ಆರ್ ಜಿ ಹಳ್ಳಿ ನಾಗರಾಜ್
*ಸಾಹಿತ್ಯ ಸಮ್ಮೇಳನದಲ್ಲಿ ಅಪಾರ ಜನ ಜಾತ್ರೆ. ಕನ್ನಡಿಗರ ಉತ್ಸಾಹ ವಿಸ್ಮಯಗೊಳಿಸುವಂತಿದೆ.
*ಮುನ್ನೂರಕ್ಕೂ ಅಧಿಕ ಪುಸ್ತಕ ಮಳಿಗೆಗಳು ಇವೆ. ಮೋದಿ ಮಹಾಶಯ ಮಾಡಿದ ದುಡ್ಡಿನ ಯಡವಟ್ಟು ಇನ್ನೂ ಚೇತರಿಕೆ ಆಗಿಲ್ಲ.
*ಕೆಲವು ಪ್ರತಿಷ್ಠಿತ ಪ್ರಕಾಶಕ, ಮಾರಾಟಗಾರರಿಗೆ ಪರವಾಗಿಲ್ಲ ಅನ್ನುವ ವ್ಯಾಪಾರ. ಬೆಂಗಳೂರಿನ ಎರಡು ಪ್ರತಿಷ್ಠಿತ ಪ್ರಕಾಶನಗಳು ಪ್ರತಿವರ್ಷ ಪುಸ್ತಕ ಮಳಿಗೆಯ ಪ್ರವೇಶ ದ್ವಾರದಲ್ಲೆ ಎಂಟು ಹತ್ತು ಮಳಿಗೆ ಹಿಡಿದು ಸಾವಿರಾರು ಜನರನ್ನು ತಮ್ಮಲ್ಲೆ ಹಿಡಿದಿಡುತ್ತಾರೆ! ಮಳಿಗೆಗಳು ಪ್ರತಿ ಸಮ್ಮೇಳನದಲ್ಲೂ ಇವರಿಗೆ ಹೀಗೆ “ಪ್ರವೇಶ ದ್ವಾರದಲ್ಲೇ” ಸಿಕ್ಕುತ್ತಿರುವ ನಿಗೂಢ ಅರ್ಥವಾಗುತ್ತಿಲ್ಲ.
*ನಮ್ಮ ಅನ್ವೇಷಣೆ ಪ್ರಕಾಶನಕ್ಕೆ ರೂ. 2,500/_ ಮುಂಗಡ ಕೊಟ್ಟು ಮಳಿಗೆ ಕಾಯ್ದಿರಿಸಿದರೂ ಸಿಕ್ಕಿದ್ದು “307”ನೇ ಮಳಿಗೆ! ಅಲ್ಲಿ ನೊಣ ಹೊಡೆಯಲೂ ಜನ ಬರುತ್ತಿಲ್ಲ ಎಂಬ ಪರಿಸ್ಥಿತಿ ಇದೆ. ನಮ್ಮಂಥವರ ನೂರಾರು ಮಳಿಗೆಗೆ ಮೊದಲದಿನ ಸಾವಿರ ರೂ.ಗಳ ವ್ಯಾಪಾರವೂ ಇಲ್ಲ.
*ಕಲಾಕೃತಿಯಿಂದ ಅಲಂಕಾರಗೊಂಡ ಮಳಿಗೆಗೆ ಬಂದಷ್ಟು ಜನರಾದರೂ ವಚನ ಸಾಹಿತ್ಯದ ಸವಿಯನ್ನಂತೂ ಉಂಡು ಹೋಗುತ್ತಿದ್ದಾರೆ.
*ಇನ್ನೂ ಎರಡು ದಿನ ಸಮ್ಮೇಳನದಲ್ಲಿ ಜನ ಬಂದು ಪುಸ್ತಕ ಕೊಳ್ಳಬಹುದು ಎಂಬ ಆಶಯ ಇದೆ. ನಾನು ಆಶಾವಾದಿಯಾಗಿ ಕಾಯುತ್ತಿದ್ದೇನೆ.
0 ಪ್ರತಿಕ್ರಿಯೆಗಳು