ಸುನೀತಾ ಹೇಳಿದ ಮುತ್ತಿನ೦ತಹ ಕಥೆ!

ಹೀಗೊಂದು ಕಥೆ…

– ಸುನೀತಾ ಮಂಜುನಾಥ್

ಒಮ್ಮೆ ಒಬ್ಬ ಯುವಕ ಒಬ್ಬ ಮಾಟಗಾತಿಯ ಮದುವೆಯಾದ…..ಅವಳಿಗೊಂದು ಶಾಪವಿತ್ತು…ದಿನದ ೧೨ ಘಂಟೆ ಅತಿ ಸುಂದರಿಯಾಗುವ…ಹಾಗು ಉಳಿದ ೧೨ ಗಂಟೆ ಅತಿ ಕುರೂಪಿಯಾಗಿ ಬದುಕುವ ಶಾಪ….. ಮದುವೆಯಾದ ಒಡನೆ ಅವಳು ಗಂಡನ್ನ ಕೇಳಿದಳು….”ನನ್ನನ್ನು ನೀನು ಯಾವಾಗ ಸುಂದರಿಯಾಗಿ ನೋಡಲು ಇಷ್ಟ ಪಡುತೀಯ..”…ಯುವಕ ಚಿಂತಿಸಿದ….ನಂತರ ..”ನಿನ್ನ ಇಷ್ಟಕ್ಕೆ ಬಿಟ್ಟಿದು ಗೆಳತಿ..”ಎಂದ……” ನನ್ನ ಆಯ್ಕೆಗೆ ಬೆಲೆ ಕೊಡುವ ವ್ಯಕ್ತಿ ಸಿಕ್ಕ ಕೊಡಲೇ ನಾನು ಶಾಪಮುಕ್ತಳಾಗುವ ವರವಿದೆ ಗೆಳೆಯ…ಇದು ದೈಹೀಕ ರೂಪದ ವರವಲ್ಲ…ಅಂತರಂಗ ಸೌಂದರ್ಯದ ವರ… ನೀನು ನಿನ್ನ ಶಾಪ ಮುಕ್ತಿಗೊಳಿಸಿದೆ…ನಾನು ನಿನಗೆ ಋಣಿ” ಅಂದ್ಲು…..ಅಂದಿನಿಂದ ಜೀವನ ಪೂರ್ತಿ ಸುಂದರಿಯಾಗಿ ಬದುಕುವ ವರ ಪಡೆದಳು….:)) ಬದುಕು ಹಾಗೆ ಅಲ್ವೇ…ಇನ್ನೂಬ್ಬರ ಮೇಲೆ ನಮ್ಮ ಹಕ್ಕು ಚಲಾಯಿಸುವ ಭರದಲಿ…ಅವರ ಮನದ ಮೇಲೆ ನಾವು ಮಾಡುವ ಗಾಯಗಳ ಅರಿವೇ ನಮಗಿರುವುದಿಲ್ಲ…ಬದುಕ ಅರಿತ… ಅರ್ಥ ಮಾಡಿಕೊಳ್ಳುವ ..ಯಾವುದೇ ವ್ಯಕ್ತಿಗೆ ಇಚ್ಹೆಯಂತೆ ಬದುಕುವ ಹಕ್ಕು (ಸ್ವಾತಂತ್ರ್ಯ) ನೀಡಿದರೆ…ಅವರ ಬದುಕು ಸುಂದರವಾಗಿ ಅದರ ಚೆಲುವು ನಮಗೂ ಪಸರಿಸುತ್ತದೆ ಅಲ್ವೇ…:))) Felt like sharing..:)))]]>

‍ಲೇಖಕರು G

August 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

16 ಪ್ರತಿಕ್ರಿಯೆಗಳು

 1. Mohan V Kollegal

  ‘ಆಂತರಿಕ ಸುಂದರ ಕಥೆ’
  ಎಲ್ಲಕ್ಕಿಂತಲೂ ಶ್ರೇಷ್ಠವೆಂದರೆ ಹಿಡಿ ಪ್ರೀತಿ ಮತ್ತು ನಂಬಿಕೆ… ಕೇವಲ ಕಾಗದವಾದ ಹಣ ಆಸ್ತಿ ಕೆಲವೊಮ್ಮೆ ತೃಣಕ್ಕೂ ಸಮವಾಗಿ ನಿಲ್ಲದು…

  ಪ್ರತಿಕ್ರಿಯೆ
 2. Prasad V Murthy

  ಮನಸ್ಸಿಗೆ ಹತ್ತಿರವೆನಿಸುವ ಕಿರುಗಥೆ.. ಮನಸ್ಸಿಗೆ ಗಾಳ ಹಾಕಿಸಿ ಸಿಕ್ಕಿಸುತ್ತದೆ.. ಪ್ರೀತಿ-ನಂಬಿಕೆಗಳ ಆಳವನ್ನು ವೇಧ್ಯವಾಗಿಸುತ್ತದೆ..:)

  ಪ್ರತಿಕ್ರಿಯೆ
 3. ಪರಶುರಾಮ ಕಲಾಲ್

  ಸುನಿತಾ ನಿಮ್ಮ ಕಥೆ ಓದಿದಕೂಡಲೇ ನನಗೆ ನೆನಪಾಗಿದ್ದು ಖಲೀಲ್ ಜಿಬ್ರಾನ್ ಕಥೆ”ಒಂದು ದಿನ ಸೌಂದರ್ಯ ಮತ್ತು ಕುರೂಪಿ ಇಬ್ಬರು ಸಮುದ್ರಸ್ನಾನ ಮಾಡಲು ಹೋದರು. ತಮ್ಮ ಬಟ್ಟೆ ಬಿಚ್ಚಿ ಬತ್ತಲಾಗಿ ನೀರಿಗಳಿದರು.ಕುರೂಪಿಗೆ ಯಾವುದೋ ಕೆಲಸ ನೆನಪಾಗಿ ಅವಸರವಸರವಾಗಿ ದಂಡೆಗೆ ಬಂದು ಸೌಂದರ್ಯದ ಬಟ್ಟೆ ಧರಿಸಿ ಹೊರಟು ಹೋದಳು. ನಂತರ ಸೌಂದರ್ಯ ಬಂದು ದಂಡೆಯಲ್ಲಿ ನೋಡಿದರೆ ಬಟ್ಟೆ ಇಲ್ಲ. ಬತ್ತಲೆ ಇರಲು ನಾಚಿಕೆಯಾಗಿ ಕುರೂಪಿ ಬಟ್ಟೆಯನ್ನು ಹಾಕಿಕೊಂಡಳು’
  ಕುರೂಪಿಯನ್ನು ನೋಡಿ ಜನರು ಸೌಂದರ್ಯ ಎಂದು ಬಟ್ಟೆ ನೋಡಿ ಹೇಳುತ್ತಾರೆ. ಕುರೂಪಿಯ ಬಟ್ಟೆಯನ್ನು ಧರಿಸಿರುವ ಸೌಂದರ್ಯವನ್ನು ಕೆಲವರು ಗುರುತಿಸುತ್ತಾರೆ.
  ಸುನಿತಾ ನೀವು ಚೆಂದ ಕಥೆಗಾರ್ತಿ ನಿಮಗೆ ಅಭಿನಂದಿಸುವೆ.

  ಪ್ರತಿಕ್ರಿಯೆ
 4. jogimane

  ಚಂದದ ಕತೆ. ಎಷ್ಟೊಂದು ಆಯಾಮಗಳು ಹೊಳೆದವು. ಸೌಂದರ್ಯ ಮತ್ತು ಕುರೂಪ- ನನ್ನನ್ನು ಸದಾ ಕಾಡುತ್ತಿರುತ್ತವೆ. ಇದನ್ನು ನಾನು ಎಲ್ಲಾದರೂ ಬಳಸಿಕೊಳ್ಳಲೇ?

  ಪ್ರತಿಕ್ರಿಯೆ
  • sunitha.a

   with pleasure…:))balasidaaga nanage ondu msg haakidre…..i too wil enjoy..:)))

   ಪ್ರತಿಕ್ರಿಯೆ
 5. ಮುರಳಿ ಕೃಷ್ಣ

  ಸುನೀತಾ.. ಕಥೆಯ ಕೊನೆಯ ಸಾಲುಗಳು ತುಂಬಾ ಇಷ್ಟವಾದವು..

  ಪ್ರತಿಕ್ರಿಯೆ
 6. ಸುನಂದ

  ಚಂದದ ಈ ಕಿರು ಕತೆಯಲ್ಲಿ ತುಂಬಾ ಅರ್ಥ ತುಂಬಿದೆ ಇಷ್ಟವಾಯಿತು ಸುನಿತಾ.

  ಪ್ರತಿಕ್ರಿಯೆ
 7. D.RAVI VARMA

  ಮೇಡಂ ನಮಸ್ಕಾರ ಈಗ ಜಗತ್ತೆಲ್ಲ ಸೌಂದರ್ಯ ಹಿಂದೆ ಬಿದ್ದಿರುವಾಗ , ದೇಹದ ಸೌಂದರ್ಯ ಮನಸಿನ ಕ್ರುರತನ ಇಲ್ಲಿ ದೊಡ್ಡ ಘರ್ಷಣೆಯೇ ಇದೆ, ತುಂಬಾ ಸುಂದರವಾದವಳು ಮನಸಿನ್ನಲ್ಲಿ ತುಂಬಾ ಕ್ರುರಿಯಾಗಿರಲು ಸಾದ್ಯ , ತುಂಬಾ ಅಸಹ್ಯ ಎನ್ನಿಸುವ ಮುಖಗಳು ತುಂಬಾ ಸಹ್ಯ ವಾಗಿರಲು ಸಾದ್ಯ ಅಲ್ಲವೇ, ಇದು ಈನ್ದಿನ ಸತ್ಯ ಕಥೆ ,ನೀವು,ಇದನ್ನು ಮನ ಕಲಕುವ ಹಾಗೆ ಹೇಳಿದ್ದಿರಿ . ತುಂಬಾ ದೊಡ್ಡ ಮನುಸ್ಯರು ಅಂದು ಭಾವಿಸಿರುವವರು ದೊಡ್ಡ ತಪ್ಪು ಮಾಡುತ್ತಾರೆ, ಇನ್ನೊಬ್ಬನ ಕ್ಷುಲ್ಲಕ ಮನುಸ್ಯನ ಬಗ್ಗೆ ನಾವು ಇಲ್ಲದ ಅನುಮಾನ ಪತ್ತಿರುತ್ತೇವೆ, ಆದರೆ ಆತ
  ಮಾನವೀಯತೆ ಮೆರೆಯುತ್ತಾನೆ ಅಲ್ಲವೇ ನಿಮ್ಮ ಚಿಂತನೆ ಕಥೆ ಹಾಗು ಅದನ್ನು ಸೊಗಸಾಗಿ ಹೇಳಿದ ನಿಮ್ಮ ಕಲೆಗಾರಿಕೆಗೆ ಒಂದು ವಂದನೆ .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 8. Shrivatsa Kanchimane

  ಯಂಡಮೂರಿ ವೀರೇಂದ್ರನಾಥ್ ಅವರ ‘ತಪ್ಪು ಮಾಡೋಣ ಬನ್ನಿ’ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಈ ಕಥೆಯನ್ನು ಇನ್ನಷ್ಟು ವಿವರವಾಗಿ ಮತ್ತು ಸ್ಪಷ್ಟವಾಗಿ ಬರೆಯಲಾಗಿದೆ…

  ಪ್ರತಿಕ್ರಿಯೆ
 9. ಸುನಿಲ ಅಗಡಿ

  ನನ್ನದು ಸ್ವಲ್ಪ ಭಿನ್ನವಾದ ಅಭಿಪ್ರಾಯವಿದೆ. ನೀವು ಹೇಳಿದ್ದು ಕಥೆ ನಾಣ್ಯದ ಒಂದು ಕಡೆ ಇರಬಹುದು. ಕಥೆಯ ಕೊನೆಯ ಸಾಲುಗಳನ್ನ ಗಮನಿಸುತ್ತಾ , ಇನ್ನೊಬ್ಬರ ಮೇಲೆ ನಮ್ಮ ಹಕ್ಕು ಚಲಾಯಿಸಬೇಕು ಅಂತಾ ನಾನು ಹೇಳುವುದಿಲ್ಲ, ಆದರೆ ಕೆಲವಬ್ಬರಿಗೆ ಸ್ವಾತಂತ್ರ ಅಂದರೆ ತಪ್ಪು ಕಲ್ಪನೆ ಇರುತ್ತದೆ, ಅವರು ಸ್ವಾತಂತ್ರ ಅಂದರೆ ಸ್ವೆಚ್ಚಾರ ಎಂದು ನಂಬಿರುತ್ತಾರೆ, ತಮ್ಮ ಇಚ್ಚೆಯಂತೆ ಬದುಕ ಬೇಕೆನ್ನುವವರು ಬೆರೆಯವರ ಜೀವನವನ್ನು ಹಾಳುಮಾಡುವ ಕುತಂತ್ರಕ್ಕೆ ಕೈ ಹಾಕಬಾರದು.ಗಂಡ ಹೆಂಡಿರ ನಡುವೆ ನಂಬಿಕೆ ಇರಬೇಕು ಆದರೆ ಗಂಡೇ ಆಗಲಿ ಹೆಣ್ಣೇ ಆಗಲಿ ಆ ನಂಬಿಕೆ ಉಳಿಸಿಕೊಳ್ಳುವ ಹಾಗೆ ನಡೆದು ಕೊಳ್ಳಬೇಕು. ನಂಬಿಕೆ, ಹೊಂದಾಣಿಕೆ ಒಂದು ಸಂಬಂಧದಲ್ಲಿ ಕಂಭಗಳಾಗಿ ಇರಬೇಕಾಗುತ್ತವೆ, ಆಗಲೇ ಜೀವನ ಸುಂದರವಾಗುತ್ತದೆ ಅನ್ನುವುದು ನನ್ನ ಭಾವನೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: