ಸಿಂಗಲ್ ಆಗಿರುವುದು ಸ್ಟೇಟಸ್ ಮಾತ್ರವಲ್ಲ, ಅವರವರ ಆಯ್ಕೆಯೂ ಹೌದು – ರಶ್ಮಿ ಕಾಸರಗೋಡು

ರಶ್ಮಿ ಕಾಸರಗೋಡು

ಹಲೋ ..ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ?
ಹೇಳಿ…
ನಿಮಗೆ ಬಾಯ್ ಫ್ರೆಂಡ್ ಇಲ್ವಾ?
ಯಾಕೆ?
ಸುಮ್ನೆ…ಕೇಳಿದ್ದು ಅಷ್ಚೇ…
ಹ್ಮ್…
ನಿಮ್ದು ಲವ್ ಫೈಲ್ಯೂರಾ?
ಯಾಕೆ?
ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ.. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ..
ಹಾಗೇನಿಲ್ಲ…
ಓಕೆ

ಇಂಥಾ ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ ಫೇಸ್ಬುಕ್ ಇನ್ ಬಾಕ್ಸಲ್ಲಿ ಒಕ್ಕರಿಸಿ ಬಿಡುತ್ತವೆ. ಫೇಸ್ ಬುಕ್ ನಲ್ಲಿರೋ ಕೆಲವರಿಗೆ ರಿಲೇಷನ್ ಶಿಪ್ ಸ್ಟೇಟಸ್ ನಲ್ಲಿ ಸಿಂಗಲ್ ಅನ್ನೋ ಪದದ ಮೇಲೆಯೇ ಕಣ್ಣು. ಕೆಲವರಂತೂ ನಿಮಗೆ ಅಫೇರ್ ಏನೂ ಇಲ್ವಾ? ಮದ್ವೆ ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಏನೆಂದು ಉತ್ತರಿಸಲಿ? ಬರೀ ಫೇಸ್ ಬುಕ್ನಲ್ಲಷ್ಟೇ ಪರಿಚಯವಿರುವ ವ್ಯಕ್ತಿ ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಕಿರಿ ಕಿರಿ ಅನಿಸಿದರೆ ಏನು ಮಾಡುವುದು? ಉತ್ತರ ಸಿಂಪಲ್ ..ಬ್ಲಾಕ್!
ಅಂದ ಹಾಗೆ ಹುಡುಗಿಯರ ರಿಲೇಷನ್ ಶಿಪ್ ಸ್ಟೇಟಸ್ ಗಳಲ್ಲಿ ಈ ಸಿಂಗಲ್’ ಅನ್ನೋದು ಕುತೂಹಲದ ಮೂಟೆ. ಮದ್ವೆ ಆಗದೇ ಸಿಂಗಲ್ ಆಗಿರೋ ಹುಡುಗಿ ಒಂದೆಡೆಯಾದರೆ, ಸಂಬಂಧದಿಂದ ಹೊರ ಬಂದವಳು ಇನ್ನೊಂದೆಡೆ. ಇಲ್ಲಿ ಇಬ್ಬರೂ ಸಿಂಗಲ್ ಹುಡ್ಗೀರೇ. ಇಬ್ಬರ ಜೀವನಾನುಭವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.ಆದಾಗ್ಯೂ, ಒಬ್ಬ ಹುಡುಗನನ್ನು ನೋಡಿದಾಗ ಇವರಿಬ್ಬರ ಮನಸ್ಸಿನಲ್ಲಿ ಮೂಡುವ ಪ್ರೇಮದ ಭಾವನೆಗಳು ಒಂದೇ ರೀತಿಯದ್ದಾಗಿದ್ದರೂ, ಅದನ್ನು ಸ್ವೀಕರಿಸುವ ವ್ಯಕ್ತಿ ಇದ್ದಾನಲ್ಲಾ…ಅವನ ಭಾವನೆ ಇಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಅವನೊಳಗಿನ ಪೋಲಿ ಮನಸ್ಸು ಒಂದು ಫ್ರೆಶ್ ಇನ್ನೊಂದು….ಎಂಬ ಲೆಕ್ಕಾಚಾರದಲ್ಲೇ ಆಕೆಯೊಂದಿಗೆ ಬೆರೆಯಲು ಹವಣಿಸುತ್ತಾನೆ.
ಪ್ರೀತಿಯ ವಿಷಯ ಬಂದಾಗ ಮದ್ವೆಯಾಗಿರದ ಹುಡುಗಿಯ ಪ್ರೇಮ ಒಂದು ರೀತಿಯದ್ದಾಗಿದ್ದರೆ, ಮದ್ವೆಯಾಗಿ ಅದರಿಂದ ಹೊರಬಂದವಳ ಪ್ರೇಮ ಇನ್ನೊಂದು ರೀತಿಯದ್ದಾಗಿರುತ್ತದೆ ಎಂದಿದ್ದ ಗೆಳೆಯ. ಪ್ರೀತಿಯಲ್ಲಿಯೂ ಅಂಥಾ ವ್ಯತ್ಯಾಸವುಂಟಾ? ಎಂದು ಕೇಳಿದ್ದೆ. ಹೂಂ ಮದ್ವೆಗೆ ಮೊದಲು ಹುಟ್ಟುವ ಪ್ರೀತಿಯೂ, ಮದ್ವೆಯ ನಂತರ ಹುಟ್ಟುವ ಪ್ರೀತಿಯಲ್ಲಿಯೂ ವ್ಯತ್ಯಾಸವಿರುತ್ತದೆ. ಮೊದಲನೆಯ ಕೇಸ್ ನಲ್ಲಿ ಹುಡುಗಿಯ ಕೈಯಲ್ಲಿ ಬಣ್ಣ ತುಂಬದ ಚಿತ್ರ ಮಾತ್ರ ಇರುತ್ತದೆ. ಅದಕ್ಕೆ ಯಾವ ಬಣ್ಣ ತುಂಬಲಿ ಎಂದು ಆಕೆ ಯೋಚಿಸುತ್ತಾಳೆ. ತನಗಿಷ್ಟವಾದ ಬಣ್ಣವನ್ನು ತುಂಬಿ ಖುಷಿ ಪಡುತ್ತಾಳೆ . ಆದರೆ ಎರಡನೇ ಕೇಸ್ ನಲ್ಲಿ ಚಿತ್ರಕ್ಕೆ ಬಣ್ಣ ತುಂಬಿದ ನಂತರ ಆ ಚಿತ್ರಕ್ಕೆ ಈ ಬಣ್ಣ ಒಪ್ಪುತ್ತಿಲ್ಲ ಎಂಬ ಅಸಮಾಧಾನದಿಂದ ಆ ಬಣ್ಣವನ್ನು ಅಳಿಸಿ ಇನ್ನೊಂದು ಬಣ್ಣವನ್ನು ತುಂಬುವ ಪ್ರಯತ್ನ ಮಾಡುವ ಹುಡುಗಿ ಇರುತ್ತಾಳೆ. ಈವಾಗ ಆಕೆಗೆ ಗೊತ್ತಿದೆ ಯಾವ ಬಣ್ಣ ತುಂಬಬೇಕೆಂಬುದು! ಯಾವ ಬಣ್ಣವನ್ನು ಎಲ್ಲೆಲ್ಲಿಗೆ ಹಚ್ಚಿದರೆ ಸುಂದರ ಚಿತ್ರವಾಗಬಹುದೆಂದು ಆಕೆ ಮೊದಲನೇ ಅನುಭವದಿಂದ ಕಲಿತಿರುತ್ತಾಳೆ.
ಒಂದು ವೇಳೆ ಆಕೆ ಜಾಗರೂಕತೆಯಿಂದ ಬಣ್ಣ ತುಂಬಿದ್ದರೂ ಅದು ಸರಿ ಹೋಗದೇ ಇದ್ದರೆ?
ಏನಿಲ್ಲ, ಎಲ್ಲ ಬಣ್ಣಗಳು ಸೇರಿ ಮಾಡನ್೯ ಆಟ್೯ ನಂತಾಗಿ ಬಿಡುತ್ತದೆ… ಅವ ನಕ್ಕ.
ಏಳು ಬಣ್ಣಗಳು ಸೇರಿದರೆ ಬಿಳಿ ಬಣ್ಣವಾಗುತ್ತದೆ. ಅಲ್ಲಿಗೆ ಎಲ್ಲವೂ ಶಾಂತ…ನಿಶ್ಶಬ್ದ
ಪ್ರೀತಿಗೆ ಎಷ್ಟೊಂದು ಬಣ್ಣಗಳು!!!
ಸಂಬಂಧಗಳಿಗೆ ಎಷ್ಟೊಂದು ಮುಖಗಳು!!
ಹಾಂ..ಸಿಂಗಲ್ ಸ್ಟೇಟಸ್ ಬಗ್ಗೆ ಹೇಳ್ತಾ ಇದ್ದೆ ಅಲ್ವಾ? ಕೆಲವರು ಸಿಂಗಲ್ ಎಂಬ ಸ್ಟೇಟಸ್ ನೋಡಿದ ಕೂಡಲೇ (ಮದ್ವೆ ವಯಸ್ಸು ಆಗಿದ್ದರೆ) ನೀವಿನ್ನೂ ಯಾಕೆ ಮದ್ವೆ ಆಗಿಲ್ಲ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ನೀವು ಲವ್ ಕೂಡಾ ಮಾಡಿಲ್ವಾ? ಎಂದು ಹುಬ್ಬೇರಿಸುವವರೂ ಇರ್ತಾರೆ. ಒಂದು ಹೇಳಲಾ.. ಸಿಂಗಲ್ ಎಂದು ಸ್ಟೇಟಸ್ ಹಾಕಿದ್ದರೂ, ಐ ಆ್ಯಮ್ ಸಿಂಗಲ್ ಎಂದು ಹೇಳಿದ ಮಾತ್ರಕ್ಕೆ ನಾವು ಯಾರನ್ನೂ ಲವ್ ಮಾಡಿಲ್ಲ ಎಂಬಥ೯ವಲ್ಲ. ಸದ್ಯ ನಾವು ಯಾವುದೇ ರಿಲೇಷನ್ ಶಿಪ್ನಲ್ಲಿ ಇಲ್ಲ ಎಂದಷ್ಟೇ. ಹಾಗಂತ ರಿಲೇಷನ್ ಶಿಪ್ ನಲ್ಲಿ ಇದ್ದರೂ ಅದನ್ನು ಎಲ್ಲರಲ್ಲೂ ಹೇಳಿಕೊಳ್ಳಬೇಕಾದ ಅಗತ್ಯವೇನಿದೆ? ಸಿಂಗಲ್ ಅಂತ ಎಲ್ಲರ ಜತೆ ಬೆರೆಯಲೂ ನಮಗಿಷ್ಟವಿಲ್ಲ.
ಒಂದ್ಸಾರಿ ಫಾಮ್೯ ತುಂಬುವಾಗ ವಯಸ್ಸು ……. ಎಂದು ನಮೂದಿಸಿ ಸಿಂಗಲ್ ಎಂಬ ಕೋಷ್ಟಕಕ್ಕೆ ರೈಟ್ ಮಾಕ್೯ ಹಾಕಿದೆ. ಕೌಂಟರ್ನಲ್ಲಿ ಆ ಫಾಮ್೯ ಕೊಟ್ಟಾಗ ಅದನ್ನು ಸ್ವೀಕರಿಸಿದ ವ್ಯಕ್ತಿ ನನ್ನ ಮುಖವನ್ನೊಮ್ಮೆ ದಿಟ್ಟಿಸಿದ. ಡಾಕ್ಟರ್ ಬಳಿ ಹೋದಾಗಲೂ ಅಷ್ಟೇ..ಸಿಂಗಲ್ ಎಂದು ಹೇಳುವಾಗ ಎಲ್ಲರೂ ನನ್ನ ಮುಖ ನೋಡುತ್ತಾರೆ. ನನಗೆ ವಯಸ್ಸು ಇಷ್ಟಾಗಿದೆ, ಸಿಂಗಲ್ ಎಂದು ಹೇಳುವಾಗ ಅಚ್ಚರಿ ಪಡುವಂತದ್ದೇನಿದೆ? ಪುರುಷ 60 ವಷ೯ ದವನಾಗಿದ್ದರೂ ಆತ ಸಿಂಗಲ್ ಎಂದು ನಮೂದಿಸಿದರೆ ಆತ ಬ್ರಹ್ಮಚಾರಿ. ಸಂಸಾರದ ಜಂಜಾಟ ಯಾವುದೂ ಬೇಡ ಎಂದು ಆತ ಸಿಂಗಲ್ ಆಗಿದ್ದು ಲೈಫ್ ಎಂಜಾಯ್ ಮಾಡ್ತಾನೆ ಅಂತ ಹೇಳ್ತೀವಿ. ಅದೇ ಜಾಗದಲ್ಲಿ ಹೆಣ್ಣಿದ್ದರೆ? ಆಕೆಗೆ ಏನೋ ಸಮಸ್ಯೆ ಇದೆ ಅನ್ನೋ ರೀತಿಯಲ್ಲಿ ಮಾತುಗಳು ಹುಟ್ಟಿಕೊಳ್ಳುತ್ತವೆ.
ಗಂಡಾಗಲೀ ಹೆಣ್ಣಾಗಲೀ ಅವರವರ ಜೀವನ ಹೇಗೆ ಇರಬೇಕೋ ಅದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ ಸಮಾಜದಲ್ಲಿ ಹೆಣ್ಣೊಬ್ಬಳು ಒಂಟಿಯಾಗಿ ಬದುಕು ಸಾಗಿಸುತ್ತಾಳೆ ಎನ್ನುವಾಗ ಸಮಾಜ ಆಕೆಯನ್ನು ಹರಿದಾಡುವ ಬಳ್ಳಿಗೆ ಹೋಲಿಸುತ್ತದೆ. ಯಾವುದೇ ಕಾಂಡ ಅಥವಾ ಮರ ಸಿಕ್ಕಿದರೂ ಆ ಬಳ್ಳಿ ಅದರ ಆಶ್ರಯವನ್ನು ಪಡೆದುಕೊಳ್ಳುತ್ತದೆ ಎಂಬ ಕೊಂಕು ಮಾತುಗಳು ಅಲ್ಲಿ ಮಾದ೯ನಿಸುತ್ತವೆ.
ಆದರೆ ಒಂಟಿಯಾಗಿ ಬದುಕುವ ಹೆಣ್ಣು ಒಂಟಿಯಾಗಿದ್ದುಕೊಂಡೇ ಸ್ಟ್ರಾಂಗ್ ಆಗುತ್ತಾಳೆ. ತನ್ನ ಕೆಲಸಗಳನ್ನು ತಾನೇ ನಿಭಾಯಿಸುವಷ್ಟು ಸಾಮಥ್ಯ೯ವನ್ನು, ಖುಷಿಯನ್ನೂ ಆಕೆ ಗಳಿಸುತ್ತಾ ಹೋಗುತ್ತಾಳೆ. ಪ್ರತಿಯೊಂದು ಕ್ಷಣದಲ್ಲಿಯೂ ತಾನು ಹೇಗಿರಬೇಕು, ಹೇಗೆ ಖುಷಿಯನ್ನು ಕಂಡುಕೊಳ್ಳಬೇಕೆಂಬುದನ್ನು ಆಕೆಗೆ ಬದುಕು ಕಲಿಸಿರುತ್ತದೆ. ಈಗ ಹಾಗೇನಿಲ್ಲ, ಸಮಾಜ ಮುಂದುವರಿದಿದೆ ಎಂದು ನಾವೇ ಎಷ್ಟೇ ಹೇಳಿಕೊಂಡರೂ, ಯಾರ ಹಂಗಿಲ್ಲದೆ ಒಂಟಿಯಾಗಿ ಬದುಕ ಹೊರಟಿರುವ, ಬದುಕುತ್ತಿರುವ ಹೆಣ್ಣು ಮಕ್ಕಳಲ್ಲಿ ಕೇಳಿ ನೋಡಿ…ಅವರೆಷ್ಟು ನೋವು ನುಂಗಿದ್ದಾರೆ ಎಂದು! ಮುಖಸ್ತುತಿ ಮಾಡುತ್ತಾ ಆಕೆ ದಿಟ್ಟೆ ಎಂದು ಹೊಗಳಿದರೂ ಬೆನ್ನ ಹಿಂದೆ ಆಕೆಗೆ ಗಂಡು ದಿಕ್ಕಿಲ್ಲ ಎಂದು ಕಣ್ಣಗಲಿಸಿ ನೋಡುವವರೇ ಜಾಸ್ತಿ ಇರುತ್ತಾರೆ ಇಲ್ಲಿ . ರಿಲೇಷನ್ ಶಿಪ್ ನಲ್ಲಿದ್ದೇನೆ ಅಂತ ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಸಿಂಗಲ್ ಆಗಿರುವುದು ಕೂಡಾ ಹಾಗೆಯೇ..ಅದೊಂದು ಸ್ಟೇಟಸ್ ಮಾತ್ರವಲ್ಲ, ಅದು ಅವರವರ ಆಯ್ಕೆಯೂ ಹೌದು.
 

‍ಲೇಖಕರು G

December 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

9 ಪ್ರತಿಕ್ರಿಯೆಗಳು

 1. Bhagya Deshpande

  Being single is not just the status but also one’s choice. Well said, Rashmi. Congrats.

  ಪ್ರತಿಕ್ರಿಯೆ
 2. ಡಾ.ಶಿವಾನಂದ ಕುಬಸದ

  ತುಂಬ ಒಳ್ಳೆಯ ಲೇಖನ. ಒಂಟಿ ಹೆಣ್ಣಿನ ಮನಸ್ಥಿತಿಯನ್ನು, ಜನ ಅವಳೆಡೆಗೆ ನೋಡುವ ರೀತಿಯನ್ನೂ ಚೆನ್ನಾಗಿ ಬಿಂಬಿಸಿದ ಬರೆಹ. ಆದರೆ ಕಾಲ ಬದಲಾಗುತ್ತಿದೆ. ಸುಮ್ಮನೆ ‘ಇಣುಕಿ’ ವ್ಯಥೆ ನೀಡುವ ಜನರಿಗಿಂತ appreciate ಮಾಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.

  ಪ್ರತಿಕ್ರಿಯೆ
 3. Kantha

  Rashmi madaam, you naturally scripted the thoughts of the several hearts and minds of singles, and its inevitable to all singles.
  Shivananda Kubasada sir, even single males are also in the same soup. Fortunately or unfortunately many people are curious about the word “Single”.

  ಪ್ರತಿಕ್ರಿಯೆ
 4. Sushma Moodbidri

  ಸಂಬಂಧಗಳ ಬಗ್ಗೆ ಅವುಗಳನ್ನು ನಿಭಾಯಿಸುವ ಮುಖಗಳ ಬಗ್ಗೆ ಅದೆಷ್ಟು ಚಂದ ಬರೆದಿದ್ದೀಯೇ… 🙂
  ಇಷ್ಟವಾಯಿತು ರಶ್.. 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: