ಸಾಯಿನಾಥ್, ಸಾಯಿನಾಥ್ ಮತ್ತು ಸಾಯಿನಾಥ್!

[gallery order="DESC" columns="4" orderby="ID"]]]>

‍ಲೇಖಕರು G

July 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

11 ಪ್ರತಿಕ್ರಿಯೆಗಳು

 1. H.R.NAVEENKUMAR

  ಜುಲೈ 1 ಪತ್ರಕರ್ತರ ದಿನಾಚರಣೆ ಅಂದು ಭಾರತದ ಪತ್ರಿಕಾ ರಂಗದ ದಿಕ್ಕನ್ನು ಬದಲಾಯಿಸಿದ, ಪತ್ರಿಕೋಧ್ಯಮಕ್ಕೆ ಹೊಸ ಭಾಶ್ಯೆ ಬರೆದ ಪಿ.ಸಾಯಿನಾಥ್ ರವರು ಬೆಂಗಳೂರಿಗೆ ಬಂದಿದ್ದರು. ಅವರು ಇಂಗ್ಲೀಷ್ ನಲ್ಲಿ ಬರೆದಿರುವ ‘ಎವರಿ ಬಡಿ ಲವ್ಸ್ ದಿ ಡ್ರಾಟ್’ ಪುಸ್ತಕವನ್ನು ಸೃಜನಶೀಲ ಬರಹಗಾರರಾದ ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿದ್ದ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಕ್ಕಿರಿ ಅಭಿಮಾನಿಗಳ ನಡುವೆ ಅಭನವ ಪ್ರಕಾಶನ ಬಿಡುಗೊಡೆಗೊಳಿತು. ಪುಸ್ತಕವನ್ನು ಬಿಡುಗಡೆಮಾಡಿದ ನಂತರ ಪಿ.ಸಾಯಿನಾಥ್ ರವರ ಕುರಿತಾದ ‘ನ್ಯೂರೋ ಗೆಸ್ಟ್’ ಸಾಕ್ಷಚಿತ್ರ ಪ್ರದರ್ಶನವಾಯಿತು. ಈ ಸಾಕ್ಷ ಚಿತ್ರವನ್ನು ನೋಡಿದಮೇಲಂತೂ ಪಿ.ಸಾಯಿನಾಥ್ ರ ಕೆಲಸದ ವೈಕರಿ ಅವರು ಬೆಳೆದು ಬಂದ ರೀತಿ ಮತ್ತು ದೇಶದ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ದೆ, ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳನ್ನು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳದರು, ಆಮೂಲಕ ಆಳುವ ಸರ್ಕಾರಗಳ ಬೇಜವಾಭ್ದಾರಿತನವನ್ನು ಬಯಲಿಗೆಳೆಯುತ್ತ ಜವಾಭ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋಧ್ಯಮದಲ್ಲೇ ಒಂದು ವಿಭಿನ್ನ ದೃಷ್ಟಿಕೋನವನ್ನು ಕೊಡುವ ಮೂಲಕ ಯು ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದವರು ಪಿ.ಸಾಯಿನಾಥ್.
  ಇವರು ಮಾತನಾಡುತ್ತಾ ಜಾಗತೀಕರಣದ ಪರಿಣಾಮವಾಗಿ ಮಾಧ್ಯಮ ಉಧ್ಯಮವಾಗಿ ಬದಲಾಗಿದೆ, ಅಲ್ಲಿ ಎಲ್ಲರಿಗೂ ಲಾಭ ಮಾಡುವ ಉದ್ದೇಶ ಬಿಟ್ಟರೆ ಜನರ ಸಮಸ್ಯೆಗಳನ್ನು ಕುರಿತು ವರದಿಗಳನ್ನು ಮಾಡುವ ಯಾವ ಉದ್ದೇಶವೂ ಇಲ್ಲ. ಅದಕ್ಕಾಗಿಯೇ ದೇಶದ ಯಾವುದೇ ದೃಶ್ಯಮಾಧ್ಯಮವಾಗಲೀ ಅಥವಾ ಮುದ್ರಣ ಮಾಧ್ಯಮವಾಗಲೀ ಕೃಷಿ, ನಿರುದ್ಯೋಗದಂತಹ ವಿಷಯಗಳನ್ನು ಒರತುಪಡಿಸಿ ಎಲ್ಲಾ ವಿಚಾರಗಳಗೂ ಪ್ರತ್ತೇಕ ವರದಿಗಾರರನ್ನು ನೇಮಿಸಿರುತ್ತಾರೆ ಎಂದರು.
  ನನಗೆ ಪಿ.ಸಾಯುನಾಥ್ ತುಂಬ ಇಷ್ಟವಾಗುವುದು ಅವರು ಯಾವುದೇ ಒಂದು ಸಮಸ್ಯೆಯನ್ನು ನೋಡುವ ರೀತಿ ಮತ್ತು ಅದರ ಮೂಲಕ ಸಮಸ್ಯೆಯ ಆಳಕ್ಕಿಳಿದು ಅದನ್ನು ಪ್ರತ್ಯಕ್ಷವಾಗಿ ಕಂಡು ಅದನ್ನು ಧಾಖಲಿಸುವ ವಿಧಾನ ಮತ್ತು ಅವರು ಸಮಾಜದ ಎರಡು ತುದಿಗಳಲ್ಲಿ ನಡೆದಿರುವ ಘಟನೆಗಳನ್ನು ಆದರಿಸಿ ಅವುಗಳ ವೈರುಧ್ಯವನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ ಉದಾಹರಣೆಗೆ ಅವರು ಯಾವಾಗಳೂ ಮಾತನಾಡುವಹಾಗೆ ಮಹಾರಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಅದನ್ನು ವರದಿಮಾಡಲೆಂದು ದೇಶ-ವಿದೇಶಗಳಿಂದ 200 ಕ್ಕೂ ಹೆಚ್ಚು ಪತ್ರಕರ್ತರು, ಚಾಯಾಚಿತ್ರಗಾರರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದರು. ಆದರೆ ಅದೇ ರಾಜ್ಯದ ಫ್ಯಾಶನ್ ಶೋ ನಡೆಯುವ 300 ಕಿ.ಮಿ ದೂರದಲ್ಲಿ ರುವ ವಿದರ್ಬಾದಲ್ಲಿ ರೈತರು ಅತ್ತಿ ಬೆಳೆದು ಬೆಲೆಸಿಗದೆ ಸಾಲಮಾಡಿ ಆತ್ಮಹತ್ಯೆಮಾಡಿಕೊಂಡಿದ್ದರೆ ಅದನ್ನು ವರದಿಮಾಡಲು ಕೇವಲ 5 ಜನ ಪತ್ರಕರ್ತರಿದ್ದರಂತೆ. ಅಂದರೆ ಭಾರತದ ಪತ್ರಿಕೋಧ್ಯಮದ ಆಧ್ಯತೆ ಏನೆಂದು ಕೊತ್ತಾತಿತ್ತಲ್ಲ. ಇದನ್ನು ಸಮಾಜದ ಮುಂದೆ ಅಂಕಿಸಂಖ್ಯೆ ಸಮೇತ ಸಾದರಪಡಿಸುವುದರಲ್ಲಿ ಸಾಯಿನಾಥ್ ಎಲ್ಲರಿಗೂ ಮಾದರಿಯಾಗಿದ್ದಾರೆ.

  ಪ್ರತಿಕ್ರಿಯೆ
 2. Anil

  ಹೌದು , ಸೊಗಸಾದ ಅರ್ಥಪೂರ್ಣ ಕಾರ್ಯಕ್ರಮ. ಇನ್ನೂ ಸ್ವಲ್ಪ ಚಿಕ್ಕದಾಗಿದ್ರೆ ಚೆನ್ನಾಗಿರೋದು.
  ಅವಧಿ , ಮೋಹನ್ , ಅಭಿನವ ಮತ್ತು ರಘುರಾಮಶೆಟ್ಟಿ ಪ್ರತಿಷ್ಠಾನ – ತುಂಬಾ ಉತ್ತಮವಾದ ಕೆಲಸ ಮಾಡ್ತಿದೀರ. ಧನ್ಯವಾದಗಳು !!
  ಸಾಯಿನಾಥ್ ಅಂದ್ರೇನೆ ಹಾಗೆ – an undercurrent who does not get deterred from his realistic principles. The preservance and sustained thought process of this man is something that all of us should look up to. His ability to interpret the data to reveal archetypal information about various aspects of social health is amazing. Sainath is our collective consciousness.
  Dear Mohan,
  Looking forward to more of similar works from you.

  ಪ್ರತಿಕ್ರಿಯೆ
 3. sujatha vishwanath

  ನೆನ್ನೆ ನನ್ನ ಜೀವನದಲ್ಲಿ ಮರೆಯಲಾಗದ ದಿನ…… ಪಿ ಸಾಯಿನಾಥ್ ಸರ್ ಅವರನ್ನು ಒಂದು ಕಟ್ಟಿ ಹಾಕಿ ನಮಗೆಲ್ಲ ಅವರ ಮಾತನ್ನು ಕೇಳಲು ಅನುವು ಮಾಡಿಕೊಟ್ಟ ಜಿ ಎನ್ ಮೋಹನ್ ಸರ್ ರವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು……ನಾನು ಅಲ್ಲಿಗೆ ಬಂದು ಪಿ ಸಾಯಿನಾಥ್ ಸರ್ ಅವರ ಮಾತು ಮತ್ತು ದೇವನೂರು ಮಹಾದೇವ ಸರ್ ಅವರ ಮಾತುಗಳನ್ನು ಕೇಳಿ….ಪ್ರಭಾವಿತಳಾದೆ ಅವರ ಮಾತುಗಳನ್ನು ಕೇಳುತ್ತಲೇ ಇರಬೇಕು ಎನಿಸುತ್ತದೆ…ಬದುಕಿನ ಬವಣೆಯ ಕೊಗು….ರೈತನ ಜಿವಾಕ್ಕೆ ಇಲ್ಲಿ ಬೆಲೆ ಇಲ್ಲ…..ಮತೊಮ್ಮೆ ತಮಗೆ ಅಭಿಂದನೆಗಳು ಸರ್ ಕಾರಣ….. ಪಿ ಸಾಯಿನಾಥ್ ಸರ್ ಅವರ ಪುಸ್ತಕ “Everybody loves a good drought” ಅನ್ನು “ಬರ ಅ೦ದ್ರೆ ಎಲ್ಲರಿಗೂ ಇಷ್ಟ” ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದಡಕ್ಕೆ…..ಎಂಥ ಅದ್ಭುತ ಪುಸ್ತಕ….ಸೊಗಸಾಗಿದೆ ಸರ್ ….. ಅರ್ಥಪೂರ್ಣ ಕಾರ್ಯಕ್ರಮ….ಮರೆಯಲಾಗದ ಕಾರ್ಯಕ್ರಮ…..

  ಪ್ರತಿಕ್ರಿಯೆ
 4. ಭ್ಹಗವತಿ

  ಕಾರ್ಯಕ್ರಮ ತುಂಬಾ ಸೊಗಸಾಗಿತ್ತು. ಸಾಯಿನಾಥ್ ಅವರ ಮಾತಿನ ಖದರೇ ಅಂತಹದ್ದು. ಪತ್ರಿಕೋದ್ಯಮದ ಒಳಸುಳಿಗಳನ್ನು, ಸಮಾಜದ ಆಗುಹೊಗುಗಳಲ್ಲಿ ಓದುಗರ ಸಕ್ರಿಯ ಪಾಲುಗೊಳ್ಳುವಿಕೆಯ ಬಗ್ಗೆ ಅವರ ಮಾತು ತುಂಬಾ ಉತ್ತೇಜನಕಾರಿಯಾಗಿತ್ತು.
  ಕಾರ್ಯಕ್ರಮಕ್ಕೆ ಸಾಹಿತ್ಯ ವಲಯದ ಉಪಸ್ಥಿತಿ ಬೆರಳೆಣಿಕೆಯಷ್ಟಿತ್ತು. ಸಾಹಿತ್ಯದ ಕೇವಲ ಒಣ ಚರ್ಚೆಗಳಿಂದ ಯಾವ ಪ್ರಯೋಜನವೂ ಇಲ್ಲ(ಎಲ್ಲವೂ ಅಲ್ಲ). ನಮ್ಮ ನಮ್ಮ ಬೆನ್ನನ್ನು ನಾವೇ ಚಪ್ಪರಿಸಿಕೊಂಡು ಸಂತಸಪಡುವ ಸನ್ನಿವೇಶ ಹೆಚ್ಚು ಹೊತ್ತು ಉಳಿಯುವುದಿಲ್ಲ ಅನ್ನಿಸುತ್ತದೆ. ಬಹುಶಃ ನಾವು ಸಾಹಿತ್ಯವನ್ನು ಪ್ರತ್ಯೇಕ ದೃಷ್ಟಿಯಲ್ಲಿ ನೋಡುತ್ತಿರುವುದೇ ಇಂಥ ಕಾರ್ಯಕ್ರಮಗಳಿಗೆ ಸಾಹಿತಿಗಳ ಅನುಪಸ್ಥಿತಿಗೆ ಒಂದು ಮುಖ್ಯ ಕಾರಣ ಅನ್ನಿಸುತ್ತಿದೆ.
  ಕೆಲವು ಕಾರ್ಯಕ್ರಮಗಳಿಗೆ ಹೋದರೆ, (ಹೆಚ್ಚಿನ ಅಂಶ ಸಾಹಿತ್ಯದ ಕಾರ್ಯಕ್ರಮಗಳಿಗೆ ಅನ್ವಯಿಸುತ್ತದೆ!!) ಕಾರ್ಯಕ್ರಮ ಮುಗಿದಾಗ ಮನಸ್ಸು ಭಾರವಾಗಿರುತ್ತದೆ, ಖಾಲಿ ಖಾಲಿ ಎನ್ನಿಸುತ್ತದೆ. ಆದರೆ ಈ ಕಾರ್ಯಕ್ರಮದ ನಂತರ ಮನಸ್ಸು ಉಲಾಸದಿಂದ ಗರಿಕೆದರಿತ್ತು !
  ಸಾಯಿನಾಥ್ ಅವರಿಗೆ ಹ್ಯಾಟ್ಸ್ ಆಫ್ !
  ಕಾರ್ಯಕ್ರಮ ಆಯೋಜಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

  ಪ್ರತಿಕ್ರಿಯೆ
 5. VG

  ದೇವನೂರು ಮಹಾದೇವರನ್ನು ಸ್ವಾಗತಿಸಿದ ನಾವೆಲ್ಲ ತುಂಬಾ ಗೌರವದಿಂದ ಕಾಣುವ ಜಿ ಎನ್ ನಾಗರಾಜ್ ಮತ್ತು ಸಾಯಿನಾಥ್ ಅವರನ್ನು ಸ್ವಾಗತಿಸಿದ ಎನ್ ಗಾಯತ್ರಿ(ಅಚಲ ಪತ್ರಿಕೆ ಸಂಪಾದಕಿ) ಇವರುಗಳ ಫೋಟೋ ಕೂಡ ಇರಬೇಕಿತ್ತು.

  ಪ್ರತಿಕ್ರಿಯೆ
  • G

   ಹೌದು, ಆದರೆ ಈ ಇಬ್ಬರ ಚಿತ್ರಗಳನ್ನು ಛಾಯಾಗ್ರಾಹಕರು ಕ್ಲಿಕ್ಕಿಸಿಲ್ಲ. ಇನ್ಯಾರಾದರೂ ಕ್ಲಿಕ್ಕಿಸಿದ್ದರೆ ಅದನ್ನು ಸೇರಿಸುತ್ತೇವೆ

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: