‘ಹಂಗಾಮ’ ಕಾರ್ನರ್ ನಲ್ಲಿ ಹೌದೇನೆ …

ಚಾಂದ್ ಆಹೇ ಭರೇಗಾ ಅಂದವನ ಚಾಕ್ ಲೇಟು…

-ಗಾನಾ ಜೋಯ್ಸ್
ಚಾಂದ್ ಆಹೇ  ಭರೇಗಾ
ಫೂಲ್ ದಿಲ್ ಥಾಮ್ ಲೇಂಗೇ
ಹುಸ್ಕ್ ತೀ ಬಾತ್ ಚಲಿತೋ
ಸಬ್ ತೇರಾ ನಾಮ್ ಲೇಂಗೇ …
ಅಂತ ಬೇಂದ್ರೆ  ಪುಸ್ತಕದ ಮೊದಲ ಪುಟದಲ್ಲಿ ಬರೆದು ಕಾಣದ ಹಾಗೇ ಪಿನ್ ಮಾಡಿ ಕೊಟ್ಟಿದ್ದ ಹುಡುಗನನ್ನು ನೂರು ಹುಣ್ಣಿಮೆ ಕಳೆದರು ಮರೆಯಲಾಗಲಿಲ್ಲ . ಅವನ ಹೆಸರೇ ಕತ್ತಲೆ ಕಳೆಯುವುದಾಗಿತ್ತು . ನಾನೂ ಬೆಳಕು ಬೇಡವೆಂದು ಬಿಟ್ಟಿದ್ದೆ . ಅದ್ಯಾಕೆ ಅಂತ ಈಗಲೂ ನಂಗೊತ್ತಿಲ್ಲ ! ಅವನು ನನ್ನಲ್ಲಿ ಪ್ರೀತಿ ಬೆಳೆಸಲೇ ಇಲ್ಲ . ತಾನು ಮಾತ್ರ ಅಷ್ಟುದ್ದ ಬೆಳೆದು ಮೇಲ್ಹತ್ತಿ ಕುಂತು ಬಿಟ್ಟಿದ್ದ .
ಹಾಗಂತ ಅವನ ಬಗ್ಗೆ ಈಗಲೂ ನನಗೆ ಅನುಕಂಪವಿಲ್ಲ , ಆದರು  ಸುಮ್ಮ ಸುಮ್ಮನೆ  ನೆನಪಾಗಿ ಬಿಡುತ್ತಾನೆ . ಮದುವೆಯಾದವ ನನ್ನ ಮೇಕಪ್ಪು -ಗೆಟಪ್ಪು ನೋಡಿಯು  ಕಾಮೆಂಟು ಮಾಡದಿದ್ದಾಗ , ನನ್ನ ಅದ್ಯಾವುದ್ಯಾವುದೋ  ಭಾವಗಳಿಗೆ, ಭಾಷೆಗಳಿಗೆ , ಅತಿರೇಕಗಳಿಗೆ , ಕೊರಡಾಗಿ ನಿಂತಾಗ , ಮುಖೇಶನ ಹಾಡುಗಳನ್ನ  ರೋತೆರಾಗ  ಅಂದು ಬಿಟ್ಟಾಗ …. ಆಗೆಲ್ಲಾ ಅವನು ನೆನಪಾಗುತ್ತಾನೆ  ಅವನ ಸಾಲುಗಳ  ನೆನಪಾಗುತ್ತದೆ. ಪ್ರೀತಿ ಅನ್ನೋದರ  ಪರಿಚಯವೇ  ಇರದ  ಉಮರಿನಲ್ಲೇ  ಅವನೊಪ್ಪಿಸುತ್ತಿದ್ದ ‘ದಿನಕ್ಕೊಂದು ಲ್ಯಾಕ್ಟೋ ಕಿಂಗ್ ‘ ಚಾಕಲೇಟು ನೆನಪಾಗುತ್ತದೆ .
ಅದ್ಯಾರದೋ  ನೋಟು ತುಂಬಿದ ಪರ್ಸು ಅವನಿಗೆ ಸಿಕ್ಕು ,ಅದನ್ನು ವಾಪಸು ತಲುಪಿಸಿದ್ದಕ್ಕೆ ಪಡೆದ ಬಹುಮಾನವನ್ನ ನನ್ನದೇ ಸೊತ್ತು ಅನ್ನೋ ಹಾಗೇ  ನಾನೂ ಅವುಚಿ ಹಿಡಿದದ್ದು ನೆನಪಾಗುತ್ತದೆ . ಯೂನಿಫಾರಮ್ಮಿನ  ಆ ದಿನಗಳಲ್ಲಿನ  ಭಾವನೆಯ ರೂಪಕ್ಕೆ , ಅದಕ್ಕೆ ಕೊಡಬಹುದಾದ ಹೆಸರಿಗೆ ಇನ್ನು  ತಡಕಾಡುತ್ತಿದ್ದೇನೆ  ನಾನು.
ಅವನಿವನು ಕೊಟ್ಟ ಕಾರ್ಡು ಇಸಕೊಳ್ಳುವಾಗ ನಾನು ಅವನ ಹುಡುಕಿದ್ದು, ಅವನು ಚೆಂದವೆಂದ ಡ್ರೆಸ್ಸು ಮತ್ತೆ ಮತ್ತೆ  ಹಾಕಿದ್ದು , ನವೆಂಬರ್ ೨೮ ರ ಅವನ ಬರ್ತ್ ಡೇಟು , ಅವನು ಹೇಳಬಹುದಾಗಿದ್ದ ‘ಐ ಲವ್ ಯು ‘ಗಾಗಿ  ಕಡೇ ಗಳಿಗೆವರೆಗೂ ಕಾದಿದ್ದು …ಉಹುಂ ! ಅವನಿಗೆ ಗೊತ್ತಿಲ್ಲ . ಬೈಂಡಿನಲ್ಲಿ ತಾರೀಕಿನ  ಸಾಲುಗಳ ಬರೆದಿಟ್ಟ ಆ ಹುಡುಗ , ನನ್ನ ಜೀವನ ಪುಸ್ತಕದಲ್ಲೂ ಬೈಂಡ್ ಆಗೇ ಹೊರಗುಳಿದು ಬಿಟ್ಟ . ಒಮ್ಮೆಯೂ ಎದುರು ನಿಂತು “ಐ ಲವ್ ಯು ” ಅನ್ನದವನ ಜುಲುಮೆಗೆ ನನ್ನ ಮಾಫಿಯಂತು ಇಲ್ಲ.
ಚಾಂದ್ ಆಹೇ ಭರೇಗಾ ಅಂತ ಒಳಗೊಳಗೇ  ಹಾಡಿದವನು ಕೊಡುತ್ತಿದ್ದ ಲ್ಯಾಕ್ಟೋ ಕಿಂಗ್ ಚಾಕ್ ಲೇಟು ಈಗ ಅದೇ ಟೇಸ್ಟಿನಲ್ಲಿ ಸಿಗುತ್ತಿಲ್ಲ. ಅವನ ಮನಸ್ಸಲ್ಲೂ ಈಗ ನನ್ನ ಬಗ್ಗೆ ಆ ಮಟ್ಟದ ಉತ್ಕಟತೆ ಖಂಡಿತಾ ಉಳಿದಿಲ್ಲ . ಆದರು … ಅವನಿಗಲು ಕಂಡಾಗಲೆಲ್ಲ ಕಣ್ ತಪ್ಪಿಸುತ್ತಾನೆ . ನಕ್ಕು  ನಗು ನುಂಗುತ್ತಾನೆ.
ನಾನು  ಮಾತ್ರ ಕನ್ನಡಿಯೆದುರು ನಿಂತು ‘ಜಿಸ್ ಜಗಹ್ ತೂ ನಹಿಂ ಹೈ ಉಸ್ ಜಗಹ್  ಹೈ ಅಂಧೇರಾ ‘ ಅಂತ ಗುನುಗುತ್ತಾ , ಅವನಿಂದ  ಕಸ್ಕೊಂಡಿದ್ದ ಹನ್ನೆರಡು ವರ್ಷ ಹಳೆಯ ಶಾರ್ಪರ್ ನಿಂದ  ನೆನಪುಗಳನ್ನು  ಶಾರ್ಪ್  ಮಾಡ್ತಲೇ ಇರುತ್ತೇನೆ . ಅವು ನನ್ನನೆಷ್ಟೇ  ಚುಚ್ಹಿದರು!!.
]]>

‍ಲೇಖಕರು avadhi

October 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. malathi S

  third line should read like this:
  ಹುಸ್ನ್ ಕೀ ಬಾತ್ ಚಲೀ ತೋ
  lovely lyrics by anand Bakshi for the movie ‘phool bane angarey’
  Liked the last line of the write up
  🙂
  ms

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: