ಸೈಬರ್ ಪೋಲೀಸರಿಲ್ಲದೇ ಹೋದರೆ ಅಸಾಧ್ಯ…

ಬ್ಲಾಗ್ ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ ಬ್ಲಾಗಿಗರು ಈ ವಿಷಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ.

ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ಬ್ಲಾಗ್ ಲೋಕದಲ್ಲಿ ಒಂದಿಷ್ಟು ತಂಗಾಳಿ ಹರಡಲಿ

speechbubble

ಪ್ರಕಾಶ್ ಹೆಗಡೆ

ಮರೆಯಲ್ಲಿ ನಿಂತು ಕಲ್ಲೆಸೆದು ಮಜಾ ನೋಡುವ ಮನಸ್ಥಿತಿ…..

ನನ್ನ ಬ್ಲಾಗಿಗೂ ಇಂಥಹ ಪ್ರತಿಕ್ರಿಯೆ ಕೆಲವು ಬಂದಿತ್ತು..

ಸುಮ್ಮನೆ ಡಿಲೀಟ್ ಮಾಡಿ ತೆಗೆದು ಹಾಕಿದೆ

ನೀಲಾಂಜನ

ಈ ಕಾಮೆಂಟ್ ಗಲಾಟೆ ಇರೋದೆಲ್ಲ ಮೀಡಿಯಾ-ಪತ್ರಕರ್ತರ ಬ್ಲಾಗ್ ಗಳಿಗೆ ಮಾತ್ರ ಅನ್ಸತ್ತೆ !ನಮ್ಮಂತಹವರ ತಂಟೆಗೆ ಯಾರೂ ಬರೋಲ್ಲ

ಅನಿಕೇತನ ಸುನಿಲ್

ಆತ್ಮೀಯರೇ,

ನಾವು ಅರಿಸಿಕೊಲ್ಲೋ ವಿಷಯದ ಮೇಲೆ ತಾನೇ ಕಾಮೆಂಟ್ ಬರೋದು…….ಎಷ್ಟು ತಗೋಬೇಕು ಬಿಡಬೇಕು…ಯಾವ್ದು ಅಗತ್ಯ ಅನಗತ್ಯ ಅಂತ ಗೊತ್ತಿದ್ದರೆ ಅಷ್ಟೇನೂ ತೊಂದ್ರೆ ಆಗೋಲ್ಲ ಅನ್ಕೋತೀನಿ…..ಬಹುಷಃ ನಾನು ಹೊಸಬನಾದ್ದರಿಂದ ನಂಗೆ ಸಮಸ್ಯೆ ಹೆಚ್ಚು ಗೊತ್ತಾಗ್ತಿಲ್ಲ ಅನ್ಕೋತೀನಿ.

ಅಲ್ಲದೆ ಕಾಮೆಂಟ್ moderation ಅನ್ನೋ option ಇದ್ದೆ ಇರುತ್ತಲ್ಲ?

Anyways ಲೇಖನ ಚಿಂತನೆಗೆ ಹಚ್ಚುವಂತಿದೆ.

ಧನ್ಯವಾದಗಳು ಮೋಹನ್ ಸರ್ ಗೆ.

ಶ್ರೀನಿಧಿ.ಡಿ.ಎಸ್

ಸಮಸ್ಯೆ ಏನಾಗಿದೆ ಅಂದ್ರೆ, ಇಂಟರ್ ನೆಟ್ ಎದುರು ಗಂಟೆಗಟ್ಟಲೇ ಕೂತಿರೋಷ್ಟು ಸಮಯ, ಎಲ್ಲರಿಗೂ ಇರೋದಿಲ್ಲ. ಹಾಗಾಗಿ, ಈ ಅನಾನಿಮಸ್ ಗಳ ಐಪಿ ಹುಡುಕೋದು,

ಅವರುಗಳ ಬೆನ್ನು ಹತ್ತೋದು, ಕಷ್ಟ ಸಾಧ್ಯ. ಹೀಗಾಗಿ ತಮಗೇನೂ ಮಾಡೋಕಾಗೋದಿಲ್ಲ ಎಂದು ಗ್ಯಾರೆಂಟಿಯಾಗಿರೋ ಈ ಅನಾಮಿಕ ಪಡೆ ನಿರಾಳವಾಗಿದೆ.

ಸುಮ್ಮನೇ ಒಂದು ಫೇಕ್ ಪ್ರೊಫೈಲನ್ನ ಬ್ಲಾಗರಲ್ಲೋ, ವರ್ಡ್ ಪ್ರೆಸ್ಸಲ್ಲೋ ಕ್ರಿಯೇಟ್ ಮಾಡಿಕೊಳ್ಳೋದು ನಿಮಿಷದ ಕೆಲಸ.ಹೀಗಾಗಿ, ಅಧಿಕೃತವಾಗೇ , ಬ್ಲಾಗರ್ ಅಕೌಂಟಿಂದಲೇ ಕಮೆಂಟು ಬಂದಿರುತ್ತದೆ, ಹೋಗಿ ನೋಡಿದರೆ ಪ್ರೊಫೈಲಿನ ಬಾಗಿಲು ಮುಚ್ಚಿರುತ್ತದೆ.ಏನೋ ಮನಸ್ಸಿನ ಸಮಾಧಾನಕ್ಕೆ ಅಂತ ಬರೆದುಕೊಂಡಾಗ, ಆ ನೆಮ್ಮದಿಯನ್ನೇ ಈ ಕಮೆಂಟುಗಳು ಹಾಳು ಮಾಡಿರುತ್ತವೆ.

ಇನ್ನು ಅವುಗಳ ಬೆನ್ನು ಹತ್ತೋದು ಸಾಧ್ಯವ? ಹಾಳಾಗಿ ಹೋಗಲಿ ಅಂತ ಸುಮ್ಮನಿರಬೇಕಾಗುತ್ತದೆ.

ಇನ್ನು , ಕೆಲ ಬಾರಿ ಐಪಿ ಹುಡುಕಿ ಏನು ಪ್ರಯೋಜನ- ಒಂದು ಸಂಸ್ಥೆ- ಒಂದೇ ಇಂಟರ್ ನೆಟ್ ಸಿಸ್ಟ್ಮ್ ಇದೆ ಅಂದುಕೊಳ್ಳಿ- ಒಬ್ಬಾತ ನೇರವಾಗಿ ಆತನ ಹೆಸರಲ್ಲೇ ಕಮೆಂಟಿಸಿದ ಮೇಲೆ, ಮತ್ತೊಬ್ಬ ಬಂದು ಅನಾಮಿಕ ಪ್ರತಿಕ್ರಿಯೆ ನೀಡಬಹುದು, ಆವಾಗ?

ರಂಜಿತ್

ಅನಾನಿಮಸ್ ಗಳ ಕಾಟ ಒಂದಾದರೆ, ಬೇರೆ ಮುಗ್ಧ ಜನರ ಹೆಸರು ಬಳಸಿಕೊಂಡು ಮಾಡುವ ಕಾಮೆಂಟುಗಳ ವಿಕೃತಿ ಇನ್ನೊಂದು ರೀತಿ.(ಇತ್ತೀಚೆಗಷ್ಟೇ ತಾನು ಕನ್ನಡಪ್ರಭ ಪತ್ರಿಕೆಯ ಎಡಿಟೋರಿಯಲ್ ವಿಭಾಗದಿಂದ ಅಂತ ಹೇಳಿಕೊಂಡು ಒಬ್ಬ ವ್ಯಕ್ತಿಯಿಂದ ಕಾಮೆಂಟ್ ಬಂದಿತ್ತು. ನಿಜ ವಿಷಯ ಗೊತ್ತಾದದ್ದು ನಾನು ಕನ್ನಡಪ್ರಭ ಸಂಪಾದಕರಿಗೆ ಕಂಪ್ಲೇಂಟ್ ಮಾಡಿ ಅವರು ಸ್ಪಷ್ಟೀಕರಣ ನೀಡಿದ ಮೇಲೆಯೇ)

ಸೈಬರ್ ಪೋಲೀಸರಿಲ್ಲದೇ ಹೋದರೆ ಇಂಥ ವಿಕೃತಿ ಮಟ್ಟಹಾಕಲು ಅಸಾಧ್ಯವೇನೋ ಅನ್ನಿಸುತ್ತದೆ

ಬಾಲು

ಎನೂ ಸಮಸ್ಯೆ ಇಲ್ಲ. ಅವರ ಕಾಮೆ೦ಟ್ ನ ಪ್ರಕಟಿಸದೆ ಇದ್ದರೆ ಆಯಿತು. ಬ್ಲಾಗು ನಮ್ಮದು, ಅದರಲ್ಲಿ ಬರುವ ವಿಷಯಗಳೂ, ಬರೆಯುವ ಸ್ವಾತ೦ತ್ರ್ಯ ನಮ್ಮದೆ. ೩-೪ ಬಾರಿ ಪ್ರಕಟಿಸದೆ ಇದ್ದರೆ ಅಮೇಲೆ ಅವರೆ ಕಾಮೆ೦ಟ್ ಹಾಕೊದನ್ನ ನಿಲ್ಲಿಸ್ತಾರೆ. ಎನ೦ತೀರಿ?

ಈ ತರದ ಕಾಮೆ೦ಟ್ ಗಳು ಎಲ್ಲರಿಗೂ ಬರುತ್ತವೆ, ಆದರೆ ಅದನ್ನು ಬ್ಲಾಗ್ ನ ವಾರಸು ದಾರರು ಪ್ರಕಟಿಸ ಬಾರದು ಅಷ್ಟೆ. ಒಬ್ಬ ಬೈದು ಬರೆದ್ರೆ, ಇನ್ನೊಬ್ಬ ಅವನಿಗೆ ಬೈದು ಉತ್ತರ ಕೊಡ್ತಾನೆ.

ಮು೦ದೆ ಅಲ್ಲಿ ಉಳಿಯೊದು ಜಗಳ, ವಿರಸ ಅಷ್ಟೆ. ಮೀಡಿಯ ಪತ್ರ ಕರ್ತರಿಗೆ ಇ ಅನುಭವ ಜಾಸ್ತಿ ಅನ್ಸುತ್ತೆ

ಶ್ರೀನಿವಾಸಗೌಡ

ನಾನ್ ರೆಡಿ,

ನನಗೆ ಬಂದಿರುವ ಒಂದಷ್ಟು ಕಾಮೆಂಟುಗಳನ್ನು ಕಳಿಸುತ್ತೇನೆ, ಅವುಗಳ ಐಪಿ ಅಡ್ರೆಸ್ ಕಳಿಸಿಕೊಡಿ ಉಳಿದದ್ದನ್ನ ನಾನ್ ನೋಡಿಕೊಳ್ತೇನೆ.

ಯೂನಿಕ್ ಸುಪ್ರಿ

ಬ್ಲಾಗ್ ಎನ್ನುವುದು ಒಂದು ಸಂಸ್ಥೆಯಾಗಿಲ್ಲವಾದ್ದರಿಂದ ಯಾವ ಚರ್ಚೆಯನ್ನೂ ನಾವು ಆ ದೃಷ್ಟಿಕೋನದಿಂದ ಶುರು ಮಾಡಿದರೆ ಅದು ಅನುಪಯುಕ್ತ ಅನ್ನಿಸುತ್ತದೆ. ಬ್ಲಾಗ್ ಅಂಗಳ, ಬ್ಲಾಗ್ ಮಂಡಳ, ಬ್ಲಾಗಿಗರ ಕೂಟ ಎಂಬುದೆಲ್ಲಾ ಮುಖವಿಲ್ಲದ ಬ್ಲಾಗಿಂಗಿಗೆ ಒಂದು ಸಮುದಾಯದ, ಒಂದು ಗುಂಪಿನ, ಕುಟುಂಬದ ಮುಖ ಕೊಡುವ ಪ್ರಯತ್ನಗಳು ನಿರರ್ಥಕ.

ಬ್ಲಾಗಿಂಗಿನಲ್ಲಿ ಜವಾಬ್ದಾರಿಯಿಲ್ಲದ ಸ್ವಾತಂತ್ರ್ಯವಿದೆ ಎಂದು ಭಾವಿಸುವುದು ನಮ್ಮ ಮೊದಲನೆಯ ತಪ್ಪು. ಯಾರು ಏನು ಬೇಕಾದರೂ ಬರೆಯಬಹುದು ಎನ್ನುವುದು ನಮಗೆ ನಮ್ಮ ಸ್ವಾತಂತ್ರ್ಯವಾಗಿ ಕಂಡರೆ ಕಮೆಂಟಿಗರಿಗೂ ಅದು ತಮ್ಮ ಸ್ವಾತಂತ್ರ್ಯವಾಗಿ ಕಾಣುತ್ತೆ. ವರ್ಡ್ ಪ್ರೆಸ್, ಬ್ಲಾಗ್ ಸ್ಪಾಟ್ ಮುಂತಾದವುಗಳಲ್ಲಿ ಪರಿಚಿತರಿಗಾಗಿ ಮಾತ್ರ ಬ್ಲಾಗ್ ಬರಹ ಓದಲು ಅವಕಾಶ ಮಾಡಿಕೊಡುವ, ನಾವು ಅನುಮತಿಸಿದ ಇ-ಮೇಲ್ ಐಡಿಗಳ ಓದುಗರು ಮಾತ್ರ ಪ್ರತಿಕ್ರಿಯೆ ನೀಡಬಹುದಾದ ವ್ಯವಸ್ಥೆಗಳಿವೆ. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ vulnerable ಆಗಿ ವರ್ತಿಸಿ ಆ ಮೇಲೆ ದಾಳಿಯಾಯಿತು ಎಂದು ದೂರುವುದು ಖಂಡಿತಾ ಬುದ್ಧಿವಂತಿಕೆಯಲ್ಲ

‍ಲೇಖಕರು avadhi

August 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

4 ಪ್ರತಿಕ್ರಿಯೆಗಳು

 1. ನೀಲಾಂಜಲ

  ಇಲ್ಲಿ “ನೀಲಾಂಜನ” ಅಂತ ಆಗಬೇಕು. ನಾನು ‘ನೋ ಕಮೆಂಟ್ಸ್ ‘ ಅಂತಾ ಇದ್ರೆ ಇದೇನು !!!

  ಪ್ರತಿಕ್ರಿಯೆ
 2. avadhi

  ಸರಿಪಡಿಸಲಾಗಿದೆ. ಗಮನಕ್ಕೆ ತಂದದ್ದಕ್ಕೆ ಥ್ಯಾಂಕ್ಸ್

  ಪ್ರತಿಕ್ರಿಯೆ
 3. ಜಯದೇವ

  Moderate ಮಾಡದೆ ಪಬ್ಲಿಶ್ ಮಾಡಿದ್ರೆ ಹೀಗೆಲ್ಲಾ ಆಗುತ್ತೆ. ಆದ್ದರಿಂದ ದಯವಿಟ್ಟು ಬ್ಲಾಗ್ ಅನ್ನ ಮೋಡರೇಟ್ ಮಾಡಿ. ಒಂದು ವಾರ್ತಾಪತ್ರಿಕೆ ಕಛೇರಿಗೂ ಎಲ್ಲಾ ಥರದ ಕಾಮೆಂಟ್ಸ್ ಬರುತ್ತೆ. ಆದ್ರೆ ಅವ್ರು ಎಲ್ಲಾ ಪಬ್ಲಿಷ್ ಮಾಡೋದಿಲ್ಲ ಅಲ್ವೆ?
  ಇನ್ನೊಂದು ವಿಷ್ಯ. . . ಸಂಪಾದಕರು ಮಾಡರೇಟ್ ಮಾಡಿಯೇ ಪಬ್ಲಿಷ್ ಮಾಡೋ ಬ್ಲಾಗ್ ಅಥವಾ ಪೋರ್‍ಟಲ್ಗಳಲ್ಲೂ ಅಸಂಬದ್ಧ, ಅಶ್ಲೀಲ ಕಾಮೆಂಟ್ಸ್ ಬರುತ್ತಲ್ವ? ಅದಕ್ಕೆ ಏನು ಹೇಳೋಣ?

  ಜಯದೇವ

  ಪ್ರತಿಕ್ರಿಯೆ
 4. umesh desai

  ಬ್ಲಾಗ್ ಬರೆದು ಭೇಷ ಎನಿಸಿಕೊಳ್ಳಬೇಕು ಎಂಬುದು ಕೆಲವರ ಖಯಾಲಿ ಇಂತಹವರು ಸಿಕ್ರೆ ಸಾಕು ಎಂದು ಹಲವರು ಕಾದು ಕುಳಿತಿರ್ತಾರ ತಗೊರಿ ಮತ್ತೇನು ಆಳಿಗೊಂದು ಕಲ್ಲು ಹೊಡಿಸಿಕೊಂಡವ ಮತ್ತ ಎಂದೂ ಈ ಬ್ಲಾಗ್ ಕಡೆ ತಲಿಹಾಕೂದಿಲ್ಲ…!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: