ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹ೦ಮ್ಮಿನ …

ಸ್ಥಗಿತ

– ಅಶೋಕ್ ಶೆಟ್ಟರ್

ಶಾಲ್ಮಲಾ ಹಲವಾರು ವೈವಿಧ್ಯಮಯ ಕಂಪನಿಗಳ ಆಫೀಸ್ ಗಳು ಕೇಂದ್ರೀಕೃತಗೊಂಡಿದ್ದ ಬಹುಮಹಡಿ ಕಟ್ಟಡವೊಂದರಲ್ಲಿ ತನ್ನ ಬಾಸ್ ಹೇಳಿದ್ದ ಕೆಲಸ ಮುಗಿಸಿಕೊಂಡು ಹೊರಬಿದ್ದು ಲಿಫ್ಟ್ ಬಳಿ ಸಾರಿ ಸ್ವಿಚ್ ಅದುಮಿ ಅದು ಮೇಲಂತಿಸ್ತಿನಿಂದ ಬರುವದನ್ನು ಮೊಬೈಲ್ ನಲ್ಲಿ ಮಾತಾಡುತ್ತಲೇ ಕಾಯುತ್ತಿದ್ದವಳಿಗೆ ಲಿಫ್ಟ್ ಬಂದದ್ದು, ಅದರ ಬಾಗಿಲು ತೆರೆದುಕೊಂಡದ್ದು ಅಷ್ಟೇ ಗೊತ್ತು..ಫೋನ್ ನಲ್ಲಿ ಮಾತಾಡುತ್ತಲೇ ಒಳಪ್ರವೇಶಿಸಿದ್ದಳು. ಒಳಗೆ ಆಗಲೇ ಒಂದು ವ್ಯಕ್ತಿ ಇದೆ ಎಂಬುದು ಅರಿವಿಗೇನೋ ಬಂದಿತ್ತು, ಅವನ ಮುಖವನ್ನು ಅವಳಿನ್ನೂ ನೋಡನೋಡುತ್ತಿರುವಂತೆಯೇ ಒಂದೆರಡು ಅಂತಸ್ತು ಕೆಳಮುಖ ಚಲಿಸಿದ ಲಿಫ್ಟ್ ಸಣ್ಣದಾಗಿ ಜೆರ್ಕ್ ಆಗಿ ಒಳಗಿನ ಬೆಳಕು ನಂದಿ ನಸುಕತ್ತಲಾಗಿ ನಿಂತು ಬಿಟ್ಟಿತು. ನಿಂತೇ ಬಿಟ್ಟಿತು. ಮೇಲೂ ಇಲ್ಲ, ಕೆಳಗೂ ಇಲ್ಲ. ಎರಡು ಅಂತಸ್ತುಗಳ ಮಧ್ಯೆ..ಎರಡು ನಿಮಿಷ, ಐದು ನಿಮಿಷ, ಹತ್ತು ನಿಮಿಷ.. ನಡು ಮಧ್ಯಾಹ್ನದ ಶಕೆ. ಬೆಳಕಿಲ್ಲ, ಗಾಳಿಯಿಲ್ಲ. ಅವನ ಉಸಿರು ಬಂದು ತನಗೇ ತಾಗುತ್ತಿದೆ ಎನ್ನಿಸಿ ಹಿಂಸೆಯಾಗತೊಡಗಿತು., ಅವನೂ ಚಡಪಡಿಸುತ್ತಿದ್ದ. ಅವನು ಮೇಲೆ ನೋಡುವ, ಅವಳು ಎಡಕ್ಕೆ ನೋಡುವಳು, ಅವನು ಉಫ್ ಎನ್ನುತ್ತ ಕೆಳಗೆ ನೋಡುವ ಅವಳು ಮೇಲೆ ನೋಡುವಳು. “ಉಫ್ ಇಟ್ ಇಸ್ ಸೋ ಸಫೋಕೇಟಿಂಗ್..”ಅವನೆಂದ. ಲಿಫ್ಟ್ ಸ್ಥಗಿತವಾಗಿ ನಿಂತು ಆಗಲೇ ಇಪ್ಪತ್ತು ನಿಮಿಷ ಕಳೆದಿತ್ತು. ಪರ್ಯಾಯ ವಿದ್ಯುತ್ ಪೂರೈಕೆ ವ್ಯವಸ್ಥೆಗೇನಾಗಿದೆ ರೋಗ ಎಂದು ಯೋಚಿಸಿದ ಅವಳು ಆ ಕತ್ತಲೆ,ನಿರ್ವಾತ ಹಾಗೂ ಶಾಖದಿಂದ ಕುದ್ದು ಹೋಗುತ್ತೇನೆನ್ನಿಸಿ “ಇಟ್ ಇಸ್ ಸಫೋಕೇಟಿಂಗ್” ಎಂದಳು. ಮತ್ತೆ ಸಮಯ ಕಳೆಯಿತು.   ನಾಲ್ಕಾರು ಅಡಿಯ ಆ ವಿಸ್ತಾರದಲ್ಲೇ ದೃಷ್ಟಿಗೆ ದೃಷ್ಟಿ ತಾಗದ ಹಾಗೆ ಕಾಳಜಿ ವಹಿಸಿದಂತೆ ಅವನು ಅತ್ತ ನೋಡುವ ಇವಳು ಇನ್ನೆಲ್ಲೋ ನೋಡುವಳು..”ನನಗೆ ಉಸಿರು ಕಟ್ಟಿದಂತಾಗುತ್ತಿದೆ” ಅವಳೆಂದಳು. ಮತ್ತೆ ಸ್ವಲ್ಪ ಹೊತ್ತು ಕಳೆಯಿತು…”ಉಫ್, ಉಸಿರು ಕಟ್ಟಿದಂತಾಗುತ್ತಿದೆ ನನಗೆ..” ಎಂದನವ. ಪರಸ್ಪರ ಕಿತ್ತಾಡಿಕೊಂಡಾಗೆಲ್ಲ ಇದೇ ಮಾತನ್ನು ನೂರಾರು ಸಲ ಅಂದಿದ್ದರವರು ತಮ್ಮ ವಿವಾಹ ವಿಚ್ಛೇದನಕ್ಕೆ ಮುಂಚಿನ ಹತ್ತಾರು ತಿಂಗಳುಗಳ ಅವಧಿಯಲ್ಲಿ.]]>

‍ಲೇಖಕರು G

March 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

3 ಪ್ರತಿಕ್ರಿಯೆಗಳು

  1. D.RAVI VARMA

    idu namma indina badukina duranta sir chennagi manamuttuvahaage,ondistu alochisuva haage baredidderi
    ravi varma hospet

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: