ಹಾಲು, ಪೇಪರ್ ..

ಹಾಲು, ಪೇಪರ್ ..ಸಂಚಿಯಿಂದ ತೆಗೆದ ಎರಡು ಬಿಡಿ ಬಿಡಿ ನೆನಪು ಮಾಲತಿ ಶೆಣೈ ನೆನಪಿನ ಸಂಚಿಯಿಂದ ನನ್ನ ತಮ್ಮನ ಹೆಂಡತಿ fb ನಲ್ಲಿ ಇದನ್ನು ಹಾಕಿದ್ಲು. ನಗುವಿನ ಜತೆ ಸುಮಾರೆಲ್ಲ ವಿಷಯಗಳನ್ನು ನೆನಪು ಮಾಡಿದೆ ಇದು!!:-) ಮೊದಲಿಗೆ ಹಾಲಿನ ವಿಷಯಕ್ಕೆ ಬರುತ್ತೇನೆ ನಾನು ಚಿಕ್ಕವಳಿರುವಾಗ ನಾನು ಏಳುವ ಮುಂಚೆಯೆ ಹಾಲಿನ ಬಾಟಲ್ ಹೊರಗಿಟ್ಟು ಹೋಗುತ್ತಿದ ಹಾಲಿನವ. ಆ ಬಾಟಲಿಗೆ ಬಿಗಡೆಯ ಮುಚ್ಚಳ. ಬಾಟಲಿ ಇಡುವ ಟಣ್ ಶಬ್ದ ಆದ ಕೂಡಲೆ ಅಜೋಬಾ ಮನೆಯೆದುರಿನಿಂದ ಬಾಟಲಿ ಒಳಗೆ ತರುತ್ತಿದ್ದರು. ಇಲ್ಲಿದಿದ್ದರೆ ಕಾಗೆಗಳು ಬಂದು ಅದರ ಮುಚ್ಚಳ ಕೊಕ್ಕಿನಲ್ಲಿ ತೂತು ಮಾಡಿ ಹಲವಾರು ಸಲ ಬಾಟಲಿ ಬಿದ್ದು ಪುಡಿಯಾಗಿದ್ದಿದ್ದೆ. ಹಿಂದಿನ ರಾತ್ರಿ ಖಾಲಿ ಬಾಟಲು ಹೊರಗಿಡಬೇಕು. ಮರುದಿನ ಹಾಲಿನವನು ಅದನ್ನು replace ಮಾಡುತ್ತಿದ್ದ.

ಆ ಮೇಲೆ ಅಜ್ಜ ಬಾಟಲಿಯ ಮುಚ್ಚಳ ನನಗೆ ಕೊಡುತ್ತಿದ್ದರು. ಬಾಟಲಿಯ ತುದಿಗೆ ತೇಲಿ ಬಂದ ಕ್ರೀಮ ನನಗೆ – ನೆಕ್ಕಲು. ನನ್ನ ನಾನಿಗೆ ಸಂಧೀವಾತ ಇದ್ದುದರಿಂದ ಅವರು ಬೇಗ ಏಳುತ್ತಿರಲಿಲ್ಲ, ಸೂರ್ಯ ಬಂದ ಸ್ವಲ್ಪ ಹೊತ್ತಿಗೆ ಏಳುತ್ತಿದ್ದರು, ಅಷ್ಟರೊಳಗೆ ನನಗೆ ಅಜೋಬಾ ಹಾಲು ಕಾಯಿಸಿ ಎರಡು ಗುಲ್ಕೋಸ್ ಬಿಸ್ಕುಟ್ (glucose biscuit) ಕೊಡುತ್ತಿದ್ದರು. ಹಾಲು ಚಿಮಣಿ ಎಣ್ಣೆ ಸ್ಟವ್ ಮೇಲೆ ಕಾಯಿಸುತ್ತಿದ್ದರು. ..ನನ್ನ ಹಾಲು ಕುಡಿದಾದ ಮೇಲೆ ನಮ್ಮ ವಾಕಿಂಗ್ ಇತ್ಯಾದಿ. ನನ್ನ ನಾನಿಗೆ ಕ್ಯಾನ್ಸರ್ ಆದ ಮೇಲೆ ನಾನು ಅಮ್ಮನ ಮನೆ ಅಂಧೇರಿ ಗೆ ಬಂದ ಮೇಲೆ, ಬೆಳಿಗ್ಗೆ ಹಾಲು ತರುವ ಕೆಲಸ ನನ್ನದಾಯಿತು. ಹಾಲು ತಂದದ್ದಕ್ಕೆ, ಹಾಲು ಹಾಕುವ ಹೆಂಗಸಿಗೆ ಕೊಡುವ ದುಡ್ಡನ್ನು ಅಮ್ಮ ನನಗೆ ಕೊಡುತ್ತಿದ್ದರು. ಪ್ಯಾಕೆಟ್ ಮೇಲೆ 10 ಪೈಸೆ ಅವಳ charges. ಆಗ ಹಾಲಿಗೆ ಎರಡು ರೂಪಾಯಿ ಆ ದುಡ್ಡನ್ನು ಜಮಾ ಮಾಡಿ ನಾನು scrabble board ಖರೀದಿಸಿದ್ದೆ.18 ರೂಪಾಯಿಗೆ!! ಈಗಲೂ ನನ್ನ ಅಮ್ಮನ ಮನೆಯಲ್ಲಿ ಇದೆ ಅದು. ತಮ್ಮ ತಂಗಿ ಸೇರಿದಾಗ ನಾವೆಲ್ಲ ಈಗಲೂ scrabble ಆಡ್ತೇವೆ. ಎಂಜಾಯ್ ಮಾಡ್ತೇವೆ. ಇಲ್ಲಿ ಬೆಂಗಳೂರಿನಲ್ಲಿ ನಂದಿನಿ ಹಾಲು ರಸ್ತೆ ಬದಿಯಲ್ಲಿ ಮಾರುವವಳು ಬೆಳಿಗ್ಗೆ 4 ಗಂಟೆಗೆ ಬಂದಿರುತ್ತಾಳೆ. ಹುಷಾರಿರಲಿ ಇಲ್ಲದಿರಲಿ ಯಾವಾಗಲೂ ಪಂಕ್ಚುಅಲ್. ನನಗಂತೂ ಖುಶಿ ನೆ. ಬೆಳಿಗ್ಗೆ..especially ಚಳಿಗಾಲದಲ್ಲಿ ಚುಮು ಚುಮು ನಸುಕಿನಲ್ಲಿ ಗಲ್ಲ ಮೂಗು ಕಿವಿಯೆಲ್ಲ ಐಸ್ ತರಹ ಮಾಡಿಕೊಂಡು, ಹಾಲು ತಂದು ( ಸುಮಾರು ಸಲ ನನಗೆ ಅಲ್ಲಿ ನಿಲ್ಲಿಸಿ ಹಾಲಿನವಳು ಕತ್ತಲೆ ಇರುವ ಕಾಂಪೌಂಡ್ ಎಡೆಯಲ್ಲಿ ಹೋಗಿ natures call ಮುಗಿಸಿ ಬಂದಿದ್ದು ಇದೆ. ಅವಳಿಗೆ ಬೈ ಪಾಸ್ ಸರ್ಜರಿ ಆಗಿದ್ದ ಹೊಲಿಗೆ ಮಾರ್ಕ್ ಕಂಡಿದ್ದೇನೆ.ನಮ್ಮ ತಂದೆಗೂ ಆಗಿದೆ ಆದ್ದರಿಂದ ನನಗೆ ಗೊತ್ತು. ಆದರೂ ಒಂದು ದಿನ ಕೂಡ ತಪ್ಪಿಸಿಲ್ಲ..)ಆ ಮೇಲೆ ನಾನು ಹಾಲು ಕಾಯಿಸುವಷ್ಟರಲ್ಲಿ ನಿಹಾ ಎದ್ದಿರುತ್ತಾಳೆ. ನಾನು ಅವಳು ಟೀ ಕುಡೀತೇವೆ. it is one of a most pleasurable part of my daily life. ಮಾತಾಡ್ತೀವಿ, ನಗ್ತೀವಿ…..ನಮ್ಮ ಪಕ್ಕದ ಮನೆ ರಾಮು ಗೆ ಕುತೂಹಲ, ’Malathi, what do you find amusing so early in the morning…i dont feel like waking up let alone laughing/talking’ ಅನ್ನುತ್ತಿರುತ್ತಾನೆ.   ಇನ್ನು ನ್ಯುಸ್ ಪೇಪರ್ ಬಗ್ಗೆ ಮದುವೆಯಾದ ಮೇಲೆ ನನಗೆ ಗೊತ್ತಾಗಿದ್ದು ನಮ್ಮ ರಾಯರಿಗೆ ಸಂಡಾಸ್ ನಲ್ಲಿ ಪೇಪರ್ ಓದುವ ಅಭ್ಯಾಸ ಇದೆ ಅಂತ. ಮದುವೆಯಾದ ಮೇಲೆ ಮೊದಲ ಸಲ ಅಮ್ಮನ ಮನೆಗೆ ಹೋದಾಗ ಆದ ಫಜೀತಿ ಈಗಲೂ ನನಗೆ ನೆನಪಿದೆ. ನನ್ನ ತಂದೆಯವರು ಪೇಪರ್ ಎಲ್ಲಿ, ಪೇಪರ್ ಎಲ್ಲಿ ಅಂತ ಹುಡುಕುತ್ತಿದ್ದರು. ಇವರು ಸಂಡಾಸಿಗೆ ತೆಗೆದುಕೊಂಡು ಹೋದದ್ದು ನಾನು ನೋಡಿದ್ದೆ. ನನಗೋ ಹೇಳಲು ಮುಜುಗರ. ಆಮೇಲೆ ಎಲ್ಲರು ಸೀರಿಯಸ್ ಆಗಿ, ಇಲ್ಲೇ ಇತ್ತು ಪೇಪರ್ ಎಲ್ಲಿ ಹೋಯ್ತು ಅಂತ ಪೇಪರ್ ಹುಡುಕಲು ಶುರು ಮಾಡಿದರು. ನಾನು ನಾಚಿಕೆ ಪಟ್ಟು ನನ್ನ ತಮ್ಮನ ಬಳಿ ಇವರು ಪೇಪರ್ ತೆಗೆದುಕೊಂಡು ಹೋಗಿದ್ದು ಮೆಲ್ಲನೆ ಉಸುರಿದೆ. ನನ್ನ ತಮ್ಮಂದು ಗಲಾಟೆ ಅಂದ್ರೆ ಗಲಾಟೆ. toilet ಹೊರಗಡೆ ನಿಂತು , ’ಭಾವಾಜಿ, ನಮ್ಮ ಮನೆಯಲ್ಲಿ ನೀರಿನ ಪ್ರಾಬ್ಲೆಮ್ ಇಲ್ಲ, ಇದ್ದರೂ ಸಮುದ್ರ ಬಳಿಯಲ್ಲೇ ಇದೆ (ನಮ್ಮ ಕಿಟಕಿಯಿಂದ ಸಮುದ್ರ ಕಾಣುತ್ತೆ), ಟಾಯ್ಲೆಟ್ ಗೆ ಪೇಪರ್ ಒಯ್ಯುವ ಗರಜ್ ಇಲ್ಲ ಅಂತ ಎಲ್ಲರನ್ನೂ ನಗಿಸ ಬೇಕಾದ್ರೆ ನಾನು ಮಾತ್ರ ಟೊಮೇಟೊ ಹಣ್ಣು ನಾಚ ಬೇಕು ಅಷ್ಟು ಕೆಂಪು ಕೆಂಪು… ಈಗಲೂ ನಾನು ಪೇಪರ್ ಬಂದ ಕೂಡಲೆ ಓದಿ ಬಿಡುತ್ತೇನೆ. ಅವರು toilet ಗೆ ಒಯ್ದ ಪೆಪರ್ ನಾನು ಓದಲ್ಲ. ಸಧ್ಯ ಅವರು ಕನ್ನಡ ಪೇಪರ್ ಮಾತ್ರ ಒಯ್ಯೋದು ಒಳಗಡೆ. ಆಕಸ್ಮಾತ್ ಆ ದಿನ ಅವರು ಏಳುವ ಹೊತ್ತಿಗೆ (ಅಪರೂಪಕ್ಕೆ) ಪೇಪರ್ ಬರದೆ ಇದ್ದರೆ, ಛೆ ಇವತ್ತು motion ಸರಿಯಾಗಿಲ್ಲ ಅಂತ ನೆವ ಹೇಳಿ, ಪೇಪರ್ ಬಂದ ಮೇಲೆ ಇನ್ನೊಂದು ರೌಂಡ್…………… ಪೇಪರ್ ಎಂದರೆ ಇನ್ನೊಂದು ನೆನಪು ನಾನು ನನ್ನ ತಮ್ಮ ಮಾಡುತ್ತಿದ್ದ the sunday-midday cross word. ಒಂದು ಫುಲ್ ಪೇಜ್ ಪದಬಂಧ. ಭಾನುವಾರ ಮಧ್ಯಾಹ್ನ್ ಊಟ ಆದಮೇಲೆ ನಾನು ಅಮ್ಮನಿಗೆ ಅಡಿಗೆ ಮನೆ ಕ್ಲೀನ್ ಮಾಡಿಕೊಡುತ್ತಿದ್ದ ಹಾಗೆ ನನ್ನ ತಮ್ಮ ಪೆನ್ಸಿಲ್ ನಿಂದ ಖಾಲಿ ಹಾಳೆ ಮೇಲೆ ರಫ್ ಆಗಿ ಪದಬಂಧದ ಪ್ರತಿಯೊಂದು ಬಿಡಿಸಿಡುತ್ತಿದ್ದ. ಆಮೇಲೆ ನಾನು ಅವನು ಕೂತು ಪದಬಂಧ ಬಿಡಿಸುತ್ತಿದ್ದೆವು.-ಅದು ಪೂರ್ತಿಯಾದಮೇಲೆ ಅದನ್ನು ಪೇಪರ್ ನಲ್ಲಿ ತುಂಬಿಸುತ್ತಿದ್ವಿ. ನನ್ನ ಅಕ್ಶರ ಚೆನ್ನಾಗಿದೆ ಅಂತ ಆ ಕೆಲಸ ನನ್ನದು. ಪಕ್ಕದಲ್ಲಿ ಒಂದು dictionary ಬೇರೆ. ಪೂರ್ತಿ ಬಿಡಿಸಿದ ಪದಬಂಧ ಆಮೇಲೆ ಪೋಸ್ಟ್ ಮಾಡಬೇಕಿತ್ತು. ಹಲವಾರು ಸಲ ಸರಿಯಾದ ಉತ್ತರಗಳನ್ನು ಬಿಡಿಸಿ ಕಳುಹಿಸಿದ್ದರು ನಮಗೆ ಪ್ರೈಜ್(cash prize) ಬರಲಿಲ್ಲ, ಯಾಕೆಂದರೆ ಅದು ಲಾಟರಿ ಮೂಲಕ ವಿಜೇತರನ್ನು select ಮಾಡುವ ಪ್ರಕ್ರಿಯೆ ಇತ್ತು. ಈಗ ನಾನು ಮಕ್ಕಳು the hindu metro plus crossword ಬಿಡಿಸುವುದು ಬೆಳಿಗ್ಗೆ ತಿಂಡಿ ತಿನ್ನುತ್ತ..ನಿಹಾ lefty ಆದರೂ ತಿಂಡಿ ತಿನ್ನುವಾಗ ಬಲಗೈ ಉಪಯೋಗಿಸುತ್ತಾಳೆ ಆದ್ದರಿಂದ ಉತ್ತರಗಳನ್ನು ತುಂಬುವ ಕೆಲಸ ಅವಳದ್ದು. ತುಂಬ ಎಂಜಾಯ್ ಮಾಡ್ತೇವೆ ನಾವು ಈ ಸಮಯ..love you akka and nymphs and Sri….  ]]>

‍ಲೇಖಕರು G

February 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. vijayaraghavan

  ಎರಡು ಕನಸು ಸಿನಿಮಾದಲ್ಲಿ ಹೀಗೇ ಹಾಲಿನ ಬಾಟಲ್‌ ಬರುತ್ತೆ. ಮೊನ್ನೆ ಯಾರಿಗೋ ಇದನ್ನೇ ಹೇಳುತ್ತಿದ್ದೆ. ನಾವಿನ್ನೂ ಮಕ್ಕಳಾಗಿರುವಾಗ ಕಳಸದಿಂದ ನನ್ನ ಹಳ್ಳಿಗೆ ನಮ್ಮ ಮಾವ ಶಾಮರಾಯರು ಬರುತ್ತಿದ್ದರು. ಅವರು ಕರೀಟೊಪಿಗೀ ರಾಯ. ಅವರು ಬಂದೊಡನೆಯೇ ಎರಡು ಡಝನಿನಷ್ಟಿದ್ದ ನಮ್ಮ ಮನೆಯ ಮಕ್ಕಳಿಗೆಲ್ಲ ಬೀಸುಕೂಟು ಪಾಕೀಟುಗಳನ್ನು ತೆಗೆದು ಕೋ ಕೋ ಅಂತ ಕೊಡುತ್ತಿದ್ದರು. ಈಗ ಟೋಪಿಗಳೇ ಇಲ್ಲ. ನಾನು ನನ್ನ ಮೈಸೂರಿನ ಮಾವನಿಗೆ ಹೇಳಿ ಒಂದು ನಂಜನಗೂಡು ಟೋಪಿ ತರಿಸಿಕೊಂಡಿದ್ದೆ. ನನ್ನ ಹೆಂಡತಿ ಅದನ್ನು ಯಾವುದೋ ಕೆಲಸಕ್ಕೆ ಬಾರದ ವಸ್ತುಗಳ ಜೊತೆಗೂಡಿಸಿ ಕೈಗೆ ಸಿಗದೆಡೆ ಬಿಸಾಕಿದ್ದಳು. ಇಂಥದೇ ಇನ್ನೊಂದು ವಸ್ತುವೆಂದರೆ ರೂಲುದೊಣ್ಣೆ. ಯಾಕೋ ನಮ್ಮಂಥವರಿಗೆ ಬದಲಾವಣೆ ಅಂದರೆ ಕಳೆದುಕೊಳ್ಳುವುದು ಅನ್ನಿಸುತ್ತೆ.
  ಆರ್‌ ವಿಜಯರಾಘವನ್‌

  ಪ್ರತಿಕ್ರಿಯೆ
 2. malathi S

  @ Manik Bhure: thank you
  @ Vijayaraghavan: my ajoba would never go out without his black cap….:-) thanks for reading!!
  🙂
  malathi S

  ಪ್ರತಿಕ್ರಿಯೆ
 3. malathi S

  Dear Avadhi!!
  naanoo ondu sala idanna Odide!! innoo chennagi baribahudittu annistu!!
  thanks for supporting my Kannada learnings!!
  🙂
  malathi S

  ಪ್ರತಿಕ್ರಿಯೆ
 4. Jyothi Umesh

  Mal, tumba aaptha annisida baravaNige.. Hindomme Noorentu Maatu nalli V. Bhattaru ondu article barediddaru.. birds haalina bottle hole maadi haalu kudiyuva bagge.. ‘ll send u the article later.. i think i’ve saved it somewhere.. very well written Mal. kudos to u

  ಪ್ರತಿಕ್ರಿಯೆ
 5. D.RAVI VARMA

  ನಿಮ್ಮ ಲೇಖನ ತುಂಬಾ ತುಂಬಾ ಆತ್ಮೀಯವಾಗಿದೆ. ಬಹಳಷ್ಟು ಸಲ ನಾವು ಈ ಹಾಲು,ಪತ್ರಿಕೆ,ನಮ್ಮ ಮನೆಯ ಕೆಲಸದವರ ಬಗ್ಗೆ ಆಲೋಚಿಸುವುದೇ ಇಲ್ಲ, ಆಕಸ್ಮಾತ್ ಒಂದು ದಿನ ಕೆಲಸದವಳು ಬರದಿದ್ದರೆ ನಮ್ಮ ಮನೆಗಳಲ್ಲಿ ಸೃಸ್ತಿಯಗುವ ಕುರುಕ್ಷೇತ್ರ ನಿಜಕ್ಕೂ horrible ಅವರು ಎಂದು ರೆಸ್ಟ್ ತೊಗೊಲೋದಿಲ್ಲ ಅದುಕುದ ಅತ್ಯಂತ ಕುಶಿಯಿಂದ.ಈಗಲಂತೂ. ಆ ಮೊಬಿಲೆಗಳ ತಮಗಿಸ್ತವಾದ ಹಾಡು ಕೇಳುತ್ತ,ಹಾಲು,ಪೇಪರ್ ಹಾಕುವ ಹುಡುಗರಂತೂ ನನಗೆ ವಿಸ್ಮಯರಾಗಿ ಉಳಿಯುತ್ತಾರೆ, ನಮ್ಮ ಬೆಳಗಿಗೆ ಒಂದು ಚಾಲನೆ ನೀಡುವ, ಒಂದು ಉತ್ಸಾಹ ಕೊಡುವ ಅವರ ನಿರಂತರ vataguttada ಹಾಗು ನಗುಮುಕದ ಸೇವೆಗೊಂದು ನಮಸ್ಕಾರ ,,
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 6. malathi S

  Jyothi thank you!!
  D. Ravi Varma Hospetehoudu sariyaagi hELidri… thank you very much!!
  🙂
  malathi S

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ D.RAVI VARMACancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: