ಹಾಲಿವುಡ್, ಬಾಲಿವುಡ್, ಕನ್ನಡ ವುಡ್

ಪ್ರಶಾಂತ್ ಭಟ್

  ಚಲನಚಿತ್ರಗಳು ನಮಗರಿವಾಗದಂತೆಯೇ ಕಲಿಸಿಕೊಡುವ ಪಾಠಗಳು..

ಹಾಲಿವುಡ್ ಹೇಳಿಕೊಡುವ ಪಾಠಗಳು:- ೧. ಕುಂಗ್ ಫು ಹೇಳಿಕೊಡುವುದು ಮತ್ತು ಅಭ್ಯಾಸ ಮಾಡುವುದು ಬಿಟ್ಟರೆ ಚೈನೀಸ್ ಜನರಿಗೆ ಬೇರೆ ಕೆಲ್ಸ ಇಲ್ಲ. ೨. ಶೇ ೫೦ ಕ್ಕೂ ಹೆಚ್ಚು ಅಮೇರಿಕನ್ನರು FBI / CIA ಏಜೆಂಟುಗಳಾಗಿ ಸದಾ ಮಫ್ತಿಯಲ್ಲಿರ್ತಾರೆ. ೩. ಅನ್ಯಗ್ರಹಜೀವಿಗಳು ಯಾವಾಗಲೂ ಅಮೇರಿಕಾವನ್ನೇ ಟಾರ್ಗೆಟ್ ಮಾಡ್ತಾರೆ. ೪. ಅಮೇರಿಲಾದಲ್ಲಿ ಮಾತ್ರ ನೀವು ರಕ್ತಪಿಪಾಸು (vampires), ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ರನ್ನು ನೋಡಬಹುದು   ಬಾಲಿವುಡ್ ಕಲಿಸಿಕೊಡುವುದು:- ೧. ವಿಲನ್ ಜೊತೆಗೆ ಫೈಟ್ ಮಾಡುವಾಗ ಚೂರೂ ನೋವಾಗದ ಹೀರೋ ಗೆ, ಹೀರೋಯಿನ್ನು ಗಾಯ ತೊಳೆವಾಗ ಇನ್ನಿಲ್ಲದಷ್ಟು ನೋವು ಬರುತ್ತೆ. ೨. ಪತ್ತೇದಾರರು / ಪೋಲೀಸರು ಯಾವಾಗಲೂ ಸಸ್ಪೆಂಡ್ ಆದ ಮೇಲೆಯೇ ಉತ್ತಮವಾಗಿ ಕೆಲಸ ಮಾಡಬಲ್ಲರು. ೩. ಹೀರೋ ರಸ್ತೆಯಲ್ಲಿ ಕುಣಿಯಲು ಶುರುಮಾಡಿದಾಗ ರಸ್ತೆಯಲ್ಲಿ ಹೋಗುವವರೆಲ್ಲರಿಗೂ ಸ್ಟೆಪ್ಸ್ ಹಾಕುವುದು ಗೊತ್ತಿರುತ್ತೆ. ೪. ಬಾಂಬ್ ನ ವೈರ್ ತುಂಡರಿಸುವಾಗ ಹೀರೋ ಯಾವಾಗಲೂ ಸರಿಯಾದ ವೈರ್ ನ್ನೇ ತುಂಡು ಮಾಡ್ತಾನೆ.   ಕನ್ನಡ ಫಿಲಮ್ ಗಳು ತಿಳಿಸುವ ಅಂಶಗಳು:- ೧. ಹೀರೋ ವಿಲನ್ ಗೆ ಹೊಡೆವಾಗಲೆಲ್ಲ “ಡಿಶುಂ” ಅನ್ನುವ ಶಬ್ದ ಬರುತ್ತೆ. ಪಿಸ್ತೂಲ್ ನಿಂದ ’ಡಿಶ್ಕ್ಯಾಂ’ ಅನ್ನುವ ಸದ್ದು ಬರುತ್ತೆ. ೨. ನೋಡೋಕೆ ಕೆಟ್ಟದಾಗಿರುವವರೆಲ್ಲ ವಿಲನ್ ಗಳಾಗಿರ್ತಾರೆ. ೩. ಹೀರೋ ಚಿತ್ರದಲ್ಲಿ ಮೆಕ್ಯಾನಿಕ್ ಪಾತ್ರ ಮಾಡುತ್ತಿದ್ದರೂ ರಸ್ತೆಯಲ್ಲಿ ಅವನು ದೊಡ್ಡ ’ಹೀರೋ’ ಎಂಬಂತೆ ಅಲ್ಲಿನ ಜನರು ಅವನತ್ತಲೇ ನೋಡ್ತಾ ಇರ್ತಾರೆ. ೪. ಹೀರೋಯಿನ್ ಗೆಳತಿ ಹೀರೋಯಿನ್ ಗಿಂತಲೂ ಚೆನ್ನಾಗಿದ್ರೂನೂ ಹೀರೋ ಗೆ ಹೀರೋಯಿನ್ ಮೇಲೆಯೇ ಮೊದಲ ನೋಟದ ಪ್ರೀತಿ ಹುಟ್ಟುತ್ತದೆ.  ]]>

‍ಲೇಖಕರು G

June 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: