ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳು

ಹಾವೇರಿಯಲ್ಲಿ ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ  ಹಿರಿಯ ಕವಿ ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳು ಇದೇ ಜುಲೈ 29 ರಂದು ಬಿಡುಗಡೆಯಾದವು. ‘ಸತೀಶ್ ಸಮಗ್ರ ಕವಿತೆಗಳು’ (ಕಾವ್ಯ) ಮತ್ತು ‘ಓದೊಳಗಿನ ಓದು’ (ವಿಮರ್ಶಾ ಲೇಖನಗಳು) ಎಂಬ ಎರಡು ಪುಸ್ತಕಗಳನ್ನು ಹೆಸರಾಂತ ವಿಮರ್ಶಕ  ಡಾ. ಜಿ. ಎಸ್. ಅಮೂರ ಬಿಡುಗಡೆ ಮಾಡಿದರು. ನಾಡಿನ ಹಿರಿಯ ಕವಿ ಚನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು. ಸಮಗ್ರ ಕಾವ್ಯ ಕುರಿತು ಖ್ಯಾತ ವಿಮರ್ಶಕ ಡಾ. ಚಂದ್ರಶೇಖರ ನಂಗಲಿ ಮತ್ತು ಓದೊಳಗಿನ ಓದು ಕೃತಿಯ ಕುರಿತು ಶ್ರೀಮತಿ. ಪುಷ್ಪಾ ಶೆಲವಡಿಮಠ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕವಿಪ್ರನಿನಿ ನೌಕರರ ಸಂಘ, ಹಾವೇರಿ ವೃತ್ತದ ಸಂಘಟನಾ ಕಾರ್ಯದಶರ್ಿ ವಿಜಯಕುಮಾರ ಮುದಕಣ್ಣನವರ ಮತ್ತು ಖ್ಯಾತ ಕವಿ ಡಾ. ಸರಜೂ ಕಾಟ್ಕರ ಆಗಮಿಸಿದ್ದರು. ಕಣವಿಯರ ಮಾತುಗಳು ಬಂಡಾಯದ ಅಬ್ಬರ ಇಳಿದ ಮೇಲೂ ಕವಿತ್ವದ ಮೂಲಕ ತನ್ನತನ ಉಳಿಸಿಕೊಮಡು ನಿಸರ್ಗಧಾತು ಮತ್ತು ಪ್ರೇರಣೆಗೆ ಶಕ್ತಿಯಾಗಿರುವ ಎರಡು ಕೃತಿಗಳನ್ನು ನೀಡಿರುವ ಸಹೃದಯಿ ಕವಿ ಸತೀಶ ಕುಲಕರ್ಣಿ ಪ್ರವರ್ಧರಿಗೆ ಮಾದರಿ ಎಂದು ನಾಡೋಜ ಹಿರಿಯ ಕವಿ ಚೆನ್ನವೀರ ಕಣವಿ ಅಭಿಪ್ರಾಯ ಪಟ್ಟರು. ಜಿ. ಎಸ್. ಅಮೂರವರ ಮಾತುಗಳು ಕಾಲ ಘಟ್ಟದ ಚಳವಳಿಗಳು ತೀವ್ರತೆ ಪಡೆದುಕೊಂಡು ವಿಚಾರವಾದಿಗಳು ಬಂಡಾಯ ಸಂಘಟನೆ ಉಗಮಕ್ಕೆ ನಾಂದಿ ಹಾಡಿದ್ದರೂ ಇತ್ತೀಚಿನ ರಾಜಕೀಯ ಚಳುವಳಿಗಳ ಪ್ರಖರತೆಯಲ್ಲಿ ಈ ಬಂಡಾಯದ ಧ್ವನಿ ಕ್ಷೀಣವಾಗಿ ತನ್ನತನ ಕಳೆದುಕೊಂಡಿದೆ ಎಂದು ಹಿರಿಯ ಲೇಖಕ ಹಾಗೂ ವಿಮರ್ಶಕ ಡಾ. ಈ. ಎಸ್. ಅಮೂರ ಹೇಳಿದರು. ಪುಸ್ತಕಗಳ ಸಂಕ್ಷಿಪ್ತ ಪರಿಚಯ : ಸತೀಶ್ ಸಮಗ್ರ ಕವಿತೆಗಳು : ಕಳೆದ ನಾಲ್ಕು ದಶಕಗಳಿಂದ ಸತೀಶ ಕುಲಕರ್ಣಿಯವರು ಪ್ರಕಟಿಸಿದ ಆರು ಸಂಕಲನಗಳ ಒಂದನೂರಾ ಎಂಬತ್ತೇಳು ಕವಿತೆಗಳು ಈ ಸಮಗ್ರ ಕಾವ್ಯ ಸಂಪುಟದಲ್ಲಿವೆ. ಬೆಂಕಿ ಬೇರು (1973), ನೆಲದ ನೆರಳು (1974), ಒಡಲಾಳ ಕಿಚ್ಚು (1980), ವಿಷಾದ ಯೋಗ (1994), ಗಾಂಧೀ ಗಿಡ (2001) ಹಾಗೂ ಕಂಪನಿ ಸವಾಲ್ (2006) ಸಂಕಲನದ ಕವಿತೆಗಳಿವೆ. ಈಗಾಗಲೆ ಐದು ವಿಶ್ವ ವಿದ್ಯಾಲಯಗಳ ಪಠ್ಯ ಪುಸ್ತಕಗಳಲ್ಲಿ ಇಲ್ಲಿಯ ಕವಿತೆಗಳು ಆಯ್ಕೆಯಾಗಿವೆ. ಇಂಗ್ಲೀಷ, ಹಿಂದಿ ಹಾಗೂ ತೆಲಗು ಭಾಷೆಗೂ ಇಲ್ಲಿಯ ಕೆಲವು ಕವಿತೆಗಳು ಅನುವಾದವಾಗಿವೆ. ಸತೀಶರ ಕಟ್ಟತೇವ ನಾವು ಕಟ್ಟತೇವ ಅತ್ಯಂತ ಪ್ರಸಿದ್ದ ಕ್ರಾಂತಿಗೀತೆಗಳಲ್ಲಿ ಒಂದಾಗಿದೆ. ಓದೊಳಗಿನ ಓದು : ಇದು ಲೇಖಕರ ಮೊದಲ ಸ್ವತಂತ್ರ್ಯ ಗದ್ಯ ಕೃತಿ ಇದರಲ್ಲಿ ಒಟ್ಟು ಮುವತ್ತಾರು ವಿಮರ್ಶ ಲೇಖನಗಳಿವೆ. ಮಹಿಳಾ ವಿಶ್ವವಿದ್ಯಾಲಯ, ಸಾಹಿತ್ಯ ಅಕಾಡಮಿ ಒಳಗೊಂಡಂತೆ ಪ್ರಕಟಿಸಿದ ಹಲವು ಲೇಖನಗಳಲ್ಲದೆ ಕನ್ನಡದ ಮಹತ್ವದ ಐದು ಜನ ಲೇಖಕರ ಸಮಗ್ರ ಅಧ್ಯಯನದ ಲೇಖನಗಳು ಇದರಲ್ಲಿವೆ. ಬೇರೆ ಬೇರೆ ಕೃತಿಗಳಿಗೆ ಬರೆದ ಮುನ್ನುಡಿಗಳು ಕೂಡ ಓದೊಳಗಿನ ಓದು ವಿಮರ್ಶಾ ಕೃತಿಯಲ್ಲಿವೆ. ಸಮಾರ೦ಭದ ಚಿತ್ರಗಳು : ]]>

‍ಲೇಖಕರು G

August 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: