ಸಂದೀಪ್ ಕಾಮತ್ ಸ್ಪೆಷಲ್: ಅದನ್ನು ಕನ್ನಡಕ್ಕೆ ‘ಡಬ್ಬಿಂಗ್’ ಮಾಡಿದಾಗ..

ಸಂದೀಪ್ ಕಾಮತ್

ಇಂಗ್ಲೀಶ್ ನಲ್ಲಿ ಒಂದು ಹೇಳಿಕೆ ಇದೆ. “You can lead a horse to water, but you can’t make it drink” ಅದನ್ನು ಕನ್ನಡಕ್ಕೆ ‘ಡಬ್ಬಿಂಗ್’ ಮಾಡಿದಾಗ ಹೀಗೆ ಅರ್ಥ ಬರುತ್ತೆ ” ನೀವು ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಲ್ಲಿರಿ ಆದರೆ ಅದು ನೀರು ಕುಡಿಯುವಂತೆ ಮಾಡಲಾರಿರಿ “. ಕನ್ನಡ ಚಿತ್ರೋದ್ಯಮಕ್ಕೆ ಇದನ್ನು ಅನ್ವಯಿಸುವುದಾದರೆ “ನೀವು ಪ್ರೇಕ್ಷಕರನ್ನು ಥಿಯೇಟರ್ ವರೆಗೆ ಎಳೆದುಕೊಂಡು ಹೋಗಬಲ್ಲಿರಿ ಆದರೆ ಚಿತ್ರ ನೋಡುವಂತೆ ಮಾಡಲಾರಿರಿ!” ನಾನು ಡಬ್ಬಿಂಗ್ ನ ಪರವಾಗಿಯೂ ಇಲ್ಲ ವಿರೋಧವಾಗಿಯೂ ಇಲ್ಲ. ಯಾಕಂದರೆ ನನಗೆ ಇಂಗ್ಲೀಷ್ ಅರ್ಥ ಆಗುತ್ತೆ ಹಿಂದಿಯೂ ಅರ್ಥ ಆಗುತ್ತೆ. ಹಾಗಾಗಿ ನಾನು ಯಾವುದೇ ಚಿತ್ರವನ್ನು ಮೂಲ ಭಾಷೆಯಲ್ಲಿ ನೋಡಲು ಬಯಸುತ್ತೇನೆ. ಹೀಗಾಗಿ ನನಗೆ ಡಬ್ಬಿಂಗ್ ಬೇಕು ಅನ್ನೋ ಅಗತ್ಯ ಸಧ್ಯಕ್ಕಿಲ್ಲ. ಆದರೆ ಬೇಸರ ತರೋ ವಿಷಯ ಅಂದ್ರೆ ಚಿತ್ರೋದ್ಯಮ ಅನ್ನೋದು ಒಂದು ಪಕ್ಕಾ ವ್ಯವಹಾರ. ಏನೆ ಕ್ರಿಯೇಟಿವಿಟಿ ಅದು ಇದು ಅಂತ ಸಮಜಾಯಿಶಿ ನೀಡಿದರೂ ದಿನದ ಕೊನೆಗೆ ಅದು ವ್ಯವಹಾರ. ಥಿಯೇಟರ್ ಬಾಡಿಗೆ ನೀಡಿದವನಿಂದ ಹಿಡಿದು ನಟಿಸಿದ ನಟ ನಟಿಯರು, ನಿರ್ದೇಶಕ, ನಿರ್ಮಾಪಕ ಎಲ್ಲರ ಮೊದಲ ಆದ್ಯತೆ ಹಣ ಗಳಿಸೋದು(ಅಲ್ಲ ಅಂತ ಪ್ರಾಮಾಣಿಕವಾಗಿ ಹೇಳಿ ಪ್ಲೀಸ್!). ಇದು ಬಹುತೇಕ ಎಲ್ಲ ರಂಗಕ್ಕೂ ಅನ್ವಯವಾಗುತ್ತೆ. ಆದರೆ ಎಲ್ಲರೂ ಸಂಕಟ ಬಂದಾಗ ವೆಂಕಟರಮಣ ಅನ್ನೋ ಬದಲು, ಉದ್ಯಮ ಸಂಕಷ್ಟದಲ್ಲಿ ಸಿಲುಕಿದಾಗ ನಾಡು ನುಡಿಯ ಬಗ್ಗೆ ಭಾಷಣ ನೀಡಲು ಪ್ರಾರಂಭಿಸುತ್ತಾರೆ. ಕನ್ನಡದ ಆಸ್ತಿ ಮಾಸ್ತಿ ಯ ಹೆಸರು ರೌಡಿಸಂ ಬಗೆಗಿನ ಚಿತ್ರಕ್ಕೆ ಇಡಬೇಡ್ರಪ್ಪಾ ಅಂತ ಪರಿ ಪರಿಯಾಗಿ ಕೇಳಿದ್ರೂ ನಿರ್ಮಾಪಕರಿಗೆ ಅರ್ಥ ಆಗಲ್ಲ. ವೀರ ಮದಕರಿಯ ಹೆಸರು ಕಮರ್ಷಿಯಲ್ ಚಿತ್ರಕ್ಕೆ ಇಡಬೇಡ್ರಪ್ಪಾ ಅಂತ ಬೇಡಿದ್ರೂ ಯಾರೊಬ್ರೂ ತುಟಿಕ್ ಪಿಟಿಕ್ ಅನ್ನಲ್ಲ! ಆದರೆ ತಮ್ಮ ‘ಬಿಸಿನೆಸ್’ ಗೆ ಪೆಟ್ಟಾಗುತ್ತೆ ಅಂತ ಗೊತ್ತಾದಾಗ ಮಾತ್ರ ಅವರಿಗೆಲ್ಲಾ ನಾಡು ನುಡಿಯ ಬಗ್ಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬರುತ್ತೆ. ನಾಳೆ ಕಾಲ್ ಶೀಟ್ ಸಿಗುತ್ತೆ ಅನ್ನೋದಾದ್ರೆ ಇದೇ ಆಮೀರ್ ಖಾನ್ ನ ಕರೆಸಿ ಕನ್ನಡದಲ್ಲೆ ‘ಸತ್ಯಮೇವ ಜಯತೆ’ ಅನ್ನೋ ಸಿನೆಮಾ ಮಾಡ್ತಾರೆ ಈ ನಿರ್ಮಾಪಕರು. ಆಗ ಅವರಿಗೆ ನಮ್ಮ ದರ್ಶನ್, ಉಪೇಂದ್ರ, ಸುದೀಪ್ ರಂಥ ಕನ್ನಡಿಗರ ಕೆಲಸಕ್ಕೆ ಕುತ್ತು ಬರುತ್ತೆ ಅಂತ ಅನಿಸಲ್ಲ. ಶ್ರೇಯಾ ಘೋಶಾಲ್, ಸೋನು ನಿಗಮ್ ರ ಕೈಯಲ್ಲಿ(actually ಬಾಯಲ್ಲಿ!) ಹಾಡಿಸಿದಾಗ ನಮ್ಮವರೆ ಆದ ರಾಜೇಶ್ ಕೃಷ್ಣನ್, ನಂದಿತಾ ಬಗ್ಗೆ ಏನೂ ಅನಿಸಲ್ಲ! ಎಲ್ಲೋ ಲಂಡನ್ ನಲ್ಲಿ ಕೂತ ರಹಮಾನ್ ಕೈಯಲ್ಲಿ ಸಂಗೀತ ನಿರ್ದೇಶನ ಮಾಡಿಸುವಾಗ ನಮ್ಮ ಹರಿಕೃಷ್ಣ, ಹಂಸಲೇಖ ನೆನಪಾಗಲ್ಲ! ಪರಭಾಷಾ ನಟಿಯರಾದ ಕಾಜಲ್ ಅಗರ್ವಾಲ್ ಮುಂತಾದವರನ್ನು ಕರೆಸಿ ನಟಿಸಲು ಹೇಳಿದಾಗ ‘ನಮ್ಮ ಶುಭಾ ಪೂಂಜಾ, ರಾಧಿಕಾ ಪಂಡಿತ್ ಗೆ ಕೆಲಸ ಸಿಗಲ್ವಲ್ಲಪ್ಪ’ ಅಂತ ಅನಿಸೋದೇ ಇಲ್ಲ! ತಮ್ಮ ಬುಡಕ್ಕೆ ಬಂದಾಗ ಮಾತ್ರ ನೋವಾಗುತ್ತೆ. ನಾಳೆ ಕನ್ನಡ ಲೇಖಕರ ಉಳಿವಿಗಾಗಿ ಅನುವಾದ ನಿಷೇಧಿಸಲಾಗುತ್ತೆ ಅಂತ ಹೇಳಿದ್ರೆ ಬಹಳಷ್ಟು ಲೇಖಕರಿಗೆ ನಡುಕ ಉಂಟಾಗೋದು ನಿಜ! ಯಾರೋ ಬೇರೆ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ದಂಡಿಯಾಗಿ ಕನ್ನಡಕ್ಕೆ ಅನುವಾದಿಸಿದಾಗ ಕನ್ನಡದಲ್ಲೇ ಸ್ವಂತ ಬರೆವವರ ನೋವು ಯಾರಿಗೂ ಅರ್ಥವಾಗಿಲ್ಲ. ಕನ್ನಡ ಲೇಖಕರದ್ದೂ ಸೀಮಿತ ಮಾರುಕಟ್ಟೆ ಅನ್ನೋದು ಆಗ ಯಾರಿಗೂ ಅನಿಸಲೇ ಇಲ್ಲ. ನಿನ್ನೆಯ ವಿಜಯ ಕರ್ನಾಟಕದಲ್ಲಿ ಕನ್ನಡ ಚಳುವಳಿಯ ಬಗ್ಗೆ ಓದುತ್ತಿದ್ದವನಿಗೆ ಆಶ್ಚರ್ಯವಾಯಿತು. ೧೯೬೨ ರ ಕನ್ನಡ ಚಳುವಳಿಯ ಆರಂಭವಾಗಿದ್ದು ರಾಮ ಸೇವಾ ಮಂಡಳಿ ಅಂದಿನ ಕಾಲದಲ್ಲಿ ಪರಪ್ರಾಂತ್ಯದವರಿಗೆ ಮನ್ನಣೆ ನೀಡುತ್ತಿದ್ದರ ಬಗ್ಗೆ ಆಗಿತ್ತು ಅಂತ ಲೇಖನದಲ್ಲಿ ಪ್ರಸ್ತಾವಿಸಲಾಗಿತ್ತು. ಇಂದಿನ ವಿಜಯ ಕರ್ನಾಟಕ ತೆರೆದು ನೋಡಿದಾಗ ಮತ್ತೆ ಅಚ್ಚರಿ! ಇಂದಿನ ಕಾರ್ಯಕ್ರಮದಲ್ಲಿ ಅದೇ ರಾಮ ಸೇವಾ ಮಂಡಳಿಯ ಕಾರ್ಯಕ್ರಮದ ವಿವರ. ಕಲಾವಿದರು ತಮಿಳುನಾಡಿನ ಬಾಂಬೆ ಜಯಶ್ರೀ, ದೆಹಲಿಯ ಸಾಯಿರಾಂ ಮತ್ತೆ ಇನ್ಯಾರ್ಯಾರೋ!!! ಹೌ ಕಣ್ರಿ ! Art has no boundary!!! *  ]]>

‍ಲೇಖಕರು G

May 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

4 ಪ್ರತಿಕ್ರಿಯೆಗಳು

 1. malathi S

  ahaa!! Dostaa u have hit the nail on the head…after a long time enjoyed reading this typical Sandep Kamath style!!toooooo good!!
  🙂
  maayi

  ಪ್ರತಿಕ್ರಿಯೆ
 2. Ajay

  ಬಹುಸಂಖ್ಯಾತ ಜನರದ್ದು ಎರಡು ಕೆಟಗರಿ ಇದೆ.
  ೧. ನಂಗೆ ಕನ್ನಡ ಚೆನ್ನಾಗಿ ಅರ್ಥಾಗತ್ತೆ. ಇಂಗ್ಲೀಷು ಸುಮಾರಾಗಿ ಅರ್ಥಾಗತ್ತೆ. ಉಳಿದ ಯಾವ ಭಾಷೆಯೂ ಗೊತ್ತಿಲ್ಲ.
  ೨. ಇಂಗ್ಲೀಷು ಮತ್ತಿತರ ಭಾಶೆಗಳು ಗೊತ್ತಿದ್ದರೂ ಕೂಡ ನನಗೆ ಕನ್ನಡ ಭಾಷೆಯಲ್ಲೇ ನೋಡೋಕೆ, ಕೇಳೋಕೆ ಇಷ್ಟ.
  ಹಾಗಾಗಿ ನಂಗೆ ಡಬ್ಬಿಂಗ್ ಬೇಕು. ಇದು ಬರೀ ಸಿನೆಮಾಗಷ್ಟೇ ಅಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: