ಸಿನಿಮಾ ಓದೋಣ ಬನ್ನಿ…

‘ಸಿನಿಮಾ ಓದೋಣ ಬನ್ನಿ’ : ರಾಜ್ಯಮಟ್ಟದ ಸಿನೆಮಾ ಅಧ್ಯಯನ ಶಿಬಿರ

    ಸಿನೆಮಾ ಗ್ರಹಿಕೆಯನ್ನ ವಿಸ್ತರಿಸಿಕೊಳ್ಳುವಲ್ಲಿ ಕಳೆದಾರು ವರುಷಗಳಿಂದ ಹಲವಾರು ಬಗೆಯಲ್ಲಿ ಸಂವಾದ ಡಾಟ್ ಕಾಂ ನಿರತವಾಗಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಪ್ರದರ್ಶನ, ಸಂವಾದ, ಚಲನಚಿತ್ರ ಅಧ್ಯಯನ ಶಿಬಿರಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುತ್ತಾ ಬಂದಿದೆ. ಮೊದಲ ಶಿಬಿರ ದೇವರಾಯನದುರ್ಗದಲ್ಲಿ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳ ಕುರಿತಂತೆ ನಡೆದಿತ್ತು. ಓದೆಕಾರ್ ಫಾರಂನಲ್ಲಿ ನಡೆದ ಎರಡನೆ ಶಿಬಿರದಲ್ಲಿ ಮುಂಗಾರು ಮಳೆ ಮತ್ತು ಮೊಗ್ಗಿನ ಮನಸು ಸಿನೆಮಾ ಕುರಿತು ಚರ್ಚಿಸಲಾಗಿತ್ತು. ಆ ಸಂದರ್ಭದಲ್ಲಿ ನಿರ್ದೇಶಕರಾದ ಶಶಾಂಕ್, ಪಿ ಶೇಷಾದ್ರಿ, ಮಠ ಗುರುಪ್ರಸಾದ್, ಸಾಹಿತಿ ಗೋಪಾಲ ಕೃಷ್ಣ ಪೈ, ಸಿನಿಮಾ ಲೇಖಕ ಪುಟ್ಟಸ್ವಾಮಿ ನಮ್ಮೊಂದಿಗೆ ಭಾಗವಹಿಸಿದ್ದರು. ಈ ಚಿತ್ರಗಳ ಬಗ್ಗೆ ನಮಗಿದ್ದ ಪೂರ್ವಗ್ರಹ ಅಥವ ಗ್ರಹಿಕೆಯ ಮಾದರಿ ಕೊಂಚವಾದರೂ ಬದಲಾಗಿದ್ದರೆ ಅದು ಶಿಬಿರದ ಯಶಸ್ಸು. ಈ ನಿಟ್ಟಿನಲ್ಲಿ ಬರುವ ಮೇ ಮೊದಲ ವಾರ ಇನ್ನೊಂದು ಶಿಬಿರ ಏರ್ಪಡಿಸಲಾಗಿದೆ. ಈ ಬಾರಿಯ ಶಿಬಿರದಲ್ಲಿ ರಂಗಭೂಮಿ ಮತ್ತು ಸಿನೆಮಾ – ಈ ಎರಡು ಪ್ರಕಾರಗಳನ್ನಿಟ್ಟುಕೊಂಡು, ಸಿನೆಮಾವೊಂದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ಸಿನೆಮಾ ರಂಗಭೂಮಿಯ ವಿಸ್ತರಣೆ ಎಂಬ ವಾದದ ಜೊತೆಗೆ ಸಿನೆಮಾ ಸಂಪೂರ್ಣ ಬೇರೆಯದೇ ಅದ ಮಾಧ್ಯಮ ಎನ್ನುವ ಇನ್ನೊಂದು ವಾದವೂ ಚಾಲ್ತಿಯಲ್ಲಿದೆ. ಕಾದಂಬರಿಗಳನ್ನು ಆಧರಿಸಿ ಸಿನೆಮಾಗಳು ತಯಾರಾದ ಹಾಗೆ, ನಾಟಕಗಳೂ ಸಿನೆಮಾಗೆ ಸ್ಫೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ನಾಟಕವೊಂದು , ಸಿನೆಮಾವಾಗುವಾಗ ಕ್ರಿಯಾಶೀಲ ನಿರ್ದೇಶಕನ ಮುಂದಿರುವ ಸವಾಲುಗಳು, ಅದನ್ನ ನಿರ್ವಹಿಸಿರುವ ರೀತಿ ಮತ್ತು ಅದರ ರೂಪಾಂತರದ ಯಶಸ್ಸಿನ ಮಾನದಂಡಗಳೇನು? ಸಿನೆಮಾ ಹೇಗೆ ನಾಟಕವೊಂದಕ್ಕಿಂತ ಭಿನ್ನ? ಇಂತಹ ಪ್ರಶ್ನೆಗಳನ್ನಿಟ್ಟುಕೂಂಡು ಸಂವಾದವೊಂದಕ್ಕೆ ನಾವು ಅಣಿಯಾಗುತ್ತಿದ್ದೇವೆ. ಉತ್ತರಗಳಿಗಿಂತ ಪ್ರಶ್ನೆಗಳನ್ನೆತ್ತುವುದು ಮುಖ್ಯ ಎನ್ನುವುದರಲ್ಲಿ ನಂಬಿಕೆ ಇಟ್ಟಿರುವ ಸಂವಾದ ಡಾಟ್ ಕಾಂನ ವಿನೂತನ ಶಿಬಿರಕ್ಕೆ ಭಾಗವಹಿಸುವ ಕುರಿತು ವಿವರಗಳಿಲ್ಲಿವೆ. ಶಿಬಿರದಲ್ಲಿ ಏನಿರುತ್ತದೆ? ನಾಲ್ಕು ಸಿನೆಮಾಗಳ ಪ್ರದರ್ಶನವಿರುತ್ತದೆ. ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಶಿಬಿರಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಚಿತ್ರದ ಕುರಿತು ಪರಸ್ಪರ ಚರ್ಚಿಸಲು ಅವಕಾಶ ಮಾಡಿಕೊಡಲಾಗುತ್ತಾದೆ. ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಚಿತ್ರದ ಗ್ರಹಿಕೆಗೆ ಅಗತ್ಯವಾದ ಸಲಹೆ, ತಂತ್ರಗಳನ್ನು ನೀಡುತ್ತಾರೆ. ನಂತರ ಎಲ್ಲ ಗುಂಪುಗಳ ವಿಚಾರಗಳನ್ನು ಒಂದೆಡೆ ಸೇರಿಸಿ ಮುಕ್ತ ಚರ್ಚೆ. ಚಿತ್ರ ಚೆನ್ನಾಗಿದೆ ಮತ್ತು ಚೆನ್ನಾಗಿಲ್ಲ ಎಂಬುದರ ಆಚೆ ನಮ್ಮ ಗ್ರಹಿಕೆ/ಕಲಿಕೆಗಳು ವಿಸ್ತರಿಸಬೇಕೆಂಬುದು ಅಧ್ಯಯನ ಶಿಬಿರದ ಮೂಲ ಆಶಯ. ಸಂಪನ್ಮೂಲ ವ್ಯಕ್ತಿಗಳು ಟಿ ಎಸ್ ನಾಗಾಭರಣ, ಚಿತ್ರ ನಿರ್ದೇಶಕರು ಕೆ ಎಂ ಚೈತನ್ಯ, ಚಿತ್ರ ನಿರ್ದೇಶಕರು ನಟರಾಜ್ ಹೊನ್ನವಳ್ಳಿ, ಹಿರಿಯ ರಂಗ ನಿರ್ದೇಶಕರು ಮತ್ತು ಇತರೆ ಹಲವು ತಜ್ಞರು ಶಿಬಿರದ ಆರಂಭ ? ಮೇ ೪ರ ಶುಕ್ರವಾರ ಸಂಜೆ ೪ಕ್ಕೆ ಮುಗಿಯೋದು? ಮೇ ೬ರ ಭಾನುವಾರ ಸಂಜೆ ೪ಕ್ಕೆ ಶಿಬಿರದ ಸ್ಥಳ? ನಂದಿ ಫಾರ್ಮ್, ತೋವಿನಕೆರೆ-ದಬ್ಬೆಘಟ್ಟ ರಸ್ತೆ, ತುಮಕೂರಿನ ತೋವಿನಕೆರೆಯಿಂದ ೫ ಕಿ.ಮಿ ದಾರಿ. ತೋವಿನಕೆರೆವರೆಗೂ ಬಂದರೆ ಅಲ್ಲಿಂದ ನಾವು ನಿಮ್ಮನ್ನ ಬರ ಮಾಡಿಕೊಳ್ಳುತ್ತೇವೆ. ಶಿಬಿರಕ್ಕೆ ನೊಂದಾಯಿಸುವುದು ಕಡ್ಡಾಯ. ನೊಂದಾಯಿಸುವುದು ಹೇಗೆ? ಸಂಪರ್ಕಿಸಿ: 99004 39930 / 97317 55966 ಈ ಮೇಲ್ ಮಾಡಿ [email protected], [email protected] visit us on Facebook: http://www.facebook.com/samvaada]]>

‍ಲೇಖಕರು G

April 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಿಜಯಕುಮಾರ್ ಹೂಗಾರ್

    ಮಾಹಿತಿಗೆ ತುಂಬಾ ಧನ್ಯವಾದಗಳು…:-)

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ವಿಜಯಕುಮಾರ್ ಹೂಗಾರ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: