ಸಿನೆಮಾ ಎ೦ಬ ಮಾಯಾಲೋಕ

ಸಿನಿಮಾ ಗ್ರಹಿಕೆಯ ಕುರಿತು..

ಹೇಮಾ ಪವಾರ್

ಭೂತಕನ್ನಡಿ

ಬರವಣಿಗೆ ನಾನು ಇತ್ತೀಚೆಗೆ ಅಂದರೆ ಸುಮಾರು ನಾಲ್ಕು ವರ್ಷದಿಂದ ಕಂಡುಕೊಂಡ ಅಭಿವ್ಯಕ್ತಿ ಮಾರ್ಗ. ಬರವಣಿಗೆಯನ್ನು ಪ್ರಾರಂಭಿಸಿದಾಗ ನನ್ನಲ್ಲಿ ಬದಲಾಗಿದ್ದು ನಾನು ಓದುತ್ತಿದ್ದ ರೀತಿ. ವಿಷಯ, ವಸ್ತು ನಿಷ್ಠತೆ, ಬರಹದಲ್ಲಿ ವ್ಯಕ್ತವಾಗುತ್ತಿರುವ ಭಾವ ಇವೆಲ್ಲದರ ಸೂಕ್ಷ್ಮ ಒಳಹುಗಳು ಅರಿವಿಗೆ ಬರ ತೊಡಗಿದ್ದು ಬರವಣಿಗೆಯಿಂದ ನನಗಾದ ಅತಿ ಹೆಚ್ಚಿನ ಉಪಯೋಗವೆಂದೇ ಹೇಳಬೇಕು. ಬರವಣಿಗೆಗೆ ತೊಡಗಲು ಮುಂಚೆ ಇದ್ದ ಮುಗ್ಧತೆ ಈಗಿಲ್ಲ ಅಥವಾ ಬರವಣಿಗೆಗೆ ತೊಡಗಿದ ಮೇಲೆ ಓದು ಹೆಚ್ಚು ಗಂಭೀರವಾಗಿದೆ ಎನ್ನಬಹುದು. ಬದಲಾದ ನನ್ನ ಓದಿನ ರೀತಿ ನಾನು ಓದುತ್ತಿದ್ದ ವಿಷಯಗಳ ಬದಲಾವಣೆಗೂ ಕಾರಣವಾಗಿದೆ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಸಿನಿಮಾ ನೋಡುವ ನನ್ನ ಇತ್ತೀಚಿನ ಹವ್ಯಾಸದಲ್ಲೂ ಕೂಡ ನಾನು ಈ ತರಹದ್ದೆ ಅನುಭವವನ್ನು ಪಡೆಯತೊಡಗಿದ್ದೇನೆ. ಸಿನಿಮಾಗಳನ್ನು ವೀಕ್ಷಿಸುವ, ಅದನ್ನು ಆಳವಾಗಿ ಗ್ರಹಿಸುವ, ಕಲಿಕೆಯ ಮಾರ್ಗವನ್ನಾಗಿಸುವ ಬಗ್ಗೆ ಇತ್ತೀಚಿನ ಪರಿಚಯಗಳಿಂದ ಹೆಚ್ಚಿಗೆ ಕೇಳುತ್ತಿರುವೆನಾದ್ದರಿಂದ ಬೇರೆ ಬೇರೆ ಭಾಷೆಯ, ದೇಶದ ಹಲವು ಸಿನಿಮಾಗಳ ನೋಡುವಿಕೆಗೆ ಉತ್ತೇಜಿಸುತ್ತಲಿದೆ. ಬರೆದು ಮುಗಿದ ಮೇಲೆ ಲೇಖಕರನ್ನು ಹೊರಗಿಟ್ಟು ಹೇಗೆ ವಿಶಿಷ್ಟ ಬರಹವೊಂದು ತನ್ನದೇ ಆದ ವಿವಿಧ ಅರ್ಥಗಳನ್ನು ಪಡೆದುಕೊಳ್ಳುತ್ತದೋ, ಸಿನಿಮೀಯ ಪರಿಭಾಷೆಯನ್ನು, ಒಳನೋಟಗಳನ್ನು, ಕಲ್ಪನೆಯನ್ನೂ ಒಳಗೊಂಡ ಸಿನಿಮಾ ಕೂಡ ಅಂತಹದ್ದೇ ಅನುಭವವನ್ನು ಕೊಡತೊಡಗುತ್ತದೆ ಎಂಬ ಮಾತಿನ ಅನುಭವವಾಗುತ್ತಿದೆ. Speaking of Films ಎಂಬ ಪುಸ್ತಕದಲ್ಲಿ ಸತ್ಯಜಿತ್ ರೇ ಹೇಳಿದ ಒಂದು ಮಾತಿದೆ; “…it is true that serious, accomplished films – films which use the language of cinema with insight and imagination – challenge our sensibilities in the same way as the more rarefied forms of music, painting and literature.” ಸಿನಿಮಾ ಒಂದು ಕಲೆಯ ಮಾಧ್ಯಮ. ಸಂಗೀತ, ಚಿತ್ರಕಲೆ, ಸಾಹಿತ್ಯ ಕಲೆಯ ಮಾಧ್ಯಮಗಳಾದರೆ ಸಿನಿಮಾ ಈ ಮೂರನ್ನು ಹೊಂದಿರುವ ನಮ್ಮ ಸಂವೇದನಶೀಲತೆಯನ್ನು ಪರೀಕ್ಷಿಸುವ ಸಂಕೀರ್ಣ ಕಲೆಯ ಮಾಧ್ಯಮ, ಎಂದು ಮುಂದುವರೆದು ಸತ್ಯಜಿತ್ ರೇ ಬರೆಯುತ್ತಾರೆ. ಓದು ನನಗೆ ಹವ್ಯಾಸವಾಗುವ ಮುಂಚಿನಿಂದ ನಾನು ಸಿನಿಮಾ ನೋಡುತ್ತಿರುವೆ. ಆದರೆ ಅದನ್ನೊಂದು ಕಲಿಕೆಯ ರೀತಿಯಿಂದ, structured study ಎಂಬಂತೆ ಅಲ್ಲ ಎನ್ನುವುದು ತಿಳಿದದ್ದೇ. ಸಿನಿಮಾ ಗ್ರಹಿಕೆಯು ಓದಿಗಿಂತ complicated ಆದದ್ದು ಎಂದು ನನಗನ್ನಿಸುತ್ತಿದೆ. ಓದು ನಮ್ಮಲ್ಲಿ ಕಲ್ಪನೆಯ ಸ್ವಾತಂತ್ರ್ಯವನ್ನು ಉಳಿಸುತ್ತದೆ. ಆದರೆ ಸಿನಿಮಾದಲ್ಲಿ ನಾವು ಕಲ್ಪಿಸಿಕೊಳ್ಳುವ ಅವಕಾಶವಿರುವುದಿಲ್ಲ. ಸಾಹಿತ್ಯದಂತೆ ಸಿನಿಮಾ ಕೂಡ ಒಂದು ಕಾಲಘಟ್ಟದ ಸಂಸ್ಕೃತಿಯನ್ನು, ಜೀವನ ಶೈಲಿಯನ್ನು ಯಥಾವತ್ತಾಗಿ ಕಟ್ಟಿಕೊಡುವುದಕ್ಕೆ ಸಾಧ್ಯ, ಪ್ರಾಯಶಃ ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲದು, ಆದರೆ ಅದನ್ನು ಗುರುತಿಸುವ, ಅರ್ಥಮಾಡಿಕೊಳ್ಳುವ ರೀತಿ ಅಷ್ಟು ಸುಲಭಕ್ಕೆ ಒಲಿಯುವಂತದ್ದಲ್ಲ. ಹಾಗಾಗಿ ಈ ಕುರಿತು ಹೆಚ್ಚಿನದೇನನ್ನು ಬರೆಯುವಷ್ಟು ತಿಳಿದಿಲ್ಲವಾದರೂ, ರಾಶೋಮನ್, ಪಥೇರ್ ಪಾಂಚಾಲಿ, ಒಂದಾನೊಂದು ಕಾಲದಲ್ಲಿ, ದ್ವೀಪ ಇತ್ಯಾದಿ ಸಿನಿಮಾಗಳಿಗೂ, ’ಕಮರ್ಷಿಯಲ್’ ಎಂಬ ಹಣೆಪಟ್ಟಿಯಡಿ ವರ್ಗೀಕರಿಸಲಾದ ಇತರ ಜನಪ್ರಿಯ ಸಿನಿಮಾಗಳಿಗೂ ಇರಬಹುದಾದ ವ್ಯತ್ಯಾಸವನ್ನು ಗ್ರಹಿಸುವಲ್ಲಿ, ಅದರ ಅಗತ್ಯತೆಯೇನು ಎಂದು ತಿಳಿಯುವಲ್ಲಿ ಇತ್ತೀಚೆಗೆ ನಾನು ನೋಡಿದ ಸಿನಿಮಾಗಳು ಸಹಾಯ ಮಾಡುತ್ತಿವೆ. ಸಿನಿಮಾ ನೋಡುವ ರೀತಿಯನ್ನು ಕುರಿತು ಕಲಿಯುತ್ತಿದ್ದೇನೆ ಎಂದು ಹೇಳಿದೆನಷ್ಟೇ, ಮೊನ್ನೆ ಸಂವಾದ ತಂಡ ಆಯೋಜಿಸಿದ್ದ ಮಜಿದ್ ಮಜಿದಿ ಎಂಬ ಇರಾನಿ ನಿರ್ದೇಶಕನ ’ಬರನ್’ ಸಿನಿಮಾ ವೀಕ್ಷಣೆ ಮತ್ತು ಚರ್ಚೆಯಲ್ಲಿ ಒಂದು ಮಾತು ಬಂದಿತು. ’ಸಿನಿಮಾ ಹೇಗಿದೆ ಎಂದು ಹೇಳಲು, ವ್ಯಕ್ತಿಯೊಬ್ಬನ ಸಾಂಸ್ಕೃತಿಕ ಹಿನ್ನೆಲೆ (cultural background) ಕೂಡ ಮುಖ್ಯವಾಗುತ್ತದೆ’ ಎಂದು. ಸಿನಿಮಾ ಒಂದನ್ನು, ಅದು ತಯಾರಿಸಲ್ಪಟ್ಟ ಕಾಲ, ಅಲ್ಲಿನ ರಾಜಕೀಯ ಹಿನ್ನೆಲೆ, ಸಂಸ್ಕೃತಿಯ ವಿವರಗಳನ್ನೊಳಗೊಂಡು ಅರ್ಥ ಮಾಡಿಕೊಳ್ಳುವುದಕ್ಕೂ, ವೈಯಕ್ತಿಕವಾಗಿ ಅಥವಾ ನಮಗೆ ಲಭ್ಯವಿರುವ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ವಿಪರೀತ ವ್ಯತ್ಯಾಸವಿದೆ ಎಂಬುವಂತದ್ದು. ಇದಕ್ಕೇ ತಳಕು ಹಾಕಿಕೊಂಡಂತೇ ಸಾಹಿತ್ಯದ ಬಗ್ಗೆ ಲಂಕೇಶರ ಟೀಕೆ ಟಿಪ್ಪಣಿಯಲ್ಲಿ ಒಂದು ಮಾತಿದೆ, ಲಂಕೇಶರಿಗೊಮ್ಮೆ ಯಾರೋ ಅಂದರಂತೆ ’ನಿಮ್ಮ ಗದ್ಯ ತುಂಬಾ ಚೆನ್ನಾಗಿದೆ’ ಎಂದು. ಅದಕ್ಕೆ ಲಂಕೇಶರು ಹೇಳುತ್ತಾರೆ ’ಇಲ್ಲ, ಗದ್ಯ ತಾನೇ ತಾನಾಗಿ ಚೆನ್ನಾಗಿರೋಲ್ಲ, ನೀವು, ನಿಮ್ಮ ಅನುಭವ ಚೆನ್ನಾಗಿ ’structured’ ಆಗಿದ್ದು, ನಿಮ್ಮ ಪಂಚೇಂದ್ರಿಯಗಳು ಸರಿ ಇದ್ದರೆ ಮಾತ್ರ ಗದ್ಯ ಚೆನ್ನಾಗಿರುತ್ತೆ!’ ಸಿನಿಮಾ ನೋಡುವ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಳುತ್ತಾ, ಸಾಹಿತ್ಯದೊಂದಿಗೆ ಅದನ್ನು ತಳಕು ಹಾಕುತ್ತ, ನಾನು ಇಲ್ಲಿಯವರೆಗೆ ನೋಡಿದ ಸಿನಿಮಾಗಳ ಮೆಲುಕು ಈಗೀಗ ಹೊಮ್ಮಿಸುತ್ತಿರುವ ಬೇರೆಯದೇ ಅರ್ಥಕ್ಕೆ ಬೆರಗಾಗುತ್ತಿದ್ದೇನೆ!!]]>

‍ಲೇಖಕರು G

May 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇನ್ನೂ ಎಷ್ಟು ದಿನ?

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ...

ಅಪ್ಪನ ಪದಕೋಶದಲಿ..

ಅಪ್ಪನ ಪದಕೋಶದಲಿ..

ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ ಅಪ್ಪನ ಏಟುಗಳನ್ನು ಲೆಕ್ಕವಿಡುವ ಅಗತ್ಯವೇ ಇಲ್ಲ ಒಂದು ಏಟೂ ಕೊಟ್ಟ ಚಿಕ್ಕ ನೆನಪೂ ನನಗಿಲ್ಲ ಆದರೆ...

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ - ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ' ದೇಶ- ದೇಹ- ಮನಸ್ಸುಗಳ' ಕತೆ . ನಿಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This