ಸುಗತ ಹ್ಯಾಸ್ ಅನ್ ‘ಔಟ್ಲುಕ್’

sugata.jpgಸುಗತ ಶ್ರೀನಿವಾಸರಾಜು- ಹೆಸರೇ ಸೂಚಿಸುವಂತೆ ಅರ್ಧ ಅಪ್ಪನ ಗುಣವನ್ನೇ ಹೊತ್ತ ಹುಡುಗ. ‘ನಮ್ಮೊಡನಿಲ್ಲದೆಯೂ ನಮ್ಮೊಡನಿರುವ’ ಚಿ ಶ್ರೀನಿವಾಸರಾಜು ಅವರ ಮಗ. ಬಹುಶ ಹೀಗೆ ಪರಿಚಯಿಸುವುದು ಸರಿಯಲ್ಲವೇನೋ. ಇದನ್ನು ಶ್ರೀನಿವಾಸರಾಜು ಅವರೂ ಒಪ್ಪುತ್ತಿರಲಿಲ್ಲ. ಅಪ್ಪನ ಹೆಸರು ಬಳಸಿ ಇವರ ಯಾವ ಮಕ್ಕಳೂ ಬೆಳೆಯಲಿಲ್ಲ.

ಸುಗತ ಇಂದು ರಾಷ್ಟ್ರ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾನೆ. ಡೆಕ್ಕನ್ ಹೆರಾಲ್ಡ್, ಟೆಲಿಗ್ರಾಫ್ ಮೂಲಕ ಈಗ ಖ್ಯಾತ ಔಟ್ಲುಕ್ ವಾರಪತ್ರಿಕೆಯ ಕುಟುಂಬದ ಸದಸ್ಯ. ಪತ್ರಿಕೋದ್ಯಮ ಸಿನಿಕರ ತಾಣವಾಗುವುದು ಸುಲಭ. ಏಕೆಂದರೆ ಎಲ್ಲರೂ ತಾವೇ ಜಗತ್ತಿನ ಕೋಳಿಗಳು ಎಂದುಕೊಂಡಿರುತ್ತಾರೆ. ಹಾಗಾಗಿ ಸಂವೇದನೆಗಳು ಬೇಗ ಸಿನಿಕತನದತ್ತ ವಾಲುತ್ತವೆ. ಆದರೆ ಸುಗತ ಖಂಡಿತಾ ಭಿನ್ನ. ಈತನ ಕಳಕಳಿ ಇವರು ಹೆಕ್ಕುವ ವಿಷಯಗಳಲ್ಲೇ ಗೊತ್ತಾಗುತ್ತದೆ. ದೇಶ ವಿದೇಶಗಳನ್ನು ಸುತ್ತಿರುವ ಸುಗತನಿಗೆ ಪತ್ರಿಕೋದ್ಯಮ ಏನಾಗಿರಬೇಕು ಎನ್ನುವ ಸ್ಪಷ್ಟ ಕಲ್ಪನೆಯಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕ ‘ಅನಿಕೇತನ’ ಇಂಗ್ಲಿಷ್ ಆವೃತ್ತಿಯ ಸಂಪಾದಕರಾಗಿದ್ದ ಸುಗತ ಸಾಹಿತ್ಯಕ್ಕೂ, ಪತ್ರಿಕೆಗೂ ಅಪರೂಪದ ನೋಟಗಳನ್ನು ಕೊಟ್ಟಿದ್ದರು. ಶ್ರೀನಿವಾಸ ರಾಜು ಅವರ ಮೂಕ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ

20080303cov.jpg

ರಾಜಕುಮಾರ್ ನಿಧನ ಹೊಂದಿದಾಗ ಔಟ್ಲುಕ್ ಗಾಗಿ ಇವರು ಬರೆದ ಬರಹ ಪತ್ರಿಕೋದ್ಯಮ ಕಂಡ ಮುಖ್ಯ ಬರಹಗಳಲ್ಲೊಂದು. ಸುಗತ ಔಟ್ಲುಕ್ ನ ಬ್ಲಾಗ್ನಲ್ಲಿ ಪ್ರತೀ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ಖಂಡಿತಾ ಓದಿ. ಇಷ್ಟವಾದರೂ, ಕಷ್ಟವಾದರೂ ಅವರನ್ನು ಸಂಪರ್ಕಿಸಿ: [email protected]

‍ಲೇಖಕರು avadhi

February 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This