‘ಸುದ್ದಿ ಮನೆ ಕತೆ’ ವಿಜಯ ಕರ್ನಾಟಕದ ಜನಪ್ರಿಯ ಅಂಕಣ. ಸುದ್ದಿ ಮನೆ ಯಾರಿಗೆ ತಾನೇ ಕುತೂಹಲದ ತಾಣವಲ್ಲ. ಜಗತ್ತನ್ನು ಅಳೆಯುತ್ತಾ, ಅಲ್ಲಿ ನಡೆದದ್ದನ್ನೆಲ್ಲಾ ತನ್ನ ಒಡಲಲ್ಲಿ ಕೂರಿಸಿಕೊಳ್ಳುವ ಸುದ್ದಿಮನೆ ಕುತೂಹಲ ಹುಟ್ಟಿಸದಿರಲು ಹೇಗೆ ಸಾಧ್ಯ.
ಇಂತಹ ಸುದ್ದಿಮನೆಯೊಳಗಿನ ಕಥೆಗಳನ್ನು ನಮ್ಮ ಮುಂದೆ ಬಿಡಿಸಿಟ್ಟು ನಿಂತವರು ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್. ಪತ್ರಿಕಾರಂಗದ ದಿಗ್ಗಜರ ಬಗ್ಗೆ ಪತ್ರಿಕಾ ರಂಗಕ್ಕೆ ಗೊತ್ತಿಲ್ಲದ ಹತ್ತು ಹಲವು ಕಥೆಗಳನ್ನು ಪರಿಚಯಿಸಿದರು.
ಇಂತಹ ತೀರಾ ಭಿನ್ನವಾದ ಅಂಕಣ ಪುಸ್ತಕವಾಗಿ ಹೊರಬಂದಾಗ ಅದರ ಮುಖಪುಟವೂ ಭಿನ್ನವಾಗಿಲ್ಲದಿದ್ದರೆ? ಹಾಗಾಗಿಯೇ ಸುದ್ದಿಮನೆ ಕತೆ-2 ಭಿನ್ನವಾಗಿದೆ. ಮುಖಪುಟ ಹಾಗೂ ಒಳಗಿನ ಹೂರಣ ಎರಡೂ ಆಕರ್ಷಿಸುತ್ತದೆ.
Thank you for giving me a link for such a good article.