ಸಾವಿರ ಬಾರಿ ಕಾಲು ಹಿಡಿದರೂ ನಾನು ಕ್ಷಮಿಸಲಾರೆ!

551
-ಎ ಆರ್ ಮಣಿಕಾಂತ್
ಆ ಹುಡುಗನಿಗೆ ಸಮುದ್ರ ಅಂದರೆ ವಿಪರೀತ ಇಷ್ಟ. ಪ್ರತಿ ವರ್ಷವೂ ಫಸ್ಟ್ ಕ್ಲಾಸ್ ಬರುತ್ತಿದ್ದನಲ್ಲ? ಆಗ ಅಪ್ಪ-ಅಮ್ಮ ಇಬ್ಬರೂ ಒಂದೇ ಬಾರಿಗೆ ಅವನನ್ನು ಹತ್ತಿರ ಎಳೆದುಕೊಂಡ್ರು ಪುಟ್ಟಾ, ನಿಂಗೇನು ಬೇಕು ಎಂದು ಕೇಳಿದರೆ- `ನಾನು ಸಮುದ್ರ ನೋಡಬೇಕು. ಅಲ್ಲಿಗೆ ಕರ್ಕೊಂಡೋಗ್ತೀರಾ? ಪ್ಲೀಸ್…’ ಎಂದಷ್ಟೇ ಕೇಳುತ್ತಿದ್ದ. ಕೆಲಸದ ಒತ್ತಡದ ಮಧ್ಯೆ ಮಗನನ್ನು ಸಮುದ್ರ ತೀರಕ್ಕೆ ಕರೆದೊಯ್ಯುವುದಕ್ಕೆ ಆ ದಂಪತಿಗೆ ಸಾಧ್ಯವೇ ಆಗಿರಲಿಲ್ಲ. ಈ ಮಧ್ಯೆಯೇ ಆ ಹುಡುಗ ನಾಲ್ಕನೇ ತರಗತಿಯಲ್ಲೂ  ಫಸ್ಟ್ ಕ್ಲಾಸ್ ಬಂದ. ಐದನೇ ತರಗತಿಯ ಸಂಭ್ರಮದಲ್ಲೇ ಅದೊಮ್ಮೆ ಅಪ್ಪನ ಮುಂದೆ ನಿಂತು ಕೇಳಿದ; `ಪಪ್ಪಾ, ನಂಗೆ ಸಮುದ್ರ ತೋರಿಸಲ್ವಾ?’
ಮಗನ ಬೇಡಿಕೆ ಈಡೇರಿಸುವ ಆಸೆಯಿಂದ ಕಡೆಗೂ ಚೆನ್ನೈಗೆ ಹೋಗಿ ಭಾರ್ತಿ ಮೂರು ದಿನ ಅಲ್ಲೇ ಇದ್ದು ಬರುವುದೆಂದು ಈ ದಂಪತಿ ನಿರ್ಧರಿಸಿದರು. ಪಿಕ್ನಿಕ್ ಶುರುವಾದ ದಿನ ವ್ಯಾನ್ ಗೆ ಮತ್ತು ಮನೆ ದೇವರಿಗೆ ಪೂಜೆ ಮಾಡಿಯೇ ಯಾತ್ರೆ ಆರಂಭಿಸಿದರು.
KT2(2)
ಅದೇ ಮೊದಲ ಬಾರಿಗೆ ಸಮುದ್ರ ನೋಡಿದನಲ್ಲ, ಆ ಕಾರಣಕ್ಕೇ ಹುಡುಗ ಮಾತಾಡುವುದನ್ನೇ ಮರೆತುಬಿಟ್ಟ. ಸಮುದ್ರ ತೀರದಲ್ಲಿ ಸುಸ್ತಾಗುವವರೆಗೂ ಓಡಾಡಿದ. ನೈಸ್ ನೈಸ್ ಎಂಬಂತಿದ್ದ ಮರಳಿನ ಮೇಲೆ ಮಲಗಿದ. ಅದೇ ಮರಳಿಂದ ಕಪ್ಪೆಗೂಡು ಕಟ್ಟಿದ. ಹೀಗೇ ಅವನ ಆಟ-ಓಡಾಟದಲ್ಲೇ ಒಂದು ದಿನ ಕಳೆದೇ ಹೋಯಿತು. ಮರುದಿನ ಬೆಳ್ಳಂಬೆಳಗೇ ಅಪ್ಪ-ಅಮ್ಮನೊಂದಿಗೆ ಮತ್ತೊಮ್ಮೆ ಹುಡುಗ ಸಮುದ್ರ ತೀರಕ್ಕೆ ಬಂದ. ಇವನು ಮರಳಲ್ಲಿ ಆಟವಾಡು ತ್ತಿದ್ದಾಗಲೇ ತಾವೂ ಲಹರಿಗೆ ಬಿದ್ದ ಆ ದಂಪತಿ ಖುಷಿಯಿಂದ ನೀರಿಗಿಳಿದು ಒಂದಿಷ್ಟು ದೂರ ಕೈ ಕೈ ಹಿಡಿದು ಮುಂದೆ ಸಾಗಿದ್ದರು.
ಆಗಲೇ ಅನಾಹುತ  ನಡೆದುಹೋಯಿತು.
ಅದುವರೆಗೂ ಶಾಂತವಾಗಿದ್ದ ಸರೋವರ ದಿಢೀರನೆ ಉಕ್ಕಿದಂತಾಯಿತು. ಅದುವರೆಗೂ ಹೂವಿನ ಎಸಳಿನಂತೆ ಪಾದಕ್ಕೆ ತಾಗುತ್ತಿದ್ದ ಅಲೆಗಳು ಒಮ್ಮೆಲೇ ಬಿರುಗಾಳಿಯಂತೆ ಅಪ್ಪಳಿಸತೊಡಗಿದವು. ಶಾಂತ ಸರೋವರದಲ್ಲಿ ದಿಢೀರನೆ ಭೂಕಂಪದ ಸದ್ದಾಯಿತು. ಎಲ್ಲರೂ, ಇದೇನಾಯಿತು ಎಂದು ಗಾಬರಿಯಿಂದ ಗಮನಿಸುವ ಮೊದಲೇ ಉಕ್ಕುಕ್ಕಿ ಬಂದ ಸುನಾಮಿ ಅಲೆಗಳು ಸಮುದ್ರದ ನೀರಿನಲ್ಲಿ ಖುಷಿಯಿಂದ ಆಡುತ್ತಿದ್ದ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿದ್ದವು. ಹೀಗೆ ಸುನಾಮಿಯ ಕ್ರೌರ್ಯಕ್ಕೆ ಬಲಿಯಾದವರ ಪಟ್ಟಿಯಲ್ಲಿ ಈ ಹುಡುಗನ ಅಪ್ಪ-ಅಮ್ಮ ಕೂಡ ಸೇರಿದ್ದರು. ಅದ್ಯಾವ ಮಾಯೆಯೋ ಏನೋ, ಈ ಹುಡುಗ ಸಾವಿನಿಂದ ಬಚಾವಾಗಿದ್ದ.
ಅಪ್ಪ-ಅಮ್ಮನನ್ನು ಕಳೆದುಕೊಂಡ ನಂತರ ಆ ಹುಡುಗ ಅನಾಥನಾದ. ಬಂಧುಗಳೆಲ್ಲ ಅವನನ್ನು ಮರೆತೇಬಿಟ್ಟರು. ಆತ ಕೂಡ ತನ್ನ ಊರಿಗೆ ಮರಳಲೇ ಇಲ್ಲ. ಬದಲಿಗೆ  ಚೆನ್ನೈನಲ್ಲೇ ಉಳಿದುಕೊಂಡ. ಅಪ್ಪ-ಅಮ್ಮ ನೆನಪಾದಾಗಲೆಲ್ಲ ಅದೇ ಸಮುದ್ರದ ತೀರಕ್ಕೆ ಹೋಗಿ ನಿಲ್ಲತೊಡಗಿದ. ಹೆತ್ತವರ ನೆನಪಿನಲ್ಲಿ ಮೌನವಾಗಿ ಕಂಬನಿ ಮಿಡಿಯತೊಡಗಿದ. ಅವನು ತೀರಕ್ಕೆ ಬಂದು ನಿಂತಾಗಲೆಲ್ಲ ಸಮುದ್ರದ ನೀರು ಅಲೆ ಅಲೆಯಾಗಿ ಬಂದು ಪದೇ ಪದೆ ಆತನ ಕಾಲಿಗೆ ತಾಕುವುದು, ವಾಪಸ್ ಹೋಗುವುದು, ಮತ್ತೆ ಪಾದ ತಾಕುವುದು, ವಾಪಸ್ ಹೋಗುವುದು… ಹೀಗೇ ಮಾಡತೊಡಗಿತು.
ಅದನ್ನು ಕಂಡ ಈ ಹುಡುಗ ಬಿಕ್ಕಳಿಸುತ್ತಲೇ ಹೇಳಿಬಿಟ್ಟ; ನೋಡೂ, ನೀನು ಹೀಗೆ ಒಂದೆರಡಲ್ಲ; ಸಾವಿರ ಸಲ ನನ್ನ ಕಾಲು ಹಿಡಿದು `ಸಾರಿ’ ಕೇಳ ಬಹುದು. ಆದರೆ, ನಾನು ಯಾವ ಕಾರಣಕ್ಕೂ ನಿನ್ನನ್ನು ಕ್ಷಮಿಸುವುದಿಲ್ಲ!

‍ಲೇಖಕರು avadhi

May 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

6 ಪ್ರತಿಕ್ರಿಯೆಗಳು

  1. ರಂಜಿತ್

    ಇದು ಎಸ್ಸೆಮ್ಮೆಸ್ಸುಗಳಲ್ಲಿ ಹರಿದಾಡುತ್ತಿದ್ದ ಪುಟ್ಟ ಕಥೆಯಾಗಿತ್ತು. ಮಣಿಕಾಂತ್ ರವರು ಅದನ್ನು ಉಲ್ಲೇಖಿಸಿದ್ದರೆ ಚೆನ್ನಿತ್ತು. ಅದರಲ್ಲಿ ಬಂದದ್ದರ ಕನ್ನಡಾನುವಾದ ಈ ಕೊಂಡಿಯಲ್ಲೂ ಓದಬಹುದು http://sampada.net/blog/ranjith/29/01/2009/16162

    ಪ್ರತಿಕ್ರಿಯೆ
  2. test

    ಈ ಇಂಟರ್‌ನೆಟ್/ಎಸ್ಸೆಮ್ಮೆಸ್ ಕತೆಗಳ ಡೋಸು ಸ್ವಲ್ಪ ಓವರ್ರಾಗಿ ಓವರ್‌ಡೋಸಾಗಿದೆ. ಹೊಸತೇನನ್ನಾದ್ರೂ ಹುಡುಕ್ರೀ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: