ಸುರೇ೦ದ್ರನಾಥ್ Recommends

– ಸುರೇ೦ದ್ರನಾಥ್

 

“I am not sure that I am a man…I have created life outside me as men do. But I have also created life inside me, as women do. What does that make me? Will a body such as mine fetter or free me?” ಕನ್ನಡದಲ್ಲಿ ಸುಮಾರು ಹೀಗಾಗಬಹುದು. “ನಾನು ಗಂಡಸು ಹೌದೋ ಅಲ್ಲವೋ ನನಗೇ ಖಾತ್ರಿಯಿಲ್ಲ. ಎಲ್ಲಾ ಗಂಡಸರಂತೆ ನನ್ನಿಂದ ಹೊರಗೆ ಒಂದು ಜೀವವನ್ನು ಸೃಷ್ಟಿಸಿದ್ದೇನೆ. ಆದರೆ, ಎಲ್ಲಾ ಹೆಂಗಸರಂತೆ ನನ್ನೊಳಗೂ ಒಂದು ಜೀವವನ್ನು ಸೃಷ್ಟಿಸಿದ್ದೇನೆ. ಈ ಸ್ಥಿತಿ ನನಗೇನು ಮಾಡಬಹುದು? ಈ ದೇಹ ನನ್ನನ್ನು ಕಟ್ಟಿ ಹಾಕುತ್ತದೋ ಅಥವಾ ಮುಕ್ತಗೊಳಿಸುತ್ತದೋ?” ದೇವದತ್ ಪಟ್ನಾಯಕ್ ಅವರ The Pregnant King ಕಾದಂಬರಿ ಓದಿ ಮುಗಿಸಿದೆ. ಅದೊಂದು ಅನುಭವ. ಅನುಭವಿಸಿದ ರೋಮಾಂಚನ ಅಥವಾ ತಲ್ಲಣದಿಂದ ಇನ್ನೂ ಹೊರಬಂದಿಲ್ಲ. ಬರಲಾಗಿಲ್ಲ.  

 

ಮೇಜಿನ ಮೇಲೆ

ಇನ್ನೊಂದು ಪುಸ್ತಕ

ಕಾಯುತ್ತಿದೆ. ನಿಲಾಂಜನ್

ಚೌಧುರಿ ಅವರ Bali And The Ocean Of Milk.

]]>

‍ಲೇಖಕರು G

June 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. meera

  sir…..
  nivu bareda salugalinda The Pregnant King kadambari odabeku anside…salu
  galu kannada rupavannu tumba chennagi alankarisi kondide
  nimma mejina meliruva ennondu kadambri bahubega namma munde
  teredu kollali…..

  ಪ್ರತಿಕ್ರಿಯೆ
 2. Vikram Hathwar

  ನೂರು ಹೆಂಡಿರ ರಾಜ ಮಕ್ಕಳಿಲ್ಲ ಅಂತ ಯಾಗ ಮಾಡುತ್ತಾನೆ. ಬಾಯಾರಿಕೆ ಅಂತ ಯಾಗಕ್ಕಾಗಿ ಅಭಿಮಂತ್ರಿಸಿದ ನೀರನ್ನೆ ಕುಡಿದು ಮಗುವಿಗೆ ಜನ್ಮ ನೀಡುತ್ತಾನೆ. ಅವನು ತಂದೆಯೋ ಅಥವಾ ತಾಯಿಯೋ ಅನ್ನೋದು ಪ್ರಶ್ನೆ. ಯಾವುದೋ ಪುರಾಣದಲ್ಲಿ ಬರುತ್ತೆ ಈ ಕಥೆ.

  ಪ್ರತಿಕ್ರಿಯೆ
 3. shashi

  Read This:
  ಇದಕ್ಕಿಂತ ವಿಚಿತ್ರವಾದ ಕತೆಯೊಂದು ಮಹಾಭಾರತದಲ್ಲಿದೆ. ಅವನ ಹೆಸರು ಯವನಾಶ್ವ. ಅವನಿಗೆ ನೂರಾರು ಮಂದಿ ರಾಣಿಯರು. ಆದರೂ ಅವನಿಗೆ ಮಕ್ಕಳಾಗಿಲ್ಲ. ಅದರಿಂದಾಗಿ ಬೇಸರಗೊಂಡ ಆತ ಭೃಗು ಮುನಿಗಳ ಬಳಿ ಪರಿಹಾರ ಕೇಳುತ್ತಾನೆ. ಭೃಗು ಮುನಿಗಳು ಪುತ್ರಕಾಮೇಷ್ಠಿ ಯಾಗ ಮಾಡುವಂತೆ ಹೇಳುತ್ತಾರೆ. ಅದಕ್ಕೊಪ್ಪುವ ಯವನಾಶ್ವ, ಯಾಗ ಮಾಡುತ್ತಾನೆ. ಭೃಗು ಮುನಿಗಳೇ ಯಾಗ ನಡೆಸಿಕೊಡುತ್ತಾರೆ. ಯಾಗದ ನಡುವೆ ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ಕಮಂಡಲದಲ್ಲಿ ಇಟ್ಟಿರುತ್ತಾರೆ ಭೃಗು. ತುಂಬ ದಾಹವಾಯಿತೆಂದು ಆ ನೀರಿನ ಮಹತ್ವ ತಿಳಿಯದೇ ಯವನಾಶ್ವ ಅದನ್ನು ಕುಡಿದುಬಿಡುತ್ತಾನೆ.
  ಕಾಲಕ್ರಮೇಣ ಅವನೇ ಒಂದು ಮಗುವಿಗೆ ಜನ್ಮನೀಡುತ್ತಾನೆ. ಆ ಮಗುವಿನ ಹೆಸರು ಮಾಂಧಾತ. ಮಾಂಧಾತನಿಗೆ ಯವನಾಶ್ವ ತಾಯಿಯೂ ಹೌದು ತಂದೆಯೂ ಹೌದು. ಎರಡು ಪೂರಕವಾದ ಮತ್ತು ವಿರುದ್ಧವಾದ ಶಕ್ತಿಗಳು ಒಂದೇ ಬಿಂದುವಿನಲ್ಲಿ ಸಂಽಸಿದಾಗ ಏನಾಗಬಹುದು? ಬೀಜ ಮತ್ತು ಭೂಮಿ ಒಂದೇ ಆದ ಅಪೂರ್ವ ಸಂಗಮದ -ಲ ಅದು. ತಂದೆಯೂ ಅವನೇ ತಾಯಿಯೂ ಅವನೇ. ಮಾಂಧಾತ ಅವನನ್ನು ಏನಂತ ಕರೆಯಬೇಕು? ಅಮ್ಮ ಅಂದರೂ ತಪ್ಪಿಲ್ಲ, ಅಪ್ಪ ಎಂದರೂ ತಪ್ಪಿಲ್ಲ.
  ಯವನಾಶ್ವ ಹೇಳುತ್ತಾನೆ. ನಾನು ಗಂಡಸಾ, ಗೊತ್ತಿಲ್ಲ. ನನಗೇ ಖಚಿತವಿಲ್ಲ. ಗಂಡಸಿನ ಹಾಗೆ ನನ್ನ ದೇಹದ ಆಚೆ ನಾನು ಜೀವವೊಂದನ್ನು ಸೃಷ್ಟಿಸಿದ್ದೇನೆ. ಅದೇ ಹೊತ್ತಿಗೆ, ಆ ಜೀವ ಹೆಣ್ಣಿನಲ್ಲಾಗುವಂತೆ ನನ್ನೊಳಗೇ ಸೃಷ್ಟಿಯಾಗುತ್ತಿದೆ. ಹಾಗಿದ್ದರೆ ನಾನು ಏನಾದ ಹಾಗಾಯಿತು?
  ಅದು ಯವನಾಶ್ವನ ಪ್ರಶ್ನೆ. ಇದು ಬಂಧನವೋ ಬಿಡುಗಡೆಯೋ ಗೊತ್ತಾಗುತ್ತಿಲ್ಲ ಅನ್ನುತ್ತಾನೆ ಅವನು. ಈ ಮಧ್ಯೆ ಅವನ ತಾತ್ವಿಕ ಪ್ರಶ್ನೆ, ರಾಜತಾಂತ್ರಿಕ ಪ್ರಶ್ನೆಯೂ ಬರುತ್ತದೆ. ಮಕ್ಕಳಿಲ್ಲದವನು ರಾಜನಾಗುವಂತಿಲ್ಲ. ಅದು ನಿಯಮ. ಹೀಗಾಗಿ ಪಟ್ಟವೇರುವುದಕ್ಕೆ ಅವನಿಗೆ ಮಗ ಬೇಕೇ ಬೇಕು. ಯವನಾಶ್ವನಿಗೆ ಕೊನೆಗೂ ಮಗ ಹುಟ್ಟುತ್ತಾನೆ. ಆದರೆ ಯವನಾಶ್ವ ತಂದೆಯಾದನೋ ತಾಯಿಯಾದಳೋ? ತಾಯಿಯಾದರೆ ಅವಳು ಪಟ್ಟವೇರುವಂತಿಲ್ಲ. ಹೆಣ್ಣಿಗೆ ಪಟ್ಟದ ಹಕ್ಕಿಲ್ಲ. ತಂದೆಯಾದರೆ ಮಗುವನ್ನು ಹೊತ್ತು ಹೆತ್ತದ್ದು ಹೇಗೆ?
  ಈ ದ್ವಂದ್ವಕ್ಕೆ ಉತ್ತರವೇ ಇಲ್ಲವೇ?
  http://avadhimag.online/?p=55840

  ಪ್ರತಿಕ್ರಿಯೆ
 4. prathibhanandakumar

  suri, add three more books on your table – mine! Coffee House, Mudukiyarigidu Kalavalla, and Anudinada Antaragange. But don’t write about them!!

  ಪ್ರತಿಕ್ರಿಯೆ
  • suri

   Pratibha, I had COFFEE HOUSE on my table and finished it and it is on the shelf now in my collection. I keep going back to that book (for that matter I keep going back to all poetry, Kannada / English) the moment I need to change my reading. Read a couple of lines, inspiring lines I mean, and hunt for a new book and start reading afresh. But you know that I would much prefer to listen to someone reading poetry, particularly the poet her/himself. I feel I’d understand the poetry better that way. I enjoyed your reading of poetry during one of those sessions which Arati and Mamata had organized. I wouldn’t have understood it had I read it myself. Yet to get ANUDINADA ANTARAGANGE. I am yet to buy the book which I should do in a couple of days. The other too. But I am waiting to read Anudinada…I have read and heard all talking about it. And I promise you that I shall not, repeat SHALL NOT, write about it. May be take a couple of lines to quote somewhere..Hope you allow me to do that. Did you read Padma Desai’s BREAKING OUT: AN INDIAN WOMAN’S AMERICAN JOURNEY? You should!

   ಪ್ರತಿಕ್ರಿಯೆ
 5. suri

  ದೇವತೆಯೊಬ್ಬ ಅಪ್ಸರೆಯಾಗಿ ರೂಪಾಂತರಗೊಂಡು ಮತ್ತೊಬ್ಬ ದೇವತೆಯನ್ನು ಮೋಹಿಸುತ್ತಾನೆ. ತನ್ನ ಮದುವೆಯಾದ ರಾತ್ರಿ ರಾಜಕುಮಾರನೊಬ್ಬ ತಾನು ಗಂಡಸೇ ಅಲ್ಲ ಎಂದು ಕಂಡುಕೊಳ್ಳುತ್ತಾನೆ. ಮತ್ತೊಬ್ಬ ರಾಜನನ್ನು ಅವನ ಮಕ್ಕಳು ಅಮ್ಮ ಎಂದೂ ಕರೆಯುತ್ತಾರೆ ಅಪ್ಪ ಎಂದೂ ಕರೆಯುತ್ತಾರೆ. ನಾಯಕನೊಬ್ಬ ಶಿಖಂಡಿಯಾಗಿ ಸೀರೆ ತೊಟ್ಟು ಜೀವನ ಮಾಡುತ್ತಾನೆ. ರಾಜಕುಮಾರಿಯೊಬ್ಬಳು ತನ್ನ ಪ್ರತೀಕಾರಕ್ಕೆ ಮೊದಲು ಗಂಡಸಾಗಬೇಕು. ರಾಜಕುಮಾರರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಾ, ಕೊನೆಯಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ, ಅವರಲ್ಲೊಬ್ಬ ಒಬ್ಬ ಹೆಂಗಸಾಗಿ ರೂಪಾಂತರಗೊಂಡು ಮದುವೆಯಾಗಿ ಬಾಳುತ್ತಾರೆ. ಭಾರತದ ಪುರಾಣಗಳ ತುಂಬಾ ಇಂತಹ ವಿಚಿತ್ರವಾದ ಕಥೆಗಳಿವೆ. ಇದನ್ನೇ ದೇವದತ್ ಪಟ್ನಾಯಕ್ ಅವರು The Man Who Was a Woman and Other Queer Tales from Hindu Lore ಪುಸ್ತಕದಲ್ಲಿ ಬರೆದಿದ್ದಾರೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: