ಸುದೀಪ್ ಥೇಟ್ ರಘುವರನ್..

ಗುಜರಿಅ೦ಗಡಿ

ಭವಿಷ್ಯದ ರಘುವರನ್!

ತೆಲುಗಿನ ‘ಈಗ’ ಚಿತ್ರದಲ್ಲಿ ಸುಧೀಪ್ ಅಭಿನಯ ನೋಡಿದವರ ಮನದಲ್ಲಿ -ಸುದೀಪ್ ಅವರು ರಘುವರನ್ ಜಾಗವನ್ನು ತುಂಬಲಿದ್ದಾರೆಯೆ’ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಖಳಪಾತ್ರಕ್ಕೆ ಒಂದು ಹೊಸ ‘ಇಮೇಜ್’ನ್ನು ತಂದುಕೊಟ್ಟವರು ರಘುವರನ್. ಆವರೆಗೆ ಖಳನೆಂದರೆ, ಆಜಾನುಬಾಹು, ಅಟ್ಟಹಾಸದ ನಗು ಎಂದು ನಂಬಿದವರಿಗೆ ಒಂದು ಹೊಸ ಶಾಕ್ ನೀಡಿದವರು ರಘುವರನ್. ರಾಮ್‌ಗೋಪಾಲ್‌ವರ್ಮಾ ಅವರ ತೆಲುಗಿನ ‘ಶಿವ’ ಚಿತ್ರದಲ್ಲಿ ನಾಯಕನಿಗಿಂತ ಖಳನಾಯಕನೇ ಮೊದಲಬಾರಿಗೆ ಪ್ರೇಕ್ಷಕರಿಗೆ ಇಷ್ಟವಾದ. ನಾಯಕ ನಾಗಾರ್ಜುನ್ ಈ ಚಿತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ್ದರೂ, ರಘುವರನ್ ಅತನನ್ನು ಮೀರಿಸಿ ಪ್ರೇಕ್ಷಕರ ಎದೆಯೊಳಗೆ ಇಳಿದರು. ಪೀಚಲು ದೇಹ, ಗೊಗ್ಗರು ಸ್ವರ, ಎಲ್ಲಕ್ಕಿಂತ ಮುಖ್ಯವಾಗಿ ಆ ಧ್ವನಿಯಲ್ಲಿನ ಏರಿಳಿತ ಪ್ರೇಕ್ಷಕರ ಪಾಲಿಗೆ ಹೊಸ ಅನುಭವವಾಗಿತ್ತು. ಮುಂದೆ ರಘುವರನ್‌ನ್ನು ಖಳಪಾತ್ರದಲ್ಲಿ ಮೀರಿಸುವವರೇ ಇಲ್ಲ ಎನ್ನುವಂತಾಯಿತು. ಕನ್ನಡದ ಪ್ರಕಾಶ್ ರೈ ತಮಿಳು, ತೆಲುಗಿಗೆ ಕಾಲಿಡುವವರೆಗೆ ರಘುವರನ್ ಖಳ ಜಗತ್ತನ್ನು ಏಕ ವ್ಯಕ್ತಿಯಾಗಿ ಆಳಿದರು. ವಿಶೇಷವೆಂದರೆ ರಘುವರನ್ ಕನ್ನಡದಲ್ಲೂ ನಟಿಸಿದ್ದರು. ಅವರು ನಟಿಸಿದ ‘ಪ್ರತ್ಯರ್ಥ’ ಚಿತ್ರದಲ್ಲಿ ಸುದೀಪ್ ಒಂದು ಪುಟ್ಟ ಪಾತ್ರವನ್ನು ಮಾಡಿದ್ದರು. ಅಂತಹ ಸುದೀಪ್ ಇದೀಗ ತೆಲುಗಿನಲ್ಲಿ ರಘುವರನ್ ಅವರನ್ನು ನೆನಪಿಸುವಂತಹ ಪಾತ್ರವೊಂದನ್ನು ‘ಈಗ’ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ರಘುವರನ್ ಅವರನ್ನೇ ಹೋಲುವ ಅದೇ ಪೀಚಲು ದೇಹ. ಗೊಗ್ಗರು ಸ್ವರ. ಧ್ವನಿಯ ಏರಿಳಿತ. ಬ್ಲೇಡಿನ ಅಲಗಿನಂತಹ ನೋಟ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಅಪೂರ್ವ ಖಳನಟನಾಗಿ ಸುದೀಪ್ ಮಿಂಚಿದರೆ ಅದರಲ್ಲಿ ಅಚ್ಚರಿಯಿಲ್ಲ. ಹಿಂದಿಯ ‘ರಣ್’ ಚಿತ್ರದಲ್ಲಿ ಸುದೀಪ್ ಖಳನಾಗಿ ನಟಿಸಿದ್ದರೂ, ಅದರಲ್ಲಿ ಈ ಪರಿ ಭರವಸೆಯನ್ನು ಮೂಡಿಸಿರಲಿಲ್ಲ. ಕನ್ನಡದ ಹಲವು ನಟರು ದಕ್ಷಿಣ ಭಾರತದ ಖಳರಾಗಿ ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಟೈಗರ್ ಪ್ರಭಾಕರ್ ಮತ್ತು ಪ್ರಕಾಶ್ ರೈ. ಇದೀಗ ತೆಲುಗು ಚಿತ್ರರಂಗದ ಮೂಲಕ ಸುದೀಪ್ ಗುರುತಿಸಲ್ಪಟ್ಟಿದ್ದಾರೆ. ಸುದೀಪ್‌ಗೆ ನಾಯಕನಾಗಿ ನಟಿಸುವ ಆಸೆಯಿದ್ದರೂ, ಅವರ ಪ್ರತಿಭೆ ಖಳಪಾತ್ರಗಳಿಗೆ ಪೂರಕವಾಗಿದೆ. ಆದುದರಿಂದ ನಾಯಕ ಭ್ರಮೆಯನ್ನು ಬಿಟ್ಟು, ರಘುವರನ್ ಉಳಿಸಿಹೋದ ಸಾಮ್ರಾಜ್ಯದ ಖಾಲಿ ಪೀಠವನ್ನು ಸುದೀಪ್ ಏರಬೇಕಾಗಿದೆ. ಅವರ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ಸಿಗಬೇಕಾಗಿದೆ.]]>

‍ಲೇಖಕರು G

July 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

3 ಪ್ರತಿಕ್ರಿಯೆಗಳು

  • G

   actually raghuvaran performed the role of villain in shiva. jd chakravarti was nagarjuna’s classmate. he goes complaining against shiva to raghuvaran. raghuvaran was the villain in the movie and tankella bharani was his assistant

   ಪ್ರತಿಕ್ರಿಯೆ
 1. Shar

  No one is out to fill the niche of others, rather they have their own uniqeness [this is not a kho-kho right?]. Don’t prejudice the artists, let them bloom in the light of their own talent+opportunity. So, Raghuvaran is different, Sudeep is different, both are great artists.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: