ಹತ್ತಿರವಿದ್ದೂ ದೂರನಿಲ್ಲುವೆವು ….

ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ!!

– ವಿನಯ್ ಭಾರದ್ವಾಜ್

ಮನದ ಗೂಡಿನ ಹಾಡು…!

ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ. ಹತ್ತಿರ ಇದ್ದರೆ ಒಂದು ರೀತಿಯ ಉಡಾಫೆ, ದೂರ ಇದ್ದರೆ ಮರೆತೇ ಬಿಡುವ ಸಾಧ್ಯತೆ. Out of sight is out of mind ಎನ್ನುತ್ತಾರಲ್ಲ ಹಾಗಾಗಿಬಿಡಬಹುದು. ಈ ನಡುವೆ ವ್ಯಕ್ತಿಗಳ ಮಧ್ಯೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವುದಕ್ಕೆ ಭೌತಶಾಸ್ತ್ರದಲ್ಲಿ ಏನಾದರೂ ಸೂತ್ರಗಳಿವೆಯ ಎಂದು ಹುಡುಕತೊಡಗಿದ್ದೇನೆ. ಹಾಗೇನಾದರೂ ಇದ್ದರೆ ಅದು ‘ನ್ಯೂ’-ಟನ್ನೋ – ಓಲ್ಡ್-ಟನ್ನೋ ಎಂಬ ಪುರಾತನ ವಿಜ್ನ್ಯಾನಿ ಒಬ್ಬನಿದ್ದನಲ್ಲ, ಆತನ ಗಮನಕ್ಕೆ ಬಂದಿರಬೇಕಿತ್ತು! ಇದು ಗಮನಾರ್ಹ ಹಾಗು ಗಹನಾರ್ಹ !  ಕೆಲವೊಮ್ಮೆ ದೂರವಿದ್ದರೆ ಒಳಿತೆನ್ನಿಸ ಬಿಡುತ್ತದೆ, ಏಕೆಂದರೆ ದೂರವಿರುವವರ ದೂರುಗಳು ಕೇಳುವುದಿಲ್ಲವಲ್ಲ! ಈಗೆಲ್ಲ ದೂರವಾಣಿ, ದೂರೋ-ವಾಣಿಗಳು ಬಂದುಬಿಟ್ಟಿವೆ. ನಾವು-ನೀವು ಎಲ್ಲರೂ ಸಮಾನವಾಗಿ ಹೆಲ್ಪ್ ಲೆಸ್ಸು ! ಹೀಗೆ ಇತ್ತೀಚಿಗೆ ಗೆಳೆಯನೊಬ್ಬ ದೂರದೂರಿನಿಂದ ನಮ್ಮ ಮನೆಯ ಆಸುಪಾಸಿನಲ್ಲೇ ಮನೆ ಮಾಡಿದ. ಹೋಗಲಿ ಆಜು ಬಾಜಿನಲ್ಲೇ ಸಿಗುತ್ತಾನಲ್ಲ ಎಂದುಕೊಂಡರೆ, ವಾರಕ್ಕಿರಲಿ- ತಿಂಗಳುಗಟ್ಟಲೆ ಪತ್ತೆಯೇ ಇಲ್ಲ ಆಸಾಮಿ. ವಾರಕ್ಕೊಮ್ಮೆಯಾದರೂ ಫೋನು ಮಾಡುತ್ತಿದ್ದವನಿಗೆ, ಹತ್ತಿರ ಮನೆ ಇದ್ದೂ ಸಿಗಲಾಗದಷ್ಟು ಯಾವ ಕಾಡು ಕಡಿಯುವಷ್ಟು ಕೆಲಸ ಬಿದ್ದಿದೆ ಎಂದು ಮನೆ ಹೊಕ್ಕರೆ, ನಾಲ್ಕು ದಿಕ್ಕುಗಳಿಗೂ ಕೈ-ಕಾಲು ಚಾಚಿಕೊಂಡು ಮಲಗಿಕೊಂಡಿರುವುದ..? ಅಕಟಕಟಾ ಎಂದುಕೊಂಡು ಕಾರಣ ಕೇಳಿದರೆ, ಇಲ್ಲೇ ಸಿಗ್ತೀಯಲ್ಲ ಎಂದು ಸುಮ್ಮನಿದ್ದೆ ಅನ್ನುವುದ..?

ದೂರವಿದ್ದಾಗ ಹತ್ತಿರ ಬಾ ಎನ್ನಬಹುದು, ಆದರೆ ಹತ್ತಿರವಿದ್ದಾಗ ದೂರ ಹೋಗು ಅನ್ನುವುದು ಅನುಚಿತ. ಗೆಳತಿ ದೂರದಲ್ಲಿ ಇದ್ದಾಗ ,” ಹತ್ತಿರ ಹತ್ತಿರ ಬಾ..” ಎಂದು ಹಾಡಬಹುದು. ದೂರ ಹೋಗು ಎಂದು ನಿರಾಕರಿಸಲು ಯಾವ ಹಾಡೂ ಇರಲಾರದು. ಇದ್ದರೆ ಆ ಹಾಡಿಗೆ ಯಾವ ಗಮ್ಮತ್ತೂ ಸಲ್ಲದು ಹಾಗು ಸಲ್ಲಕೂಡದು! ಆದರೂ ಯಾರು ತಾನೇ ಗೆಳತಿಯನ್ನು ದೂರ ಹೋಗು ಎಂದಾರು? ಆ ಮಟ್ಟಿನ ನಿರ್ದಾಕ್ಷಿಣ್ಯತೆ ಯಾವ ಗಂಡು ಮಕ್ಕಳಲೂ ಕಾಣೆ! ದೂರ ಹೋದಮೇಲೆ ಹಲುಬುವುದು, ವಿರಹ ಗೀತೆ ಹಾಡುವುದು ಇದ್ದೆ ಇದೇ! ಹೆಂಡತಿಯಂತಹ ಜೀವಿ ಹತ್ತಿರವಿದ್ದರೆ ಕೋಟಿ ರೂಪಾಯಿ ಮೌಲ್ಯ ಬಾಳಬಹುದು. ತವರು ಮನೆಗೆ ಹೋಗಿ ದೂರವಾದಾಗ, ದೂರ ಭಾರವೆನಿಸಿದರೂ, ದುಬಾರಿಯೆನಿಸಿದರೂ ಅದರ ನಿಖರವಾದ ಮೌಲ್ಯ ಇನ್ನೂ ಎಂಥಹ ಗಂಡು ಪ್ರಾಣಿಗೂ ತಿಳಿದ ಹಾಗಿಲ್ಲ. ಆದರೂ ಹತ್ತಿರ ಇದ್ದೂ ಸಹ ಇನ್ನೂ ‘ರಾ..ರಾ..’ ಎನ್ನುವ ಪ್ರೇಮಿಗಳ ಕಂಡು ಇನ್ನೆಲಿಗೆ ಬರಬೇಕೋ ಎಂದು ಬೆರಗು ಬೆರಗು, ನಿಬ್ಬೆರಗು! ಆದರೂ ಈ ದೂರ-ಹಾಗು ಹತ್ತಿರ ಇದೊಂದು ರೀತಿಯ ವಿಸ್ಮಯವೇ ಸರಿ. ದೂರ ಹಾಗು ಹತ್ತಿರ ಕೆಲವೊಮ್ಮೆ ಮನಸ್ಥಿತಿಗಳ ಮೇಲೆ ಅವಲಂಬಿತ. ಬೆಂಗಳೂರಿನಂತಹ ಜನನಿಬಿಡ ಊರಿನಲ್ಲಿ ದೂರ ಹಾಗು ಹತ್ತಿರವನ್ನು ಸ್ಪಷ್ಟವಾಗಿ define ಮಾಡುವುದು ಕಷ್ಟಸಾಧ್ಯ. ಕೆಲವೊಮ್ಮೆ ಪಕ್ಕದ ಬೀದಿಗೆ ಹೋಗುವುದು ಸಹ ದೂರವೆನಿಸಬಿಡಬಹುದು, ದುಸ್ಸಾಧ್ಯವಾಗಬಹುದು. ಹತ್ತಿರವಿದ್ದೂ ಸಹ ದೂರವಾದ ಮನಸ್ಸುಗಳು ಒಂದು ಕಹಿ ಉದಾಹರಣೆ ಮಾತ್ರ. ದೂರದಲ್ಲೇ ಏನೋ ಹಿತವಿದೆ ಎಂದು ಊಹಿಸುತ್ತ, ಊಹೆಯ ಸುತ್ತಾ ಸುತ್ತುತ್ತಾ ಇರುವುದು ಒಳಿತು. ದೂರದ ಬೆಟ್ಟ ನುಣ್ಣಗೆ ಎನ್ನುತ್ತಾರೆ. ಹತ್ತಿರ ಇರುವ ಬೆಟ್ಟದ ಬಗ್ಗೆ ಯಾವ ಗಾದೆಯೂ ಇಲ್ಲ, ತಗಾದೆಯೂ ಇಲ್ಲ. ಹತ್ತಿರದ ಹಾಗು ಯಾರೂ ಹತ್ತಿರದ ಬೆಟ್ಟವೆ ಸೇಫು, ಹತ್ತದಿದ್ದವರಿಗೆ ರಿಲೀಫು. ದೂರದ ಬೆಟ್ಟ ಯಾಕೆ ನುಣ್ಣಗೆ ಎನ್ನುವುದು ಅದು ದೂರ ಇರುವ ಕಾರಣವೋ, ಅಥವಾ ದೃಷ್ಟಿಯ ನೆವವೋ? ಅಥವಾ ಬೆಟ್ಟಕ್ಕೆ ತಗುಲಿರುವ ಅಪವಾದವೋ! ಆಟೋ ಹಾಗು ಲಾರಿಗಳ ಹಿಂಬದಿಯಲ್ಲಿರುವ ‘ನಡುವೆ ಅಂತರವಿರಲಿ’ ಎಂಬುದು ನಾವು ಎಷ್ಟು ದೂರ ಇರಬೇಕು ಎಂದು ಸೂಚಿಸುತ್ತದೋ, ಅಥವಾ ಎಷ್ಟು ಅಂತರ ಇಡಬೇಕು ಎಂದು ಹೇಳುತ್ತದೋ ಸ್ಪಷ್ಟವಿಲ್ಲ. ದೂರವಿದ್ದರೆ ಅದಕ್ಕೊಂದು ಅಳತೆ, ಗೋಲು[Goal] ಹಾಗು ಅಳತೆಗೋಲು ಎಲ್ಲವೂ ಇರುತ್ತದೆ. ಹತ್ತಿರವಿರುವುದು ಕೊಂಚ Subjective! ಅದರೆಡೆ ಯಾವಾಗಲೂ ನಿರಾಕರಣೆ ಇದ್ದೆ ಇರುತ್ತದೆ. ಆದರೂ ಈ ಅಹಮ್ಮಿನ ಕೋಟೆಯಲಿ, ಹತ್ತಿರವಿದ್ದೂ ದೂರ ನಿಲ್ಲುವವರ ಬಗ್ಗೆ ಏನೆನ್ನ ಬೇಕೋ ತೋಚುವುದಿಲ್ಲ. ದೂರದ ನೆಂಟರು ಎಂಬ ಮಾತಿದೆ, ಅವರು ದೂಶಿಸದಿರುವ ನೆಂಟರೋ ಅಥವಾ ದೂರದ ಸಂಬಂಧಿಗಳೋ? ನೆಂಟರು ಹತ್ತಿ ಮೇಲೇರದಿದ್ದರೆ ಸಾಕು! ಕೆಲವೊಮ್ಮೆ ಆಲೋಚನೆಗಳೂ ಸಹ ದೂರದ ಆಲೋಚನೆಗಳಾಗಿರುತ್ತವೆ. ಆದರೆ ಇಂತಹ ದೂರಾಲೋಚನೆಗಳು ದುರಾಲೋಚನೆಗಳಾಗದಂತೆ ಎಚ್ಚರವಹಿಸಬೇಕು ಅಷ್ಟೆ.ಹಾಗಾದರೆ ನಮ್ಮ ಬಳಿ instant ಆಗಿ ದೊರೆಯುವ ಆಲೋಚನೆಗಳಿಗೆ ಯಾವ ಮಾನ್ಯತೆಯೂ ಇಲ್ಲವೆಂದೇನೂ ಇಲ್ಲ, ಅವುಗಳೆಲ್ಲ ಇನ್ಸ್ಟಂಟ್ ಕಾಫಿಯಂತೆ ಇನ್ಸ್ಟಂಟ್ ಥಾಟ್ಸ್ ಗಳಾಗಿ [ Instant T ] ರೂಪತಾಳುತ್ತವೆ. ಇವನ್ನು ಹತ್ತಿರಾಲೋಚನೆ ಎನ್ನುವುದು ಎಷ್ಟು ಹಾಸ್ಯಾಸ್ಪದ!? ಪ್ರೇಮಕ್ಕೆ ಹಾಗು ಭಕ್ತಿಗೆ ಎಂತಹ ದೂರವನ್ನೂ ಹತ್ತಿರವಾಗಿಸುವ ಶಕ್ತಿಯಿದೆ. ರಾಧೆಗೆ ಕೃಷ್ಣ ಒಲಿದಂತೆ, ಪ್ರೇಮ ಹಾಗು ಭಕ್ತಿ ಬಾಳೆಹಣ್ಣು ಸುಲಿದಂತೆಯೆ? ಇದಕ್ಕೆ ತಪಸ್ಸು ಮುಖ್ಯ ಆದರೆ ಬಾಳೆಹಣ್ಣು ಸುಲಿಯಲು ತಪಸ್ಸಿನ ಅವಶ್ಯಕ್ಲತೆ ಬೇಡ! ಇಂಥಾ ಆಲೋಚನೆಗಳ ನಡುವೆ ದೂರವಿದ್ದರೂ ಯಾರನ್ನೂ ದೂರದೇ ಹತ್ತಿರವಿದ್ದರೂ ಅತೀ ಎನಿಸದೆ ಇರುವುದು ಒಳಿತು. ಏನಂತೀರಿ….??]]>

‍ಲೇಖಕರು G

May 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. -ರವಿಮುರ್ನಾಡು

    ಈ ಲೇಖನ ಚೆನ್ನಾಗಿದೆ.ಎಲ್ಲಾರೂ ಓದಲೇ ಬೇಕಾದುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: