ಸುದೇಶ ಎಂಬ ‘ಮಹಾನ್’

su1.jpg

ಚಿತ್ರ ಕಲಾ ಪರಿಷತ್ ನ ಗೋಡೆಯ ಮೇಲೆ ಒಂದು ಕವನ ತೂಗುತ್ತಿತ್ತು. ಕಲಾಕೃತಿಗಳು ಇರಬೇಕಾದ ಜಾಗದಲ್ಲಿ ಕವಿತೆಗೇನು ಕೆಲಸ ಎಂದು ಬಂದವರೆಲ್ಲಾ ನಿಬ್ಬೆರಗಾಗಿದ್ದರು. ಅದು ಸುದೇಶ್ ಮಹಾನ್ ಸ್ಟೈಲ್. ತಾವು ಬರೆದ ಕವಿತೆಯೊಂದನ್ನು, ತಮ್ಮ ಅದ್ಭುತ ಮೋಡಿ ಮಾಡುವ ಅಕ್ಷರದಲ್ಲಿ ಬರೆದು, ಕಟ್ಟು ಹಾಕಿಸಿ ಕಲಾಕೃತಿಯಂತೆ ತೂಗು ಹಾಕಿದ್ದರು. ಆಶ್ಚರ್ಯವೆಂದರೆ ಉಳಿದ ಅವರ  ಕಲಾಕೃತಿಗಳಂತೆ ಅದಕ್ಕೂ ಸಿಕ್ಕಾಪಟ್ಟೆ ಬೇಡಿಕೆ ಬಂದದ್ದು.

ಕವಿತೆಯೊಂದನ್ನುಕಲಾಕೃತಿಯಾಗಿಸಿದ ಹಿರಿಮೆ ಸುದೇಶ್ ಗೆ  ಸಲ್ಲಬೇಕು.ಮಂಗಳೂರಿನ ಅಲೋಶಿಯಸ್ ಕಾಲೇಜ್ನಲ್ಲಿ ತರಲೆ ಮಾಡುತ್ತಾ, ಸ್ಟ್ರೈಕ್ ಮಾಡಿಸುತ್ತಾ
ಓಡಾಡುತ್ತಿದ್ದ ಸುದೇಶ್ ಸಮುದಾಯ ರಂಗತಂದದ ತೆಕ್ಕೆಗೆ ಬಿದ್ದರು. ಅಲ್ಲಿಂದ ಅವರ ನೋಟ ಬೇರೆಯಾಯಿತು. ಅಪ್ಪ ಚಂದ್ರಶೇಖರ್ ಹಲವು ಕಲಾವಿದರು ಅರಳಲು ಕಾರಣರಾದವರು. ಮಾರ್ನಮಿ ಕಟ್ಟೆಯ ಅಜಂತಾ ಕಲಾವಿದರು ಹಲವು ಪ್ರತಿಭೆಗಳ ಗರಡಿ ಮನೆಯಾಗಿತ್ತು.

ಸುದೇಶ ಬ್ರಷ್ ಹಿಡಿದು ಬೆಂಗಳೂರಿಗೆ ಬಂದ. ನಾಟಕದ ಪೋಸ್ಟರ್ ಬರೆದ. ರಂಗಪ್ರೇಮಿಗಳು ಅವನ ರೇಖೆ ನೋಡಿ ದಂಗಾದರು. ನಂತರ ಆತ ಕಲಾವಿದನಾಗಿ ದೊಡ್ಡ ಎತ್ತರ ಮುಟ್ಟಿದ್ದಾನೆ. ಸುದೇಶ್ ಬಗ್ಗೆ ತಿಳಿಯಬೇಕಾದರೆ ಅವನ ವೆಬ್ ಸೈಟ್ www.sudeshmahan.comಗೆ ಭೇಟಿಕೊಡಿ. ಇಷ್ಟವಾದರೆ ಅವನಿಗೊಂದು ಈ ಮೈಲ್ [email protected] ಮಾಡಿ. ಈಗ ಆತ ಚೆನ್ನೈ ನಲ್ಲಿ ಮಣಿರತ್ನಂ ಮನೆ ಪಕ್ಕದ ಬೀದಿಯಲ್ಲಿರುವ ಗ್ಯಾಲರಿ ಯಲ್ಲಿ ತನ್ನ ಬುದ್ದ ಸರಣಿಯ ಪ್ರದರ್ಶನದಲ್ಲಿ ಬ್ಯುಸಿಯಾಗಿದ್ದಾನೆ . ಇಲ್ಲಿ ಅವನ ಬುದ್ದ ಸರಣಿ ಹಾಗೂ ಇತ್ತೀಚಿನ ಕಲೆಯ ಸ್ಲೈಡ್  ಶೋ ಇದೆ.

‍ಲೇಖಕರು avadhi

January 12, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This