ಹೀಗೂ ಒಂದು ಅನುಭವ ಆಯ್ತು

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 

ನಮ್ಮ ಮನೆ ಎದುರಿಗೆ ಒಬ್ಬ ನಿವೃತ್ತ ಸೇನೆಯ ಅಧಿಕಾರಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಅವರಿಗೆ ಮೂರು ಜನ ಮಕ್ಕಳು ಮೊದಲನೆಯ ಅಣ್ಣ ವೈದ್ಯರು, ಮಧ್ಯದ ಹುಡುಗಿ ಟೀಚರ್, ಮೂರನೆಯ  ಹುಡುಗ ಏನೂ ಮಾಡುತ್ತಿರಲಿಲ್ಲ ಏಕೆಂದರೆ ಅವನಿಗೆ ಬುದ್ಧಿಮಾಂದ್ಯವಾಗಿತ್ತು  .
ಆ ಮನೆಯವರು ತುಂಬಾ ಒಳ್ಳೇ ಜನ. ತಮ್ಮ ಕೈಯಲ್ಲಿ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ನಾವು ಮನೆ ಕಟ್ಟಿಸುವಾಗಲೂ ಕಬ್ಬಿಣ, ಸಿಮೆಂಟು ಏನೂ ಕಳ್ಳತನ ಆಗದ ಹಾಗೆ ನೋಡಿಕೊಂಡಿದ್ದರು.ನಾವು ಆ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದಾಗ ನಾನು 10ನೇ ತರಗತಿಯಲ್ಲಿದ್ದೆ.
ಅವರ ಕೊನೇ ಹುಡುಗ ಕೈಗೆ ಸಿಕ್ಕಿದ ಚಪ್ಪಲಿ, ಟೀ ವಿಯ ರಿಮೋಟು, ಚೇರು, ಪುಸ್ತಕ ಎಲ್ಲವನ್ನು ಹೊರಗೆ ಎಸೀತಿದ್ದ ಅವೆಲ್ಲ ನಮ್ಮ ಮನೆ ಮುಂದೆ ಬಂದು ಬೀಳುತ್ತಿದ್ದವು. ಆ ಮೆಂಟಲಿ ರೆಟಾರ್ಡೆಡ್ ಹುಡುಗ ಇವತ್ತು ಟೇಪ್ ರೆಕಾರ್ಡರ್ ಹೊರಗೆ ಎಸ್ದ ಕಣೆ ಅಂತ ನನ್ನ ತಂಗಿಗೆ ನಾನು ಹೇಳುವುದಕ್ಕೂ, ಅಪ್ಪ ಆಫೀಸಿನಿದ ಬರುವುದಕ್ಕೂ ಸರಿಯಾಯಿತು. “ಏನಮ್ಮ ಇದನ್ನೇನ ನಾನು ಕಲಿಸಿರೋದು ನಿಮಗೆ ಎಷ್ಟು ಓದಿದ್ರೆ ಏನು ಬಂತು? ಮನುಷ್ಯತ್ವ ಇಲ್ಲದಿರೋವಾಗ” ಅಂದರು. ಅಪ್ಪ ನನಗೆ ಅರ್ಥವಾಗದೇ ‘ನಾ ಏನು ಮಾಡ್ದೇ ಈಗಾ..’ ಅಂತ ರಾಗ ಎಳೆದೆ .”ಆ ಹುಡುಗನಿಗೆ ಹೆಸರಿಲ್ಲವ ಯಾವಾಗಲೂ ಮೆಂಟಲಿ ರೆಟಾರ್ಡೆಡ್ ಹಂಗೆ ಮಾಡ್ದ, ಹಿಂಗೆ ಮಾಡ್ದ ಅಂತಿರಲ್ಲ…. ಅವನ ಹೆಸರಿನಿಂದ ಕರೆಯೋಕ್ಕೆ ಏನು ಕಷ್ಟ ನಿಮಗೆ” ಅಂದರು. ನಾನು ಪುಟ್ಟಿ ಅಪ್ಪನ್ನ ಸಾರಿ ಕೇಳಿದ್ವಿ. ಅವನ ಹೆಸರು ರಾಮು ಅಂತ ಇಟ್ಕೊಳ್ಳಿ.

ಈಗ ಮುಖ್ಯ ವಿಷಯಕ್ಕೆ ಬರೋಣ. ಆ ಮನೆಗೆ ಬಂದು ಎರಡು ವರ್ಷ ಆಗಿದ್ರೂ ಎದುರುಗಡೆ ಮನೆಗೆ ನಾನು ಒಂದು ಸಲಾನು ಹೋಗಿರಲಿಲ್ಲ. ಅವರ ಮನೇಲಿ ಏನೇ ಫಂಕ್ಶನ್ ಆದ್ರೂ ಅಪ್ಪ ಅಮ್ಮ ಪುಟ್ಟಿ ಹೋಗ್ತಿದ್ರು ನಾನು ಹೋಗ್ತಿರ್ಲಿಲ್ಲ. ನಾನು ಸೆಕೆಂಡ್ ಪಿ ಯು ಸಿ ನಲ್ಲಿದ್ದೆ ಅವತ್ತು ದೀಪಾವಳಿ ನಾನು ಸಚ್ಚು (ನನ್ನ ಕ್ಲಾಸ್ ಮೇಟು) ಮತ್ತೆ ಪುಟ್ಟಿ ಮಾತಾಡುತ್ತಾ ನಿಂತಿದ್ವಿ. ಅಮ್ಮ ಬಂದು “ನೀನು ಇಷ್ಟು ದಿನ ಆದ್ರೂ ಅವರ ಮನೆಗೆ ಹೋಗಿಲ್ಲ ಜಂಬ ಅಂತ ತಿಳ್ಕೋತಾರೆ ಹೋಗಿ ಹೋಳಿಗೆ ತಿಂದು ಬಾ. ಸಚ್ಚು ನೀನು ಹೋಗಮ್ಮ, ಪುಟ್ಟಿ ನೀನು ಹೋಗೆ” ಅಂದ್ರು. ಸರಿ ಹೋಗಲೇಬೇಕಾಯ್ತು.
ಹೋದ್ವಿ ಡಾಕ್ಟರ್ ಅಣ್ಣ ಮಾತಾಡಿಸಿದರು. ಸಚ್ಚು, ಪುಟ್ಟಿ ಒಂದು ಸೋಫಾ ಮೇಲೆ ಕೂತ್ಕೊಂಡ್ರು . ನಾನು ಇನ್ನೊಂದರ ಒಂದು ಬದೀಲಿ ಕೊತ್ಕೊಂಡೆ ಆಂಟಿ ಹೋಳಿಗೆ ಕೊಟ್ರೂ. ಅಷ್ಟರಲ್ಲಿ ಆ ರಾಮು ನನ್ನ ಪಕ್ಕಾ ಖಾಲಿ ಇದ್ದ ಜಾಗದಲ್ಲಿ ಕೂತುಕೊಂಡ. ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗೆ ಆಗುತ್ತಿತ್ತು. ನಾನು ಹೋಳಿಗೆ ಮುರೀತಿದೀನಿ, ಅಷ್ಟರಲ್ಲಿ ನನ್ನ ಎರಡು ತೋಳು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಎಡಗೆನ್ನೆಗೆ ಮುತ್ತಿಟ್ಟ ನಾನು ಕಿಟಾರ್…. ಅಂತ ಕಿರುಚಿಕೊಂಡು ತಟ್ಟೇನ ತ್ರೋ ಬಾಲ್ ತರ ದೂರಕ್ಕೆ ಎಸೆದು ಅಲ್ಲಿಂದ ಓಡಿದೆ. ಅಮ್ಮಂಗೆ ಕಿರುಚು ಕೇಳಿಸಿರಬೇಕು ಬಾಗಿಲ ಹತ್ತಿರ ಬಂದಿದ್ದರು. ಅಷ್ಟರಲ್ಲಿ ಪುಟ್ಟಿ, ಸಚ್ಚು, ಆಂಟಿಯು ಬಂದರು. ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ.ಆಕಸ್ಮಾತ್ ಅವನು ತುಟಿಗೆ ಏನಾದರೂ ಮುತ್ತು ಕೊಟ್ಟಿದ್ದರೆ ಏನು ಗತಿ ಅಂತ ಯೋಚಿಸುತ್ತಿದ್ದೆ.
ಅಮ್ಮ ತುಂಬಾ ಆರಾಮಾಗಿ ‘ಹೋಗ್ಲಿ ಬಿಡು ಪಾಪ ಆ ಹುಡುಗನಿಗೆ ತಲೆ ಸರಿ ಇಲ್ಲ’ ಅಂತ ನನಗೆ ಗೊತ್ತಿರೋದನ್ನೇ ಹೊಸ ವಿಷಯ ಅನ್ನೋಹಾಗೆ ಹೇಳಿದರು..ಅಮ್ಮ ಜೀವನದ ಮೊದಲನೆ ಕಿಸ್ಸು.. ಅಂತ ಏನೇನೋ ಗೊಣಗಿದೆ..ನೀನು ಚಿಕ್ಕವಳಾಗಿದ್ದಾಗ ಇಡೀ ರೋಡಿನವರು ನಿನ್ನ ಕೆನ್ನೆ ಹಿಂಡಿ, ಮುದ್ದು ಮಾಡಿ, ಮುತ್ತು ಕೊಟ್ಟು ಕಳಿಸೋರು ಇದನ್ನು ಹಾಗೆ ಅಂತ ತಿಳುಕೋ ಅಂದ್ರು.ಇದನ್ನು ಹಾಗೆ ಅಂತ ಹೇಗೆ ತಿಳ್ಕೋಳೋದು ಅಂತ ನನಗೆ ಅರ್ಥ ಆಗಲಿಲ್ಲ. ಆದ್ರೂ ಬೇರೆ ವಿಧಿ ಇಲ್ಲದೇ ಸುಮ್ಮನಾದೆ

‍ಲೇಖಕರು avadhi

October 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. jithendra

  tumba irritation aaytu alva?
  take it sportively….
  yeno tamma kiss maada antha maretu bidi aayta?

  ಪ್ರತಿಕ್ರಿಯೆ
 2. SUGHOSH NIGALE

  ಬುದ್ಧಿ ಮಾಂದ್ಯರಿಗೆ ಅಥವಾ ಮತ್ತೊಂದು ಭಾಷೆಯಲ್ಲಿ ಹೇಳುವದಾದರೆ specially abled ವ್ಯಕ್ತಿಗಳಿಗೆ ವಯಸ್ಸು ಎಷ್ಟೇ ಆದರೂ ಅವರೂ ಎಂದಿಗೂ ಮಕ್ಕಳೇ. ದೈಹಿಕವಾಗಿ ಬೆಳೆದಿರುತ್ತಾರೆ ಎಂಬುದು ಬೇರೆ ಮಾತು. ಹೀಗಿ ಮಕ್ಕಳು ಏನು ಮಾಡಿದರೂ, ನಮ್ಮ ದೃಷ್ಟಿಯಲ್ಲಿ ಅದು ತಪ್ಪಾಗಿದ್ದರೂ, it must be always forgiven. ಎರಡನೆಯದಾಗಿ ರಾಮು ಅಂತಹ ವ್ಯಕ್ತಿಗಳೊಂದಿಗೆ ಸಾಮಾನ್ಯ ಜನರು ಸಾಮಾನ್ಯವಾಗಿ ವರ್ತಿಸಿದಷ್ಟೂ ರಾಮೂವಿನ ತಂದೆ ತಾಯಿಗೆ ಹಾಗೂ ರಾಮುಗೂ ಕೂಡ ಖುಷಿಯಾಗುತ್ತದೆ ಅಲ್ಲವೇ? – ಸುಘೋಷ್ ನಿಗಳೆ

  ಪ್ರತಿಕ್ರಿಯೆ
 3. Nalini

  Beautiful Piece! Why can’t we look at mental retardation with the same empathy that we give blindness or deafness! Enjoyed reading it.

  ಪ್ರತಿಕ್ರಿಯೆ
 4. M G Harish

  ಮೊದಲನೆ ಕಿಸ್ಸು?? ಸಾಧ್ಯನೇ ಇಲ್ಲ…. 🙂
  ನಿಮ್ಮಮ್ಮ ಹೇಳಿರೋದೇ ಸರಿ

  ಪ್ರತಿಕ್ರಿಯೆ
 5. sathish gowda

  u ar so lucky because all the girls expects their first kiss should be rememberable for ever .100% u remember ur first kiss ever .be sportive

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: