ಸುಗತ ಶ್ರೀನಿವಾಸರಾಜು ಅವರಿಗೆ ಅಭಿನಂದನೆ

ಸುಗತ ಶ್ರೀನಿವಾಸರಾಜು ‘ವಿಜಯ ಕರ್ನಾಟಕ’ ಹಾಗೂ ‘ವಿಜಯ ನೆಕ್ಸ್ಟ್’ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಸುಗತ ಶ್ರೀನಿವಾಸರಾಜು ಅವರಿಗೆ ಅಭಿನಂದನೆಗಳು. ಹೀಗಂತೆ ಅಂತ ಸುದ್ದಿ ಬಂದ ತಕ್ಷಣ ಕಣ್ಣೆದುರು ಸುಳಿದದ್ದು ಸುಗತ ಅವರ ಮುಖವಲ್ಲ. ನಮ್ಮೆಲ್ಲರ ಬೆನ್ನ ಹಿಂದಿನ ಬೆಳಕು ಚಿ ಶ್ರೀನಿವಾಸ ರಾಜು ಅವರದ್ದು. ಚಿ ಶ್ರೀನಿವಾಸರಾಜು ಅವರು ಸುಗತ ಹಾಗೂ ಋತ ಇಬ್ಬರ ಬೆನ್ನ ಹಿಂದೆ ಎಷ್ಟು ಬೆಳಕು ಚೆಲ್ಲಿದರೋ ಅದಕ್ಕಿಂತ ಒಂದು ಹಿಡಿ ಹೆಚ್ಚೇ ಈ ನಾಡಿನ ಹಲವು ಕನಸುಗಣ್ಣುಗಳ  ಹಿಂದೆ ಚೆಲ್ಲಿದರು. ಸುಗತ ಸಂಪಾದಕರು ಎಂದ ತಕ್ಷಣ ಚಿ ಶ್ರೀನಿವಾಸರಾಜು ಅವರ ಆ ತಾಯಿ ಪ್ರೀತಿ ನೆನಪಾಯಿತು. ಕನ್ನಡದ ಅತಿ ಹೆಚ್ಚು ಪ್ರಸಾರದ ಒಂದು ಪತ್ರಿಕೆಯನ್ನು ಶ್ರೀನಿವಾಸರಾಜು ಅವರು ಕಲಿಸಿಕೊಟ್ಟಿರುವ ಅದೇ ನಿಷ್ಕಲ್ಮಶ ಪ್ರೀತಿ, ಎಲ್ಲರೊಡನೆ ಮುಕ್ತವಾಗಿ ಬೆರೆಯುವ ಅದೇ ಸ್ವಭಾವ, ಒಂದು ಒಳ್ಳೆಯ ಮುನ್ನೋಟದ ಮೂಲಕ ಸುಗತ ಸಹಾ ಕನ್ನಡದ ಪತ್ರಿಕೋದ್ಯಮವನ್ನು ಬದಲಿಸಿಹಾಕುತ್ತಾರೆ ಎಂಬ ವಿಶ್ವಾಸ ನಮಗಿದೆ. ‘ಔಟ್ ಲುಕ್’ ಸಾಪ್ತಾಹಿಕದಲ್ಲಿ ವಿನೋದ್ ಮೆಹ್ತಾ ಗರಡಿಯಲ್ಲಿ ಬೆಳೆದ ಮನಸ್ಸು ಸುಗತ ಅವರದ್ದು. ಹಾಗಾಗಿ ಜನಮುಖಿಯಾಗಿ ಪತ್ರಿಕೆಯನ್ನು ರೂಪಿಸುವ, ಎದೆಗಾರಿಕೆಯಿಂದ ಒಂದು ಪತ್ರಿಕೆ ಮುನ್ನಡೆಸುವ ಗುಣ ಇವರಿಗಿದೆ. ‘ಅಂಕಣ’ ಸಾಹಿತ್ಯ ಲೋಕದಲ್ಲಿ ಒಂದು ಹೆಜ್ಜೆಗುರುತು. ಕನ್ನಡದ ಹೊಸ ತಲೆಮಾರಿನ ಬರಹಗಾರರಿಗೆ ಕ್ಯಾನ್ವಾಸ್ ಒದಗಿಸಿದ ಪತ್ರಿಕೆ. ಪಿ ಪಿ ಗೆಳೆಯರ ಬಳಗ ಈ ಪತ್ರಿಕೆ ನಡೆಸುತ್ತಿತ್ತು. ಪಿ ಪಿ ಎಂದರೆ ‘ಪೋಲಿ ಪಟಾಲಂ’ ಅಂತ . ಈ ಪೋಲಿ ಪಟಾಲಂ ಬಳಗದಲ್ಲಿದ್ದದ್ದು ಚಿ ಶ್ರೀನಿವಾಸರಾಜು, ಎಚ್ ಎಸ್ ರಾಘವೇಂದ್ರ ರಾವ್ ಹಾಗೂ ಕೆ ವಿ ನಾರಾಯಣ.  ಸುಗತ ಈ ಸಾಹಿತ್ಯಕ ಪತ್ರಿಕೆ ಅರಳುವುದನ್ನು ನೋಡುತ್ತಾ ಬೆಳೆದವರು. ಅರಳಿದವರು. ಅವರ ಪ್ರಬಂಧವೊಂದರಲ್ಲಿ  ಅವರು ಅಂಕಣ ಪತ್ರಿಕೆ ಗೆ ಅಮ್ಮ ಸ್ಟಾಂಪ್ ಹಚ್ಚಿ ಕಳಿಸಲು ಸಿದ್ಧ ಮಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ‘Little Magazine’ ಬಗ್ಗೆ ಅವರು ಬರೆದಿರುವ ಪ್ರಬಂಧ ಇನ್ನೂ  ಮನಸ್ಸಿನಲ್ಲಿ ಇಣುಕಿ ಹಾಕುತ್ತಿದೆ. ಭಾಷೆಯ ಬಗ್ಗೆ ಅವರ ತಿಳುವಳಿಕೆ, ಅವರ ಅಧ್ಯಯನ ಅವರನ್ನು ಸಮಕಾಲೀನ ಪತ್ರಕರ್ತರಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ. ‘ಎಕೂಷೆ ಫೆಬ್ರುವರಿ’ಯಿಂದ ಆರಂಭಿಸಿ ಅವರ ಇತ್ತೀಚಿನ PICKLES FROM ಹೋಂ ವರೆಗೆ ಅವರದ್ದು ಭಾಷೆಯ ಬೆನ್ನು ಹತ್ತಿ ಹೋದ ಮನಸ್ಸು. ಕನ್ನಡ ಪತ್ರಿಕೋದ್ಯಮದ ಇಂದಿನ ದಿನಗಳು ತುಂಬು ಭರವಸೆಯ ದಿನಗಳೇನಲ್ಲ. ಈ ಸಂದರ್ಭದಲ್ಲಿ, ಸಮಾಜದ ಬಗ್ಗೆ, ಇಲ್ಲಿನ ಒಳಸುಳಿಗಳ ಬಗ್ಗೆ ಎಚ್ಚರದ ಕಣ್ಣುಗಳಿರುವ  ಒಬ್ಬರು ಚುಕ್ಕಾಣಿ ಹಿಡಿದಿರುವುದು ಕನ್ನಡ ಪತ್ರಿಕೋದ್ಯಮದ ದಿಕ್ಕನ್ನು ಬದಲಿಸುತ್ತದೆ ಎಂಬ ನಂಬಿಕೆ ನಮ್ಮದು. ಆ ನಿಟ್ಟಿನಲ್ಲಿ ಸುಗತ ಶ್ರೀನಿವಾಸರಾಜು ಅವರಿಗೆ ‘ಅವಧಿ’ಯ ಶುಭ ಹಾರೈಕೆಗಳು..

]]>

‍ಲೇಖಕರು G

May 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

8 ಪ್ರತಿಕ್ರಿಯೆಗಳು

 1. ಸಂದೀಪ್ ಕಾಮತ್

  ನಂದು ಎರಡು ಬೇಡಿಕೆ ಇದೆ. ಸಮಾಜದ ಸ್ವಾಸ್ಥ್ಯ ಸುಧಾರಣೆ, ಜನ ಜಾಗೃತಿ ಮುಂತಾದುವುಗಳು ಪತ್ರಕರ್ತರ ಪ್ರಮುಖ ಕರ್ತವ್ಯ. ಇದು ಅವರಿಗೂ ಗೊತ್ತಿದೆ.
  ನನ್ನ ಬೇಡಿಕೆ ಹಾಸ್ಯಾಸ್ಪದ ಅನಿಸಬಹುದು ಆದರೆ ನಾನು ಸೀರಿಯಸ್.
  ೧. IPL Points table ಕರೆಕ್ಟ್ ಆಗಿ ಕೊಡಿ.
  ೨. ಯಾವ್ಯಾವ ಸಿನೆಮಾಗಳು ಎಲ್ಲೆಲ್ಲಿ ಪ್ರದರ್ಶನಗೊಳ್ಳುತ್ತಾ ಇದೆ ಅನ್ನೋದನ್ನು ದಯವಿಟ್ಟು ಸರಿಯಾಗಿ ಕೊಡಿ.
  Not giving information is better than giving WRONG information.
  ನಾನು ಸುಮಾರು ವಾರಗಳ ಕಾಲ ಸಿನೆಮಾ ಮಾಹಿತಿಯನ್ನು ನೋಡುತ್ತಾ ಇದ್ದೆ ವಿ.ಕ ದಲ್ಲಿ. ಪ್ರತಿ ವಾರ ಅದೇ ತಪ್ಪು ಪಟ್ಟಿ. ಒಂದು ಸಲ ಆ ತಪ್ಪು ಪಟ್ಟಿಯಿಂದಾಗಿ ಥಿಯೇಟರ್ ಗೆ ಹೋಗಿ ವಾಪಸ್ ಬರಬೇಕಾಯ್ತು ನಾನು.
  I can’t afford to buy another paper just for IPL points table and Cinema detials.
  ಆಲ್ ದಿ ಬೆಸ್ಟ್ ಸರ್.

  ಪ್ರತಿಕ್ರಿಯೆ
 2. D.RAVI VARMA

  ಸುಗತ ಶ್ರೀನಿವಾಸರಾಜು ಅವರಿಗೆ ಈ ಶುಭಗಳಿಗೆಯಲ್ಲಿ ಹೃದಯಪೂರ್ವಕ ಅಭಿನಂದನೆಗಳು. ಸರ್ ಪತ್ರಿಕೆ ಅಂದಾಕ್ಷಣ ನನಗೆ ಹಿಂದೊಮ್ಮೆ ಲಂಕೇಶರ ಹೇಳಿದ ವಾಸ್ತವ ಸತ್ಯ ನೆನಪು ಬರುತ್ತೆ ,ಕನ್ನಡ ಸಾಹಿತ್ಯಪರಿಷತ್ ಒಮ್ಮೆ ಕನ್ನಡ ಹಲವು ಚಿಂತಕರನ್ನು ಹಲವು ಪ್ರಸ್ನೆ ಕೇಳಿತ್ತು. ಪತ್ರಿಕೋದ್ಯಮದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಇನ್ನು ಪ್ರಶ್ನೆಗೆ ಲಂಕೇಶರು ” ಧಣಿ ಕರೆಯುವುದಕ್ಕಿಂತಾ ಮುಂಚೆಯೇ ಅವನ ಕಾಲೊತ್ತುವ ಜನ ನಾವು ,ಇಲ್ಲಿ ಪತ್ರಿಕೊದ್ಯೋಗಿಗಳಿಂದ ವಾಸ್ತವ ಕಂದ್ದೀತೆಂದು ಬಯಸಿದರೆ ಅಂಥವನು ಒಬ್ಬ ಹುಚ್ಹ ಅಸ್ಟೆ” ಎಂದು ಹೇಳಿದ್ದರು ಆಗಿನ್ನೂ ಅವರು ಲಂಕೇಶ್ ಪತ್ರಿಕೆ ಪ್ರಾರಮ್ಬಿಸಿರಲಿಲ್ಲ, ದೇವನೂರ ಮಹಾದೇವರು “ನಮ್ಮ ಜನರ ತಲೆಯಲ್ಲಿ ಮೆದುಳಿಲ್ಲ.ಕಕ್ಕಸು ತುಂಬಿದೆ ” ಎಂದು ಉತ್ತರಿಸಿದ್ದರು . ಅದೇಕೋ ನೆನಪು ಬಂತು ಹಾಗೆ ಮೆಲಕು ಹಾಕಿದೆ, ಆನಂತರ ಲಂಕೇಶ್ ಪ್ರಜಾವಾಣಿಯಿಂದ ಹೊರಬಂದು ಪತ್ರಿಕೆ ಪ್ರ್ರರಮ್ಬಿಸಿ ಅದನ್ನು ಒಂದು ಸಾಂಸ್ಕೃತಿಕ ಚಳುವಳಿಯಾಗಿ ರೂಪಿಸಿದ್ದು ಹಲವು ಏಳು ಬೀಳು ಗಳ ಮದ್ಯೆಯೂ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಮೈಲಿ ಗಲ್ಲಾದದ್ದು ಎಲ್ಲ ಇತಿಹಾಸ ಪಟ್ಟಿ ಸೇರಿವೆ ಈ ಮನ್ವಂತರ ಸಮಯದಲ್ಲಿ ನೀವು ಈ ಪತ್ರಿಕೆಗಳನ್ನು ಜನರ ಒಡಳದ್ವಾನಿಯಾಗಿ, ಅದು ನಮ್ಮ ಸಮಾಜದ ಬದುಕಿನ ಪ್ರತಿಬಿಂಬವಾಗಿ ರೂಪಿಸುತ್ತೀರೆಂದು …………
  ನಿಮ್ಮ ಈ ಕಡ್ಗದಮೇಲೆ ನಡೆಯುವ ಕೆಲಸಕ್ಕೆ ಹೃದಯಪೂರ್ವಕ ಶುಭಾಶಯ ತಿಳಿಸುತ್ತೇನೆ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 3. ಕೆ.ಈ.ಸಿದ್ದಯ್ಯ

  ಸುಗತ ಅವರ ನೆಪದಲ್ಲಿ ಯುವ ಬರಹಗಾರರ ಸ್ಪೂರ್ತಿಯಾಗಿದ್ದ ಸಾಹಿತಿ ಪ್ರೊ. ಚಿ.ಶ್ರೀನಿವಾಸ ರಾಜು ನೆನಪಿಸಿದ್ದಕ್ಕೆ ಧನ್ಯವಾದಗಳು. ಕ್ರೈಸ್ಟ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಎಂ.ಎ. ವ್ಯಾಸಂಗ ಮಾಡುತ್ತಿದ್ದ ನಮಗೂ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಕಾರಂತರ ಮರಳಿ ಮಣ್ಣಿಗೆ ಕಾದಂಬರಿ ಅವರು ತೆಗೆದುಕೊಳ್ಳುತ್ತಿದ್ದ ವಿಷಯ. ಕಡಲ ತೀರದ ಬದುಕು, ಜೀವನ ಕ್ರಮ, ಉರುವಲಿಗಾಗಿ ಕಡಲಿಗೆ ಇಳಿದು ಹೋರಾಟ ನಡೆಸುವುದು, ಸರಸೋತಿ-ಪಾರೋತಿಯರು ಪಡುತ್ತಿದ್ದ ಪಾಡು…ಸಂಪ್ರದಾಯವನ್ನು ಮೀರುವ, ಸಮಾಜ ಮೂರು ತಲೇಮಾರುಗಳಲ್ಲಿ ಆದ ಬದಲಾವಣೆಯನ್ನು ವಿವರಿಸುತ್ತಿದ್ದ ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಯುವ ಬರಹಗಾರರನ್ನು ಬರೆವುವಂತೆ ಪ್ರೇರೇಪಿಸುತ್ತಿದ್ದರು. ನಮ್ಮ ಹೆಗಲ ಮೇಲೆ ಕೈ ಹಾಕಿಕೊಂಡು ಸ್ವಲ್ಪ ದೂರದವರೆಗೂ ಬಂದು ಮತ್ತೆ ಬರುವುದಾಗಿ ಹೇಳಿ ತೆರಳುತ್ತಿದ್ದರು. ನಮಗೂ ಕಥೆ ಬರೆಯುವಂತೆ ಹೇಳಿ ಬರೆಸಿ ಪ್ರತಿಯೊಬ್ಬರ ಕತೆಗಳನ್ನು ನೋಡಿ ತಪ್ಪುಗಳಿದ್ದರೆ ಪ್ರೀತಿಯಿಂದಲೇ ತಿದ್ದಿ ಹೇಳುತ್ತಿದ್ದರು. ಇಂಥ ಮಹಾನ್ ಪ್ರತಿಭೆಯಾ ಪುತ್ರರಾದ ಸುಗತ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಗೆ ಪ್ರಧಾನ ಸಂಪಾದಕರಾಗಿರುವುದು ಒಳ್ಳೆಯ ಬೆಳವಣಿಗೆ. ಔಟ್ ಲುಕ್ ಪತ್ರಿಕೆಯಲ್ಲಿ ಆಗಾಗ ಬರುತ್ತಿದ್ದ ಆರ್ಟಿಕಲ್ ನೋಡುತ್ತಿದ್ದೆ. ಈಗ ವಿ.ಕ.ದಲ್ಲೂ ಅವರ ಬರಹಗಳು ಬರಲಿ. ದಿಕ್ಕು ತಪ್ಪಿದ ವ್ಯವಸ್ಥೆಗೆ ತಮ್ಮ ಲೇಖನಗಳ ಮೂಲಕ ಅಲ್ಪ ಮಟ್ಟಿನ ಚಿಕಿತ್ಸೆ ಕೊದುವರೆಂಬ ನಿರೀಕ್ಷೆಯಲ್ಲಿ………………………ಕೆ.ಈ.ಸಿದ್ದಯ್ಯ, ತುಮಕೂರು.

  ಪ್ರತಿಕ್ರಿಯೆ
 4. B Vishwanath

  Sugatha is right choice for VK. I agree with Sandip Kamat.
  Not only in VK, but most papers just don’t bother about the proper . IPL Table point /Movie timings / Train timings , they never update on daily basis.it is rediculus, just to fill the space . kind of copy & paste.

  ಪ್ರತಿಕ್ರಿಯೆ
 5. Usha P. Rai

  ಹಾರ್ದಿಕ ಅಭಿನಂದನೆಗಳು ಸುಗತ ಶ್ರೀನಿವಾಸರಾಜು ಅವರಿಗೆ. ಸನ್ಮಾನ್ಯ ಶ್ರೀನಿವಾಸರಾಜು ಹಾಗೂ ಕರ್ನಾಟಕ ಲೇಖಕಿಯರ ಸಂಘದ ನಂಟಿನಿಂದ ನೀವೂ ಸಂಘಕ್ಕೆ ಹತ್ತಿರವಾಗಿದ್ದಿರಿ. ವಿಜಯ ಕರ್ನಾಟಕ ನಿಮ್ಮ ಸಾರಥ್ಯದಲ್ಲಿ ಹೊಸ ಹೆಜ್ಜೆಗಳನ್ನು ಇಡುವುದೆನ್ನುವುದರಲ್ಲಿ ಸಂಶಯವಿಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: