ್ನ ಪ್ರಸನ್ನ ನಿಮ್ಮ ಮಗ ಹೇಗಿದ್ದಾನೆ? ಎಂದು ಕೇಳಿದೆ. ಚೆನ್ನಾಗಿದ್ದಾನೆ ಶೂದ್ರ, ಆದರೆ ಅವನಿಗೆ ನನ್ನ ಮೇಲೆ ಸಿಟ್ಟಿದೆ. ನಾನು ಅವನನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದು ದೆಹಲಿಯಲ್ಲಿ ತಾಯಿಯ ಜೊತೆ ಇದ್ದಾನೆ. ಎನ್.ಎಸ್.ಡಿ.ಯಲ್ಲಿ ಕಲಿಯುತ್ತಿದ್ದಾನೆ. ಎಂದು ಪೆಚ್ಚಿನಿಂದ ಹೇಳಿದಾಗ ನಾನು ಪ್ರಸನ್ನ ಅವರ ಮುಖವನ್ನು ನೋಡಲು ಪ್ರಯತ್ನಿಸಿದೆ. ತಲೆ ತಗ್ಗಿಸಿ ನಡೆದಿದ್ದರು. ನಾನೂ ವಿಷಾದದ ಮೊರೆಹೋಗಿದ್ದೆ. ಆ ಹುಡುಗನನ್ನು ನೋಡಿದ್ದೇನೆ, ಮಾತಾಡಿಸಿದ್ದೇನೆ. ಪ್ರಸನ್ನ ಅವರು ತಮ್ಮ ಮಗನನ್ನು ಜೆ.ಕೃಷ್ಣಮೂತರ್ಿಯವರ `ವ್ಯಾಲೆ ಸ್ಕೂಲಿನಲ್ಲಿ’ ಓದಿಸುವಾಗ ತುಂಬಿಕೊಂಡಿರಬಹುದಾದ ಕನಸುಗಳನ್ನು ಕಲ್ಪಿಸಿಕೊಂಡೆ. ಆ ಹುಡುಗನೂ ಎಂದಾದರೂ ಪ್ರಸನ್ನ ಅವರು ಕಟ್ಟಿದ ಸಾಮ್ರಾಜ್ಯವನ್ನ ಅರಿಯುವಂತಾಗಲಿ ; ನನ್ನನ್ನು ಮಲಗಲು ಹೇಳಿ ಒಂದು ಮೂಲೆಯಲ್ಲಿ ಕೂತು ಏಕಾಂತವನ್ನು ಅನುಭವಿಸುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡೆ. ಆ ಕಲ್ಪನೆಯ ಮುಂದೆಯೇ ಡಿ.ಆರ್. ನಾಗರಾಜ್ ‘ಕವಿ ಕಾವ್ಯ ಟ್ರಸ್ಟ್’ ಉದ್ಘಾಟನೆಯ ನಂತರ ಅಗ್ನಿಕುಂಡದ ಮುಂದೆ ಕೂತು ಮಾತಾಡಿದ ಚಾರಿತ್ರಿಕ ನುಡಿಗಳೂ ನನ್ನನ್ನು ಏನೋ ಕೆಣಕುವಂತೆ ನೆನಪು ಕಾಡುತ್ತಿತ್ತು. ಇದರ ಜೊತೆಯಲ್ಲಿಯೇ; ನಮ್ಮನ್ನೆಲ್ಲ ಕರೆದುಕೊಂಡು ಹೋಗಿ ಸಾಗರದಲ್ಲಿ ಮತೀಯ ಸಾಮರಸ್ಯಕ್ಕೆ ಸಂಬಂಧಿಸಿದಂತೆ ದಿಢೀರನೆ ಭಾಷಣ ಮಾಡಿಸಿದ್ದರು. ಹಾಗೆಯೇ ಶೂದ್ರ ಬೀಗದ ಕೈ ಇಲ್ಲಿಟ್ಟಿರುತ್ತೇನೆ. ಇಲ್ಲಿಯವರವಿಗೂ ಏನೂ ಕಳ್ಳತನವಾಗಲಿಲ್ಲ. ಆದರೂ ಏನನ್ನು ತಾವೆ ತೆಗೆದುಕೊಂಡು ಹೋಗಬಲ್ಲರು? ಒಂದಷ್ಟು ಪುಸ್ತಕಗಳನ್ನು ಎಂದು ಹೇಳಿದ್ದ ಮಾತುಗಳೂ ಮುಖಾಮುಖಿಯಾದುವು. ನಿದ್ರೆಯ ಮೊರೆ ಹೋಗುವ ಮುನ್ನ ಪ್ರಸನ್ನ ನೀವು ಏನೇನೋ ಆಗಿರಲು ಪ್ರಯತ್ನಿಸಿರಬಹುದು. ಆದರೆ ಅವೆಲ್ಲವುಗಳ ಮುಂದುವರಿದ ಭಾಗದ ಮೊತ್ತವಾಗಿ `ನೀವು ಗ್ರೇಟ್’ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ. ಇದರ ಜೊತೆಗೆಯೇ ಆ `ಚರಕ’ ಸಂಸ್ಥೆಯ ದಿಬ್ಬದ ಮೇಲೆ ನಿಮ್ಮನ್ನು ಅಡ್ಡಾದಿಡ್ಡಿ ಮಾನಸಿಕವಾಗಿ ಕಾಡಿರುವ ಒಂದು ನಾಟಕವನ್ನ ನಿದರ್ೇಶಿಸಿ ಅದು ಕಾವ್ಯಮಯವಾಗಿ ಎಲ್ಲರ ನೆನಪಿನಲ್ಲಿ ಧ್ವನಿಸುತ್ತಿರಲಿ. ನೀವು `ಒಂಟಿದನಿ’ ಅಲ್ಲ. ನೂರಾರು ದನಿಗಳನ್ನು ತಿದ್ದಿ ರಂಗದ ಮೇಲೆ ಬಿಟ್ಟವರು. ಅವರನ್ನು ನೋಡಿ ಪ್ರೇಕ್ಷಕರು ಎಂದೆಂದೂ ಸಿಂಹಾವ-ಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದವರು ಎಂದು ಮನಸ್ಸು ಮಾತಾಡತೊಡಗಿತ್ತು. ಈ ಟಿಪ್ಪಣಿಯನ್ನು ಲಂಕೇಶ್ ಅವರ `ಗುಣಮುಖ’ ನಾಟಕದ ಹಕೀಮ ಹಲಾವಿಯ ನುಡಿಗಳಿಂದ ಮುಗಿಸುತ್ತಿದ್ದೇನೆ. ಯಾಕೆಂದರೆ ಜಗತ್ತಿನ ಬಹುಪಾಲು ಮಂದಿ ಉತ್ತಮ ಲೇಖಕರು ಹಕೀಮ ಹಲಾವಿಯ ಸ್ವಲ್ಪಮಟ್ಟಿನ ಗುಣಗಳನ್ನಾದರೂ ಹೊತ್ತು ತಿರುಗುತ್ತಿರುವಂಥವರು. ದಿಲ್ಲಿಯ ಬಡ ಹಕೀಮ ನಾನು, ನಾನೂ ಕನಸುಕಂಡೆ ವಾಯುವ್ಯ ದಿಕ್ಕಿನಿಂದ ಹದ್ದಿನ ಪಡೆಯೊಂದು ಹಿಂದೂಸ್ತಾನದ ಕಡೆಗೆ ಭಯಂಕರ ಸದ್ದು ಮಾಡುತ್ತ ಹಾರಿ ಬರುತ್ತಿರುವುದನ್ನು ಕಂಡೆ. ಲಕ್ಷಾಂತರ ರಣಹದ್ದುಗಳು, ರಣ ಹದ್ದೊಂದರ ನೇತೃತ್ವದಲ್ಲಿ ಹಾರಿ ಬರುತ್ತಿವೆ ಹಸಿದು ಹಾರಿ ಬರುತ್ತಿವೆ. ಹೊಸ ದೇಶವೊಂದಕ್ಕೆ ಬರುವ ಅವಕ್ಕೆ ಕಾಣುವುದೆಲ್ಲ ಆಹಾರ. ಅವಕ್ಕೆ ಜನಜೀವನ ಸಂಸ್ಕೃತಿ ಅಭಿರುಚಿ ಯಾವುದೂ ಗೊತ್ತಿಲ್ಲ. ಹಾರಿಬಂದ ಹದ್ದುಗಳು ಸಿಕ್ಕಿದ್ದನ್ನು ಕೊಲ್ಲತೊಡಗುತ್ತವೆ . . . . . ಈ ಕೊಂದು ತಿನ್ನುವ ಅವಸರದ ಕೃತ್ಯದಲ್ಲಿ ಕಣ್ಣು, ಕಿವಿ, ಮೂಗು-ಎಲ್ಲವನ್ನು ಕಳೆದುಕೊಳ್ಳುತ್ತವೆ. ಮುವತ್ತೈದು ವರ್ಷಗಳ ಹಿಂದಿನ ಕನಸು ಈಗ ನಿಜವಾಯಿತು. ಅಲ್ಲಾಹು ನಿನ್ನ ಕನಸಿನಲ್ಲಿ ಬಂದು ರಣಹದ್ದಾಗು ಎಂದು ಹೇಗೆ ಹೇಳಲು ಸಾಧ್ಯ? ಶಿರಾಜ್ನ ಮಹಾಕವಿ ಸಾದಿ ಅಖಂಡ ಜ್ಞಾನಿಯಾದ ಸಾದಿ ನಿನಗೆ ಹದ್ದಾಗಿ ಆಕ್ರಮಿಸು ಎಂದು ಹೇಗೆ ಹೇಳಲು ಸಾಧ್ಯ? (ಮೌನ) ಮುಗ್ಧ ಹುಡುಗಿ ಶಾರದೆಯನ್ನು ನೀನು ಕಂಡೆ, ಗಮನಿಸಲಿಲ್ಲ; ಆಕೆಯ ಮಾತಿನ ಸದ್ದು ಕೇಳಿದೆ ಅರ್ಥ ತಿಳಿಯಲಿಲ್ಲ. ಆಕೆಯ ರೋದನ ಕೇಳಿದೆ. ಅವಳ ಆತ್ಮ ನಿನಗೆ ಅರ್ಥವಾಗಲಿಲ್ಲ. ಅವತ್ತೇ ನಿನ್ನ ಕಾಯಿಲೆ ಶುರುವಾಯಿತು. ನಿನ್ನ ಹೇಳಿಕೆಯ ಪ್ರಕಾರವೇ ನಿನಗೀಗ ಐವತ್ತು ವರ್ಷ. ಅವು ಕೆಲವು ವರ್ಷಗಳು. ಅಲ್ಲಿ ನೀನು ನಿಜವಾಗಿ ನೋಡಿದ್ದಾಗಲಿ ನಿಜವಾಗಿ ಕೇಳಿದ್ದಾಗಲಿ ನಿಜವಾಗಿ ಅರ್ಥಮಾಡಿ-ಕೊಂಡದ್ದಾಗಲಿ ಇಲ್ಲ.]]>

‍ಲೇಖಕರು G

May 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: