ಸುರೇಶ್ ಗೆ, ಪ್ರೀತಿಯಿಂದ…

forum-bangalore1
 
ಸುರೇಶ್ ರವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
(ಆದ್ರೆ ನಾನು ಸಂದೀಪ್ ನಾಯಕ್ ಅಲ್ಲ ಕಾಮತ್!)
“ಸಿನಿಮಾ ಕೇವಲ ಮಾರಾಟದ ಸರಕಾಗಬಾರದು ಅಲ್ವಾ? ” ಅಂತ ಕೇಳಿದ್ರಿ.
ನೀವು ನನ್ನನ್ನು ಕೇಳಿದ್ದಾ?? ನನ್ನನ್ನು ಕೇಳಿದ್ರೆ ’ಖಂಡಿತ ಮಾರಾಟದ ಸರಕಾಗಬಾರದು ’ ಅಂತೀನಿ.
ಆದ್ರೆ ಸಿನೆಮಾ ರಂಗದಲ್ಲಿರೊ 90% ಜನ ಹಣ ,ಹೆಸರು ಮಾಡಲು ಇರೋದು ಅಲ್ವಾ ಸರ್ ? ಉಳಿದ 10 % ಜನರು ಏನೇ ಸದಭಿರುಚಿಯ ಸಿನೆಮಾ ಕೊಟ್ರೂ ದಿನದ ಕೊನೆಗೆ ಹಣ ಎಣಿಸಿಲ್ಲ ಅಂದ್ರೆ ಬದುಕೋದು ಹೆಂಗೆ ಸರ್??
ನಿಮ್ಮ ಲೇಖನದ ಉದ್ದೇಶ ತುಂಬಾ ಚೆನ್ನಾಗಿದೆ .ಆದರೆ ಉದ್ದೇಶ ಏನೇ ಇದ್ರೂ ಪ್ರ್ಯಾಕ್ಟಿಕಲ್ ಆಗಿಲ್ಲದಿದ್ರೆ ಏನು ಸಾಧಿಸಿದ ಹಾಗಾಗುತ್ತೆ?
ಫುಟ್ಪಾತಿನಲ್ಲಿ ಎಷ್ಟೆ ಒಳ್ಳೆಯ ಚಿತ್ರಾನ್ನ ಸಿಕಿದ್ರೂ ನಾವ್ಯಾಕೆ ಅಡಿಗಾಸ್ ಗೆ ಹೋಗ್ತೀವಿ.
ದುಡ್ಡಿನ ಮದವುಳ್ಳವರಷ್ಟೆ ಮಲ್ಟಿಪ್ಲೆಕ್ಸ್ ಗೆ ಹೋಗ್ತಾರೆ ಅನ್ನೋ ಜನ ಯಾಕೆ ಚಿಕ್ಕ ಪುಟ್ಟ ಹೋಟೆಲ್ ಗೆ ಹೋಗಲ್ಲ?
ಐಟಿ-ಬಿಟಿ ಸಂಸ್ಕೃತಿ ,ಮಲ್ಟಿಪ್ಲೆಕ್ಸ್ ಸಂಸ್ಕೃತಿ ಅಂತ ಜನರಲೈಸ್ ಮಾಡೊದು ನನ್ಗೆ ಅಷ್ಟು ಸರಿ ಅನ್ನಿಸ್ಲಿಲ್ಲ ಅಷ್ಟೆ.
ನಾಗ್ತಿಹಳ್ಳಿ ’ಮಾತಾಡ್ ಮಾತಾಡು ಅಂತ ಎಷ್ಟೆ ಒಳ್ಳೆ ಸಿನೆಮಾ ಮಾಡಲಿ ,ದಿನದ ಕೊನೆಗೆ ಸಿನೆಮಾ ನೋಡೊದಿಕ್ಕೆ ಒಳ್ಳೆಯ ಮಲ್ಟಿಪ್ಲೆಕ್ಸ್ ಗೆ ತಾನೆ ಹೋಗೋದು?
ಇಲ್ಲಾಂದ್ರೆ ಮಲ್ಲೇಶ್ವರಂ ರೀಜಯ್ಸ್ ನಂಥ ಒಳ್ಳೆಯ ಜಾಗದಲ್ಲಿ ತಾನೇ ಸಿನೆಮಾ ಪ್ರೀಮಿಯರ್ ಏರ್ಪಡಿಸೋದು?ಪಾನ್ ಪರಾಗ್ ಘಾಟ್ ಬರೋ ಮೆಜೆಶಸ್ಟಿಕ್ ನ ಥಿಯೇಟರ್ ಗಳಿಗೆ ಯಾರೂ ತಲೇನೂ ಹಾಕಲ್ಲ.
ಮತ್ತಿಕೆರೆಯಲ್ಲೊಂದು ಟೆಂಟ್ ಸಿನೆಮಾಗೃಹ ಇದೆ ಲಕ್ಷ್ಮಿ ಅಂತ.ಪಕ್ಕಾ ಒರಿಜಿನಲ್ ಟೆಂಟ್ ! ಇಲ್ಲಿ ನಾನು ಎರಡು ಮೂರು ಸಿನೆಮಾ ನೋಡಿದ್ದೇನೆ.ಕೊನೆಗೆ ಒಂದು ಜಗಲಿ ಇದೆ ಆ ಜಗಲಿಯ ಮೇಲೆ ಕೂತು.ಆದ್ರೆ ನಮ್ಮ ಜನರು ಆ ಟೆಂಟ್ ಕಡೆ ತಲೆನೂ ಹಾಕಲ್ಲ.
ಸೀದಾ ಬಿಡದಿಯ ಫಿಲಂ ಸಿಟಿಗೆ ಹೋಗಿ ಟೆಂಟ್ ಸಿನೆಮಾ ನೋಡ್ತಾರೆ!
ನಿಮಗೆ ಗೊತ್ತಿರೋ ಥರ ಸಿನೆಮಾ ಒಂದು ಜೂಜು.ಅದರಲ್ಲಿ ಎಷ್ಟೆ ಎಕ್ಸ್ಪರಿಮೇಂಟ್ ಮಾಡ್ಬೇಕಿದ್ರೂ ಕೊನೆಗೆ ಧೈರ್ಯ ಮಾಡ್ಬೇಕಾಗಿರೋದು ದುಡ್ಡಿರೋ ಪ್ರೊಡ್ಯೂಸರ್ ಅಲ್ವ?
ನಿಮ್ಮ ಕಾಳಜಿ ಎಲ್ಲರಿಗೂ ಬಂದ್ರೆ ಚೆನ್ನಾಗಿರ್ತಿತ್ತು.ಆದ್ರೆ ಎಲ್ಲಾ ದುಡ್ಡಿನ ಸುತ್ತಲೇ ಗಿರಕಿ ಹೋಡೆಯೋ ಈ ದಿನಗಳಲ್ಲಿ ಇದು ಕಷ್ಟ!!
ಒಂದು ಮಾತು ಮರೆತೆ ಹೋಗಿತ್ತು!
ನಾನು ಮಲ್ಟಿಪ್ಲೆಕ್ಸ್ ಗೂ ಹೋಗಿದ್ದೀನಿ ಹಾಗೆ ಮತ್ತಿಕೆರೆಯ ಟೆಂಟ್ ನಲ್ಲಿ ಕುಳಿತು ಸಿನೆಮಾ ನೋಡಿದ್ದೀನಿ.
“ಮಲ್ಟಿಪ್ಲೆಕ್ಸ್‌ನ ಆರಿಸಿಕೊಳ್ಳುವವರ ಮನಸ್ಸು ಎಂತಹದು, ಮತ್ತು ಮಲ್ಟಿಪ್ಲೆಕ್ಸ್‌ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು ಎಂಬುದು ಅದಾಗಲೇ ಪ್ರಮಾಣೀಕೃತ ಸತ್ಯ” ಅಂತ ನೀವು ಹೇಳಿದ್ದು ಸ್ವಲ್ಪ ಬೇಸರ ತರಿಸಿತು:(
ಗಿರೀಶ್ ಕಾಸರವಳ್ಳಿಯವರ ’ಗುಲಾಬಿ ಟಾಕೀಸ್’ ಕೂಡಾ ಬಿಡುಗಡೆಯಾಗಿದ್ದು ಪಿವಿ ಆರ್ ಮಲ್ಟಿಪ್ಲೆಕ್ಸ್ ನಲ್ಲೇ! ಹಾಗಿದ್ರೆ ಗಿರೀಶ್ ಕಾಸರವಳ್ಳಿ ಕೂಡಾ ಮಲ್ಟಿಪ್ಲೆಕ್ಸ್ ಮನಸ್ಥಿತಿಯವರಾ??
’ಗುಲಾಬಿ ಟಾಕೀಸ್’ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆ ಆಗೋದಿಕ್ಕೆ ’ಅದರದ್ದೇ ’ ಆದ ಕಾರಣಗಳಿತ್ತು ಅಂತ ನೀವು ಹೇಳಬಹುದು .ಆದರೆ ಮಲ್ಟಿಪ್ಲೆಕ್ಸ್ ಗಳಿಗೆ ’ಅವರದ್ದೇ ’ ಆದ ಕಾರಣಗಳಿಂದ (ಪಾನ್ ಪರಾಗ್ ಘಾಟು!) ಹೋಗೋರು ಇದ್ದಾರಲ್ಲ ಸರ್ .ಅವರ ಮನಸ್ಥಿತಿಯ ಬಗ್ಗೆ ಆಪಾದಿಸೋದು ಸರಿ ನಾ??
-Sandeep Kamath
kadalateera.blogspot.com
[email protected]

‍ಲೇಖಕರು avadhi

December 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This