ಚಿತ್ರ:ಟಿ ಎಸ್ ಐ
ಓ ಆದಿ ಕೇಶವನೆ, ನಾಟಕದ ನಾಯಕನೇ..ಸ್ವೀಕರಿಸಯ್ಯ ನಾಟಕ ಮೋದಕ…ಎಂಬ ಸ್ತುತಿ ಎಂತೆಂತಹ ನೆನಪಿನ ಓಣಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಅದು ರವೀಂದ್ರ ಕಲಾಕ್ಷೇತ್ರವೇ ಆಗಿರಬೇಕಿಲ್ಲ, ರಂಗ ಶಂಕರವೂ ಆಗಿರಬೇಕಿಲ್ಲ..ನಮ್ಮ ಮನೆಯ ಪಕ್ಕದಲ್ಲಿ ಆಡಿದ ಕಂಪನಿ ನಾಟಕ, ಬೀದಿಗೆ ಬಂದಿಳಿದ ಗಾರುಡಿಗರು, ನಮ್ಮನ್ನು ಕಲಾಕ್ಷೇತ್ರಕ್ಕೆ ಎಳೆದೊಯ್ಯುವಂತೆ ಮಾಡಿದ ಒಂದು ಪುಟ್ಟ ಬರಹ…ಎಲ್ಲವೂ ಈ ಒಂದು ಸೊಲ್ಲಿನೊಂದಿಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಎಳ್ಳುಂಡೆ ಜೇನುತುಪ್ಪವನ್ನು ಮೆಲ್ಲುವ ಆ ಗಣ ನಾಯಕನನ್ನು ಬರಮಾಡಿಕೊಳ್ಳುವ ಎಲ್ಲರಿಗೂ ನಮಿಸುತ್ತಾ ಈ ಸೈಡ್ ವಿಂಗ್ ಆರಂಭಿಸುತ್ತಿದ್ದೇವೆ.
ನೀವೆಲ್ಲಾ ಮುನ್ನಲೆಯಲ್ಲಿರಿ, ರಂಗದ ಕತ್ತಲು ಬೆಳಕಿಗೆ ನಾವು ಸಾಕ್ಷಿಯಾಗುತ್ತೇವೆ. ನೀವು ಪರದೆ ಎಳೆಯಲು ಸಜ್ಜಾದರೂ, ಸ್ಪಾಟ್ ಲೈಟ್ ಕಟ್ಟಲು ಮೇಲೆ ಏರಿದರೂ, ನಾಟಕದ ಮುಖಗಳಿಗೆ ಬಣ್ಣ ಮೆತ್ತಲು ಕುಳಿತರೂ, ಇಲ್ಲಾ…ವೇಷ ಭೂಷಣದ ಮೂಲಕ ಘನತೆ ತಂದೊಡ್ದಲು ಸಿದ್ಧರಾದರೂ ನಾವೆಲ್ಲ ನಿಮ್ಮ ಹಿಂದೆ, ಪರದೆಯ ಅಂಚಿನಲ್ಲಿ.
ಶರಣು ಹೇಳ್ತೀವಿ ಸ್ವಾಮಿ ನಾವು ನಿಮಗ, ಸ್ವಾಮಿ ನಾವು ನಿಮಗ
ಸದ್ದು ಗದ್ದಲ ಮಾಡಬೇಡಿ ಆಟದೊಳಗ, ಸ್ವಾಮಿ ಆಟದೊಳಗ
ಸಣ್ಣ ಹುಡುಗರು ನಾವು, ಬಣ್ಣಕ ಹೆದರುವವರು…
ಎಂಬಂತೆ ಬಣ್ಣದ ನಿಮ್ಮೆಲ್ಲರ ಬಳಿಗೆ ಬರುತ್ತಿದ್ದೇವೆ-
ಓ ಆಗಲೇ ಥರ್ಡ್ ಬೆಲ್ ಆಗ್ತಿದೆ-
ಪರದೆ ಎಳೀರಿ…ಪರದೆ….
ಪ್ರೀತಿಯಿಂದ
-ಜಿ ಎನ್ ಮೋಹನ್
ಮುಖ್ಯ ಸಂಪಾದಕ
-ಸುಘೋಷ್ ಎಸ್ ನಿಗಳೆ
ಸಂಪಾದಕ
‘ಕೋವಿಗೊಂದು ಕನ್ನಡಕ’ ವಿಶಿಷ್ಟ ರಂಗಪ್ರಯೋಗ
ಸುಷ್ಮ ಕನ್ನಡ ನಾಟಕ : ಕೋವಿಗೊಂದು ಕನ್ನಡಕ ಸ್ಲಾವೋಮಿರ್ ಮ್ರೋಜೆಕ್ ರ ‘ಚಾರ್ಲಿ’ ಆಧಾರಿತ 23 ಜನವರಿ | 60 ನಿ | 3.30 ಮತ್ತು 7.30 | ರಂಗ...
ಪರದೆ ಎಳೆದಾಯಿತು.ನಾಟಕ ಶುರುವಾಗಿದೆ.
chennagide bloggu,,, keep it up…
ಭಳರೇ ವಿಚಿತ್ರಂ,
ನಟರೇ, ನಾಟಕಕಾರರೇ, ನಿರ್ದೇಶಕರೇ, ನಿಮಿತ್ತರಾದವರೇ
ನಿಜದ ನಿರೀಕ್ಷಕರೇ ನಮೋ ನಮೋ………..
ನಟನೆ ಮಾಡಬೇಕು, ನಟನಾ ವೇದಿಕೆ ರಂಗು ಪಡೆಯಬೇಕು
ತಟ್ಟೆ ಬೊಫೆಯಾಬೇಕು, ಪ್ಯಾಂಟು ಬರ್ಮುಡಾವಾಗಬೇಕು
ಬಳಸದ ಅವಯವಗಳು ಬಾಲದಂತೆ ಬಿದ್ದು ಹೋಗಬೇಕು
ಕೇಕೆ ಗೂರಲಾಗಬೇಕು, ಜಾಗ ತಿಕ ರಣವಾಗಬೇಕು….
ಓಓಓಓಓಓಓಓಓಓಓಓಓಓಓಓಓಓ……
ಓಡು…ಓಡು… ವೇಗವಾಗಿ ಓಡು..
– ಪುಟ್ಟಪ್ಪ
ಹವ್ಯಾಸ ರಂಗಭೂಮಿಗೆ ಜಯವಾಗಲಿ
ಸಿದ್ದಮುಖಿ