'ಸಾಂಗತ್ಯ' ಬಂತು

ಗೆಳೆಯರೇ, ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ನವಕರ್ನಾಟಕ ಪ್ರಕಾಶನ, ಗಾಂಧಿ ಬಜಾರಿನ ಅಂಕಿತ ಪುಸ್ತಕ, ಮಲ್ಲೇಶ್ವರಂನ ಸನ್ಮತಿ ಬುಕ್ ಹೌಸ್ ನಲ್ಲಿ ಶನಿವಾರ ಲಭ್ಯವಾಗಲಿದೆ. ಹಾಗೆಯೇ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಲ್ಲೂ ಅಂದೇ ಲಭ್ಯವಾಗಲಿದೆ. ಚಂದಾದಾರರಿಗೆ ಅಂಚೆ ಮಾಡಲಾಗುತ್ತಿದ್ದು, ಶನಿವಾರ ಅಥವಾ ಸೋಮವಾರ (ಭಾನುವಾರ ಮಧ್ಯೆ ಬಂದಿದ್ದರಿಂದ) ಲಭ್ಯವಾಗಬಹುದು. ಎರಡನೇ ಸಂಚಿಕೆಯನ್ನು ಅತ್ಯಂತ ಆಪ್ತವಾಗಿ ರೂಪಿಸಿದ್ದು, ಕನ್ನಡ ಚಿತ್ರರಂಗದ ಬಗ್ಗೆಯೇ ಸಾಕಷ್ಟು ಗಮನ ಹರಿಸಲಾಗಿದೆ. ಅದರೊಂದಿಗೆ ವಿಶ್ವ ಸಿನಿಮಾದಿಂದ ಹಿಡಿದು ವಿವಿಧ ನೆಲೆಯ ಸುಮಾರು 20 ಕ್ಕೂ ಹೆಚ್ಚು ಲೇಖನಗಳು ಇವೆ. ಪ್ರತಿ ಸಂಚಿಕೆಗೂ ತಮ್ಮ ಅಭಿಪ್ರಾಯವನ್ನು ನಮ್ಮ ಇಮೇಲ್ ಗೆ ಅಥವಾ ಸಂಚಿಕೆಯಲ್ಲಿರುವ ವಿಳಾಸಕ್ಕೆ ಕಳುಹಿಸಬಹುದು. ಹಾಗೆಯೇ ವಿವಿಧ ಅಂಕಣಗಳಿಗೂ ಲೇಖನಗಳನ್ನು ಕಳುಹಿಸಬಹುದು. ಮೂರನೇ ಸಂಚಿಕೆಯ ಕಾರ್ಯ ಪ್ರಾರಂಭವಾಗಿದೆ. ನಿಮ್ಮಲ್ಲಿ ಸಲಹೆಗಳಿದ್ದರೂ ಅದನ್ನೂ ಕಳುಹಿಸಬಹುದು. ಈ ಮಧ್ಯೆ ಆ.21, 22 ರಂದು ಚಿತ್ರ ಶಿಬಿರ ಆಯೋಜಿಸಲಾಗಿದೆ ಕುಪ್ಪಳ್ಳಿಯಲ್ಲಿ. ಅದಕ್ಕೂ ಭಾಗವಹಿಸಬಹುದು. ಎರಡನೇ ಸಂಚಿಕೆಯ ಕುರಿತ ವಿಸ್ತೃತ ವಿಚಾರಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. ಸಂಚಿಕೆ ಮತ್ತಿತರ ಮಾಹಿತಿಗೆ 99804 57812, 94807 97113, 94805 82027. ಧನ್ಯವಾದಗಳೊಂದಿಗೆ ಸಾಂಗತ್ಯ ಬಳಗ]]>

‍ಲೇಖಕರು avadhi

August 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This