ಹದ್ದಿನ ಕಣ್ಣಿಗೆ ಭೇಟಿ ಕೊಡಿ : ಮೀಡಿಯಾ ಮಿರ್ಚಿ

dd sss

ಮಾಧ್ಯಮ ಕಣ್ಣಿಗೆ ಹೆಮ್ಮಾರಿ, ಮಹಾಮಾರಿಯಾಗಿ ಕಂಡಿರುವ ಹಂದಿಜ್ವರ ಜನಜೀವನದ ಉಳಿದೆಲ್ಲ ವಿದ್ಯಮಾನಗಳನ್ನೂ ಹಿಂಬದಿಗೆ ಸರಿಸಿ ಬಿಟ್ಟಿದೆ. ರಾಜ್ಯದಲ್ಲಿರುವ ಅಪಾಯಕಾರಿ ಡೆಂಗೇ, ಚಿಕನ್ಗುನ್ಯಾ ಪಿಡುಗನ್ನು ಮರೆಮಾಚಿದೆ. ನಕ್ಸಲೀಯರು, ಭಯೋತ್ಪಾದಕರು, ಕೊಲೆಗಡುಕರ ಕೈಗಳಲ್ಲಿ ಹತರಾಗುವ ಜನರ ಸಂಖ್ಯೆಗಳಿಗಿಂತ ಈ ಸೋಂಕಿನಿಂದ ಅಸುನೀಗಿದವರ ಸಂಖ್ಯೆ ಅಷ್ಟೇನೂ ದೊಡ್ಡದಲ್ಲದಿದ್ದರೂ, ಟಿ.ವಿ ವಾಹಿನಿಗಳು ಅದರಲ್ಲೂ ಖಾಸಗಿ ರಾಷ್ಟ್ರೀಯ ವಾಹಿನಿಗಳು ಎಬ್ಬಿಸಿದ ಅಬ್ಬರ ಜನರಲ್ಲಿ ಅತಿಯಾದ ಆತಂಕ, ತಲ್ಲಣ ಉಂಟು ಮಾಡಿದೆ ಎಂದು ಮಾಧ್ಯಮ ನಿಕಟವತರ್ಿ ಮಿತ್ರರೊಬ್ಬರು ಅಲವತ್ತುಕೊಂಡರು.

ಮೊದಲು ಅಬ್ಬರ ಮಾಡಿ ರೋಗ  ಇಲ್ಲದ ಜನರೂ ಕೂಡ ತಪಾಸಣೆಗಾಗಿ ಆಸ್ಪತ್ರೆಗಳಿಗೆ ದೌಡಾಯಿಸುಂತೆ ಮಾಡಿ ಈಗೀಗ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಸರಳ ಸೂಚನೆಗಳನ್ನು ಮಾಧ್ಯಮ ನೀಡಲಾರಂಭಿಸಿದೆ. ಇದು ಮೊದಲೆ ಅದು ಮಾಡಬೇಕಾದ ಕೆಲಸ. ಆರಂಭದಲ್ಲಿ ಒಂದು ರಾಷ್ಟ್ರೀಯ ವಾಹಿನಿಯಂತೂ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ತನ್ನ ವರದಿಗಾರರು ಕುಟುಕು ಕಾಯರ್ಾಚರಣೆ ನಡೆಸಿ ರೋಗ ತಡೆಗೆ ಆಸ್ಪತ್ರೆಗಳು ಅದೆಷ್ಟು ಅದಕ್ಷ ಎಂದು ಬಿಂಬಿಸುವ ಪ್ರಯತ್ನ ನಡೆಸಿತು. ಅದರ ವರದಿಗಾರರು ರೋಗಿಗಳೆಂದು ಹೇಳಿಕೊಂಡು ಆಸ್ಪತ್ರೆಗಳಿಗೆ ಹೋಗಿ ಈ ಕುಟುಕು ವರದಿ ಮಾಡಿದರು. ಇದಕ್ಕೆ ಹೊರತಾಗಿಲ್ಲ ಎಂದು ಪತ್ರಿಕೆಗಳು ಹಂದಿಜ್ವರವನ್ನು ಹೆಮ್ಮಾರಿ, ಮಹಾಮಾರಿ ಎಂದು ಬಣ್ಣಿಸುವುದು ಇನ್ನೂ ಮುಂದುವರೆದಿದೆ. ಆದರೂ ಪತ್ರಿಕೆಗಳು ಜನ ಕಂಗೆಡುವ ಅಗತ್ಯವಿಲ್ಲವೆಂದು ಸಂಪಾದಕೀಯಗಳಲ್ಲಿ ಹೇಳಿರುವುದು ತುಸು ನೆಮ್ಮದಿಯ ಸಂಗತಿ. ಅದರಲ್ಲಂತೂ ಪರಿಸರ ಪತ್ರಕರ್ತ ನಾಗೇಶ್ ಹೆಗಡೆ ಅಂಕಣ ರೋಗ ಕುರಿತು ರೋಚಕ ಹಿಮ್ಮಾಹಿತಿ ನೀಡಿದೆ. ಹೀಗೆ ಜ್ವರ ದೇಶದ ಬಹು ಭಾಗ ಬರದ ದವಡೆಯಲ್ಲಿ ಸಿಲುಕಿರುವುದನ್ನೂ ಮರೆಮಾಚಿದೆ

ಸಂಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮಿರ್ಚಿ

‍ಲೇಖಕರು avadhi

August 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This