ಸಿಂಧೂರ ಪದದ ಅರ್ಥ ‘ಆನೆ’

ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ?  ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ  ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?
ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ?   ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್

‍ಲೇಖಕರು avadhi

February 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  ಪೂರ್ಣ ಓದಿಗೆ ಮೀಡಿಯಾ ಮೈಂಡ್ ಭೇಟಿ ಕೊಟ್ಟರೆ ಅಲ್ಲಿ ಈ ಬರಹ ಕಾಣಿಸುತ್ತಿಲ್ಲವಲ್ಲ? ಅನೆ ತಿಂದಿತೋ ಹೇಗೆ?
  ಅಂದಹಾಗೆ ಇದು ’ಸುನಾಥ’ (ಸುಧೀಂದ್ರ ದೇಶಪಾಂಡೆ) ಮಹಾಶಯರ ಬರಹ ಎಂದುಕೊಳ್ಳುವೆ. ಅವರ ಗಮನಕ್ಕೆ- “ಸಿಂಧೂರ” ಪದದ ಅರ್ಥ ಆನೆ ಅಂತಲ್ಲ. “ಸಿಂಧುರ” ಎಂದರೆ ಆನೆ. ಸಂಸ್ಕೃತದಲ್ಲಿ “ಸಿಂಧೂರ” ಎಂಬ ಪದವೇ ಇಲ್ಲ! ‘ಸಿಂದೂರತಿಲಕ’ ಎಂಬ ಪದ ಇದೆ, ಅದರ ಅರ್ಥವೂ ’ಆನೆ’ ಎಂದೇ. (ಕನ್‌ಫರ್ಮ್ ಮಾಡಿಕೊಳ್ಳಲಿಚ್ಛಿಸುವವರು “ಸಂಸ್ಕೃತ ಕನ್ನಡ ನಿಘಂಟು – ಪ್ರೊ. ಜಿ.ಎನ್.ಚಕ್ರವರ್ತಿ; ಗೀತಾ ಬುಕ್ ಹೌಸ್, 2006; ಪುಟ ಸಂಖ್ಯೆ 971 ನೋಡಬಹುದು)

  ಪ್ರತಿಕ್ರಿಯೆ
  • ಶಿವ

   //“ಸಿಂಧುರ” ಎಂದರೆ ಆನೆ, ‘ಸಿಂದೂರತಿಲಕ’ ಎಂಬ ಪದ ಇದೆ, ಅದರ ಅರ್ಥವೂ ’ಆನೆ’ //
   ಜೋಶಿಯವ್ರೇ, ಇದು ಹೇಗೆ? ಸ್ವಲ್ಪ ವಿವರಿಸುತ್ತೀರಾ ಪ್ಲೀಸ್..

   ಪ್ರತಿಕ್ರಿಯೆ
   • ಶ್ರೀವತ್ಸ ಜೋಶಿ

    ಶಿವ ಅವರ ಗಮನಕ್ಕೆ-
    “ಸಿಂಧುರ” ಎಂದರೆ ಆನೆ. ಅದು “ಸಿಂಧುರ” ಎಂಬ ಒಂದು ಪದದ ವಿಲೇವಾರಿ. ಅಲ್ಲಿಗೆ ಅದು ಮುಗಿಯಿತು.
    ಇನ್ನು, ’ಸಿಂದೂರ’ ಎಂದರೆ ಕುಂಕುಮ/ ಒಂದುವಿಧದ ಕೆಂಪು ಚೂರ್ಣ ಎಂಬ ಅರ್ಥ. ’ಸಿಂದೂರತಿಲಕ’ ಎಂದರೆ ’ಹಣೆಮೇಲೆ ಸಿಂದೂರದ ತಿಲಕ ಇರುವಂಥ’. ಈ ಪದವನ್ನು ಪುಲ್ಲಿಂಗರೂಪದಲ್ಲಿ ಬಳಸಿದರೆ ಗಜ (ಆನೆ) ಎಂದು ಅರ್ಥ. ಪ್ರಾಯಶಃ ಆನೆಗಳಿಗೆ ಹಣೆಗೆ ಸಿಂದೂರದ ತಿಲಕವಿಟ್ಟು ಅಲಂಕರಿಸುವ ಕ್ರಮದಿಂದಾಗಿ ಆ ಪದಪ್ರಯೋಗ ಬಂದಿರಬಹುದು. ಇದೇ ಪದವನ್ನು ಸ್ತ್ರೀಲಿಂಗರೂಪದಲ್ಲಿ ಬಳಸಿದರೆ ಸುಮಂಗಲಿ (ಮುತ್ತೈದೆ) ಎಂದು ಅರ್ಥ.
    “ಸಿಂಧುರ” ಪದದ ಅರ್ಥ ‘ಆನೆ’ ಆಗಿರುವುದಕ್ಕೂ ’ಸಿಂದೂರತಿಲಕ’ ಪದದ ಆರ್ಥ ‘ಆನೆ’ ಆಗಿರುವುದಕ್ಕೂ ಸಂಬಂಧವೇನೂ ಇಲ್ಲ. ಅಂದರೆ “ಸಿಂಧುರ’ಕ್ಕೂ ‘ಸಿಂದೂರತಿಲಕ’ಕ್ಕೂ ಪದಬಾಂಧವ್ಯ ಏನೂ ಇಲ್ಲ.
    ಈ ವಿವರಣೆ ನಿಮಗೆ ಅರ್ಥವಾಗಿರಬಹುದು ಎಂದುಕೊಳ್ಳುವೆ. ಆಗಿರದಿದ್ದರೆ ನನಗೆ ಇಮೇಲ್ ([email protected]) ಕಳಿಸಿ, ವಿವರಿಸುವೆ.

    ಪ್ರತಿಕ್ರಿಯೆ
 2. ಮಾಲತಿ ಎಸ್.

  somehow i could not connect to media mind
  i have an old dictionary which i use for my reference
  according to it
  ಸಿಂಧೂರ = ಒಂದು ಜಾತಿಯ ಕೆಂಪು ಬಣ್ಣ, ಒಂದು ಸೀಸಾಮ್ಲ, ಚಂದ್ರ, ಆನೆ
  ಸಿಂದುರ = ಪರಾಗ, ಹೂವಿನ ಹುಡಿ, ಸಿಂಧುರ (ಸಂ)

  ಪ್ರತಿಕ್ರಿಯೆ
  • sunaath

   ಮಾಲತಿಯವರೆ,
   ಸಿಂದೂರ ಪದಕ್ಕೆ ಕುಂಕುಮ ಎನ್ನುವ ಅರ್ಥವಿದೆ.ಸಂಸ್ಕೃತದಲ್ಲಿ ‘ಸಿಂಧೂರ’ ಎನ್ನುವ ಪದವಿಲ್ಲ ; ‘ಸಿಂಧುರ’ ಎನ್ನುವ ಪದಕ್ಕೆ ಆನೆ ಎನ್ನ್ನುವ ಅರ್ಥವಿದೆ. ಆದರೆ ಕಿಟ್ಟೆಲ್ ಕನ್ನಡ-ಇಂಗ್ಲಿಸ್ ಅರ್ಥಕೋಶದಲ್ಲಿ ಸಿಂಧೂರ ಎನ್ನುವ ಪದಕ್ಕೆ ಆನೆ ಎನ್ನುವ ಅರ್ಥ ಹೇಳಿದ್ದಾರೆ.

   ಪ್ರತಿಕ್ರಿಯೆ
 3. Shreeraj

  Namaskara…
  Kittel dictionary prakara Sindhoor andare Kunmuma
  Sindhur andare Aane…
  dayavittu hechina mahiti needi.
  Shreeraj
  New Delhi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: