’ಸ್ನೇಹ, ಪ್ರೀತಿ ನನ್ನುಸಿರು’ – ಅರ್ಪಿತಾ

– ಅರ್ಪಿತಾ ಹರ್ಷ

ಆಕೆ ನನಗೆ ಬಹಳ ಆತ್ಮೀಯ ಗೆಳತಿ ಬಹಳ ದಿನಗಳ ವರೆಗೆ ಒಟ್ಟಿಗೆ ಕೆಲಸ ಮಾಡಿದವರು ನಾವು . ಇಬ್ಬರು ಸದಾಕಾಲ ನಗುತ್ತ , ಮಾತನಾಡುತ್ತ ಮುಂದಿನ ದಿನಗಳ ಬಗ್ಗೆ ಯೋಚಿಸುತ್ತ ಕಳೆದ ದಿನಗಳು ಬಹಳ. ಅನಿವಾರ್ಯ ಕಾರಣದಿಂದ ಕೆಲಸ ಬಿಟ್ಟು ಹೋಗಿದ್ದರಿಂದ ಫೋನ್ ಕೂಡ ಮಾಡದ ಪರಿಸ್ಥಿತಿ ಬಂದೊದಗಿತ್ತು. ಸುಮಾರು ಒಂದು ವರೆ ವರ್ಷದ ನಂತರ ಮತ್ತೊಮ್ಮೆ ಫೋನ್ ಮಾಡಿದಾಗ ಆಕೆಗಾದ ಸಂತೋಷ ನೋಡಿ ಇಷ್ಟು ದಿನ ಫೋನ್ ಮಾಡದೆ ಏನೋ ಒಂದು ವಸ್ತುವನ್ನು ನಾನೇ ಕೈಯಾರೆ ಮಿಸ್ ಮಾಡಿಕೊಂಡಂತೆ ಅನಿಸಿತ್ತು. ಸುಮಾರು ಒಂದು ಗಂಟೆ ಹಳೆಯ ಸುಂದರ ದಿನಗಳ ಮೆಲುಕು ಹಾಕಿದೆವು ಆ ದಿನಗಳು ಮತ್ತೆ ಬರಲಾರದು ನಿಜ ಆದರೆ ಅಂತಹ ದಿನಗಳ ನೆನಪೇ ಎಷ್ಟೊಂದು ಸಂತೋಷ ನೀಡುತ್ತದೆ ಎಂದು ಮತ್ತೆ ಮತ್ತೆ ನೆನಪಿಸಿಕೊಂಡೆವು. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಸುಮ್ಮನೆ ಕುಳಿತು ಯೋಚಿಸುತ್ತಿದ್ದೆ ಹಿಂದೆ ಕಳೆದ ದಿನಗಳು ಯಾವಾಗಲು ಸುಮಧುರ . ಅಂತಹ ಸುಮಧುರ ದಿನಗಳಿಗೆ ಕಾರಣರಾದವರು ನಿಜಕ್ಕೂ ಮಧುರ. ಸ್ನೇಹಿತರು ಎಲ್ಲಿ ಹೋದರು ಸಿಕ್ಕಿಯಾರು ಹೊಸ ಸ್ನೇಹ ಮಾಡಿಕೊಲ್ಲುವುದೇನು ಕಷ್ಟದ ಕೆಲಸವಲ್ಲ ಆದರೆ ಮಾಡಿಕೊಂಡ ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ .ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ದೂರವಾಗಬೇಕಾಗುತ್ತದೆ. ಇನ್ನು ಕೆಲವೊಮ್ಮೆ ನಾವೇ ಕಾರಣ ಹುಡುಕಿ ದೂರವಾಗಿಬಿಡುತ್ತೇವೆ. ಕೆಲವೊಮ್ಮೆ ಬೇರೆ ಕೆಲಸ ಕ್ಕೆ ಸೇರಿದರೆ ಅಥವಾ ಮದುವೆ ಆಗಿ ಬೇರೆ ಸ್ಥಳಗಳಿಗೆ ಹೋದರೆ ಹೀಗೆ ನಾನಾ ಕಾರಣಗಳಿಗೆ ದೂರವಾಗುವುದುಂಟು . ಆದರೆ ಈಗ ಮೊಬೈಲ್ ಎನ್ನುವುದು ಹಳ್ಳಿಗಳಲ್ಲೂ ಕೂಡ ಎಲ್ಲರ ಮನೆಗಳಲ್ಲೂ ಇದ್ದೆ ಇರುತ್ತದೆ. ಪ್ರತಿ ದಿನ ಫೋನ್ ಮಾಡಲಾಗದಿದ್ದರೂ ತಿಂಗಳಿಗೊಮ್ಮೆಯಾದರೂ ಆತ್ಮೀಯ ಸ್ನೇಹಿತರಿಗೆ ಫೋನ್ ಮಾಡುತ್ತಿರಬೇಕು ಇದರಿಂದ ಬಾಂಧವ್ಯ ಯಾವತ್ತು ಮುರಿದುಬೀಳುವುದಿಲ್ಲ. ಆ ಗೆಳತಿ ಎಲ್ಲಿ ಹೋದಳೋ ಹೇಗಿದ್ದಾಳೋ ಎಂಬ ಯೋಚನೆ ಇರುವುದಿಲ್ಲ. ಹಳೆಯ ಸ್ನೇಹ ಯಾವತ್ತಿಗೂ ಗಟ್ಟಿ . ಬಾಲ್ಯದಿಂದಲೂ ಬೆಳೆದು ಬಂದ ಸ್ನೇಹ ಎಂದಿಗೂ ನೆನಪಿರುವನ್ತದ್ದು .ಇಂತಹ ಸ್ನೇಹ ಗಟ್ಟಿ ಕೂಡ .ನಮ್ಮ ಜೀವನದ ಪ್ರತಿಹಂತದಲ್ಲೂ ಸ್ನೇಹಿತರು ಬೇಕೇ ಬೇಕು . ಕಷ್ಟ ಸುಖ ಹಂಚಿಕೊಳ್ಳಲು ಸ್ನೇಹಿತರೆ ಬೇಕು . ಕೇವಲ ಕಷ್ಟದ ಕಾಲದಲ್ಲಿ ಸಹಾಯ ಪಡೆದು ಮರೆತುಬಿಡುವುದು ಸೂಕ್ತವಲ್ಲ . ಈಗಂತೂ ಫೇಸ್ ಬುಕ್ ,ಮೊಬೈಲ್ ,ಸ್ಕೈಪ್ , ಹೀಗೆ ಸಾಕಷ್ಟು ಅವಕಾಶಗಳಿವೆ ಸ್ನೇಹವನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಆದ್ದರಿಂದ ಸ್ನೇಹವನ್ನು ಉಳಿಸಿಕೊಳ್ಳೋಣ .ಬೆಳೆಸಿಕೊಳ್ಳೋಣ .ಸ್ನೇಹ ಅವಶ್ಯಕತೆಗೆ ಮಾತ್ರವಾಗಿರದೆ ಅಮರವಾಗಿರಲಿ .      ]]>

‍ಲೇಖಕರು G

June 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: