ಸುಮ್ಮನಿರೋದು ಉತ್ತೇಜನ ಕೊಡುವಷ್ಟೇನೆ ತಪ್ಪು…

ಬ್ಲಾಗ್ ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ ಬ್ಲಾಗಿಗರು ಈ ವಿಷಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ.

ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ಬ್ಲಾಗ್ ಲೋಕದಲ್ಲಿ ಒಂದಿಷ್ಟು ತಂಗಾಳಿ ಹರಡಲಿ

i-hate-you

ಟೀನಾ

ನನ್ನ ಮಟ್ಟಿಗೆ ಹೇಳುವದಾದರೆ ಸುಮ್ಮನಿರೋದು ಅವರಿಗೆ ಉತ್ತೇಜನ ಕೊಡುವಷ್ಟೇನೆ ತಪ್ಪು. ನಾವು ಬ್ಲಾಗಿಂಗ್ ಶುರುಮಾಡಿದಾಗ ಇದ್ದ ಚೆಂದದ ಹುರುಪಿನ ವಾತಾವರಣ ಈಗಿಲ್ಲ ಅನ್ನೋದು ನಿಜ.ಎಲ್ಲರೂ ಅವರವರ ಮೂಗಿನ ನೇರಕ್ಕೇ ಯೋಚಿಸುವ, ಎಲ್ಲರನ್ನೂ ಸಂಶಯಮನೋಭಾವದಿಂದ ನೋಡುವ ಮನಸ್ಥಿತಿ ಬಂದುಬಿಟ್ಟಿದೆ. ಹುಂಬತನದ
ಎಲ್ಲೆ ಮೀರುವವರು ಮಾತ್ರ ಇಲ್ಲಿ ಉಳಿಯೋದು ಸಾಧ್ಯ ಅನ್ನೋ ಹತಾಶಮನೋಭಾವ. ನಾನಂತೂ ಬ್ಲಾಗ್ ಅಪ್ಡೇಟ್ ಮಾಡಿ ಸುಮಾರು ಸಮಯ ಆಗಿಹೋಯಿತು!!
GNM, ಯಾರುಯಾರಿಗೆ ಹೇಳಬೋದು ನಾವು? ಕೇಳುವವರಿಗೇನೋ ತಿಳೀತದೆ, ಕೇಳಲಿಕ್ಕೇ ತಯಾರಿರದ, ಈ ಕೆಲಸ ಮಾಡಿ ಸಂತಸಪಡುವ ವಿಕೃತಮನಸ್ಸಿನವರಿಗೆ ಗೊತ್ತಾಗತ್ತಾ ಇದು?

ಬಿ ಆರ್ ಸತ್ಯನಾರಾಯಣ

ನೀವು ಹೇಳೋದು ನಿಜ. ಈ ಅನಾಮಿಕರ ಕಾಟ ಮಿತಿಮೀರಿದೆ ಎಂದೇ ಹೇಳಬಹುದು. ಮುಂಚೆ ನನ್ನ ಬ್ಲಾಗಿಗೆ ಯಾರೂ ಬೇಕಾದರೂ ಕಾಮೆಂಟ್ ಮಾಡುವ ಸೌಲಭ್ಯವಿತ್ತು. ಆದರೆ ಒಬ್ಬ ಕಿಡಿಗೇಡಿ ಕಾಮೆಂಟಿಗ ನೀಡಿದ ತೊಂದರೆಯಿಂದಾಗಿ ನಾನು ಈಗ ಆ ಸೌಲಭ್ಯವನ್ನು ಇಲ್ಲವಾಗಿಸಿಬಿಟ್ಟಿದ್ದೇನೆ. ಈ ಅನಾಮಿಕರು ಬೆತ್ತಲೆ ಸಾಮ್ರಾಜ್ಯದ ಚಕ್ರವರ್ತಿಗಳಿದ್ದ ಹಾಗೆ! ತಾವು ಕತ್ತಲೆಯಲ್ಲಿದ್ದು ಬೇರೆಯವರನ್ನು ಬೆಳಕಿನಲ್ಲಿ ಬೆತ್ತಲಾಗಿಸಿ ನೋಡುವ ಚಟ ಇವರದು.

ಶ್ರೀನಿಧಿ ಡಿ ಎಸ್

ಅನಾನಿಮಸ್ ಕಾಮೆಂಟುಗಳ ಹಾವಳಿಯಿಂದ ಹೊರ ಬರೋದು -ಇದೊಂತರ ಬೆಕ್ಕಿನ ಕೊರಳಿನ ಗಂಟೆ ಕಥೆಯಾಗಿದೆ.
ಇನ್ನೊಂದು ಮಜಾ ಅಂದರೆ, ಮಾಧ್ಯಮಕ್ಕೆ ಸಂಬಂಧಿಸಿದ ಬ್ಲಾಗುಗಳಲ್ಲಿಯೇ ಈ ಹಾವಳಿ ಹೆಚ್ಚಾಗಿರೋದು! ಮತ್ತು, ಯಾಕೆ ಹೀಗೆ ಅಂತ ಕೇಳಿದರೆ, ಅಲ್ಲಿ ಉತ್ತರಿಸೋರು – ಅದನ್ನು ಸಮರ್ಥಿಸುವ ಪರಿ ನೋಡಬೇಕು. ಇವರುಗಳ ಸಹವಾಸವೇ ಬೇಡ ಅಂತ ಸುಮ್ಮನಿರಬೇಕು, ಅಷ್ಟೇ

ಮನೋಜ್

ಬ್ಲಾಗ್ ತಾಣಗಳು ಅನಾಮಿಕ ಕಾಮೆಂಟುಗಳನ್ನು ಹಾಕಲು ಬಿಡಬಾರದು. ಯಾವುದಾದರು ಒಂದು ರೀತಿಯ authorization mechanism ಇರಲೇಬೇಕು.
ಈಗಾಗಲೇ ಹೆಚ್ಚಿನ ಬ್ಲಾಗಿಂಗ್ ಸೈಟುಗಳು openIdಯನ್ನು ಸಪೋರ್ಟ್ ಮಾಡುತ್ತವೆ. ಹಾಗಾಗಿ wordpress ಬ್ಲಾಗ್ ಹೊಂದಿರುವವರು blogspotನಲ್ಲಿ ಅವರ wordpress ಐಡಿ ಬಳಸೇ (ಇಲ್ಲಿ url ಬಕೆಯಾಗುತ್ತದೆ) ಕಾಮೆಂಟು ಹಾಕಬಹುದು. wordpress, blogspot ಅಲ್ಲದೆ ಇನ್ನು ಹಲವು ವೆಬ್ ಸೈಟುಗಳು openId ಸಪೋರ್ಟ್ ಮಾಡುತ್ತವೆ ಹಾಗೆ openId provider ಕೂಡ ಆಗಿರುತ್ತವೆ, ಹೀಗಿರುವಾಗ ಅನಾನಿಮಸ್ ಕಾಮೆಂಟುಗಳಿಗೆ ಮುಕ್ತಿ ಕೊಡಬಹುದು.
ಇದನ್ನೂ ದುರುಪಯೋಗ ಮಾಡಬಹುದು, ಆದರೆ ಈಗಿನ ತರಹ ಸಿಕ್ಕಾಬಟ್ಟೆ ನಿಮಿಷಕ್ಕೊಂದರಂತೆ ಹೊಸ ಹೊಸ ಹೆಸರಿನಿಂದ ಕಾಮೆಂಟು ಮಾಡುವುದನ್ನ ತಪ್ಪಿಸಬಹುದು

ರಂಜಿತ್

>>ಕತ್ತಲಲ್ಲಿ ಕ್ರಿಮಿಗಳು ಸಿಕ್ಕಾಪಟ್ಟೆ ಜಾಸ್ತಿ. ಹಾಗಾಗಿ ಬೆಳಕು ಇರೋ ರೀತಿ ನೋಡಿಕೊಳ್ಳೋ ಜವಾಬ್ದಾರಿ ಕೂಡಾ ನಮ್ಮ ಮುಂದೇನೇ ಇದೆ. ಕೇವಲ ‘ಹಿಟ್ಸ್’ ಗಳ ಮೇಲೆ ಮಾತ್ರ ಕಣ್ಣಿಟ್ಟರೆ ಕೊನೆಗೆ ಉಳಿಯೋದು ‘ಹಿಟ್ ಅಂಡ್ ರನ್’ ಕೇಸ್ ಗಳು ಮಾತ್ರ!<<

ಅಕ್ಷರಶಃ ನಿಜವಾದ ಮಾತು!

‍ಲೇಖಕರು avadhi

August 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

 1. prakash hegde

  ಮರೆಯಲ್ಲಿ ನಿಂತು ಕಲ್ಲೆಸೆದು ಮಜಾ ನೋಡುವ ಮನಸ್ಥಿತಿ…..

  ನನ್ನ ಬ್ಲಾಗಿಗೂ ಇಂಥಹ ಪ್ರತಿಕ್ರಿಯೆ ಕೆಲವು ಬಂದಿತ್ತು..

  ಸುಮ್ಮನೆ ಡಿಲೀಟ್ ಮಾಡಿ
  ತೆಗೆದು ಹಾಕಿದೆ…

  ಪ್ರತಿಕ್ರಿಯೆ
 2. ಶ್ರೀನಿಧಿ.ಡಿ.ಎಸ್

  ಸಮಸ್ಯೆ ಏನಾಗಿದೆ ಅಂದ್ರೆ, ಇಂಟರ್ ನೆಟ್ ಎದುರು ಗಂಟೆಗಟ್ಟಲೇ ಕೂತಿರೋಷ್ಟು
  ಸಮಯ, ಎಲ್ಲರಿಗೂ ಇರೋದಿಲ್ಲ. ಹಾಗಾಗಿ, ಈ ಅನಾನಿಮಸ್ ಗಳ ಐಪಿ ಹುಡುಕೋದು,
  ಅವರುಗಳ ಬೆನ್ನು ಹತ್ತೋದು, ಕಷ್ಟ ಸಾಧ್ಯ. ಹೀಗಾಗಿ ತಮಗೇನೂ ಮಾಡೋಕಾಗೋದಿಲ್ಲ
  ಎಂದು ಗ್ಯಾರೆಂಟಿಯಾಗಿರೋ ಈ ಅನಾಮಿಕ ಪಡೆ ನಿರಾಳವಾಗಿದೆ.

  ಸುಮ್ಮನೇ ಒಂದು ಫೇಕ್ ಪ್ರೊಫೈಲನ್ನ ಬ್ಲಾಗರಲ್ಲೋ, ವರ್ಡ್ ಪ್ರೆಸ್ಸಲ್ಲೋ ಕ್ರಿಯೇಟ್ ಮಾಡಿಕೊಳ್ಳೋದು ನಿಮಿಷದ ಕೆಲಸ.ಹೀಗಾಗಿ, ಅಧಿಕೃತವಾಗೇ , ಬ್ಲಾಗರ್ ಅಕೌಂಟಿಂದಲೇ ಕಮೆಂಟು
  ಬಂದಿರುತ್ತದೆ, ಹೋಗಿ ನೋಡಿದರೆ ಪ್ರೊಫೈಲಿನ ಬಾಗಿಲು ಮುಚ್ಚಿರುತ್ತದೆ.ಏನೋ ಮನಸ್ಸಿನ ಸಮಾಧಾನಕ್ಕೆ
  ಅಂತ ಬರೆದುಕೊಂಡಾಗ, ಆ ನೆಮ್ಮದಿಯನ್ನೇ ಈ ಕಮೆಂಟುಗಳು ಹಾಳು ಮಾಡಿರುತ್ತವೆ.
  ಇನ್ನು ಅವುಗಳ ಬೆನ್ನು ಹತ್ತೋದು ಸಾಧ್ಯವ? ಹಾಳಾಗಿ ಹೋಗಲಿ ಅಂತ ಸುಮ್ಮನಿರಬೇಕಾಗುತ್ತದೆ.

  ಇನ್ನು , ಕೆಲ ಬಾರಿ ಐಪಿ ಹುಡುಕಿ ಏನು ಪ್ರಯೋಜನ- ಒಂದು ಸಂಸ್ಥೆ- ಒಂದೇ ಇಂಟರ್ ನೆಟ್ ಸಿಸ್ಟ್ಮ್
  ಇದೆ ಅಂದುಕೊಳ್ಳಿ- ಒಬ್ಬಾತ ನೇರವಾಗಿ ಆತನ ಹೆಸರಲ್ಲೇ ಕಮೆಂಟಿಸಿದ ಮೇಲೆ,
  ಮತ್ತೊಬ್ಬ ಬಂದು ಅನಾಮಿಕ ಪ್ರತಿಕ್ರಿಯೆ ನೀಡಬಹುದು, ಆವಾಗ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: