ಸುಚಿತ್ರಾ ಹೆಗಡೆ ಕವಿತೆ- ಹೋಳು ಹೃದಯ

ಸುಚಿತ್ರಾ ಹೆಗಡೆ

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಅದು ಬೆಂಕಿಯ ಮುಂದೆ ಚಳಿ ಕಾಸುತ್ತ
ವಿಷಣ್ಣನಾಗಿ ಕೂತು ಶೇಂಗಾ ತಿನ್ನುವದಲ್ಲ
ಅದೇ ಬೆಂಕಿ… ಚಟಪಟ ಅನ್ನುತ್ತ
ಸಿಕ್ಕಿದ್ದೆಲ್ಲ ನುಂಗಿ ನೊಣೆಯುವ
ಉರಿ ಜ್ವಾಲೆಯ ಕೆನ್ನಾಲಿಗೆ
ಮೊದಲು ಸೌದೆ ನಂತರ
ಚರ್ಮ ಮಾಂಸ ಎಲುಬು
ಒಂದೊಂದಾಗಿ ಸ್ವಾಹಾ..
ಬರೀ ಕರಕಲು…ಬಾಕಿ

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಕತ್ತಲೆ ಕೋಣೆಯಲಿ ಒಬ್ಬನೇ
ಕುಳಿತು ಬಿಕ್ಕುವದಲ್ಲ
ಅದೇ ಕಪ್ಪು ರಂಧ್ರ.. ತಳ ಕಾಣದ
ಬೆಳಕು ನುಸುಳದ ದಾರಿ ಸಿಗದ
ಮುಳುಗೇಳದ ಅಂತರಾಟಿಕೆಯ ಚೆಂಡು
ಲೆಕ್ಕವಿಲ್ಲದ ಪೆಟ್ಟುಗಳ ಕೊಟ್ಟು
ನಿನ್ನರವಿಗೆ ಬರದೇ
ನಿನ್ನ ತಿರುಳೆಲ್ಲ ಹೀರಿ
ಎಸೆದ ಎಂಜಲು ಸಿಪ್ಪೆ

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಅದು ನಾಜೂಕು ಗ್ಲಾಸಿನಲಿ
ಗುಟುಕರಿಸುವ ಪೇಯವಲ್ಲ
ಅದೇ ಗ್ಲಾಸು… ಚೂರು ಚೂರು
ಒಂದೊಂದು ತುಣುಕಲ್ಲೂ
ನಿನ್ನ ಸೋಲಿನ, ನಿನ್ನ ನೋವಿನ
ಪ್ರತಿಬಿಂಬದ ಹರಿತದಂಚುಗಳು
ಚುಚ್ಚಿ ಹರಿವ ನೆತ್ತರ ಧಾರೆ
ಅದೇ ಬೆಂಕಿಯಪ್ಪುಗೆಗೆ
ಹೆಪ್ಪುಗಟ್ಟದೇ ಕುದಿಯುತ್ತದೆ.

‍ಲೇಖಕರು Avadhi

February 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವದ ಎರಕ

ಜೀವದ ಎರಕ

ನಾ ದಿವಾಕರ ಸವೆದ ಹಾದಿಯ ಮರೆಪೊರೆದ ದಾದಿಯ ತೊರೆಎರೆದ ಹಾಲನು ಸವಿದುವಿಷ ಒಸರುವೆಯೇಕೆ ಮಗೂ; ಒಡಲ ವಾತ್ಸಲ್ಯವ ತ್ಯಜಿಸುಮಡಿಲ ಒಲುಮೆಯ...

ಜಗವನುದರದಿ ಧರಿಸಿದವಳು..

ಜಗವನುದರದಿ ಧರಿಸಿದವಳು..

ಸುಮಾ ಕಂಚೀಪಾಲ್ ಅವನದೊಂದು ಕುಡಿಹೊಟ್ಟೆಯ ಹೊಕ್ಕುಇಂಚಿಂಚಾಗಿ ಹಿಗ್ಗುತ್ತಿತ್ತು. ನಿಂತರೆ ನೆಲಕಾಣದಷ್ಟುಹಗಲು ರಾತ್ರಿಗಳುಕಳೆಯುತ್ತಿತ್ತು. ಅವಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This