‘ಹಾನಾ’ ಅಂದ್ರೆ ಏನಾ..?

ರಾಘವೇಂದ್ರ ಜೋಷಿ

‘ಹಾನಾ’,’ಹಾನ’,’ಆನ’,’ಆನಾ’- ಇದರಲ್ಲಿ ಯಾವುದೋ ಒಂದು ಶಬ್ದ ಸರಿಯಾಗಿದೆ.ಅದು ಯಾವುದು ಮತ್ತು ಅದರ ಅರ್ಥವೇನು ಅಂತ ಯಾರಿಗಾದರೂ ಗೊತ್ತೇ?

ದಾಸರು ಒಂದು ಕಡೆ “ಅಕೋ ಅಲ್ಲಿ ಹಾನಾ..ಇಕೋ ಕಾಣಿಸುತಾನಾ…” ಅಂತ (ಬಹುಶಃ) ಕೃಷ್ಣನ ಬಗ್ಗೆ ಹಾಡಿಕೊಳ್ಳುತ್ತಾರೆ.ಇಲ್ಲಿ “ಹಾನಾ” ಎಂಬ ಶಬ್ದದ ಸರಿ,ತಪ್ಪು ಗೊತ್ತಾಗಬೇಕು.ದಯವಿಟ್ಟು ಯಾರಾದರೂ ಬೆಳಕು ಚೆಲ್ಲಿ..

‍ಲೇಖಕರು G

June 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

11 ಪ್ರತಿಕ್ರಿಯೆಗಳು

 1. Gopal Wajapeyi

  ನನಗೆ ತಿಳಿದಂತೆ ಇವೆಲ್ಲ ಹಳೆಗನ್ನಡ ಪದಗಳ ಅಪಭ್ರಂಶ ರೂಪಗಳು. ‘ಇಹನ್’ (=ಇಹನು=ಇರುವನು), ‘ಇಹಳ್’ (=ಇಹಳು=ಇರುವಳು) ಮತ್ತು ‘ಇಹರ್’ (=ಇಹರು=ಇರುವರು) ಎಂದೆಲ್ಲ ಆಗ ಬಳಕೆಯಲ್ಲಿತ್ತಲ್ಲವೇ? ಕ್ರಮೇಣ ಈ ಪ್ರಯೋಗಗಳೆಲ್ಲ ಆಡುಮಾತಿನಲ್ಲಿ ‘ಹಾನ’, ‘ಹಾಳ’, ‘ಹಾರ’ ಎಂಬ ರೂಪ ಪಡೆದಿರಬೇಕು. ವಿಜಾಪುರ ಜಿಲ್ಲೆ ಮತ್ತು ಹಾಗೆಯೇ ಈಶಾನ್ಯದೆಡೆ ಸಾಗಿದರೆ ನಿಮಗೆ ನಿತ್ಯದ ಮಾತಿನಲ್ಲಿ ಈ ಪ್ರಯೋಗಗಳು ಕಿವಿಗೆ ಬೀಳುತ್ತವೆ.
  ವಿಜಾಪುರದಾಚೆಗೆ ನೀವು ಯಾರದಾದರೂ ಮನೆಗೆ ಹೋಗಿ, ”ಯಜಮಾನ್ರು ಮನ್ಯಾಗ ಅದಾರೇನ್ರೀ…?” ಅಂತ ಕೇಳಿದರೆ ಒಳಗಿನಿಂದ, ”ಹಾರ ಬರ್ರಿ…” ಎಂದು ಉತ್ತರ ಬರಬಹುದು. ಗಾಬರಿಯಾಗಬೇಡಿ. ಅಥವಾ ‘ಎಲ್ಲಿಂದ ಹಾರಿ ಬರುವುದು?’ ಅಂತ ತಬ್ಬಿಬ್ಬುಗೊಳ್ಳಲೂ ಬೇಡಿ. ‘ಇದ್ದಾರೆ ಬನ್ನಿರಿ,’ ಎಂದು ಆಕೆ ಹೇಳಿರುತ್ತಾರೆ, ಅಷ್ಟೇ…
  ಇನ್ನು ದಾಸರು, ”ಅಕೋ ಅಲ್ಲಿ ಹಾನಾ… ಇಕೋ ಕಾಣಿಸತಾನಾ…” ಎಂದು ಹೇಳಿರುವುದನ್ನು ಅರ್ಥೈಸಿಕೊಳ್ಳಲು ಕಷ್ಟವಾಗುವುದಿಲ್ಲ ಅಲ್ಲವೇ?

  ಪ್ರತಿಕ್ರಿಯೆ
 2. ಜೋಗಿ

  ಇಹನು ಅನ್ನುವುದರ ಮತ್ತೊಂದು ರೂಪ ಅದು. ಅಕೋ ಅಲ್ಲಿಹಾನಾ, ಇಕೋ ಇಲ್ಲಿಹಾನಾ.. ಎಲ್ಲಿಹನೆಲ್ಲಿಹನಾ.. ಎಂಬಂತೆ. ಹಾನಾ ಎಂಬುದು ಪ್ರತ್ಯೇಕ ಪದ ಅಲ್ಲ ಅನ್ನಿಸುತ್ತೆ ಜೋಶಿ

  ಪ್ರತಿಕ್ರಿಯೆ
 3. ರಾಘವೇಂದ್ರ ಜೋಶಿ

  ಸಂಬಂಧಪಟ್ಟ ಎಲ್ಲರಿಗೂ: ಇಲ್ಲಿ ನಿಜವಾಗಿಯೂ ಆಗಿದ್ದೇನೆಂದರೆ, ಚಲನಚಿತ್ರದಲ್ಲಾಗಲೀ, ಕೀರ್ತನೆಯಲ್ಲಾಗಲೀ,ಭಾವಗೀತೆಯಲ್ಲಾಗಲೀ- ಹಾಡೊಂದು ಸ್ವರ ಸಂಯೋಜನೆಗೊಂಡಾಗ ಅಲ್ಲಿನ ರಾಗಕ್ಕೆ ಹಾಡಲು ಅನುವಾಗಲೆಂದು ಹಾಡಿನಲ್ಲಿನ ಕೆಲವೊಂದು ಶಬ್ದಗಳನ್ನು ಒಡೆಯಲಾಗುತ್ತದೆ.ಅದು ಸಹಜ.ಇಲ್ಲೂ ಆದದ್ದೂ ಅದೇನಾ?ಗೊತ್ತಿಲ್ಲ.. “ಅಕೋ ಅಲ್ಲಿಹನಾ,ಇಕೋ ಕಾಣಿಸುತಾನಾ..” ಎಂಬುದನ್ನು ರಾಗಕ್ಕೆ ಅನುಸಾರವಾಗಿ “ಅಕೋ ಅಲ್ಲಿ-ಹಾನಾ,ಇಕೋ ಕಾಣಿಸು-ತಾನಾ..” ಅಂತ ಹಾಡುತ್ತಿದ್ದೆವು..ಹೀಗಾಗಿ “ಹಾನಾ” ತಲೆ ಕೆಡಿಸಿತು.
  “ಅಕೋ ಅಲ್ಲಿಹಾನಾ
  ಇಕೋ ಕಾಣಿಸುತಾನ
  ಸರ್ವರಲ್ಲಿ ಹಾನಾ
  ಸಜ್ಜನರ ತಣಿಸುತಾನ..”
  ಬಹುಶಃ ಹೀಗೆ ಶುರುವಾಗುತ್ತೆ ಆ ಕೀರ್ತನೆ..
  ಆಸಕ್ತಿಯುಳ್ಳವರಿಗೆ ಉಪಯೋಗವಾಗಲಿ ಅಂತ.
  -RJ

  ಪ್ರತಿಕ್ರಿಯೆ
 4. ರವಿ ಮುರ್ನಾಡು,ಕ್ಯಾಮರೂನ್

  ಇಲ್ಲಿಯ ಚರ್ಚೆ ಖುಷಿ ಆಯಿತು.ಹೌದು ಲಯ ಹುಡುಕುವಾಗ ಅಥವಾ ಸಂಗೀತಕ್ಕೆ ಒಗ್ಗಿಸುವಾಗ ಕೆಲವು ಶಬ್ಧಗಳನ್ನು ಒಡೆಯಲಾಗುತ್ತದೆ. ಸಂಗೀತ ರಾಗಗಳ ಅರಿವಿದ್ದ ಕವಿ, ಕಾವ್ಯದ ಅರಿವಿದ್ದ ಗಾಯಕ ಮತ್ತು ಸಂಗಿತ ನಿರ್ದೇಶಕರಿಂದ ಸಾರ್ವಕಾಲಿಕ ಹಾಡುಗಳನ್ನು ನಿರೀಕ್ಷಿಸಬಹುದು.ಉದಾಹರಣೆಗೆ ಇಳೆಯರಾಜ.

  ಪ್ರತಿಕ್ರಿಯೆ
 5. Pramod ambekar

  20 varushad hindina vishaya nanna hendati sinsdagiyavalu maduve agi hasadagi nanna hendati joti matanduvag nanu sahajvagi nanna handatiyanna kelide Vinod yelle hogyan anata
  ake helida uttra
  ille hana
  ghabariyagi kelide hana andare yenu hana andare hana andalu dinkaldante avalige nammliyadu roodi aadmele avale heli hallavu bari nakkiddale.

  Ambekar Pramod

  ಪ್ರತಿಕ್ರಿಯೆ
 6. ಶ್ರೀವತ್ಸ ಜೋಶಿ

  ಒಂದು ಡಬ್ಬಾತೀತ (outside the box) ಉತ್ತರ ಹೀಗೆ-

  ಪದಬಂಧ ಸುಳಿವು: “ನಡುವೆ ಹಿಂದಿ ತಾಯಿಯನ್ನು ಕಳಕೊಂಡ ಕನ್ನಡದ ಪ್ರಖ್ಯಾತ ಅಂಕಣಕಾರ” (2 ಅಕ್ಷರಗಳು).
  ====

  ಪ್ರತಿಕ್ರಿಯೆ
 7. D.RAVI VARMA

  ಇದು ತುಂಬಾ ಇನ್ತೆರ್ಸ್ತಿಂಗ್ ಆದ ಪ್ರಸ್ನೆ, ಅಸ್ತೆ ಅಲ್ಲ ಇದು ವಾತ್ಸವದ ಸಮಸ್ಯೆ, ನಾನುಎಂ ಕಾಮ್.ಮಾಡಲು ಗುಲ್ಬರ್ಗ ಹೋದಾಗ ಈ ಬಾಷೆಯ ಗೊಂದಲ ನನ್ನನ್ನು ಹಲವು ಬಾರಿ ಪೇಚಿಗೆ ಸಿಲುಕಿಸಿತ್ತು . ನಮ್ಮ ಕಡೆ ಕೂಗು ,ಕರೆ ಎನುಉವ ಶಬ್ದಕ್ಕೆ ಅಲ್ಲಿ ವದುರು ಎನ್ನುತ್ತಾರೆ, ನಮ್ಮಕಡೆ ಸಿಟ್ಟುಬಂದಾಗ ಅನ್ಗ್ಯಾಕೆ ವದುರುತಿಯಲೇ ಅಂತಾ ಹೇಳುತ್ತೇವೆ, ಒಮ್ಮೆ ಭೀಮಣ್ಣ ಕಂಡ್ರೆ ಬೀದರ್ ರಾಜಕಾರಣಿಗಳು ,ರಾಜ್ಯೋತ್ಸವ ಭಾಷಣ ಕೇಳಿ ದಿಕ್ಕುತಪ್ಪಿಹೊಗಿದ್ದೆ.” ಕಲ್ಲಿ ನೋಡ್ರಿ ಮಹಾರಸ್ತ್ರದಾಗ, ಕಿಲ್ಲಿ ನೋಡ್ರಿ ಅನ್ದ್ರಪ್ರದೆಶ್ದಾಗ ,ಜನ ತಮ್ಮಭಾಷೆ ಅಂದ್ರೆ ಯಂಗ ಬಿದ್ದು ಸಾಯ್ತವು ಕಂಗ ನಾವು ನಮ್ಮ ಭಾಷೆಗಾಗಿ ಬಿದ್ದು ಸಾಯಬೇಕು,………. ಇಲ್ಲದಿದ್ರೆ ಇನ್ನ ಸಂಬರ್ ವರ್ಷ ಕಳೆದ್ರುಬಿ ನಾವು ಏನ್ ಸಾದಸಂಗಿಲ್ಲ………….. ಹಿಂಗ, ಹಿಂಗ …….. ಬಹುಷಃ ಬೀದರ್,ಗುಲ್ಬರ್ಗ, ವಿಜಪುರ್ ಗಳ ಬಾಷೆಯಲ್ಲಿ ಇಂದಿಗೂ ಉರ್ದು ,ಹಿಂದಿ ಮಿಶ್ರಿತ ವಾಗಿರೋದು, ಹಲವೊಮ್ಮೆ ಅದು ಬಾಷೆಯ ವ್ಯಪ್ತಿಯನ್ನೇ ಹಿಗ್ಗಿಸಿದೆಯೇನೋ ಅನಿಸುತ್ತದೆ,
  ಮತ್ತೊಮ್ಮೆ, ಚಲ್ಲಿಕೆರೆಗೆ ಹೋಗಿದ್ದೆ, ಬೆಳಿಗ್ಗೆ ನಾನುಸ್ನಾನ ಮಾಡಲು ಯೋಚಿಸುತ್ತಿದ್ದೆ, ಅಲ್ಲಿದ್ದ ಒಬ್ಬ ಹೆಂಗಸು “ಹೋಯ್ಕೊಲ್ಲದದ್ರೆ ಜಲ್ಲಿ ಹೊಯ್ಕೊಲ್ಲಿ, ಇಲ್ಲದಿದ್ರೆ ನಾನು ಹೊಯ್ಯಕೊತಿನಿ , ನಾನು ಪರೆಸ್ಹಾನ್ ಆಗಿ ಸರಿ ಬೆಳ್ಬೆಳಿಗ್ಗೆ ನಾನ್ಯಾಕೆ ಹೊಯ್ಯಕೊಳ್ಳಲಿ , ನೀವೇ ಹೊಯ್ಯಕೊಂದುಬಿಡಿ ಅಂದೆ..

  ಒಮ್ಮೆ ಹೀಗೆ ಗೆಳೆಯರ ಜೊತೆ ಮಾತನಾಡುವ , ನಾವೆಲ್ಲಾ ಮಾಡುವಬೆಳಗಿನ ಮೊದಲ ಕೆಲಸಕ್ಕೆ ,ಎಸ್ಟೆಲ್ಲ ಶಬ್ದಗಳಿವೆ ಅಂತಾ ತಲೆಕೆಡಿಸಿಕೊಂಡೆ, ಒಂದ್ಕಡೆ, ಸಂಡಾಸು ಅಂದ್ರೆ, ಮತ್ತೊಂದುಕಡೆ, ಹಳ್ಳಕ್ಕ ಹೊಗ್ಯರೀ, ನೀರು ಮುಟ್ತಕ ಹೊಗ್ಯರೀ, ದೊಡ್ಡಿಗೆ ಹೊಗ್ಯರೀ, ಬಯಲ್ಲಕ ಹೊಗ್ಯರೀ, toilet ಹೊಗ್ಯರೀ, ಲಂಡನ್ ಹೊಗ್ಯರೀ . ಏರಿಮ್ಯಾಗ ಹೊಗ್ಯರೀ, ಹೊರಗ ಹೊಗ್ಯರೀ, ಕುಂತ್ಯಕ ಹೊಗ್ಯರೀ , ಹೀಗೆ, ಹೀಗೆ ಶಬ್ದಗಳು ಬಂದು ಹೋದವು
  ಇಂದಿಗೂ ಗುಲ್ಬರ್ಗದ ಕಡೆ “ಹಾನ” ಅಂದ್ರೆ ಇದ್ದಾನೆ ಎನ್ನುವ ಪದದ ಅರ್ಥ ,ವಿಜಯನಗರ ಸಾಮ್ರಾಜ್ಯದ ಹಂಪಿಯ ಪಕ್ಕದ ನನ್ನುರಲ್ಲಿ ಅಲ್ಲಿಯ ನಾಯಕರು ತೆಲುಗು ಮಿಶ್ರಿತ ಕನ್ನಡಲ್ಲೇ ಇಂದಿಗೂ ಮಾತನಾಡುತ್ತಾರೆ, ಆ ಬಸ್ಹೆಯೇ ವಿಚ್ತ್ರ ಅಸ್ತೆ ವಿಸಿಸ್ತವಾಗಿದೆ.
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 8. D.RAVI VARMA

  ನಾಗರೀಕತೆಯ ನೆಪದಲ್ಲಿ ನಮ್ಮ ಭಾಷೆ, ಸಂಸ್ಕ್ರತಿ ,ನಡುಕು ಬದಲಾಗುತಿದ್ದು, “ಬೆಳಗಾದ್ರೆ ಎದ್ರೆನನ್ರೀ ,ನಮಸ್ಕಾರ , ಹೇಗಿದ್ದೀರಿ, ಶಬ್ದಗಳನ್ನು ಹಾಯ್, ಹಲೋ ನುಂಗಿ ಹಾಕಿವೆ.ಹಳ್ಳಿಗಳಲ್ಲಿ ,ನಾಗರೀಕತೆಯ ಸೋಗು ತಾಕದ ಹಳ್ಳಿಗಳಲ್ಲಿ ,ಇನ್ನು ಒಂದಿಸ್ತು ಭಾಷೆ ತನ್ನ ತಾಣವನ್ನು ಉಳಿಸಿಕೊಂಡಿದೆ ಆದರು ಮಾದ್ಯಮಗಳು ಅಲ್ಲಿ ತಮ್ಮ ಪ್ರಭಾವಬೀರುತ್ತಿವೆ. ಕೆಲವು ವರ್ಷಗಳ ಹಿಂದೆ ಗೆಳೆಯನ ಜೊತೆ ಹಂಪಾದೆವನ ಹಳ್ಳಿ ಗೆ ಹೋಗಿದ್ದೆ, ಹಾಗೆ ಕಾಲ ಕಳೆಯಲು ಆ ಸಣ್ಣ ಹಳ್ಳಿ ಸುತ್ತುತಿದ್ದೆ ಅಲ್ಲೊಂದು ಹುಡುಗಿ ಹಾಡು ಹಾದುತಿದ್ದುದನ್ನು ಕೇಳಿ ನಿಬ್ಬೆರಗಾದೆ, ಅದು.ಹೀಗೆ……
  ಕಾಗಿ ಕಾಗಿ ಕವ್ವ,
  ಯಾರ್ ಬಂದರವ್ವ,
  ಮಾವ ಬಂದನವ್ವ,
  ಏನ್ ತಂದನವ್ವ,
  ಹಂಡೆದಂತ,ಕುಂಡಿ ಬಿಟುಗೊಂದು,
  ಹಾಂಗೆ ಬಂದನವ್ವ .
  ಬಹುಷಃ ಪಟ್ಟಣಗಳಲ್ಲಿ ಈ ಹಾಡನ್ನು ಕೇಳಲಿಕ್ಕೆ ಅಸಾದ್ಯ ವೇನೋ,ಸಂಭಂದಿಕರು ಅತಿಥಿಗಳುಪರ ಊರಿಂದ ಬರುವಾಗ ಒಂದಿಸ್ತು ತಿಂಡಿ,ತಿನಿಸು, ಹಣ್ಣು ತಗೆದುಕೊಂಡು ಹೋಗುವ ಸಂಪ್ರದಾಯವಿತ್ತು ಈಗಲೂ ಕೆಲೆವೆಡೆ ಇದೆ, ತನ್ನ ಸೋದರ ಮಾವ ಬಂದಿದ್ದನ್ನು ಪಕ್ಕದ ಮನೆಯವರು ಛೇಡಿಸಿ ಏನುತಂದಾನೆ ಎನ್ನುವ ಪ್ರಸ್ನೇಗೆಸಿತ್ತಿನಲ್ಲಿಯೋ. ಕೊಪದಲ್ಲಿಯೋ ,ಬೇಸರದಲ್ಲಿಯೋ ಹೊರಹೊಮ್ಮಿರಬಹುದಾದ ಹಾಡಿರಬೇಕು .ಅದೇಕೋ ಬಾಷೆಯ ಪ್ರಸ್ನೆ ಬಂದಾಗ ಇದೆಲ್ಲ ನೆನಪಾಯ್ತು
  ನಮ್ಮ ಮಕ್ಕಳು ಬಳಸುವ ಮೊಬಿಲೆಗಳನ್ನು ಒಮ್ಮೆ ನೋಡಿದ್ರೆ ಇವರೇ, ಒಂದು ಹೊಸ ಬಸ್ಹೆಯನ್ನೇ ಕಂಡುಹಿಡಿದ್ದರಲ್ಲ ಅನ್ನೋ ಆಶ್ಚರ್ಯವೂ ಆಗುತ್ತೆ. kittelna ಶಬ್ದಕೋಶದಲ್ಲಿ ಸಿಗದ ಶಬ್ದಗಳನ್ನು ಇವರು ಸೃಸ್ತಿಮಾದಿಕೊಂಡಿದ್ದು ,ಅದು ಮತ್ತೊಬ್ಬರಿಗೆ
  ಅರ್ಥವಾಗಲಾರದಬಾಷೆ ಆಗಿರುತ್ತದೆ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 9. ಶ್ರೀವತ್ಸ ಜೋಶಿ

  @ahalya:

  ಗೊತ್ತು. ಹಾ.ಮಾ.ನಾಯಕರು “ಹಾಮಾನಾ” ಎಂದೇ ಪ್ರಸಿದ್ಧ. “ಹಾಮಾನಾ” ದಲ್ಲಿ ನಡುವಿನ ’ಮಾ’ (ಹಿಂದಿಯಲ್ಲಿ ತಾಯಿ) ಕಳೆದುಕೊಂಡರೆ “ಹಾನಾ” ಅಲ್ಲವೇ ಉಳಿಯುವುದು? ರಾಘವೇಂದ್ರ ಜೋಷಿಯವರು ಕೇಳಿದ ಪ್ರಶ್ನೆ ಅದೇ ಆಗಿತ್ತು: “ಹಾನಾ ಅಂದ್ರೆ ಏನಾ?” ಅಂತ.
  ಅದಕ್ಕೇ ಪೋಸ್ಟ್ ಮಾಡುವಾಗಲೇ ’ಡಬ್ಬಾತೀತ’ (out-of-the-box, lateral thinking) ಎಂದು ಬರೆದಿದ್ದೆ. ನೀವು punಟರು ಅರ್ಥ ಮಾಡ್ಕೊಳ್ತೀರಿ ಅಂದ್ಕೊಂಡಿದ್ದೆ 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: