ಪ್ರಿಯ ಸ್ನೇಹಿತರೆ,
ನನ್ನ ಕವನ ಸಂಕಲನ “ಸಂತೆ ಸರಕು”ಗೆ ಕಲಾವಿದರಾದ ಅರುಣ್ ಕುಮಾರ್ ಕವರ್ ಪೇಜ್ ಮಾಡಿದ್ದಾರೆ.
ಯಾವುದು ಸೂಕ್ತ ಸೂಚಿಸುವಿರ ?
-ಮಮತಾ ಅರಸೀಕೆರೆ
ಪ್ರಿಯ ಸ್ನೇಹಿತರೆ,
ನನ್ನ ಕವನ ಸಂಕಲನ “ಸಂತೆ ಸರಕು”ಗೆ ಕಲಾವಿದರಾದ ಅರುಣ್ ಕುಮಾರ್ ಕವರ್ ಪೇಜ್ ಮಾಡಿದ್ದಾರೆ.
ಯಾವುದು ಸೂಕ್ತ ಸೂಚಿಸುವಿರ ?
-ಮಮತಾ ಅರಸೀಕೆರೆ
ಪ್ರಕಾಶ್ ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ...
ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ...
ಬರಗೂರು ರಾಮಚಂದ್ರಪ್ಪ ಡಾ. ಅರ್ಚನಾ ಅವರು ಒಂದು ದಿನ ನಮ್ಮ ಮನೆಗೆ ಬಂದರು. ಅವರ ಪರಿಚಯ ಹೆಚ್ಚೇನೂ ಇರಲಿಲ್ಲ. ಅವರು ನನ್ನ ಗೆಳೆಯ ಡಾ. ಸಣ್ಣರಾಮ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಕೊನೆಯದು. ಬಣ್ಣ ಮತ್ತು ಚಿತ್ರ ಹಲವು ಅರ್ಥಗಳ ಜೊತೆ ವ್ಯಾಪಕ ಧ್ವನಿಹೊಂದಿದೆ.
Thank you
ಎರಡನೆಯದು. ಏಕೆಂದರೆ ಇಂದು ಹೆಣ್ಣು ಸಂತೆಯಲಿ ಸಿಗುವ ಸರಕಾಗಿದ್ದಾಳೆ. ಮಂಚದ ಮೂಲೆಯಲ್ಲಿ ಕುಳಿತು ಗೊತ್ತಿಲ್ಲದ ಅಮಾಯಕನಿಗೆ ಮೈ ಹಂಚಿಕೊಳ್ಳಬೇಕಾದ ನೋವಿನ ತುಡಿತವಿದೆ. ಕರುಳು ಹಿಂಡುವ ಈ ಗತಿ ಇಂದೇ ಕೊನೆಯಾಗಲಿ ಅನ್ನುವ ಭಾವನೆ ಹೊತ್ತ ಕವನ ನಿಮ್ಮ ಪುಸ್ತಕದಲ್ಲಿ ಇರಬಹುದೆನ್ನುವ ನಂಬಿಕೆ ನನ್ನದು. ಗೆಳತಿ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಅಭಿನಂದನೆ. ಶುಭವಾಗಲಿ
Thank you
ಲೇಔಟ್ ತಜ್ಞರ ಭಾಷೆಯಲ್ಲಿ ಹೇಳುವುದಾದರೆ ಕೊನೆಯದ್ದರಲ್ಲಿ ಎಲ್ಲವೂ ಬ್ಯಾಲನ್ಸ್ಡ್ ಆಗಿದೆ.
Thank you 🙂
ಮೂರನೆಯದು . ಚಿತ್ರ , ಬಣ್ಣ ನೋಡಲು ಹಿತವಾಗಿದೆ .
Thank you
“ಏಕೆಂದರೆ ಇಂದು ಹೆಣ್ಣು ಸಂತೆಯಲಿ ಸಿಗುವ ಸರಕಾಗಿದ್ದಾಳೆ”
ಸಂಗೀತಾ ಕಳ್ಮನೆಯವರ ಮಾತಿಗೆ ನನ್ನ ವಿರೋಧ. ಹೆಣ್ಣು ಸರಕಾಗಿದ್ದಾಳೆನೋ ನಿಜ. ಆದರೆ ಮಾಡಿದ್ದು ಯಾರು? ನಾವುಗಳೇ ತಾನೆ.
ಉದಾಹರಣೆಗೆ ಉಗುರಿಗೆ ಹಚ್ಚುವ ಬಣ್ಣದ ಜಾಹೀರಾತಿಗೂ ಅವಳ ಇಡೀ ನಡುವಿನ ಸೌಂದರ್ಯ ತೋರಿಸುವ ಅಗತ್ಯವೇನಿದೆ. ಅದು ನೋಡುಗರ ಮೇಲೆ ನಿಂತಿದೆ ಎಂದು ಹೇಳಬಹುದು. ಅಥವಾ ಕಂಪೆನಿಗಳು ದುಡ್ಡು ಮಾಡುವ ಬಗೆ ಎನ್ನಬಹುದು. ಸಿಂಪಲ್ ಆಗಿ ವಿಚಾರ ಮಾಡಿ, “ಅದು” ಕೂಡ ಅವಳ ಜೀವನವೇ ತಾನೆ.
ಕೆಲವು ಕಥೆ, ಕವಿತೆಗಳಲ್ಲಿ ಹೆಣ್ಣಿನ ತೊಗಲಿನ ವ್ಯಾಪಾರ ಚನ್ನಾಗಿ ಮೂಡಿ ಬರುತ್ತದೆ. ಯಾಕೆಂದರೆ ಖಾಲಿ ಹಾಳೆಯಲ್ಲಿ ಏನನ್ನಾದರೂ ಗೀಚಬಹುದು. ನಿಜ ಸ್ಥಿತಿ ಗಮನಿಸಿದರೆ ಆ ಹೆಣ್ಣಿನ ಅಂತರಂಗದ ಆಳವನ್ನು ಕೆದಕಿ ನೋಡಲು ಆಗುವುದಿಲ್ಲ. ಅವಳದೇ ಆದ ಭಾವನೆಗಳಿವೆ. ಕೊಟ್ಟ ಹಣಕ್ಕೆ ಗಿರಾಕಿಯನ್ನು ತೃಪ್ತಪಡಿಸುವಂತ ತಾಯಿಯಂತ ಗುಣವು ಇದೆ. ಅವಳನ್ನು ಈ ಸ್ಥಿತಿಗೆ ತಂದ ಸಮಾಜದ ಬಗ್ಗೆ ಒಡೆಯಲಾರದಂತ ದುಃಖದ ಮೊಟ್ಟೆಯೂ ಅವಳ ಗರ್ಭದಲ್ಲಿದೆ.
ಕರಳು ಹಿಂಡುವ ಈ ಕಥೆ ಇಂದೇ ಕೊನೆಯಾಗಲಿ ಎನ್ನುವ ಬದಲು ಅವರಿಗೂ ಬದುಕುವ ಹಕ್ಕನ್ನು ನೀಡಬೇಕು ಎನ್ನುವ ಆಶಾಭಾವನೆ ನಮ್ಮಲ್ಲಿ ಮೂಡಿಬರಬೇಕಷ್ಟೆ.
ಹಿಂದಿನ ದೇವದಾಸಿ ಪದ್ದತಿಯಂತೆ ಬಲವಂತವಾಗಿ ನೂಕಿದರೆ ಅದು ನಮ್ಮ ತಪ್ಪು. ಆದರೆ ಈ ದಾರಿ ಮಾತ್ರ ಗೊತ್ತಿರುವವರಿಗೆ ಅದೇ ಅವರ ಜೀವನವಾಗಿರುತ್ತದೆ. ಅದನ್ನು ಬಿಟ್ಟು ಬೇರೆ ಕೆಲಸ ಮಾಡಿ ಎಂದು ಸಲಹೆ ಕೊಡಬಹುದು. ಆದರೆ ಕೊಡುವವರು ಯಾರಿದ್ದಾರೆ..?
ಈ ಗಂಡಸರು ಹೀಗೆ.
ಹೆಣ್ಣಿನ ಬಗ್ಗೆ ಹೀಗೆ ಮಾತನಾಡುತ್ತಾರೆ ಅನ್ನಬೇಡಿ.
ನಾನು ಇಲ್ಲಿ ಗಂಡಸು ಎನ್ನುವುದನ್ನು ಮರೆತು ಮಾತಾಡಿದ್ದೇನೆ.