ಸುಮ್ಮನಾಗಬೇಕು ಎಂದುಕೊಂಡೆ

ಲಾವಣ್ಯ ಎನ್. ಕೆ

ಸುಮ್ಮನಾಗಬೇಕು ಎಂದುಕೊಂಡೆ.
ನನ್ನದಲ್ಲದ ಬದುಕಿಗೆ, ನನ್ನದಲ್ಲದ ಪ್ರೀತಿಗೆ,
ನನ್ನದಲ್ಲದ ಜಗತ್ತಿಗೆ ಹೋರಾಡಿದರೂ
ಗೆಲುವೂ ಸಿಗದೆ, ಸೋಲೂ ಒಪ್ಪದೆ
ಚಡಪಡಿಕೆಯಲ್ಲೇ ದಿನ ಮುಗಿಸಿ,ಕಣ್ಣೀರಷ್ಟೆ
ನನ್ನ ಪಾಲಿಗೆ ಉಳಿದಾಗ
ಸುಮ್ಮನಾಗಬೇಕು ಎಂದುಕೊಂಡೆ.

ಮಾತು ನಿಲ್ಲಿಸಿದರೆ ಮನ ಶಾಂತವಾಗಬಹುದೇನೋ?
ಮಾತೂ ನಿಲ್ಲಿಸಿದೆ, ಮನಸ್ಸು ಕಿರುಚಾಡಿತು,
ಕನಸ ಭಾಷೆ ಬದಲಿಸಬೇಕೆನೋ?
ಯೋಚನೆಗಳ ಅಲೆಯೇ ನಿಲ್ಲದಾಯಿತು
ಪ್ರೀತಿಯ ರಭಸ ಹಿಡಿದು ನಿಲ್ಲಿಸಬೇಕೇನೋ?
ಶುದ್ಧ ಭಾವನೆಗಳ ಮಹಾನದಿಯೇ ಹರಿದಾಗ
ಸುಮ್ಮನಾಗಬೇಕು ಎಂದುಕೊಂಡೆ

ಮನಸ್ಸೂ ತಿಳಿಯಾಗಿ, ಯೋಚನೆಗಳೂ ಶಾಂತವಾಗಿ
ಪ್ರೀತಿಯ ಹರಿವೂ ಒಂದು ಕಡೆ ನಿಂತುಬಿಟ್ಟಿದೆ.
ಅಲೆಗಳ ಸಪ್ಪಳವೂ ನನ್ನ ಕದಲಿಸುತ್ತಿಲ್ಲ,
ರಾತ್ರಿ ಯ ರಸ್ತೆಗಳ ಮೌನವೂ ನನ್ನ ಕೆಣಕುತ್ತಿಲ್ಲ,
ಒಂದೇ ಸಮನೆ ಸುರಿಯುವ ಮಳೆ ನೆನಪನ್ನೂ ತರುತ್ತಿಲ್ಲ,
ಆದರೂ ಹೂವಿನ ಹಂಗು, ಹಕ್ಕಿಯ ಹಸಿರ ಹಾಡು
ದೂರದಲ್ಲಿ ಕಾಣುವ ಇನಿತೇ ಬೆಳಕು ನನ್ನ ನನಗೇ
ಉಳಿಸಿಕೊಟ್ಟಿದೆ

ಎನಿಸಿಕೊಂಡಂತೆ ಸುಮ್ಮನಾಗಿದ್ದೇನೆನೋ
ಇನ್ನೂ ಸತ್ತಿಲ್ಲವೆಂಬ ಭರವಸೆ ಇದೆ.

‍ಲೇಖಕರು Avadhi

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೆಗೆವಾರ

ಚೆಗೆವಾರ

ಪಿ ಆರ್ ವೆಂಕಟೇಶ್ ನಿಜವೆಂದು ನಂಬಿಸಿದ ನಿಜಗಳೆದೆಯನು ಸೀಳಿಕೆಂಡದುಂಡೆಯಮೇಲೆ ಎದ್ದು ನಿಂತವನೆ ಹೆಗಲ ಮೇಲೆ ಕೋವಿ ಎದೆಯೊಳಗೆ ಗುಲಾಬಿದೂರಗಳ...

ಖಲೀಲ್ ಗಿಬ್ರಾನ್ ಕವಿತೆ ‘The Poet’

ಖಲೀಲ್ ಗಿಬ್ರಾನ್ ಕವಿತೆ ‘The Poet’

ಮೂಲ ಆಂಗ್ಲ ಲೇಖಕರು: ಖಲೀಲ್‌ ಗಿಬ್ರಾನ್ ಕನ್ನಡಕ್ಕೆ -ಚೈತ್ರಾ ಶಿವಯೋಗಿಮಠ ಕವಿ ಇವನು, ಭೂತ - ಭವಿತವ್ಯದನಡುವಿನ ಕೊಂಡಿಜಗದ ಪ್ರತಿ...

ಮಗುವಂತೆ ಕವಿತೆ..

ಮಗುವಂತೆ ಕವಿತೆ..

ಡಾ.ಗೋವಿಂದ ಹೆಗಡೆ ಮಗುವಂತೆ ಕವಿತೆ ಕವಿತೆಗಳಲ್ಲಿ ಕೆಲವುಜುಳುಜುಳು ಹರಿವ ನದಿಇಕ್ಕೆಲದ ದಡವ ತಟ್ಟುತ್ತ ತಬ್ಬುತ್ತಇನ್ನು ಕೆಲವು ಜೋರಾಗಿಸುರಿವ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This