ಸವಿ ಸವಿ ನೆನಪು, ಸಾವಿರ ನೆನಪು..

ನೆನಪಿದೆಯೇ ನಿಮಗೆ?!

ಪ್ರತಿಮಾ ಶಾನ್ ಭಾಗ್ ಕಾಮತ್

ಈಗೊಂದು ಎರಡು ದಿನಗಳ ಹಿಂದೆ ನನ್ನ FB Friend ಒಬ್ರು ಒಂದು ಲೇಖನ ಬರ್ದಿದ್ರು.. ನಾವು ಚಿಕ್ಕವರಿದ್ದಾಗ ಬಳಸುತ್ತಿದ್ದ ರೀಫಿಲ್, ಇಂಕ್ ಪೆನ್ನುಗಳ ಬಗ್ಗೆ..ಆವಾಗ ನನಗೆ ನೆನಪಾಗಿದ್ದು ಏನು ಗೊತ್ತಾ ನಟರಾಜ್ ಪೆನ್ಸಿಲ್.:)ಮೇಷ್ರು ಲೆಕ್ಕ ಬಿಡಿಸೋಕೆ, ಪ್ರಯೋಗದ ಚಿತ್ರ ಬಿಡಿಸೋಕೆ ಹೇಳಿದಾಗೆಲ್ಲ ಆ ಪೆನ್ಸಿಲ್ ನಿಂದ ತಲೆ ಕೆರಿಯೋದು ಮತ್ತೆ ಕಚ್ಚೋದು..ಪೆನ್ಸಿಲ್ಲು ಹೊಸದಿದ್ದಾಗ ಅದಕ್ಕೆ ಹಿಂಬದಿಯಲ್ಲಿ ಬ್ಲ್ಯಾಕ್ ಕೋಟಿಂಗ್ ಇರ್ತ್ತಿತ್ತು. ಆದರ ರುಚೆ ಸಲ್ಪ ಒಗರು, ಆದ್ರೆ ಒಂದುಸಲ ಆ ಕೋಟಿಂಗ್ ಹೋದ ಮೇಲೆ ಆಹಾ.. ಕಚಕಚ ಜಗಿದಷ್ಟೂ ಒಂತರಾ ರುಚೀ ರಸ.. ಯಮ್ ಯಮ್ ಯಮ್ಮೀ.. ಹಾಳಾದ್ದು ಪೆನ್ಸಿಲ್ ಬಾಯಲ್ಲಿ ಇರ್ದೇ ಹೋಗಿದ್ರೆ ಲೆಕ್ಕ ಹೊಳಿತಾನೇ ಇರಲಿಲ್ಲ.. ಇನ್ನು ಸ್ಲೇಟ್ ಮೇಲೆ ಬರಿಯಲು ಬಳಸೋ ಬಳಪ(ಬೆಣ್ಣೆ ಕಡ್ಡಿ ಅಂತಿದ್ವಿ..) ಅದರ ರುಚಿಯಂತೂ ವರ್ಣಿಸಲಸದಳ..   ನನ್ನ ಫ್ರೆಂಡ್ಸೆಲ್ಲ ಪೆನ್ಸಿಲ್ಲಿನ ಎರಡೂ ಬದಿಯನ್ನು ಕೆತ್ತಿರೋರು, ಅಕಸ್ಮಾತ್ ಬರೀಬೇಕಾದ್ರೆ ಮದ್ದು ಮುರ್ದು ಹೋದ್ರೆ ಬೇಕಾಗತ್ತೆ ಅಂತ.. ಆದ್ರೆ ನಾನು ಮಾತ್ರ ಯಾವತ್ತೂ ಹಾಗೆ ಮಾಡ್ತಿರ್ಲಿಲ್ಲ.. ಹಾಂ, ಒಂದು ಸಲ ಆ ವಿಜ್ನಾನದ ಪ್ರಯೋಗ “Graphite is a good conductor of electricity”. ಅದಕ್ಕೋಸ್ಕರ ಪೆನ್ಸಿಲ್ಲನ್ನು ಎರಡೂ ಬದಿಯಲ್ಲಿ ಕೆತ್ತಿದ್ದೆ . ಕೆಂಪು ಹಸಿರು ಲ್ಯಾಮಿನೇಟೆಡ್ ವೈರಿನ ತುದಿಯನ್ನು ಕೆತ್ತಿ ,ಆ ಕೆಂಪು ಮೀಸೆ(?)ತರಹದ ತಾಮ್ರದ ವೈರನ್ನು ಪೆನ್ಸಿಲ್ ಮದ್ದಿಗೆ ಗಟ್ಟಿಯಾಗಿ ಒತ್ತಿ ಹಿಡಿದು, ಇನ್ನೊಂದು ಬದಿಯನ್ನು ಹೋಲ್ಡರ್ ಸಮೇತ ಇರೋ ಬಲ್ಬಿಗೆ ಜೋಡಿಸೋದು.. ಆಗ ಆ ಬಲ್ಬು ಉರಿಲೋ ಬೇಡವೋ ಅನ್ನೋ ರೀತಿ ಪಕಪಕ ಹೊತ್ತಿಕೊಳ್ಳೋದು…. ಮೆತ್ತಗೆ ಉರಿಯೋ ದೀಪ ನೋಡಿ ನನಗಂತೂ ಇಡೀ ನಮ್ಮೂರಿಗೆ ಕರೆಂಟು ಸಪ್ಲೈ ಮಾಡಿಷ್ಟು ಸಂತೋಷ, ಸಂಭ್ರಮ….. ಆ ‘ಸ್ವದೇಸ್” ಹಿಂದಿ ಪಿಕ್ಚರ್ ನಲ್ಲಿ ಶಾರುಕ್ಕು ಅಮೇರಿಕೆಯಿಂದ ಹಿಂತಿರುಗಿ ಅವನ ಊರಿನಲ್ಲಿ ಪುಟ್ಟ ಹಳ್ಳಕ್ಕೆ ಆಣೆಕಟ್ಟು ಕಟ್ಟಿ , ವಿದ್ಯುತ್ ಉತ್ಪಾದನಾ ಘಟಕವನ್ನು ತಯಾರಿಸಿ ಊರಿಗೆಲ್ಲ ದೀಪದ ವ್ಯವಸ್ಥೆ ಮಾಡ್ತಾನಲ್ಲ.. ಆವಾಗೆಲ್ಲ ನನಗೆ ಈ ಪೆನ್ಸಿಲ್ ಪ್ರಯೋಗಾನೇ ನೆನಪಾಗೋದು ..:))

ಇನ್ನು ಈ ಚಿತ್ರದಲ್ಲಿರೋ ಜಗಿಸಿಕೊಂಡು ಹೈರಾಣಾಗಿದ್ದ ಪೆನ್ಸಿಲ್ಲು ನನ್ನ ಸುಪುತ್ರಿಯದ್ದು.. ಅದೇನೋ “ ತಾಯಿಯಂತೆ ಮಗಳು ನೂಲಿನಂತೆ ಸೀರೆ” ಅನ್ನೊ ಗಾದೆ ಸುಮ್ ಸುಮ್ನೇ ಹುಟ್ಟುಹಾಕಿರೋದು ಅನ್ಕೊಂಡ್ರಾ???…..:-):-)]]>

‍ಲೇಖಕರು G

June 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. srujan

    Nataraj pencil,Nataraj compass box,swan pen,sugandha rubber, hero pen..balyada class room na pratidinagalu savi nenapugale..tumbaa chennagide.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: