ಬ್ಲಾಗಿಗರು, ಫೇಸ್ ಬುಕ್ ಗೆಳೆಯರು, ಕರಿಘಟ್ಟ ಪ್ರವಾಸಕ್ಕೆ ಹೋದಾಗ ಕ್ಯಾಮೆರಾಕ್ಕೆ ಸಿಕ್ಕ ಚಿತ್ರಗಳು!
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರ ಕೃಪೆ: ಪ್ರಕಾಶ್ ಹೆಗ್ಡೆ
ಫ಼ೋಟೋ ಕೃಪೆ : ಪ್ರಕಾಶ್ ಹೆಗ್ಡೆ
[gallery order="DESC" columns="4" orderby="ID"]]]>ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...
ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...
ಶ್ರೀಧರ್ ಡಿ ಸಿ ಈ ವರ್ಷದ ಎಳ್ಳಿನ ಬೆಳೆ ಚೆನ್ನಾಗಿ ಆಗಿದೆ... ಮಾರ್ಚಿ 2020ರ ನಂತರದ ಸಂಧಿಗ್ದ ಹಾಗೂ ವಿಷಮ ದಿನಗಳಲ್ಲಿ ಇದು ನಿಜಕ್ಕೂ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಅವಧಿಗೆ ಪ್ರೀತಿಯ ನಮನಗಳು……………………
ಅನಿವಾರ್ಯ ಕಾರಣಗಳಿಂದ ಈ ಪ್ರವಾಸಕ್ಕೆ ಚಕ್ಕರ್ ಹಾಕಬೇಕಾಯಿತು.
ಈ ಫೋಟೋಸ್ ನೋಡಿದ ಮೇಲೆ ಸಮಾ ಹೊಟ್ಟೆ ಉರಿದುಕೊಂಡೆ. ನನ್ನ ಹೆಂಡತಿಯೂ ಗರಂ ಆದಳು. ಬಹುಶಃ ಈವತ್ತು ಸಾರಿಗೂ ಸಾಂಬಾರಿಗೂ ಭರ್ತಿ ಖಾರ ಬೀಳುವ ಎಲ್ಲಾ ಲಕ್ಷಣಗಳಿವೆ.
ಇಂತಹ ಪ್ರವಾಸಗಳು ಮನಸ್ಸನ್ನು ಪ್ರಫುಲ್ಲ ಮಾಡುತ್ತವೆ.
ಪ್ರಕಾಶಣ್ಣನ ಹೊಸ ಪೋಸೂ ಸೋಪರ್ರೂ
ಸಾರ್… ನಮಗೂ ತಿಳಿಸಿದ್ದರೇ….. ನಮ್ಮದೊಂದು ಗುಂಪು ಈ ಪ್ರವಾಸದಲ್ಲಿ ಸೇರ್ಪಡೆಯಾಗುತ್ತಿತ್ತು….
ಇರಲಿ ಮುಂದಿನ ಪ್ರವಾಸದಲ್ಲಿ… ತಪ್ಪದೆ ತಿಳಿಸ್ತೀರಾ…
ಸುರೇಶ್ ವತ್ಸ
ತುಮಕೂರು ವಾರ್ತೆ ವರದಿಗಾರ
ಶಿರಾ ತಾಲ್ಲೂಕು
9844076980
ಪ್ರವಾಸದಲ್ಲಿ ನಾನು ಇದ್ದರೂ ಕೂಡ..ಬರಿ ವಾಲ್ ಪೋಸ್ಟರ್ ನೋಡಿದ ಹಾಗಾಯ್ತು..ಪೂರ ಸಿನಿಮಾ ಬಾಕಿ ಇದೆ…ಪ್ರತಿಭಾವಂತರ ಕಡಲಿನಲ್ಲಿ..ನಾನು ದಂಡೆಯ ಮೇಲೆ ಕುಳಿತು ಮುದ್ದಾದ ಕಪ್ಪೆ ಚಿಪ್ಪು ಹೆಕ್ಕಿ ಸಂಭ್ರಮಪಟ್ಟಂತೆ ಆಯಿತು…ಇನ್ನೊಮ್ಮೆ ಕಡಲಿಗೆ ಧುಮುಕಿ..ಈಜಾಡುವ ಆಸೆ ಬರುತ್ತಿದೆ..
ನಿಮ್ಮ ‘ಪ್ರವಾಸ ಚಿತ್ರಗಳು’ ನನಗೆ ಹೊಟ್ಟೆ ಕಿಚ್ಚು ಮೂಡಿಸಿದವು.
ನಿಜಕ್ಕೂ ಒಳ್ಳೆಯ ಐಡಿಯಾ…
ಬಹಳ ಹಿಂದೆ ‘ಈಟೀವಿ ಬಾಂಗ್ಲಾ’ದಲ್ಲಿ ‘ಆಮಾರ್ ತೊಮಾರ ಶಾಂಗೆರ್ ಗಾನ್… ‘ ಅಂತ ಒಂದು ಕಾರ್ಯಕ್ರಮ ಸರಣಿ ಪ್ರಸಾರವಾಯಿತು.
ಅದೇ ಮುಂದೆ ‘ಈಟೀವಿ ಕನ್ನಡ’ದಲ್ಲಿ ‘ಒಲವೆ ನಮ್ಮ ಬದುಕು’ ಅನ್ನೋ ಹೆಸರಿನಲ್ಲಿ ಪ್ರಸಾರವಾಗಿ ಸಾಕಷ್ಟು ಟೀಕೆಗೆ ಗುರಿಯಾಯಿತು.
ಹಾಗೆ ಟೀಕೆ ಮಾಡಿದವರೆಲ್ಲ ಮಡಿವಂತ ಮನಸ್ಸಿನ ಮುದಿಯರು. ಮುಕ್ತ ಮನದ ಕೆಲವು ಹಿರಿಯರು ಆ ಕಾರ್ಯಕ್ರಮವನ್ನು ಮೆಚ್ಚಿಕೊಡ್ನ್ದದ್ದೂ ಉಂಟು.
ನಿಮ್ಮೆಲ್ಲರ ‘ಚಂಡಿನ ಆಟ’ ನೋಡಿದಾಗ ನನ್ನ ಮನಸ್ಸು ಪುಟ್ಟಣ್ಣನವರ ‘ಫಲಿತಾಂಶ’ ಚಿತ್ರದ ಹಾಡನ್ನು ಮೆಲ್ಲಗೆ ಹಾಡಿಕೊಂಡಿತು.
ಇದೇ ಸಂದರ್ಭದಲ್ಲಿ ನನಗೆ ಈ ಕೆಳಗಿನ ಸಾಲುಗಳು ಹೊಳೆದದ್ದು :
ಬೇಕು ಬ್ಯಾಲೆನ್ಸು
ಬದುಕಿನಲೂ ಬ್ಯಾಂಕಿನಲೂ…
ಮಾತಿನಲೂ ಕೃತಿಯಲ್ಲೂ…
ನೋಟದಲೂ ನಗೆಯಲ್ಲೂ…
ಬ್ಯಾಲೆನ್ಸು ತಪ್ಪಿದರೆ
ಎಲ್ಲವೂ ಮಣ್ಣುಪಾಲು…
ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು….
ಗೋಪಾಲ್ ವಾಜಪೇಯಿಯವರ ಸಾಲುಗಳು ಸೊಗಸಾಗಿದೆ…
Thank u very much Gopal ji………
ಬ್ಲಾಗರ್ಸ್ ಪ್ರವಾಸದಲ್ಲಿ ಖುಷಿ ಸಂತೋಷ, ಆನಂದ, ಗೆಳೆತನ, ಇವಿಷ್ಟೇ ಇರಲಿಲ್ಲ..ಮತ್ತೆ ಇಷ್ಟನ್ನೇ ಪಡೆದುಕೊಳ್ಳುವುದಕ್ಕೆ ನಾವು ಹೋಗಿರಲಿಲ್ಲ…ಇದೆಲ್ಲವನ್ನೂ ಮೀರಿ ನಾವು ಮರೆಯಲಾಗದ ಒಂದು ಅನುಭವವಿದೆ. ಅದನ್ನು ತಿಳಿಯಲು ಮುಂದಿನ ಗುರುವಾರದವರೆಗೆ ಎಲ್ಲರೂ ಕಾಯಲೇ ಬೇಕು. ಬಹುಶಃ ಕಡಿಮೆಯೆಂದರೂ ಹದಿನೈದು ಇಪ್ಪತ್ತು ಬ್ಲಾಗುಗಳಲ್ಲಿ ಅದು breaking news ರೀತಿ ಗುರುವಾರ ಬರಬಹುದು…