ಹರೀಶ್ ಕೇರ ಕಳಿಸಿದ ಒಂದು ಕಾಳಜಿ ಪತ್ರ

ch3-drought

ಒಂದು ವಿಚಾರ .. .. ನಿಮ್ಮಲ್ಲಿ

ಈ ವರ್ಷದ ಬರ ಕಳೆದ ಕೆಲವು ದಶಕಗಳಲ್ಲಿ ಕಂಡು ಕೇಳರಿಯದಷ್ಟು ಭೀಕರವಾಗಲಿದೆ.ಸಕರ್ಾರ ಈಗಾಗಲೇ ದಿಕ್ಕೆಟ್ಟು, ತಲೆಗೆ ತೋಚಿದ ಪರಿಹಾರ ದಾರಿಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಆಜ್ಞಾಪಿಸುತ್ತಿದೆ. ಬರವೆಂದರೆ ನಮ್ಮ ಅಧಿಕಾರಿಗಳಿಗೆ ಅಪಾರ ಮಮಕಾರ ಇರುವ ಕಾರಣ ಈ ಬಾರಿಯ ಬರ ನಿಯಂತ್ರಣದ ಕಾಮಗಾರಿಗಳು ಮಾಯಾಬಜಾರ್ನ ಹಬ್ಬದೂಟವಾಗುವ ಸಂಭವವೇ ಜಾಸ್ತಿ.

ಕಳೆದ ಕೆಲವು ದಿನಗಳ ಸಕರ್ಾರದ ಘೋಷಣೆ ನೋಡಿದರೆ ಕನಿಷ್ಟ 3000 ಕೋಟಿ ರೂಪಾಯಿ ಈ ಬಾರಿ ವೆಚ್ಚವಾಗಲಿದೆ.

ಇನ್ನು ಕೆಲವೇ ದಿನಗಳಲ್ಲಿ, ವಾರಗಳಲ್ಲಿ ಬರದ ಆಪತ್ತು ಮತ್ತು ಸಕರ್ಾರೀ ಯಂತ್ರದ ವಿಕೃತ ಭೃಷ್ಟಾಚಾರಗಳೆರಡೂ ನಮ್ಮೆದುರು ಅನಾವರಣಗೊಳ್ಳಲಿವೆ. ಇದನ್ನು ಎದುರಿಸಲು ನಮ್ಮ ಗ್ರಾಮೀಣ ರೈತಾಪಿ ಬಂಧುಗಳ ಜೊತೆ ನಾವು ಅರ್ಥಪೂರ್ಣವಾಗಿ ಕೈಜೋಡಿಸಬೇಕಾಗಿದೆ.

ವೈಯುಕ್ತಿಕವಾಗಿ ನಾನು ಒಂದು ಸಹಭಾಗಿತ್ವದ ಯೋಜನೆಯೊಂದನ್ನು ಮುಂದಿಡುತ್ತಿದ್ದೇನೆ.

ಈ ಬಾರಿಯ ಬೇಸಿಗೆಯ ಬರ ಸನ್ನಿವೇಶವನ್ನು ಬಗೆಹರಿಸಲು ಸಕರ್ಾರ ಕೈಗೊಳ್ಳಲಿರುವ ಹೆಜ್ಜೆಗಳನ್ನು ಬೆನ್ನುಹತ್ತುವ ಕೆಲಸವನ್ನು ಸಂಘಟಿತವಾಗಿ ಮಾಡಲು ಸಾಧ್ಯವೇ? ಎಂಬುದು ಪ್ರಶ್ನೆ.

ನನಗನ್ನಿಸುವುದೇನೆಂದರೆ, ನಮ್ಮ ಪತ್ರಕರ್ತರ ಬಳಗವನ್ನು ಕ್ರಿಯಾಶೀಲಗೊಳಿಸುವ ಮೂಲಕ ಒಂದು ಸ್ತರದಲ್ಲಿ ಇದನ್ನು ಮಾಡಬಹುದು.

ಪ್ರಾಕ್ಟಿಕಲ್ ಆಗಿ, ಸಕರ್ಾರದ ಬಡತನ ನಿವಾರಣೆ ಮತ್ತು ಬರ ನಿವಾರಣೆ ಕಾಮಗಾರಿಗಳನ್ನು ಸ್ಥಳೀಯಮಟ್ಟದಲ್ಲಿ ಅಂದರೆ, ಪಂಚಾಯತ್ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿವೀಕ್ಷಿಸಿ ಆ ಬಗ್ಗೆ ವರದಿಗಳನ್ನು ಬರೆಯವಂತೆ ನಾವು ಪತ್ರಕರ್ತರನ್ನು ಪ್ರೇರೇಪಿಸಬೇಕಾಗಿದೆ.

ಈ ಪ್ರೇರಣೆ ಕೇವಲ ವಿನಂತಿಯಿಂದ ಅಗುವಂಥಾದ್ದಲ್ಲ..!

ರಾಜ್ಯದ ಯಾವುದೇ ಜಿಲ್ಲೆಯ ಯಾವುದೇ ಪತ್ರಿಕೆಯಲ್ಲಿ ಈ ರೀತಿಯ ತನಿಖಾ ವರದಿ, ವಿಶ್ಲೇಷಣಾತ್ಮಕ ಲೇಖನಗಳನ್ನು ಗುರುತಿಸಿ ಗೌರವಿಸುವುದು ಸಾಧ್ಯವಾದಲ್ಲಿ ಪತ್ರಕರ್ತರಿಗೂ ಸಾರ್ಥಕ್ಯಭಾವ ಬಂದೀತು.

ಈ ಹಿನ್ನೆಲೆಯಲ್ಲಿ, ಯಾವುದೇ ಜಿಲ್ಲೆಯ ಯಾವುದೇ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಿಗೆ ಕನಿಷ್ಠ ರೂ.500 ಗೌರವ ಧನವನ್ನು ಪ್ರಶಂಸಾಪೂರ್ವಕವಾಗಿ ನೀಡುವುದು ಸಾಧ್ಯವಾದರೆ, ಮತ್ತು, ಒಂದು ಅಂದಾಜು ಕಾಲಮಿತಿಯೊಳಗೆ ಪ್ರಕಟವಾಗುವ ವರದಿಗಳ ಪೈಕಿ ಅತ್ಯುತ್ತಮವೆಂದು ಪರಿಗಣಿಸುವ ಲೇಖನಕ್ಕೆ, ಇನ್ನೂ ಹೆಚ್ಚಿನ ಗೌರವಧನವನ್ನು ನೀಡಬಹುದು. ಮುಖ್ಯತಃ ಈ ರೀತಿಯ ವರದಿಗಳು ಭೃಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಅಷ್ಟಿಷ್ಟು ಸಸಹಾಯ ಮಾಡೀತು. ನನ್ನ ಅನುಭವದಂತೆ, ಈ ರೀತಿಯ ಗೌರವ ಸಲ್ಲಿಕೆ ಪತ್ರಕರ್ತರನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತದೆ.

ಪ್ರಾಯಶಃ ತಿಂಗಳಿಗೆ ಇಂಥಾ ಐದು ವರದಿಗಳನ್ನು ಗುರುತಿಸಿ ಗೌರವಿಸಿದರೆ, ಕ್ರಮೇಣ ಅದು ಸಾಮಾಜಿಕ ಜವಾಬ್ದಾರಿಯ ಕ್ರಿಯಾಶೀಲ ಬಳಗವೊಂದನ್ನು ಕಟ್ಟುವಲ್ಲೂ ಸಹಾಯವಾದೀತು.ಮತ್ತು ಇಂಥಾ ವರದಿಗಳನ್ನಿಟ್ಟಕೊಂಡು, ಸ್ಥಳೀಯ ಹೋರಾಟಗಳನ್ನು ಸಂಘಟಿಸಲೂ ನೆರವಾದೀತು.

ಈ ರೀತಿಯ ಗೌರವವನ್ನು ನೀಡುವುದಾದಲ್ಲಿ, ಇದಕ್ಕೆ ಬೇಕಾದ ಹಣವನ್ನೂ ಯಾವುದೇ ಎನ್.ಜಿ.ಓ/ ಸಂಸ್ಥೆಗಳಿಂದ ಪಡೆಯದೇ, ಸಾಮಾಜಿಕ ಕಾಳಜಿಯ ಮಿತ್ರರಿಂದಲೇ ಹೊಂದಿಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಆಶಯ.

ನಾನು ವೈಯಕ್ತಿಕವಾಗಿ ತಿಂಗಳಿಗೆ ಒಂದು ಸಾವಿರ ರೂ.ಗಳನ್ನು ನೀಡಲು ಬದ್ಧ.

ಈ ರೀತಿಯ ಒಂದು ಉಪಕ್ರಮವನ್ನು ವೈಯಕ್ತಿಕವಾಗಿ ಮಾಡಿದರೆ ಅದಕ್ಕೆ ಮಾನ್ಯತೆಯೂ ಇಲ್ಲ; ಅದು ಸಾಧುವೂ ಅಲ್ಲ.

ಆದ್ದರಿಂದ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ಈ ಜವಾಬ್ದಾರಿಯನ್ನು ನಿರ್ವಹಿಸುವ ಬಗ್ಗೆ, ಶ್ರೀ ಸಂತೋಷ ಕೌಲಗಿಯವರಲ್ಲೂ ಮಾತನಾಡಿದೇನೆ.

ಈ ಬಗ್ಗೆ ನಿಮ್ಮ ಅನಿಸಿಕೆ , ಸಲಹೆಗಳನ್ನು ದಯಮಾಡಿ ತಿಳಿಸುವಿರಾ?

ಈ ಯೋಚನೆ, ಯೋಜನೆ, ತಾತ್ವಿಕವಾಗಿ ಒಪ್ಪಿಗೆಯೆಂದಾದಲ್ಲಿ, ಇದನ್ನು ಕಾರ್ಯರೂಪಕ್ಕಿಳಿಸುವ ಬಗ್ಗೆ, ನಿಮ್ಮ ಸಲಹೆ, ಸಹಕಾರಗಳ ಬಗ್ಗೆಯೂ ತಿಳಸಿ.

ವಂದನೆಗಳೊಂದಿಗೆ

ನಿಮ್ಮ

ಕೆ.ಪಿ.ಸುರೇಶ

ವಿಳಾಸ.: ಕೆ.ಪಿ.ಸುರೇಶ

ಮಿಂಚುಳ ಆಶ್ರಮ, ದಿಣ್ಣೆಪಾಳ್ಯ

ಕಗ್ಗಲಿಪುರ, ಬೆಂಗಳೂರು. 560082.

ಫೋನ್: 9341852985

‍ಲೇಖಕರು avadhi

August 26, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

6 ಪ್ರತಿಕ್ರಿಯೆಗಳು

 1. hneshakumar@gmail.com

  ನಿಮ್ಮ ಯೋಗನೆ ಫಲಪ್ರದವಾಗಲಿ ಅದಕ್ಕೆ ಬೇಕಾದ ಸಹಾಯ ನಮ್ಮ ಕಡೆಯಿಂದಲೂ ನಿಮಗೆ ಲಭ್ಯ…ಧನ್ಯವಾದ ಹರೀಶ್

  ಪ್ರತಿಕ್ರಿಯೆ
 2. Harish Kera

  ಪ್ರಿಯ ಮೋಹನ್,
  ಈ ಪತ್ರದ ಒಕ್ಕಣೆ ನನ್ನದಲ್ಲ. ನನ್ನ ಗುರುಸಮಾನರಾದ ಆತ್ಮೀಯ ಕೆ.ಪಿ.ಸುರೇಶ ಕಂಜರ್ಪಣೆ ಅವರದು. ನೀವು ಶೀರ್ಷಿಕೆ ‘ಹರೀಶ್ ಕೇರ ಕಳಿಸಿದ ಒಂದು ಕಾಳಜಿ ಪತ್ರ’ ಎಂದು ಇಟ್ಟಿರುವುದು ಇದು ನಾನೇ ಕಳಿಸಿದ ಪತ್ರ ಎಂಬ ತಪ್ಪು ಅರ್ಥ ಹುಟ್ಟು ಹಾಕುವಂತಿದೆ. ನಾನು ಇದನ್ನು ನಿಮಗೆ ಫಾರ್‌ವರ್ಡ್ ಮಾಡಿದ್ದೆ ಅಷ್ಟೆ. ಇದರ ಮೂಲ ಕಾನ್ಸೆಪ್ಟ್, ಕಾಳಜಿ, ಕೆಲಸ ಎಲ್ಲವೂ ಸುರೇಶರದು.

  ಈ ಪುರಸ್ಕಾರದ ಯೋಜನೆ ಇನ್ನೂ ಸಂಪೂರ್ಣ ರೂಪ ಪಡೆದಿಲ್ಲ. ಒಂದಷ್ಟು ರೆಸ್ಪಾನ್ಸಿಬಲ್ ಪತ್ರಕರ್ತರು ಹಾಗೂ ಚಿಂತಕರನ್ನು ಸಂಪರ್ಕಿಸಿ ಇದನ್ನು ಇನ್ನಷ್ಟು ವಿಸ್ತರಿಸುವ, ಅರ್ಥಪೂರ್ಣ ಹಾಗೂ ಪ್ರಯೋಜನಕಾರಿಯಾಗುವಂತೆ ಮಾಡುವ ಕೆಲಸವನ್ನು ಸುರೇಶ್ ಮಾಡುತ್ತಿದ್ದಾರೆ. ಇದರಲ್ಲಿ ಸಂತೋಷ್ ಕೌಲಗಿ ಅವರದೂ ಪ್ರಮುಖ ಪಾತ್ರವಿದೆ.

  ಇನ್ನು ಕೆ.ಪಿ.ಸುರೇಶರ ಬಗ್ಗೆ ನಿಮಗೆ ಹೇಳಲೇಬೇಕಾಗಿಲ್ಲ ಅಲ್ಲವೆ ? ಕವಿ, ವಿಮರ್ಶಕ, ಅನುವಾದಕ, ಕೃಷಿಕ, ಸಾಮಾಜಿಕ ಕಾರ್‍ಯಕರ್ತ ಹಾಗೂ ಅಧ್ಯಯನಕಾರ ಎಲ್ಲವೂ ಆಗಿರುವ ಸುರೇಶ ಈಗ ಎನ್‌ಜಿಒ ಒಂದರಲ್ಲಿದ್ದಾರೆ. ಅಲ್ಲಿದ್ದುಕೊಂಡೇ ಅರ್ಥಪೂರ್ಣ ಕೆಲಸ ಮಾಡುತ್ತಿರುವ ಅವರು ಪತ್ರಿಕೋದ್ಯಮ, ಎನ್‌ಜಿಒ, ಅಕಾರಶಾಹಿ, ಚುನಾವಣಾ ರಾಜಕಾರಣ- ಎಲ್ಲದರ ಸಾಧ್ಯತೆ ಹಾಗೂ ಮಿತಿಗಳ ಬಗ್ಗೆ ಸದಾ ಚಿಂತಿಸುವವರು.

  ದಯವಿಟ್ಟು ಈ ಸ್ಪಷ್ಟೀಕರಣ ಪ್ರಕಟಿಸುವಿರಾ ?
  – ಹರೀಶ್ ಕೇರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: