ಮೇಫ್ಲವರ್ ಅಂಗಳದಲ್ಲಿ ಕವಿತೆಯ ಮಳೆ..

ಇಬ್ಬರು ಕವಯತ್ರಿಯರು ಕಾವ್ಯದ ಜೊತೆ ಬೆಂಗಳೂರಿಗೆ ಬಂದಿದ್ದರು. ದಕ್ಷಿಣ ಕನ್ನಡದ ಸುಳ್ಯದ ಹೇಮಾ ವೆಂಕಟ್ ಹಾಗೂ ಶಿವಮೊಗ್ಗದ ಕೆ ಅಕ್ಷತಾ ಮೇ ಫ್ಲವರ್ ಅಂಗಳದಲ್ಲಿ ಕವನಗಳ ಮಳೆ ಸುರಿಸಿದರು. ಸದಾ ಸುರಿಯುತ್ತಿದ್ದ ಮಳೆ ದಿಢೀರನೆ ನಾಪತ್ತೆಯಾದರೂ ಕಾವ್ಯ ಮಳೆಗಂತೂ ಕೊರತೆಯಾಗಲಿಲ್ಲ. ಪದಗಳಲ್ಲಿ ಅವಿತ ಕವಿತೆ ಎಲ್ಲರೆದುರು ಹಾಜರಾಯಿತು.
ಭಾಗವಹಿಸಿದವರ ಪೈಕಿ ಚಿತ್ರಗಳಲ್ಲಿ ಕಾಣಿಸಿಕೊಂಡವರು- ಹೇಮಾ ವೆಂಕಟ್, ಕೆ ಅಕ್ಷತಾ, ಜೋಗಿ, ಚಂದ್ರಮೌಳಿ, ಅಪಾರ, ಪ್ರಕಾಶ್ ಕಂಬತ್ತಳ್ಳಿ, ಡಿ ವಿ ಪ್ರಹ್ಲಾದ್, ಮಮತಾ ಸಾಗರ್, ಎಚ್ ಎನ್ ಆರತಿ, ವಿದ್ಯಾರಷ್ಮಿ ಪೆಲತಡ್ಕ, ಶ್ರೀದೇವಿ ಕಳಸದ, ಸತೀಶ್ ಶಿಲೆ, ಭಾರತಿ, ಧರಣೀಶ್, ಶ್ರೀನಿವಾಸ ಗೌಡ, ಡಾ. ಲೀಲಾ ಸಂಪಿಗೆ, ದೀಪಿಕಾ, ವಿದ್ಯಾ ನಿಗಳೆ..

‍ಲೇಖಕರು avadhi

August 2, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮ್ಮನಾಗುವುದೆಷ್ಟೊಂದು ಕಷ್ಟ!

ಅಮ್ಮನಾಗುವುದೆಷ್ಟೊಂದು ಕಷ್ಟ!

ರೂಪ ಹಾಸನ ಅದೋ ಕಿವಿಗೊಟ್ಟು ಕೇಳುದೂರದಲ್ಲೆಲ್ಲೋ ಕಂದ'ಅಮ್ಮಾ' ಎಂದು ಆರ್ತವಾಗಿಚೀರುತಿರುವ ಸಂಕಟದ ದನಿ… ತೆರೆತೆರೆಯಾಗಿ...

ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..

ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..

ಮೂಲ: ಕೆ ಸಚ್ಚಿದಾನಂದನ್ಕನ್ನಡಕ್ಕೆ: ರಾಜು ಎಂ ಎಸ್ ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ ಬಾಗ್ಲ ಚೀಲ್ಕ ಹಾಕ್ಬ್ಯಾಡ ಮುಂಜಾನಿ ಕಾಣಿವ್ಯಾಗ,...

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

8 ಪ್ರತಿಕ್ರಿಯೆಗಳು

 1. Daraneesh bookanakere

  mayflower angaladalli surida maleyalli nanu
  nenede ennuvudee khushi. K. Akshata avara
  kavanagalastee matu kushikottavu.
  ellu natakeeya annisalilla. thumba gamgeera
  vicharagalannu saralavagi helida parige
  pranamagalu. matinante avara kavithegalu
  saralavagi, neravagi mana muttidavu.
  Thank u Akshatha.
  Lankesh avarannu esta paduva nange Akshara
  avaru nanu Lankesh avarannu mattasth esta
  paduvanthe madidaru.
  Hennobbalu maduveyagi gandana manege hoda
  hosadaralli anubhivisuvude nijavada ontithana
  ennuva Lankesh mathugalu mechhuge aythu.
  Hema venkat avara kavithegalalli huduganada
  nanage hennu hechechchu spastavagutta
  aadalu enisitu.
  evaribbarigu migilagi thanks helabekagiruvudu…
  Mohan sirge. Thank u sir.
  nimma kalpane thuba chennagige.

  ಪ್ರತಿಕ್ರಿಯೆ
 2. avadhi

  ಮೇಫ್ಲವರ್ ಅಂಗಳದಲ್ಲಿ ಸುರಿದ ಮಳೆಯಲ್ಲಿ ನಾನು ನೆನೆದೆ ಎನ್ನುವುದೇ ಖುಷಿ. ಕೆ. ಅಕ್ಷತಾ ಅವರ ಕವನಗಳಷ್ಟೇ ಮಾತೂ ಖುಶಿಕೊಟ್ಟವು. ಎಲ್ಲೂ ನಾಟಕೀಯ ಅನ್ನಿಸಲಿಲ್ಲ. ತುಂಬಾ ಗಂಭೀರ
  ವಿಚಾರಗಳನ್ನು ಸರಳವಾಗಿ ಹೇಳಿದ ಪರಿಗೆ ಪ್ರಣಾಮಗಳು. ಮಾತಿನಂತೆ ಅವರ ಕವಿತೆಗಳೂ
  ಸರಳವಾಗಿ, ನೇರವಾಗಿ ಮನ ಮುಟ್ಟಿದವು. ಥ್ಯಾಂಕ್ ಯು ಅಕ್ಷತಾ.
  ಲಂಕೇಶ್ ಅವರನ್ನು ಇಷ್ಟ ಪಡುವ ನನಗೆ ಅಕ್ಷತಾ ಅವರು ನಾನು ಲಂಕೇಶ್ ಅವರನ್ನು ಮತ್ತಷ್ಟು ಇಷ್ಟ
  ಪಡುವಂತೆ ಮಾಡಿದರು. ‘ಹೆಣ್ಣೊಬ್ಬಳು ಮದುವೆಯಾಗಿ ಗಂಡನ ಮನೆಗೆ ಹೋದ ಹೊಸದರಲ್ಲಿ ಅನುಭವಿಸುವುದೇ ನಿಜವಾದ ಒಂಟಿತನ’ ಎನ್ನುವ ಲಂಕೇಶ್ ಮಾತುಗಳು ಮೆಚ್ಚುಗೆ ಆಯಿತು .
  ಹೇಮಾ ವೆಂಕಟ್ ಅವರ ಕವಿತೆಗಳಲ್ಲಿ ಹುಡುಗನಾದ ನನಗೆ ಹೆಣ್ಣು ಹೆಚ್ಚೆಚ್ಚು ಸ್ಪಷ್ಟವಾಗುತ್ತಾ ಹೋದಳು ಎನಿಸಿತು .
  ಇವರಿಬ್ಬರಿಗೂ ಮಿಗಿಲಾಗಿ ಥ್ಯಾಂಕ್ಸ್ ಹೇಳಬೇಕಾಗಿರುವುದು…ಮೋಹನ್ ಅವರಿಗೆ. ಥ್ಯಾಂಕ್ ಯು ಸರ್ .
  ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ.
  -ಧರಣೀಶ್ ಬೂಕನಕೆರೆ

  ಪ್ರತಿಕ್ರಿಯೆ
 3. shile

  tanna dukha helikolluvudendare
  tanage taane sujiyinda chuchhikondante…

  Buddhanemba kannadiya bimbagalu naavu…

  ninne mayflower angaladalli kelida Hema Venkat kavite saalugalu innu gunuguttuttive. Buddhanemba kannadi – thattane seleyuva prayoga. kalantharadalli darshanika tanna nija swaroopa kaledukondu, tanna samparkakke baruva ellara vyaktitvakke ondu chowkattu needuva kannadiyagibiduttane annisutte. kavanavannu ondu barige keli nanagannisiddu heege.
  Akshatha baravanige prerane hanchikondaddu sogasagittu. Akshatha Lankesh baredaddannu odidaga taanu baredare heege baredenu ennisidante, appi-tappi nanu mathanadidaru Akshatalanteye maataadiyenu annisutte.
  High school dinagalalli kavi, lekhaka, barahagararella bere jagattinavaru ennuva bhavane nannallu ittu. Nammurina lekhakara magalobbalu ododu mugisida takshana sarkaradalli olle kelasa gittisiddannu nodi nanu andukondidde, bahusha lekhakara (bere lokadavaru) makkalige kelasa padeyodu easy!
  Kum Veerabhadrappa omme snehitara hatra heltidrante, avru baravanige arambhisoke munna avrigu bareyoru andre bere rakta-mamsagalinda huttidavaru. Avarigu nammante negadi agatte, talenovu baratte athava naisargika kriyegalu (visarjane kriyegalu) avrigu agtave annodu gottagiddu tumba tadavagiyante!
  Jotege, Akshatala mundina yojaneyannu (ki ra kandante lankesh)Mohan bahirangapadisi avarige mujugara madibitru. Paapa Akshatha – “illa” antha kiruchta idru, yaru kivigodalilla.
  Munde madyasara odisi. Sughosh dubbing irali. Srinivasa Gowda natane (actually adu natane alla – reality show) kuda irali.
  Karyakrama uddakku Sughosh mattu Srija (Hesaru sari endu bhavisiddene, tappiddare kshame irali)camera hididu, sariyada anglegaagi baagi, munnuggi shoot madiddu, yuddhadalli banduku hidida sainikaru shatruge guriyittu, trigger ottuva haage kantidru.
  I really enjoyed the programme.

  ಪ್ರತಿಕ್ರಿಯೆ
 4. ಅಲೆಮಾರಿ

  ಹೊಟ್ಟೆ ಉರಿಸಿದ ಧರಣೀಶ್, ಸತೀಶ್ ಗೆ ಧನ್ಯವಾದಗಳು! ಮೊನ್ನೆ ಮೋಹನ್ ಸರ್ ಮೇಲ್ ಕಳಿಸಿದಾಗ ಈ ತಿಂಗಳ ಕಾರ್ಯಕ್ರಮ ಸೂಪರ್ ಆಗಿರುತ್ತೆ ಅಂದುಕೊಂಡೆ. ಮಳೆ ಮತ್ತು ಕವಿತೆಗಳೂ ಹಾಗೇ ಅಲ್ಲವೆ? ಆದ್ರೆ ನನ್ನ ಕೆಲಸ ಹೇಗಿದೆ ಅಂದ್ರೆ ಸಂಜೆಗಳು ಯಾವತ್ತೂ ದಕ್ಕದೆ ಕೈಯಿಂದ ಜಾರುತ್ತಲೇ ಇರುತ್ತವೆ. ಹಾಗಾಗಿ ಮಿಸ್ ಮಾಡಿಕೊಂಡೆ.
  ಧರಣೀಶ್ ಮತ್ತು ಶಿಲೆ ತಮ್ಮ ಖುಷಿ ಹಂಚಿಕೊಳ್ಳುತ್ತಲೇ ಕಾರ್ಯಕ್ರಮದ ಜಿಸ್ಟ್ ಕೊಟ್ಟುಬಿಟ್ಟಿದ್ದಾರೆ.ಲಕ್ಕಿ, ಅಷ್ಟನ್ನೇ ಸವಿದು ಖುಷಿಯಾಗಿದ್ದೇನೆ.
  ಮುಂದಿನ ದಿನಗಳಲ್ಲೂ ಮೇ ಫ್ಲವರ್ ಇನ್ನೂ ಅರಳಿ, ಚೆಲುವಾಗಲಿ..
  ಮೋಹನ್ ಸರ್ ಗೆ ಥ್ಯಾಂಕ್ಸ್..

  ಪ್ರತಿಕ್ರಿಯೆ
 5. ankitapustaka

  ತನ್ನ ದುಃಖ ಹೇಳಿಕೊಳ್ಳುವುದೆಂದರೆ
  ತನಗೆ ತಾನೇ ಸೂಜಿಯಿಂದ ಚುಚ್ಚಿಕೊಂಡಂತೆ …

  ಬುದ್ಧನೆಂಬ ಕನ್ನಡಿಯ ಬಿಂಬಗಳು ನಾವು…

  ನಿನ್ನೆ ಮೇಫ್ಲವರ್ ಅಂಗಳದಲ್ಲಿ ಕೇಳಿದ ಹೇಮಾ ವೆಂಕಟ್ ಕವಿತೆ ಸಾಲುಗಳು ಇನ್ನೂ ಗುನುಗುಟ್ಟುತ್ತಿವೆ . ಬುದ್ಧನೆಂಬ ಕನ್ನಡಿ- ಥಟ್ಟನೆ ಸೆಳೆಯುವ ಪ್ರಯೋಗ. ಕಾಲಾಂತರದಲ್ಲಿ ದಾರ್ಶನಿಕ ತನ್ನ ನಿಜ ಸ್ವರೂಪ ಕಳೆದುಕೊಂಡು, ತನ್ನ ಸಂಪರ್ಕಕ್ಕೆ ಬರುವ ಎಲ್ಲರ ವ್ಯಕ್ತಿತ್ವಕ್ಕೆ ಒಂದು ಚೌಕಟ್ಟು ನೀಡುವ ಕನ್ನಡಿಯಾಗಿಬಿಡುತ್ತಾನೆ ಅನ್ನಿಸುತ್ತೆ. ಕವನವನ್ನು ಒಂದು ಬಾರಿಗೆ ಕೇಳಿ ನನಗನ್ನಿಸಿದ್ದು ಹೀಗೆ.
  ಅಕ್ಷತಾ ಬರವಣಿಗೆ ಪ್ರೇರಣೆ ಹಂಚಿಕೊಂಡದ್ದು ಸೊಗಸಾಗಿತ್ತು. ಅಕ್ಷತಾ ಲಂಕೇಶ್ ಬರೆದದ್ದನ್ನು ಓದಿದಾಗ ತಾನು ಬರೆದರೆ ಹೀಗೆ ಬರೆದೇನು ಎನ್ನಿಸಿದಂತೆ, ಅಪ್ಪಿ-ತಪ್ಪಿ ನಾನು ಮಾತನಾಡಿದರೂ ಅಕ್ಷತಳಂತೆಯೇ ಮಾತಾಡಿಯೇನು ಅನ್ನಿಸುತ್ತೆ.
  ಹೈಸ್ಕೂಲ್ ದಿನಗಳಲ್ಲಿ ಕವಿ, ಲೇಖಕ, ಬರಹಗಾರರೆಲ್ಲ ಬೇರೆ ಜಗತ್ತಿನವರು ಎನ್ನುವ ಭಾವನೆ ನನ್ನಲ್ಲೂ ಇತ್ತು. ನಮ್ಮೂರಿನ ಲೇಖಕರ ಮಗಳೊಬ್ಬಳು ಓದೋದು ಮುಗಿಸಿದ ತಕ್ಷಣ ಸರ್ಕಾರದಲ್ಲಿ ಒಳ್ಳೆ ಕೆಲಸ ಗಿಟ್ಟಿಸಿದ್ದನ್ನು ನೋಡಿ ನಾನು ಅಂದುಕೊಂಡಿದ್ದೆ, ಬಹುಶ ಲೇಖಕರ (ಬೇರೆ ಲೋಕದವರು) ಮಕ್ಕಳಿಗೆ ಕೆಲಸ ಪಡೆಯೋದು ಈಜಿ!
  ಕುಂ ವೀರಭದ್ರಪ್ಪ ಒಮ್ಮೆ ಸ್ನೇಹಿತರ ಹತ್ರ ಹೇಳ್ತಿದ್ರಂತೆ, ಅವ್ರು ಬರವಣಿಗೆ ಆರಂಭಿಸೋಕೆ ಮುನ್ನ ಅವರಿಗೂ ಬರೆಯೋರು ಅಂದ್ರೆ ಬೇರೆ ರಕ್ತ-ಮಾಂಸಗಳಿಂದ ಹುಟ್ಟಿದವರು. ಅವರಿಗೂ ನಮ್ಮಂತೆ ನೆಗಡಿ ಆಗತ್ತೆ, ತಲೆನೋವು ಬರತ್ತೆ ಅಥವಾ ನೈಸರ್ಗಿಕ ಅವರಿಗೂ ಆಗ್ತವೆ ಅನ್ನೋದು ಗೊತ್ತಾಗಿದ್ದು ತುಂಬಾ ತಡವಾಗಿಯಂತೆ !
  ಜೊತೆಗೆ, ಅಕ್ಷತಾಳ ಮುಂದಿನ ಯೋಜನೆಯನ್ನು (ಕಿ ರಂ ಕಂಡಂತೆ ಲಂಕೇಶ್) ಮೋಹನ್ ಬಹಿರಂಗಪಡಿಸಿ ಅವರಿಗೆ ಮುಜುಗರ ಮಾಡಿಬಿಟ್ರು. ಪಾಪ ಅಕ್ಷತಾ – “ಇಲ್ಲ ” ಅಂಥ ಕಿರುಚ್ತಾ ಇದ್ರೂ, ಯಾರೂ ಕಿವಿಗೊಡಲಿಲ್ಲ .
  ಮುಂದೆ ಮದ್ಯಸಾರ ಓದಿಸಿ. ಸುಘೋಷ್ ಡಬ್ಬಿಂಗ್ ಇರಲಿ. ಶ್ರೀನಿವಾಸ ಗೌಡ ನಟನೆ (actually adu natane alla – reality show) ಕೂಡಾ ಇರಲಿ.
  ಕಾರ್ಯಕ್ರಮದ ಉದ್ದಕ್ಕೂ ಸುಘೋಷ್ ಮತ್ತು ಶ್ರೀಜಾ (ಹೆಸರು ಸರಿ ಎಂದು ಭಾವಿಸಿದ್ದೇನೆ, ತಪ್ಪಿದ್ದರೆ ಕ್ಷಮೆ ಇರಲಿ) ಕ್ಯಾಮೆರ ಹಿಡಿದು, ಸರಿಯಾದ ಕೋನಕ್ಕಾಗಿ ಬಾಗಿ, ಮುನ್ನುಗ್ಗಿ ಶೂಟ್ ಮಾಡಿದ್ದೂ, ಯುದ್ಧದಲ್ಲಿ ಬಂದೂಕು ಹಿಡಿದ ಸೈನಿಕರು ಶತ್ರುಗೆ ಗುರಿಯಿಟ್ಟು, ಟ್ರಿಗ್ಗರ್ ಒತ್ತುವ ಹಾಗೆ ಕಂಡಿತು .
  I really enjoyed the programme.
  -ಸತೀಶ್ ಶಿಲೆ

  ಪ್ರತಿಕ್ರಿಯೆ
 6. ಚಂದಿನ

  ಆತ್ಮೀಯ ಮೋಹನ್,
  ನಿಮ್ಮ ಎಲ್ಲ ಪ್ರಯತ್ನಗಳೂ ಮನಸ್ಸಿಗೆ ಹಿತವೆನ್ನಿಸುತ್ತವೆ.
  ಪ್ರತಿಭೆ ಗುರುತಿಸಿ ಹೊರೆತೆಗೆಯುವ ಕಾಯಕ ಹೀಗೇ
  ನಡೆಯಲಿ ನಿರಂತರ.
  ವ್ಯಕ್ತಿ, ವ್ಯಕ್ತಿತ್ವದ ಆಳ ಬಿಂಬಿಸುವ ಪರಿ ಅಮೋಘ.
  ಒಲವಿನಿಂದ,
  ಚಂದಿನ

  ಪ್ರತಿಕ್ರಿಯೆ
 7. REKHASATISH

  HEEGE MAY FLOWER MUNDUVARIDU NAMEGELLA SANTASA TARALENDU HARAISUVA
  REKHASATIHS

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: