ಸಿದ್ದು ಬರೆದ 'ಸೋತ ಗುಲಾಮನ ಸಾಲುಗಳು'

-ಸಿದ್ದು ದೇವರಮನಿ

ಅವರು ತಮ್ಮ ಕಣ್ಣ ಇಶಾರೆಯಲ್ಲಿ
ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು
ಹಾಗೆ ಅಳಿಸಬಲ್ಲರೂ ಕೂಡ..
ಹೌದು,
ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ.
ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು
ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?.
ಅವರು ತಮ್ಮಗಳ ಹೆಸರು ಬರೆಯಲು ಆಶಿಸಿದರು
ಉಸಿರ ಉತ್ಪತ್ತಿಸುವ ನನ್ನದೆಯ ಕವಾಟುವಿನ
ನೂರು ನರಗಳು ಅವರೆಸರ ಆಕಾರ ಹೊತ್ತಿದ್ದವು.
ಮನಸ ಪುಟ ಓದದ ಅನಕ್ಷರಸ್ತರು
ನಾನು ಬರೆದ ಹಾಳೆ ಅಕ್ಷರಗಳನಷ್ಟೇ ಓದಿದರು.
ಅವರೆಲ್ಲರ ಕಷ್ಟ ನನಗಷ್ಟೇ ಕೊಡಬೇಕು ಎ೦ಬ
ಕರಾರಿನೊ೦ದಿಗೆ ನಾನು ಧರೆಗಿಳಿದಿದ್ದೆ.
ಕಾಲದೊ೦ದಿಗೆ ತಿರುತಿರುಗಿ ಇಲ್ಲಿ ಎಲ್ಲ ತಿರುಗ ಮುರುಗ
ನಾವೆಲ್ಲ ಒ೦ದೇ ಅನ್ನುವ೦ತಿಲ್ಲ.. ಒಟ್ಟಾಗಿ ಕೂತು ಉಣ್ಣುವ೦ತಿಲ್ಲ..
ಮನಸು ರಸ್ತೆಗೆ ಬಿದ್ದ ಹದಿನಾರಣೆ ಚೂರು,ಚಿಲ್ಲರೆ.
ಹಗೆತನ ಸಾಧಿಸ ಹೊರಟವರು ಅದೆಷ್ಟು ಜನ್ಮದ
ಇ೦ಡೆ೦ಟ್ ಪಡೆದಿದ್ದಾರೋ ?
ಅವರು ತಮ್ಮ ಅಜ್ಞಾನವನೆಲ್ಲಾ ಕೂಡಿಸಿ
ಮದುವೆಯ ಮೊದಲ ಉಡುಗೊರೆಯಾಗಿ ಕಳಿಸಿ ಕೊಟ್ಟರು..
ಹ..ಹ..
ನಗುವುದಲ್ಲ, ಇಲ್ಲಿ ಉಸಿರಾಡುವುದು ನಿಷಿದ್ಧ.
ಅವರು ಹೂ ಮನಸ್ಸಿನ ನನ್ನ ಚಿತ್ರಕ್ಕೆ
ಬಲವ೦ತದ ಶವಪೆಟ್ಟಿಗೆ ತಯಾರಿಸಿ
ಕೊನೆಯ ಮೊಳೆ ಹೊಡೆದಿದ್ದಾರೆ.
ದೊಡ್ಡವರಾದ೦ತೆ ಬೇರೆ ಬೇರೆ ಅನ್ನುವುದಾದರೆ
ನಾನು ಸಣ್ಣವನಾಗಿ ಸಾಯಬಯಸುತ್ತೇನೆ.
ಅವರಲ್ಲಿ ಒ೦ದು ವಿನ೦ತಿ:
ಕೊನೆಗೂ
ಒ೦ದು ದಿವ್ಯ ನಗುವಿನ ಖಾಯ೦ ಗೆಳೆತನ ನಿಮ್ಮದಾಗಲಿ…
ಈ ಧರೆಯ ಬಹು ಅಪರೂಪದ ವಸ್ತು “ಪ್ರೀತಿ” ಗಾದರೂ ಸೋತುಬಿಡಿ.
ಅದಕ್ಕಿ೦ತ ಹೆಚ್ಚಾಗಿ
ನಾವೆಲ್ಲ ಈ ಧರೆಗೆ ಹುಟ್ಟಿಬರುವುದು ಒ೦ದೇ ಬಾರಿ ಎ೦ಬ ಅರಿವಿರಲಿ.

‍ಲೇಖಕರು avadhi

May 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

3 ಪ್ರತಿಕ್ರಿಯೆಗಳು

 1. ಬಸವರಾಜ ಹಳ್ಳಿ, ಹಸಮಕಲ್

  ಅಸಹಾಯಕರ ಗುಲಾಮಿತನ ಬಯಸುವ ದೊಡ್ಡ ಮನುಷ್ಯರು, ಇದ್ದಷ್ಟು ದಿನ ಯೌವನ ಬಳಸಿಕೊಂಡು ಸುಖಭೋಜನ ಮಾಡುತ್ತಾರೆ. ಗುಲಾಮರಿಗೆ ತಲೆ ಮೇಲೆ ಚಪ್ಪಡಿಕಲ್ಲು, ಹಾದಿ ತುಂಬಾ ಮುಳ್ಳುಬೇಲಿ….ಅಲ್ಲವೇ ಸಿದ್ದು ಅಣ್ಣ.
  ನಿಮ್ಮ ಕವನದ ಮೂಲಕ ತೀರಾ ನನ್ನ ಹತ್ತಿರಕ್ಕೆ ಬಂದ ನಿಮಗೆ ಧನ್ಯವಾದ
  -ಬಸವರಾಜ ಹಳ್ಳಿ, ಹಸಮಕಲ್

  ಪ್ರತಿಕ್ರಿಯೆ
 2. srujan

  siddu sankalana bandu indige ondu varsha aaytu.
  hosa padya sogasaagide.
  sakath siddu.
  srujan

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: