ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು

ಹೊಳೆಯ ಹಾದಿ ಹಿಡಿದು

ಸೂರ್ಯಕಿರಣ್ ಜೋಯಿಸ್

ಅ೦ತರಾಳದ ಮಾತು

ಏನು ಎತ್ತ ಎಂದು ಕೇಳದೆ ಸುಮ್ಮನೆ ಹೊರಟು ಬಿಡೋಣ ಹುಣ್ಣಿಮೆಯ ಬೆಳದಿಂಗಳಿಗೋ, ಕಂಪು ಹೊತ್ತ ತಂಗಾಳಿಗೋ ಕಾಯುವುದು ಬೇಡ ಇನ್ನು – ಹಿಡಿಯುವ ಆ ಹೊಳೆಯ ಕಾಲು ದಾರಿಯ ಜಾಡು ಬಿಟ್ಟು ಚಂದಿರನಿಗೆ ಅವನ ಪಾಡು  ಹನಿವ ಮಳೆಗೆರಡು ಬೊಗಸೆ ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು ಕೊರೆವ ಚಳಿಗೆ ತೋಳ ಬಳಸು ತುಸು ದೂರದ ನಡಿಗೆಯಷ್ಟೇ – ಬೆಸೆದಿರಲಿ ಕೈಯೊಳು ಕೈ ನಿಂತಿರಲಿ ಬಾಯ ತುದಿಯಲಿ ಹೇಳಬೇಕೆಂದ ಸವಿ ನುಡಿ – ಕಣ್ಣಂಚಿನ ಮಿನುಗು ಮರೆಮಾಚುವುದು ನೋಡು ಆ ತುಂಟ ನಗೆಯನು – ಹೊಳೆಯ ದಂಡೆಯಲಿ ಎದೆಗಾತು ಕೂತಿರೆ ನೀನು ತೆರೆಗಳ ಗುಂಜನದೊಳು ರೆಪ್ಪೆ ಮುಚ್ಚಲು ನಾನು ನೆನಪಾಗಿ ಥಟ್ಟನೆ ನೀನಂದು ಮೈಮರೆಸಿದ ಹಾಡು – ಕೈಯ ಹಣೆಮುಟ್ಟಿಸಿ ನೋಟದಲ್ಲೇ ಅಹವಾಲು ಇಡುವೆನು ಅದೇ ಹಾಡನು ಆ ಮೋಹಕ ನಾದವನು ಒಲವ ಸುಧೆಯೊಳದ್ದಿ ಹರಿಯಬಿಡೆಂದು ಅವೇ ಪದಗಳಿಗೊಮ್ಮೆ ನಿನ್ನ ದನಿಯ ಜೇನು ಪೂಸಿಬಿಡೆಂದು – ಗೊತ್ತಿಲ್ಲದೇನಿಲ್ಲ ನಿನಗೆ ನಿನ್ನಾ ಹಾಡಿಗೆ ಎದೆ ಹನಿವುದು ಇನ್ನಿಲ್ಲದಂತೆ ಕಂಠ ಬಿಗಿವುದು ಮಾತು ಹೊರಡದಂತೆ – ಬೇಕಿಲ್ಲ ಅಲ್ಲವೆ ಇನ್ಯಾವ ರಸಘಳಿಗೆಯ ನಿರೀಕ್ಷೆ? ನಿನ್ನ ಹಾಡು ನನ್ನ ಮೈಮರೆವು ಕೊರಳ ಇಂಪು ಕವಿತೆಯ ಕಂಪು ಅರಳಿ ನಗುವ ಮಲ್ಲಿಗೆ ಮುಗಿಲು ಬಯಲ ತುಂಬಾ ಪ್ರೀತಿ ಹೊನಲು ಸಾಕಲ್ಲವೆ ಇಷ್ಟು ಕನಸಿನ ಜೋಳಿಗೆ ತುಂಬಿಸಲು? – ಹೊರಡೋಣ ನಡಿ ಇನ್ನು ಬಿಟ್ಟರಾಯಿತು ಕರಗುವ ಸಮಯವ ಋತುಗಳ ಪಾಲಿಗೆ ಹಂಚಿದರಾಯಿತು ಕಿರುನಗೆಯ ಹೂಗಳ ಸಾಲಿಗೆ]]>

‍ಲೇಖಕರು G

April 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸತ್ಯವು ಸುಡುತಿರುವಾಗ…

ಸತ್ಯವು ಸುಡುತಿರುವಾಗ…

ಇಮ್ತಿಯಾಜ್ ಶಿರಸಂಗಿ ರಾತ್ರೋರಾತ್ರಿ ಚಿತೆಗಳೂರಿದುಸತ್ಯವು ಸುಡುತಿರುವಾಗ... ಸತ್ತವರ ನೋವನ್ನುಪ್ರಜೆಗಳು ನೆನಪಿಟ್ಟುಕೊಳ್ಳಬೇಕು…...

ಎಲ್ಲವೂ ಸಾಕು

ಎಲ್ಲವೂ ಸಾಕು

ಸುಮಾ ಕಂಚೀಪಾಲ್ ಎಲ್ಲವೂ ಸಾಕುಈ ಕೆಂಡದ ಮಳೆ ಸುರಿವ ಪ್ರೀತಿಯಗಾಳಿಯಲಿನಾನು, ಅವನ ಸಿಗರೇಟಿನವಾಸನೆ ಇಲ್ಲದಬರಿಯ ಗಾಳಿಗೆ ಜೀವ ಇಲ್ಲಎಂದು ಈಗ...

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: