’ಸವೆದ ಹಾದಿಯನ್ನರಸುತ್ತಾ….’ – ನಾ ದಿವಾಕರ್ ಕವಿತೆ

– ನಾ ದಿವಾಕರ್ ಸವೆದ ಹಾದಿಯನ್ನರಸುತ್ತಾ,,,,, ಎಲ್ಲೋ ಹುಡುಕುತ್ತಿದ್ದೇನೆ ಗತಿಸಿ ಹೋದ ಹೆಜ್ಜೆ ಗುರುತುಗಳನ್ನು ಅಳಿಸಿ ಭೂಗತವಾದ ಭಾವನೆಗಳನ್ನು ಆವಿಯಾಗಿ ಮುಕ್ತಾಕಾಶದಿ ಬೆರೆತುಹೋದ ಅಂತರಾಳದ ಪ್ರೀತಿಯ ಹೊಳಹುಗಳನ್ನು ! ಎಲ್ಲಿ ಹೋದವು ಆ ತಾಣಗಳು ಅಮ್ಮನ ಸೆರಗಿನ ಆಸರೆ ಅಪ್ಪನ ಕಿರುಬೆರಳಿನ ಆಸರೆ ಸುತ್ತಲಿನ ಗೆಳೆಯರ ಸಾಂತ್ವನದ ಆಸರೆ ಹೃದಯಾಂತರಾಳದಲಿ ಮೂಡಿರುವ ಅಚ್ಚಳಿಯದ ಗುರುತುಗಳು ಏನಾದವು ? ಏನಾದವು ? ಬಯಸಿದ್ದೊಂದೇ ! ಜೀವನವಿಡೀ ಬಯಸಿದ್ದೊಂದೇ ನಿಷ್ಕಲ್ಮಷ ಪ್ರೀತಿ ಎಲ್ಲಿಯೂ ಎಂದಿಗೂ ನಿಲ್ಲದ ನಿಚ್ಚಳ ಪ್ರೀತಿ ; ದೊರೆತಿದ್ದೇನೋ ನಿಜ ಹೆಜ್ಜೆ ಹೆಜ್ಜೆಗೂ ನೆನಪಿಸುವ ವಾತ್ಸಲ್ಯದ ತುಣುಕುಗಳು ; ಎಲ್ಲೋ ಕಳೆದುಹೋದವು ಭಾವನೆಗಳ ಗುಂಗಿನಲ್ಲಿ ಕಾಮನೆಗಳ ಹಂಗಿನಲ್ಲಿ ಸ್ವಾರ್ಥತೆಯ ಛಾಯೆಯಲ್ಲಿ ! ಇನ್ನೂ ಬೇಕೆನಿಸುತ್ತಿದೆ ಮನಹೃದಯಗಳು ಕೈ ಬೀಸಿ ಕರೆಯುತಿದೆ ಆಂತರ್ಯದ ಹಪಹಪಿ ಮತ್ತೆ ಆವಿಯಾಗುತ್ತಿದೆ ಎಲ್ಲಿ ಹುಡುಕಲಿ ಮಣ್ಣಾದ ಭಾವದೀಪ್ತಿಗಳನು ; ನಿಲುಕದ ಬಿಸಿಲ್ಗುದುರೆಗಳ ಮೇಲೇರುವ ತವಕ ಸಾಕಾರಗೊಳ್ಳುವುದೆಂತು ! ಅದೋ ಅಲ್ಲೊಂದು ಪ್ರಣತಿ ಕತ್ತಲ ಕಣಿವೆಯಂಚಿನಲಿ ತಿಮಿರವನಳಿಸಿ ಜೀವಧಾರೆಯನೆರೆವ ಪ್ರೀತಿಯ ಹೊನಲು ಬೆಳಗುತಿದೆ ಹೃದಯ ಕಣಿವೆಯನು ; ಅದೋ ಕಾಣುತಿದೆ ನೆಲದಾಳದಲಿ ಕಳೆದುಹೋದ ಹೆಜ್ಜೆಗಳು ಅಳಿಸಿ ಹೋದ ಭಾವನೆಗಳು ! ಇನ್ನೇನನರಸಲಿ : ನೀರ ಮೇಲಣ ಹೆಜ್ಜೆಗುರುತುಗಳು ಬಡಿದೆಬ್ಬಿಸುತಿವೆ ಆಂತರ್ಯದ ಭಾವಗಳನು ಅಪ್ಪಿಕೊಳ್ಳುವುದೊಂದೇ ಭಾವ ಒಪ್ಪಿಕೊಳ್ಳುವುದೊಂದೇ ಜೀವ ಪಡೆದುಕೊಳ್ಳುವ ತವಕದಲಿ ಎಲ್ಲವೂ ನಿರ್ಭಾವ !]]>

‍ಲೇಖಕರು G

May 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಗಳು ಪೃಥೆ

ಮಗಳು ಪೃಥೆ

ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ...

ಕುರ್ಚಿ

ಕುರ್ಚಿ

ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  ಒಂದಿಷ್ಟೂ ಬಿಸಿಯಾಗಲಿಲ್ಲ...

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

5 ಪ್ರತಿಕ್ರಿಯೆಗಳು

 1. D.RAVI VARMA

  ನೀರ ಮೇಲಣ ಹೆಜ್ಜೆಗುರುತುಗಳು
  ಬಡಿದೆಬ್ಬಿಸುತಿವೆ ಆಂತರ್ಯದ
  ಭಾವಗಳನು
  ಅಪ್ಪಿಕೊಳ್ಳುವುದೊಂದೇ ಭಾವ
  ಒಪ್ಪಿಕೊಳ್ಳುವುದೊಂದೇ ಜೀವ
  ಪಡೆದುಕೊಳ್ಳುವ ತವಕದಲಿ
  ಎಲ್ಲವೂ ನಿರ್ಭಾವ ! sir,illiyaravaregu nimma vaicharikanagalaste odidde, aadare neevu kavyavannu dakkisikondidderi, idu kasta saadya,ati uttama prose bareyoru poetry bareyodu kasta abhinandanegalu
  RAVI VARMA HOSAPETE

  ಪ್ರತಿಕ್ರಿಯೆ
  • ನಾ ದಿವಾಕರ

   ನಾನು ಹಲವು ಕವಿತೆಗಳನ್ನು ಬರೆದಿದ್ದೇನೆ. ಐವತ್ತಕ್ಕೂ ಹೆಚ್ಚು. ಆದರೆ ಸಂಕಲನ ಹೊರತಂದಿಲ್ಲ. ನಿಮ್ಮ ಶ್ಲಾಘನೆಗೆ ಧನ್ಯವಾದಗಳು. ಹಾಗೆಯೇ ರವಿ ಮೂರ್ನಾಡು ಅವರ ವಿಮರ್ಶೆಗೂ ಧನ್ಯವಾದಗಳು. ತಿದ್ದಿಕೊಳ್ಳುತ್ತೇನೆ. ನನ್ನ ಹಲವು ಕವನಗಳು ಪ್ರಕಟವಾಗಿವೆ. ಪ್ರಶಂಸೆಯನ್ನೂ ಗಳಿಸಿವೆ. ಆದರೂ ನನ್ನ ಕವಿತೆಗಳು ನಿಜಕ್ಕೂ ಕವಿತೆ ಎನಿಸಿಕೊಳ್ಳಲು ಅರ್ಹವೇ ಎಂಬ ಅನುಮಾನ ಕಾಡುತ್ತಿದೆ. ಪ್ರಸ್ತುತ ಕವಿತೆಯನ್ನೂ ಸೇರಿದಂತೆ. ಹಾಗಾಗಿ ಪ್ರಕಟಿಸಲು ಸಂಕೋಚ. ಮತ್ತೊಂದು ಮಾತು ಈ ಕವಿತೆಯನ್ನು ಒಂದೇ ಉಸಿರಿನಲ್ಲಿ ಬರೆದದ್ದು, ಹಿಂದಿರುಗಿ ನೋಡದೆ, ಎಡಿಟ್ ಮಾಡದೆ ಬರೆದಿದ್ದು. ಮನದಾಳದ ಮಾತುಗಳನ್ನು ಅಕ್ಷರ ರೂಪದಲ್ಲಿ ಇಳಿಸಿದ್ದು. ತಪ್ಪುಗಳಿದ್ದರೆ ಒಪ್ಪಿಗೆ. ಮೆಚ್ಚುಗೆಗೂ ಒಪ್ಪಿಗೆ, ಧನ್ಯವಾದ.

   ಪ್ರತಿಕ್ರಿಯೆ
 2. -ರವಿಮುರ್ನಾಡು

  ಕವಿತೆಯ ಭಾವ ಆಳದಿಂದ ಹೆಕ್ಕಿ ತಗೆದ೦ತವು. ಇಷ್ಟವಾಯಿತು.ಕೆಲವು ಪದಗಳು ಕೆಲವು ಸಾಲುಗಳಲ್ಲಿ ಪುನರಾವರ್ತನೆಯಾಗುವುದನ್ನು ಗಮನಿಸಿದ್ದೇನೆ. (ಉದಾಃ ಆಸರೆ). ಕಾವ್ಯಾಸ್ವಾಧನೆಗೆ ತೆಗೆದುಕೊಂಡಾಗ ಇಂತಹವು ಸಾರಾಗ ನಡಿಗೆಯನ್ನು ನಿಲ್ಲಿಸಿಬಿಡುತ್ತವೆ.ಕಾವ್ಯ ತುಂಬಾ ಚೆನ್ನಾಗಿದೆ.

  ಪ್ರತಿಕ್ರಿಯೆ
 3. sunil

  tumbaa channagide….nirbhaavadallu intaha bhaavavideye??eshtondu majalugalu…ondu bhaavakke….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: