ಸಾಣೇಹಳ್ಳಿಯಲ್ಲಿ ಅಭಿನಯ ಕಮ್ಮಟ

ಶ್ರೀ ಶಿವಕುಮಾರ ಕಲಾಸಂಘ (ರಿ)

ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ

ಸಾಣೇಹಳ್ಳಿ – 577 515

ಹೊಸದುರ್ಗ – ತಾಲ್ಲೂಕು ಚಿತ್ರದುರ್ಗ – ಜಿಲ್ಲೆ

_________________________________________________________________________

ಡಾ|| ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ

ಅಭಿನಯ ಕಮ್ಮಟ

ಮೇ 17 ರಿಂದ ಜೂನ್ 5 ರ ವರೆಗೆ – 20 ದಿನಗಳು

ಮಾನ್ಯರೇ,

ನಮ್ಮ ಸಂಸ್ಥೆಯು ಈ ವರ್ಷದಿಂದ ಆಸಕ್ತ ಯುವಕ-ಯುವತಿಯರು, ಶಿಕ್ಷಕರಿಗಾಗಿ 20 ದಿನಗಳ ‘ಅಭಿನಯ ಕಮ್ಮಟ’ವನ್ನು ಏರ್ಪಡಿಸಿದೆ. ಈ ಕಮ್ಮಟವನ್ನು ಕನ್ನಡ ರಂಗಭೂಮಿಯ ಖ್ಯಾತ ವಿನ್ಯಾಸಕ ಮತ್ತು ನಿರ್ದೇಶಕ ಶ್ರೀ ಇಕ್ಬಾಲ್ ಅಹಮದ್ ರವರು ನಡೆಸಿಕೊಡಲಿದ್ದಾರೆ. ಈ ಕಮ್ಮಟವು ಮೇ 17, ಗುರುವಾರದಿಂದ ಜೂನ್ 5 ರ ವರೆಗೆ – 20 ದಿನಗಳ ಕಾಲ – ನಡೆಯುತ್ತದೆ.

ಅಭಿನಯ ಕಲೆಯಲ್ಲಿ ಆಸಕ್ತಿಯಿರುವ ಯುವಕ- ಯುವತಿಯರು, ಶಿಕ್ಷಕರು ಈ ಕಮ್ಮಟದಲ್ಲಿ ಭಾಗವಹಿಸಬಹುದು.

ಕಮ್ಮಟದ ಅವಧಿಯಲ್ಲಿ ಬೆಳಗಿನ ರಂಗವ್ಯಾಯಾಮಗಳು, ರಂಗಾಟಗಳು, ರಂಗಭೂಮಿಯ ಸಂಕ್ಷಿಪ್ತ ಇತಿಹಾಸ, ಅಭಿನಯ ತರಗತಿ, ಸಿನೆಮಾ ಮತ್ತು ಮುಖ್ಯ ನಾಟಕಗಳ ವೀಕ್ಷಣೆ, ಒಂದು ನಾಟಕದ ಅಭ್ಯಾಸ ಮತ್ತು ಪ್ರದರ್ಶನ ಇರುತ್ತದೆ.

ಶ್ರೀಮತಿ ಅರುಂದತಿನಾಗ್, ಶ್ರೀ ಸಿ.ಆರ್. ಸಿಂಹ, ಶ್ರೀ ಅಚ್ಯುತಕುಮಾರ್, ಶ್ರೀ ಜಯಂತ ಕಾಯ್ಕಿಣಿ, ಶ್ರೀಮತಿ ತಾರಿಣಿ ಶುಭದಾಯಿನಿ, ಶ್ರೀ ಪ್ರಕಾಶ್ ಬೆಳವಾಡಿ ಮುಂತಾದವರು ಅತಿಥಿ

ಉಪನ್ಯಾಸಕರಾಗಿ ಒಂದು ದಿನ ಈ ಕಮ್ಮಟದ ಜೊತೆಗೆ ಇರುತ್ತಾರೆ. ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ನಟರಾಜ ಹೊನ್ನವಳ್ಳಿ, ಮಹದೇವ ಹಡಪದ್, ರೇಣುಕಾ ಸಿದ್ಧಿ, ಗಿರೀಶ್

ಮೇಲುಕೋಟೆ, ಮಧು, ಇ ಮುಂತಾದವರು ಭಾಗವಹಿಸುತ್ತಾರೆ.

ಈ ಕಮ್ಮಟದಲ್ಲಿ ಭಾಗವಹಿಸುವವರು 20 ದಿನಗಳ ಕಾಲ ಸಾಣೇಹಳ್ಳಿಯಲ್ಲಿಯೇ ಇರಬೇಕು. ಊಟ-ವಸತಿಯ ವ್ಯವಸ್ಥೆ ಇರುತ್ತದೆ. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿಗಳ ಮೂಲಕ ಸಂಪಕರ್ಿಸಬಹುದು.

ದೂರವಾಣಿ : 9972352163 / 08199-243772 / 9481345450

ನಟರಾಜ ಹೊನ್ನವಳ್ಳಿ

ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ.

 

 

]]>

‍ಲೇಖಕರು G

May 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This