ಹಳ್ಳಿಯಲ್ಲೊಂದು ವಿಮಾನ

-ಜಿತೇಂದ್ರ ಕಶ್ಯಪ್

ನಿಮಗೆಲ್ಲ ಗೊತ್ತಿರುವಂತೆ ನಾನು ಸಾಗರದ ಹತ್ತಿರದ ಹಳ್ಳಿಯ ಕೃಷಿಕ.

ಹಾಗೆ ನನಗೆ ಸಾಗರ ಸುತ್ತ-ಮುತ್ತ ಊರುಗಳಲ್ಲಿ ಸ್ನೇಹಿತರಿದ್ದಾರೆ, ಅವರಲ್ಲಿ ಒಬ್ಬರ ಪರಿಚಯ ಮಾಡಿಕೊಡಲಿದ್ದೇನೆ ಇಂದು.

ಸಾಗರಕ್ಕೆ ತಾಗಿಕೊಂಡಿರುವ ಊರು ಎಳ್ಳಾರೆ. ಅದು ಈಗ ಸಾಗರದ ಒಂದು ಭಾಗವೇ ಆಗಿದೆ ಎಂದು ಹೇಳಬಹುದು.

ಅಲ್ಲಿನ ಕೃಷಿಕ ಕುಟುಂಬದ ಯುವಕ ಶ್ರೀನಿವಾಸ್. ಇವರು ಓದಿದ್ದು ಹಲವು ವರ್ಷಗಳ ಹಿಂದೆ ಏರೋನಾಟಿಕಲ್ ಇಂಜಿನಿಯರಿಂಗ್.

ಹಲವಾರು ಕಾರಣಗಳಿಂದ ಅವರಿಗೆ ಪೈಲಟ್ ಆಗಿ ವೃತ್ತಿಗೆ ಸೇರಲು ಸಾದ್ಯವಾಗಲಿಲ್ಲ. ಮನೆಯಲ್ಲಿ ತೋಟ-ಗದ್ದೆ ವ್ಯವಹಾರ ನೋಡಿಕೊಂಡಿದ್ದರು. ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಲೇವಾದೇವಿ ಹಾಗೂ ಕಂಪ್ಯೂಟರ್‍ ರಿಪೇರಿ ಮಾಡಿಕೊಡುವುದು ಮಾಡುತ್ತಿದ್ದರು, ಹಾಗೂ ಅವರಿಗೆ ಕಂಪ್ಯೂಟರ್‍ ಸಾಫ್ಟವೇರ್‍ ತಯಾರಿಸಿಕೊಡುವಷ್ಟು ತಜ್ಙತೆಯೂ ಇದೆ.

ಕಳೆದ ವರ್ಷ ಇವರಿಗೆ ಇದ್ದಕ್ಕಿದ್ದಂತೆ ವಿಮಾನ ಖರೀದಿಸಿ ಹಾರಾಡುವ ಬಯಕೆ ಮೂಡಿ, ಹೆಚ್ ಎ ಎಲ್ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಮೈಕ್ರೋಲೈಟ್ ವಿಮಾನವನ್ನು ಖರೀದಿಸಿ, ಅದನ್ನು ಅಲ್ಲಿಯೇ ರಿಪೇರಿ ಮಾಡಿಸಿ ಮನೆಗೆ ತಂದರು.

ಆದರೆ ಅದನ್ನು ಹಾರಿಸಲು ಸುಮಾರು ೩೦೦ ಅಡಿಗಳ ರನ್ವೇ ಅಗತ್ಯವಿದೆ, ಅದನ್ನೆಲ್ಲ ಮಾಡಿ ನೋಡಿದರೆ ರನ್ ವೇ ತುದಿಗೆ ವಿದ್ಯುತ್ ಕಂಬ, ತಂತಿ ಹಾದು ಹೋಗಿದ್ದವು. ಅವುಗಳನ್ನೆಲ್ಲ ನಿವಾರಿಸಿ, ಹೆಜ್ಜೆ-ಹೆಜ್ಜೆಗೂ ರೆಡ್ ಟೇಪಿಸಂ ಎದುರಿಸಿ ಕೊನೆಗೂ ಜಿಲ್ಲಾಧಿಕಾರಿಯವರ ಅನುಮತಿಯನ್ನೂ ಪಡೆದು ಈ ವರ್ಷ ವಿಮಾನವನ್ನು ಹಾರಿಸಲು ಪ್ರಾರಂಭಿಸಿದ್ದಾರೆ…

ನಾವೆಲ್ಲ ವಿಮಾನ ಹತ್ತುವುದು-ಹತ್ತಿಸುವುದು ಪೋಲಿಸ್ ಸ್ಟೇಷನ್ಲ್ಲಿ ಮಾತ್ರ ಎಂದುಕೊಂಡ ಕಾಲದಲ್ಲಿ ಇವರು ಹಳ್ಳಿಯಲ್ಲಿ ಹವ್ಯಾಸಕ್ಕಾಗಿ ವಿಮಾನ ಇಟ್ಟ ಮೊದಲ ಸಾಹಸಿಯಾಗಿದ್ದಾರೆ.

‍ಲೇಖಕರು avadhi

April 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

  1. Muralidhar Sajjan

    Good……. sadyavadre futurannu nodi sir. Environment (BAD) kadege gamana irali.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: