ರಾಜ್ಯ ಪ್ರಶಸ್ತಿ ವಿಜೇತ #ನಾಗಮಂಡಲ ಚಿತ್ರದ “ಈ ಹಸಿರು ಸಿರಿಯಲಿ”, “ಕಂಬದ ಮೇಲಿನ ಬೊಂಬೆಯೇ” ಮುಂತಾದ ಬಹು ಜನಪ್ರಿಯ ಗೀತೆಗಳನ್ನು ರಚಿಸಿದ್ದ, ಸಾಹಿತಿ, ನಾಟಕಕಾರ, ಸಂಯುಕ್ತ ಕರ್ನಾಟಕ, ಕಸ್ತೂರಿ ಪತ್ರಿಕೆಯ ನಿವೃತ್ತ ಸಹ ಸಂಪಾದಕರಾಗಿದ್ದ ಶ್ರೀ #ಗೋಪಾಲ_ವಾಜಪೇಯಿ ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅವರು 1965-66ರಲ್ಲಿ ನಮ್ಮ #ಸಿದ್ದಾಪುರದ #ಸಿದ್ಧಿವಿನಾಯಕ ಹೈಸ್ಕೂಲಿನಲ್ಲಿಯೂ, ಮತ್ತು 1966-67ರಲ್ಲಿ ಹಾರ್ಸಿಕಟ್ಟೆಯ ಅಶೋಕ ಹೈಸ್ಕೂಲಿನಲ್ಲಿಯೂ ಶಿಕ್ಷಣವನ್ನು ಪಡೆದಿದ್ದರು. ಸಿದ್ದಾಪುರವನ್ನು ಎಂದೂ ಮರೆಯಲು ಸಾಧ್ಯವಿಲ್ಲ, ಮತ್ತೆ ಭೇಟಿ ನೀಡುವ ತವಕ ಹೆಚ್ಚುತ್ತಿದೆ. ಕಾಲ ಕೂಡಿ ಬರಬೇಕು. ಅಂತ ಮೆಸೆಜ್ ಮಾಡಿದ್ದರು. ಅಗಲಿದ ಅವರ ನೆನಪಿನಲ್ಲಿ ಸಿದ್ದಾಪುರದ ಜನತೆಯಾದ ನಾವು ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸೋಣಾ..
Shocking … cant believe …
ಅಗಲಿದ ಹಿರಿಯ ಸಾಹಿತಿ ದಿ॥ ವಾಜಪೇಯಿಯವರಿಗೆ ಭಾವಪೂಣ೯ ಶೃದ್ದಾಂಜಲಿಗಳು. ಮತ್ತೆ ಸಿದ್ದಾಪುರದಲ್ಲೇ ಹುಟ್ಟಿ ಬನ್ನಿ.
(ನಾನೂ ಸಿದ್ದಾಪುರ ತಾಲ್ಲೂಕಿನವಳು)