’ಸೀತಾರಾ೦ ಸಾರ್….’ – ಓದುಗರು ಬರೆಯುತ್ತಾರೆ

’ಮುಕ್ತ ಮುಕ್ತ ಮುಗಿಯುತ್ತಿದೆ’, ಮು೦ದೇನು ಎನ್ನುವ ಲೇಖನ ನಿನ್ನೆ ಅವಧಿಯಲ್ಲಿ ಪ್ರಕಟವಾಗಿತ್ತು.   ’ಮು೦ದೇನು’ ಎನ್ನುವ ಪ್ರಶ್ನೆಗೆ ಸಹೃದಯ ಪ್ರೇಕ್ಷಕರು ಸ್ಪ೦ದಿಸಿದ ರೀತಿ ಟಿ ಎನ್ ಸೀತಾರಾ೦ ಅವರ ಧಾರಾವಾಹಿಗಳ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಆ ಸ್ಪ೦ದನೆಗಳಲ್ಲಿ ಕೆಲವು ಇಲ್ಲಿವೆ.  ’ಮುಕ್ತ ಮುಕ್ತ ಮುಗಿಯುತ್ತಿದೆ’ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ : ಪ್ರಕಾಶ್ ಹೆಗ್ಡೆ : ಧಾರಾವಾಹಿಗಳು ಅಂದರೆ… ಮೆಗಾ ಧಾರವಾಹಿಗಳೇ ಯಾಕಿರಬೇಕು….? ಕನ್ನಡದ ಸಣ್ಣ ಕಥೆಗಳ ಧಾರವಾಹಿ ಮಾಡಿದರೆ ಹೇಗೆ?… ಒಂದು ಅಥವಾ… ಎರಡು.., ಮೂರು ಕಂತುಗಳಲ್ಲಿ ಮುಗಿದು ಹೋಗುವಂಥಹ ಕಥೆಗಳು…. ಕನ್ನಡದಲ್ಲಿ… ತುಂಬಾ ಒಳ್ಳೆಯ ಸಣ್ಣ ಕಥೆಗಳಿವೆ… ಅದು ಪತ್ರಿಕೆ ಓದದ ಜನರಿಗೂ ಪರಿಚಯವಾದಂತಾಗುತ್ತವೆ… ಮತ್ತು ಪುಸ್ತಕ ಓದುವ ಗೀಳು ಜಾಸ್ತಿಯಾಗ ಬಹುದು…. ಸೀತಾರಾಮ್ ಸರ್… ಸಣ್ಣ ಕಥೆಗಳು ಸಹಜ ಬದುಕಿಗೆ ಹತ್ತಿರ ಇರುತ್ತವೆ…. ಕುಟುಂಬ .., ಸಮಾಜದ ಬಾಂಧವ್ಯಗಳನ್ನು ಬೆಸೆಯುವಂಥಹ ಕೆಲಸ ಮಾಡುತ್ತವೆ… ದಯವಿಟ್ಟು… ದಯವಿಟ್ಟು ಮತ್ತೊಮ್ಮೆ ನಮ್ಮ ವಿನಂತಿಯನ್ನು ವಿಚಾರ ಮಾಡಿ…. ಸುಧೀಂದ್ರ ಹಾಲ್ದೊಡ್ಡೇರಿ : ನನ್ನ ಆರ್ಡರ್ ಆಫ್ ಪ್ರಿಫರೆನ್ಸ್ ೧. ನಿಮ್ಮ ಆತ್ಮಕತೆ ೨. ಮರ್ಡರ್ ಮಿಸ್ಟರಿ ವಿತ್ ಕೋರ್ಟ್ ರೂಂ ಚಲನ ಚಿತ್ರ ೩. ಮತ್ತೊಂದು ಸೀರಿಯಲ್ – ಕ್ರೈಂ ಜೀನರ್ ಯಾವುದೂ ಬೇಡ ಎಂದು ಸುಮ್ಮನೆ ಕೂಡುವುದಕ್ಕೆ ನನ್ನಂಥವರು ಇದ್ದೀವಿ, ಆ ಕೆಲಸ ನಮಗೆ ಬಿಡಿ, ನಮ್ಮೊಂದಿಗೆ ಕಾಂಪೀಟ್ ಮಾಡಬೇಡಿ. ಕಾವ್ಯಾ ಕಡಮೆ : ಸೀರಿಯಲ್ ಆಪ್ಶನ್ ಬೆಟರ್ ಅನ್ನಿಸ್ತದೆ.ನಿಮ್ಮ ಸೀರಿಯಲ್ ಗಳು ಅಂದ್ರೆ ಊಟ ನಿದ್ದೆ ಗಳ ಸಮಯವನ್ನೇ ಚೇಂಜ್ ಮಾಡಿಕೊಳ್ಳುತ್ತೇವೆ ಬೇಕಾದರೆ. ಮುಕ್ತ ಮುಕ್ತ ಮುಗಿದರೆ ನನಗಂತೂ ರಾತ್ರಿ ಊಟದ ಜೊತೆಗೆ ಏನೋ ಒಂದು ‘ಡೆಲೀಶಿಯಸ್’ ಮಿಸ್ ಆದ ಹಾಗೆ. ನಿಮ್ಮ ಪಾತ್ರಗಳ ಸೆಲೆಕ್ಶನ್, ಕ್ಯಾರೆಕ್ಟರೈಸೇಶನ್ ನ್ನೇ ಹಾಗಿರುತ್ತದೆ. ಕ್ಲಾಸಿನಲ್ಲಿ ಮೇಷ್ಟ್ರು ಕೂಡ ಸೀರಿಯಲ್ ನೋಡುವಂತೆ ಸಜೆಸ್ಟ್ ಮಾಡುವಷ್ಟು ಪ್ರಬುದ್ಧವಾಗಿರ್ತದೆ ಎಲ್ಲ. ಸೀರಿಯಲ್ ಜೊತೆ ಜೊತೆಗೆ ಆತ್ಮಕತೆಯನ್ನೂ ಬರೆಯಬಹುದು:)]]>

‍ಲೇಖಕರು G

May 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

4 ಪ್ರತಿಕ್ರಿಯೆಗಳು

 1. Mallikarjuna Hosapalya

  ನಾನು ನೋಡುವುದೇ ಮುಕ್ತ . . ಧಾರಾವಾಹಿ. ಆದರೆ ನಿನ್ನೆಯ ಎಪಿಸೋಡ್ ನಲ್ಲಿ ಅಮ್ಮ ಮಗನ ಸಂಭಾಷಣೆ ಎಷ್ಟು ಕೃತಕವಾಗಿತ್ತೆಂದರೆ ಧಾರಾವಾಹಿ ಮೇಲೆ ಸೀತಾರಾಮ್ ರವರ ಹಿಡಿತವೇ ಇಲ್ಲವೇನೋ ಅನ್ನಿಸಿತು. ಬೇಗ ಮುಗಿಸಿದರೆ ಒಳ್ಳೆಯದು. ಮುಂದೆ ತಮ್ಮ ಮಾನಸಿಕ ಸಿದ್ಧತೆ, ಆರ್ಥಿಕ ಅನುಕೂಲಗಳಿಗನುಗುಣವಾಗಿ ಒಳ್ಳೆಯದು ಏನು ಮಾಡಿದರೂ ಸರಿಯೇ.

  ಪ್ರತಿಕ್ರಿಯೆ
 2. armanikanth

  ಹಿರಿಯರಾದ ಸೀತಾರಾಮ್ ಅವರೇ,
  ಒಂದು ಪುಟ್ಟ ಸಲಹೆ.
  ೫ ದಿನದಲ್ಲಿ ಮುಗಿದು ಹೋಗುವಂಥ ಚಿಕ್ಕ ಚಿಕ್ಕ ಧಾರಾವಾಹಿಗಳನ್ನು ಯಾಕೆ ಮಾಡಬಾರದು?
  ಚಾನೆಲ್ ಗಳು ಕೊಡುವ ಸಮಯ ಸೋಮವಾರ ದಿಂದ ಶುಕ್ರವಾರ..ತಾನೆ? ಈ ೫ ದಿನದಲ್ಲಿ ಮುಗಿಯುವಂಥ ಒಂದು ಕಥೆ…ಅದು ಮಾಸ್ತಿ ಅವರಂಥ ದೊಡ್ದವರಡೂ ಆಗಲಿ..ಹಾಗೆಯೇ ಚಿಕ್ಕವರಿಗೂ ಅವಕಾಶ ಸಿಕ್ಕಲಿ..ಸೀರಿಯಲ್ ಗಳಿಗೆ ಕಥೆ ಬರೆಯುವ ಅವಕಾಶವನ್ನು ಯುವಕರಿಗೆ ಕೊಡಿ…ನಿಮ್ಮ ಸೀರಿಯಲ್ ನೆಪದಲ್ಲಿ ೧೦ ಜನ ಹೊಸ ಕಥೆಗಾರರು ಹುಟ್ಟಿಕೊಳ್ಳಲಿ…

  ಪ್ರತಿಕ್ರಿಯೆ
 3. sritri

  ಮೊನ್ನೆಮೊನ್ನೆ ಪ್ರಸಾರವಾದ `ಮುಕ್ತಮುಕ್ತ ‘ಕಂತೊಂದರಲ್ಲಿ, ಬುಕರ್ ಪ್ರಶಸ್ತಿ ವಿಜೇತ ಲೇಖಕ ವಿದೇಶದಿಂದ ಫೋನಿನಲ್ಲಿ ಮಾತಾಡ್ತಿರ್ತಾನೆ. ಆದರೆ ಅವನ ಹಿಂದೆ, ಕರ್ನಾಟಕದ ಹಳ್ಳಿಯೊಂದರ ಭಾವನೆ ಬರಿಸುವಂತೆ, ಹಂಚಿನ ಮನೆಗಳು(ಕಣ್ಣಿಗೆ ರಾಚುವಂತೆ) ಕಾಣುತ್ತಿರುತ್ತವೆ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ಲಾಜಿಕ್ಕನ್ನು, ಇಂತಹ ಸೂಕ್ಷ್ಮಗಳನ್ನು ಗಮನಿಸುವುದೇ ತಪ್ಪು ಎಂದು ನನಗೆ ಗೊತ್ತಿದೆ. ಆದರೂ, ಸೀತಾರಾಂ ಅವರಂತಹ ಭರವಸೆ ನಿರ್ದೇಶಕರ ಧಾರಾವಾಹಿಗಳಲ್ಲಿ, ಇಂತಹ ಎದ್ದುಕಾಣುವ ತಪ್ಪುಗಳು ಇರಬಾರದು ಎಂಬುದು ಅವರ -ಎಲ್ಲಾ ಧಾರಾವಾಹಿ, ಸಿನಿಮಾಗಳನ್ನು ನೋಡುತ್ತಾ ಬಂದಿರುವ, ಅವರ ಉತ್ಕಟ ಅಭಿಮಾನಿಯಾಗಿರುವ ನನ್ನ ನಿರೀಕ್ಷೆ. ಸೀತಾರಾಂ ಅವರನ್ನು ದೂರುವುದು ಖಂಡಿತ ನನ್ನ ಉದ್ದೇಶವಲ್ಲ, ನನ್ನ ಅಚ್ಚುಮೆಚ್ಚಿನ ನಿರ್ದೇಶಕರಿಗೆ ನನ್ನ ಮಾತು ನೇರವಾಗಿ ತಲುಪೀತೆಂದು ಇಲ್ಲಿ ಹೇಳಿದ್ದೇನೆ; ಅಷ್ಟೆ!

  ಪ್ರತಿಕ್ರಿಯೆ
 4. Vijaykumar Hugar

  ನೆಚ್ಚಿನ T N ಸೀತಾರಾಂ ಅವರಿಗೆ,
  ಮೂರು ಚಿತ್ರಗಳ Option ಕೊಟ್ಟಿದ್ದಿರಾ ತುಂಬಾ ಸಂತೋಷ….
  ನೀವು ಯಾವುದೇ ಚಿತ್ರ ಮಾಡ ಹೊರಟರು commercial ಅಂಶ ಮುಂದೆ ಇಟ್ಟು ಸಿನಿಮಾ ಮಾಡಬೇಕೆಂದು ನನ್ನ ನಮ್ರ ಸಲಹೆ.
  ಏಕೆಂದರೆ ಪ್ರತಿ ಶುಕ್ರವಾರ ಸಿನಿಮಾ ಥಿಯೇಟರ್ ಯಿಂದ ಸಪ್ಪೆ ಮುಖ ಮಾಡಿ ಹೊರಬಂದು,ಕನ್ನಡ ಚಿತ್ರಕ್ಕಿಂತ ಬೇರೆ ಭಾಷೆ ಚಿತ್ರಗಳೇ ಭೇಷ್ ಎನ್ನುವ ಗೆಳೆಯರ ಮಾತಿಗೆ ತಲೆ ತಗ್ಗಿಸಿ ಕುಳಿತು ಕೊಳ್ಳುವ ಪರಿಸ್ಥಿತಿ ಒದಗಿ ಬಂದಿದೆ.
  ಅದಕ್ಕೆ ದಯವಿಟ್ಟು ಒಬ್ಬ ಬರಗೆಟ್ಟ ವಿಕ್ಷಕನಾಗಿ ಸಿನಿಮಾ ನಿರ್ದೇಶಿಸಿ.ನೀವು ನಿಮ್ಮ ಚಿತ್ರಕ್ಕೆ commercial ಸ್ಪರ್ಶ ನೀಡಿದರೆ ಮಾತ್ರ ಎಲ್ಲ ತರಹದ ವಿಕ್ಷಕ ಬಳಗವನ್ನು ಚಿತ್ರಮಂದಿರಕ್ಕೆ ಸೆಳೆಯಬಹುದು.
  ಅದಕ್ಕೆ ಒಳ್ಳೆ ಉದಾಹರಣೆ ಎಂದರೆ ‘ಪುಟ್ಟಕ್ಕನ ಹೈ ವೇ’ ಚಿತ್ರ.’ಪುಟ್ಟಕ್ಕನ ಹೈ ವೇ’ ಅದೆಷ್ಟೇ ಒಳ್ಳೆಯ ಕಥೆಯುಳ್ಳ ಚಿತ್ರವಿದ್ದರು commercial ಅಂಶ ಇರದೇ ಇರುವದರಿಂದ ಚಿತ್ರ ಎಲ್ಲರಿಗು ತಲಪುವಲ್ಲಿ ವಿಫಲವಾಯಿತು.
  ಕನ್ನಡದಲ್ಲಿ ಇತ್ತೀಚಿಗೆ ಒಳ್ಳೆ ಚಿತ್ರ ಬರುವದು ದೂರದ ಮಾತು,ಒಳ್ಳೆಯ ವ್ಯಾಕರಣ ಇರುವ ಚಿತ್ರ ಕೂಡ ಬರದೆ ಇರುವದು ವಿಷಾದಕರ ಸಂಗತಿ.ಯಾವುದೇ logic ಕೂಡ ಇರದ ಚಿತ್ರಕಥೆಗಳನ್ನ ನೋಡುವ ಸ್ಥಿತಿ ಬಂದಿದೆ.
  ಕನ್ನಡದ ಅದೆಷ್ಟೋ ಒಳ್ಳೆ ಕಥೆಯುಳ್ಳ ಚಿತ್ರಗಳು ಗೊತ್ತು ಗುರಿಯಿಲ್ಲದೆ ಕೂಡ ಮರೆಯಾಗಿವೆ.
  ಕಾರಣ ಇಷ್ಟೇ,
  ಕಾಲಕ್ಕೆತಕ್ಕಂತೆ ನಿರ್ದೇಶಕ update ಆಗದೆ ಇರೋದು.
  ಮಾಡುವ ಆರ್ಟ್ ತರಹದ ಚಿತ್ರಗಳು ವಿಕ್ಷಕನನ್ನ ಸಂಪೂರ್ಣವಾಗಿ ತಲುಪದೇ ಹೋದರೆ ನೀವು ಕಷ್ಟ ಪಟ್ಟಿದ್ದಕ್ಕೆ ಯಾವುದೇ ಪ್ರಯೋಜನವಿಲ್ಲ.
  ಏಕೆಂದರೆ ನಾವು ಮಾಡಿದ ಅಡುಗೆಯನ್ನ ತಿನ್ನುವರೆ ಇಲ್ಲ ಅಂದ್ರೆ ಹೇಗೆ…?
  ಕೊನೆಗೆ ಕುರಸೋವಾ ಹೇಳಿದ ಮಾತು “With a good script, a good director can produce a masterpiece. With the same script, a mediocre director can produce a passable film. But with a bad script even a good director can’t possibly make a good film”
  ಕನ್ನಡದ ನಿರ್ದೇಶಕರಿಂದ ಒಳ್ಳೆ ಕಥೆ,ಚಿತ್ರಕಥೆ ಇರುವ ಚಿತ್ರಗಳು ನಮ್ಮ ತಣಿಸಲಿ ಎಂದು ಆಶಿಸುತ್ತೇನೆ.
  ಒಬ್ಬ ಸಾಮಾನ್ಯ ವಿಕ್ಷಕನ ಮನದಿಂದ ಹೊರಬಂದಿರುವ ಮಾತುಗಳು.
  ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: