ಹೀಗೊಂದು ಚಿಂತನೆ – ಪ್ರಜ್ಞಾ ಮತ್ತೀಹಳ್ಳಿ

ಸಮಾಜ ಮುಖೀ ಉದ್ಯೋಗಗಳು ಇಂದು ತುರ್ತಾಗಿ ಬೇಕು

– ಪ್ರಜ್ಞಾ ಮತ್ತಿಹಳ್ಳಿ

ಭಾರತದ ಕೇಸರಿ ವಿವೇಕಾನಂದರು ಯುವಕರನ್ನು ಉದ್ದೇಶಿಸಿ ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಗಜರ್ಿಸಿದರು. ನೇತಾಜಿ ಸುಭಾಸಚಂದ್ರ ಭೋಸರು ನನಗೆ ನೂರು ಜನ ಯುವಕರನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಎಂದರು. ಯುವ ವಯಸ್ಸೇ ಹಾಗಿರತ್ತದೆ. ಜಲಪಾತದಂತೆ ಉಕ್ಕೇರುವ ಹುಮ್ಮಸ್ಸು, ಚಿಗರೆಯಂತೆ ಓಡುವ ಉತ್ಸಾಹ, ಕಾಮನಬಿಲ್ಲನ್ನೇ ಮಣಿಸುವ ಮಹತ್ವಾಕಾಂಕ್ಷೆ ಇವೆಲ್ಲ ಯುವಕರನ್ನು ಆಶಾವಾದಿಗಳನ್ನಾಗಿ ಪ್ರಗತಿಗಾಮಿಗಳನ್ನಾಗಿ ಮಾಡುತ್ತವೆ. ತಾರುಣ್ಯವೆಂದರೆ ಕನಸುಗಳ ವಯಸ್ಸು. ತರುಣರು ತಮ್ಮ ಮನಸ್ಸುಗಳ ಫಲವತ್ತಾದ ಮುಖಜ ಭೂಮಿಯಲ್ಲಿ ಸುಂದರವಾದ ಕನಸುಗಳನ್ನು ಕಾಣಬಲ್ಲರು. ಮತ್ತು ಪರಿಶ್ರಮವಹಿಸಿ ಅವುಗಳನ್ನು ಸಾಕಾರಗೊಳಿಸಬಲ್ಲರು. ಪ್ರತಿಯೊಬ್ಬರ ಕನಸು ಬೇರೆಬೇರೆಯಾಗಿದ್ದರೆ ಒಬ್ಬರಿಗಿಂತ ಒಬ್ಬರದು ಹಿರಿದಾಗಿದ್ದರೆ ಸಮಾಜಕ್ಕೆ ದೇಶಕ್ಕೆ ಒಳಿತಾಗುತ್ತದೆ. ಅದರ ಬದಲು ಎಲ್ಲರ ಮನಸ್ಸಲ್ಲೂ ಒಂದೇ ಕನಸಿನ ಜೆರಾಕ್ಸ ನಕಲು ಹಾರಾಡಿದರೆ ಏನು ಚೆಂದ? ಈಗ ಆಗಿರುವುದೇ ಹಾಗೆ. ನೂರರಲ್ಲಿ ತೊಂಬತ್ತು ಹುಡುಗರಿಗೆ ಕಂಪ್ಯೂಟರ್ ಇಂಜಿನಿಯರ್ ಆಗುವ ಆಸೆ. ಐದರಷ್ಟು ಹುಡುಗರಿಗೆ ಡಾಕ್ಟರ್ ಆಗುವ ಆಸೆ. ಉಳಿದ ಐದರಲ್ಲಿ ಇಬ್ಬರು ಪ್ರೊಫೆಸರು ಇಬ್ಬರು ಚಾರ್ಟಡ ಅಕೌಂಟಂಟ ಒಬ್ಬರು ವಕೀಲರು ಆಗಬಹುದು. ಸರಿ ಮುಂದೇನು? ಸಮಾಜಕ್ಕೆ ಇವರಷ್ಟೇ ಸಾಕೇ? ವಿಜ್ಞಾನಿ ಎಲ್ಲಿದ್ದಾನೆ? ಮನುಕುಲದ ಏಳಿಗೆಯನ್ನು ಚಿಂತಿಸುವ ಬುದ್ದಿಜೀವಿ ಎಲ್ಲಿದ್ದಾನೆ? ಪ್ರಗತಿಯ ಹೆಸರಲ್ಲಿ ನಾವೆಲ್ಲ ಕಳೆದುಕೊಳ್ಳುತ್ತಿರುವ ಮನಶಾಂತಿಯನ್ನು ತುಂಬಿಕೊಡುವ ತತ್ವಜ್ಞಾನಿ ಎಲ್ಲಿದ್ದಾನೆ? ಸಮಾಜದ ಆರೋಗ್ಯವನ್ನು ನಿದರ್ೇಶಿಸುವ ಸಮಾಜವಾದಿ ಎಲ್ಲಿದ್ದಾನೆ? ಎಲ್ಲರೂ ತಮ್ಮತಮ್ಮ ಸ್ವಂತಕ್ಕೆ ಲಾಭವಾಗುವ ನಿಟ್ಟಿನಲ್ಲಿ ಯೋಚಿಸಿದರೆ ದೇಶದ ಗತಿಯೇನು? ಬುದ್ದಿವಂತರು ಪ್ರತಿಭಾಶಾಲಿಗಳು ಸಜ್ಜನರು ತಮಗೆ ಹಣ ಹಾಗೂ ಅನುಕೂಲಗಳು ಸಿಗುವ ಉದ್ಯೋಗಗಳಲ್ಲಿ ಸುಖವಾಗಿ ಉಳಿದುಬಿಟ್ಟರೆ ಚಿಪ್ಪೊಳಗಿನ ಆಮೆಯ ತರ ಆಗಿಬಿಡುತ್ತಾರೆ. ಆಗ ಕಳ್ಳರು ಸುಳ್ಳರು ದಡ್ಡರು ಪೆದ್ದರು ಅಜ್ಞಾನಿಗಳು ಹೊರಗೆ ಬರುತ್ತಾರೆ. ಮುಂದಾಳುಗಳಾಗುತ್ತಾರೆ. ಜನಪ್ರತಿನಿಧಿಗಳಾಗುತ್ತಾರೆ ಕಾನೂನುಗಳನ್ನು ಮಾಡುತ್ತಾರೆ ಆಮೇಲೆ ಇನ್ನೇನು ಆಗಲು ಸಾದ್ಯ? ಅಂಧೇರಿ ನಗರಿ ಚೌಪಟ ರಾಜಾ ಹಾಡುಹಗಲೇ ಅನ್ಯಾಯ ಅರಾಜಕತೆ ತಾಂಡವವಾಡುತ್ತದೆ. ಆಗ ನಾವು ಯಾರನ್ನು ಬೈದು ಪ್ರಯೊಜನವಿಲ್ಲ. ಈಗಿನ ಮಕ್ಕಳನ್ನು ಹೇಗೆ ಬೆಳೆಸುತ್ತೇವೋ ಹಾಗೆ ಭವಿಷ್ಯ ರಚಿತವಾಗುತ್ತದೆ. ಎಲ್ಲರೂ ಮಾವಿನ ಗಿಡವನ್ನೇ ನೆಟ್ಟರೆ ಸಾರಿಗೂ ಕರಿಬೇವು ಸಿಗುವುದಿಲ್ಲ. ಮೊದಲೆಲ್ಲ ಹಲವಾರು ಮಕ್ಕಳನ್ನು ಹೊಂದಿರುತ್ತಿದ್ದರು. ಒಬ್ಬಬ್ಬನ್ನು ಒಂದೊಂದು ಉದ್ಯೋಗಕ್ಕೆ ಕಳಿಸುತ್ತಿದ್ದರು. ಈಗ ಇರುವುದೊಂದೇ ಮಗು ಇಂಜಿನಿಯರ್ ಆಗಲಿ ಅಂತ ಆಶಿಸುತ್ತಾರೆ. ಅದ್ದರಿಂದ ಎಲ್ಲರ ಮನೆಗಳಲ್ಲಿ ಕೇವಲ ಪುಸ್ತಕ ಓದಿ ಅಂಕಗಳಿಸಿ ನಾಳೆ ಬಹುರಾಷ್ರೀಯ ಕಂಪನಿಗಳಲ್ಲಿ ಒಂದು ಕೆಲಸ ಗಳಿಸುವ ಗುರಿಯೊಂದಿಗೆ ಓಡುತ್ತಿರುವ ಹುಡುಗರೇ ಕಾಣಸಿಗುತ್ತಾರೆ. ಸಹಜವಾಗಿ ಅವರು ಇಂಗ್ಲೀಷಿನ ಮಾಧ್ಯಮದಲ್ಲಿ ಕಲಿಯುತ್ತಿರುತ್ತಾರೆ ಅವರ ಪರಿಸ್ಥಿತಿ ಹೇಗಿದೆಯೆಂದರೆ 1 ಮಾತ್ರ ಭಾಷೆಯ ಕುರಿತು ಅಜ್ಞಾನ ಅಸಡ್ಡೆ ಅವಜ್ಞೆ 2 ನಾಡು ನುಡಿ ನೆಲ ಜಲ ಜೀವಸಂಕುಲದ ಕುರಿತು ಅಜ್ಞಾನ ಅವಜ್ಞೆ 3 ವಿದ್ಯುನ್ಮಾನ ಉಪಕರಣಗಳ ಮೇಲೆ ಅತಿಯಾದ ಅವಲಂಬನೆ 4 ಪ್ರಾಯೋಗಿಕ ಬದುಕಿನ ಅನುಭವದ ಕೊರತೆ 5 ಅಂತಜರ್ಾಲ ಟೀವಿ ಪ್ರೇಷಿತ ಜಗತ್ತನ್ನು ತಿಳಿಯುತ್ತ ನೈಜ ಅನುಭವದಿಂದ ದೂರ 6 ಸಂಸ್ಕ್ರತಿ ಕಲೆ ಸಾಹಿತ್ಯ ಸಂಗೀತ ದಾರ್ಶನಿಕತೆ ಇತ್ಯಾದಿ ವಿಚಾರಗಳಿಂದ ದೂರ 7 ಮಾನವ ಸಂಬಂಧಗಳ ಕುರಿತು ಜೀವಂತ ಅನುಭೂತಿಗೆ ದೂರ 8 ಹಣ ಆಸ್ತಿ ಮುಂತಾದ ಸಂಪತ್ತುಗಳ ಹೊರತಾದ ಸಂಪತ್ತುಗಳ ಕುರಿತು ಉಡಾಫೆ ಅಪನಂಬಿಕೆ 9 ಏಕರೂಪದ ಕಾಪರ್ೊರೇಟ ಬದುಕಿನ ಮಾದರಿಗಳನ್ನು ಅನುಸರಿಸುವ ಕುರುಡುತನ 10 ಹೊಸ ದಾರಿಗಳನ್ನು ಹುಡುಕುವ ಹೊಸ ರೀತಿಯಲ್ಲಿ ಬದುಕುವ ಸ್ರಜನಶೀಲತೆ ಜೀವಂತಿಕೆಗಳ ಕೊರತೆ ಎಲ್ಲರೂ ಜೀನ್ಸ ಧರಿಸಿ ಪಿಜ್ಜಾ ತಿಂದು ಕೋಕ ಕುಡಿದು ಫೋರ್ಡ ಹುಂಡೈ ಗಳಲ್ಲಿ ಓಡಾಡುತ್ತ ಕಂಪ್ಯೂಟರ್ ಕೀಲಿಮಣೆ ಕುಟ್ಟಿ ವೀಕೆಂಡು ಮನರಂಜನೆಗಾಗಿ ಅಂತಜರ್ಾಲ ತಡಕಾಡುತ್ತ ಸುಖದ ಬೊಜ್ಜನ್ನು ಜಿಮ್ ಗಳಲ್ಲಿ ಕರಗಿಸಲೆತ್ನಿಸುತ್ತ ಬದುಕಬೇಕೆಂದು ಒಂದು ಸವರ್ಾನಾಂಪ್ರಿಯವಾದ ಸಾರ್ವಜನಿಕವಾಗಿರುವ ಕನಸಿನ ಜೆರಾಕ್ಸ ಕಾಪಿಯನ್ನು ಕಟ್ಟು ಹಾಕಿಸಿ ನಡುಮನೆಯ ಗೋಡೆಗೆ ನೇತುಹಾಕಿದ್ದಾರೆ. ಯಾರಾದರೂ ಬೇರೆ ರೀತಿ ಯೋಚಿಸಿದರೆ ಅವರ ಮಕ್ಕಳು ಕಲಿತಲು ದಡ್ಡರು ಬದುಕಲು ನಾಲಾಯಕ್ ಗಳು ಎಂದು ಸರ್ವ ಸಮ್ಮತವಾದ ತೀಮರ್ಾನ ಉಂಟಾಗಿ ಅವರ ಅಪ್ಪ ಅಮ್ಮನ ಬಗ್ಗೆ ಕರುಣೆ ತುಂಬಿದ ಶ್ರದ್ಧಾಂಜಲಿ ಸಭೆಯೊಂದು ಎಲ್ಲರ ಮನಸ್ಸಲ್ಲೂ ನಡೆದುಬಿಡುತ್ತದೆ. ಇದೇ ಕಾರಣದಿಂದ ಯಾವ ಅಪ್ಪ ಅಮ್ಮ ಕೂಡಾ ಮುಖ್ಯ ವಾಹಿನಿಯಿಂದ ಬೇರೆಯಾಗಿ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ತಾವಷ್ಟೇ ಬೇರೆಯಾಗಿ ಮಕ್ಕಳನ್ನು ಬೆಳೆಸುವ ರಿಸ್ಕ ಏಕೆ ತೆಗೆದುಕೊಳ್ಳಬೇಕು ಇದರಿಂದ ಏನಾದರೂ ಅಪಾಯವಾದರೆ ಎಂದು ತಲೆತಗ್ಗಿಸಿಕೊಂಡು ಜನಸಂದಣಿಯಲ್ಲಿ ಸೇರಿಕೊಂಡು ಗೋವಿಂದಾ ಎಂದುಬಿಡುತ್ತಾರೆ. ಮೆರವಣಿಗೆಯ ಭಾಗವಾಗಿಬಿಡುತ್ತಾರೆ. ಮೆರವಣಿಗೆಯ ಮುಂಚೂಣಿಯಲ್ಲಿ ವಿಜಯ ಮಾಲೆ ಧರಿಸಿದ ನಸೀಬುವಂತರು ನಗುತ್ತ ಹೊರಟಿದ್ದಾರೆ. ಅವರ ನಗೆ ಮಶಾಲಿನಂತೆ ಉರಿಯುತ್ತ ಉಳಿದವರಿಗೆ ದಾರಿ ತೋರಿಸುತ್ತಿದೆ. ಅದರ ಉಜ್ವಲ ಬೆಳಕು ನೋಡಿ ನೋಡಿ ಈಗೀಗ ಮೆರವಣಿಗೆ ಸೇರಿಕೊಂಡವರು ಚಡಪಡಿಸುತ್ತಿದ್ದಾರೆ. ಬೇಗ ಬೇಗ ಅವರಂತಾಗಿಬಿಡುವ ಅವಸರ. ನಮ್ಮ ಮಕ್ಕಳಿಗೆ ಗುರಿಯೆಡೆಗೆ ಮಾತ್ರ ದ್ರಷ್ಟಿ ಕೇಂದ್ರೀಕರಿಸಿ ಓಡಲು ತರಬೇತಿ ಕೊಡಿಸಿದ್ದೇವೆ ಆ ಕಡೆ ಈಕಡೆ ಗಮನ ಹರಿಯಬಾರದೆಂದು ತಾಕೀತು ಮಾಡಿದ್ದೇವೆ. ಕಾಲುಗಳು ಜೋರಾಗಿ ಓಡಲು ಬೇಕಾದ ವಿಶೇಷ ಪೋಷಕಾಂಶಗಳ ಆಹಾರ ತಿನ್ನಿಸಿ ಬೂಟು ತೊಡಿಸಿ ನಿಲ್ಲಿಸಿದ್ದೇವೆ. ಅಷ್ಟಕ್ಕೇ ಸುಮ್ಮನಾಗದೇ ಅಕ್ಕ ಪಕ್ಕ ಓಡುವವರನ್ನು ಸರಿಸಿ ಹಿಮ್ಮೆಟ್ಟಿಸಿ ದೂಡಿ ಕೆಡವಿ ಕಡೆಗೆ ತುಳಿದೂ ಕೂಡ ಓಡಬಹುದೆಂದು ನಮ್ಮ ಪೈಪೋಟಿಯ ಪಾಠಗಳು ಹೇಳುತ್ತಿವೆ. ಅದಕ್ಕಾಗಿ ಕೆಲವು ಆಯುಧಗಳನ್ನು ಅವರು ಗುಟ್ಟಾಗಿ ಇಟ್ಟುಕೊಂಡಿದ್ದಾರೆ. ನಾವು ನೋಡಿದರೂ ನೋಡದವರಂತೆ ಸುಮ್ಮನಿದ್ದೇವೆ. ಯಾಕೆ ನಮಗೆ ತಿಳಿಯುತ್ತಿಲ್ಲ ಬೀಳುವ ಮಕ್ಕಳು ನಮ್ಮವು ಅಲ್ಲವಾ? ಅಥವಾ ಬಿದ್ದರೆ ನಾವು ಮಕ್ಕಳು ಅಲ್ಲ ಅನ್ನುವಷ್ಡು ಕೆಟ್ಟು ಹೋಗಿದ್ದೀವಾ? ಬಿದ್ದ ಮಕ್ಕಳಿಗೆ ಏಳುವ ಅವಕಾಶವೂ ಈ ರಣಮೆರವಣಿಗೆಯಲ್ಲಿ ಇಲ್ಲವಾ? ಪರಿಣಾಮಗಳು 1 ಯುವಕರು ಚುರುಕಾದ ನಿಪುಣ ಸೈನಿಕರಾಗುತ್ತಿದ್ದಾರೆ ಮನುಶ್ಯರಾಗುತ್ತಿಲ್ಲ 2 ಸೈನ್ಯ ಸಜ್ಜಾಗುತ್ತಿದೆ ಸಮಾಜವಲ್ಲ 3 ಯುದ್ಧ ಗೆಲ್ಲುತ್ತೇವೆ ಬದುಕು ಅರಳುವುದಿಲ್ಲ 4 ಮನುಷ್ಯ ಮನುಷ್ಯರ ನಡುವೆ ಪೈಪೋಟಿ ನಡೆಯತ್ತದೆ ಸಂಬಂಧ ಹುಟ್ಟುವುದಿಲ್ಲ 5 ತಂದೆ-ತಾಯಿ ಬಂಧು-ಬಳಗ ಇವೆಲ್ಲ ಸಲಕರಣೆ-ಉಪಕರಣಗಳಾಗಿ ಬಳಕೆಯಾಗುತ್ತಾರೆ 6 ಪಡೆಯುವುದು ಕೊಳ್ಳುವುದು ಮಾರುವುದು ತಿಳಿಯುತ್ತದೆ. ಕೊಡುವುದು ನೀಡುವುದು ತ್ಯಾಗದ ಸುಖ ಇಲ್ಲ 7 ಮಾನವೀಯತೆ ಬಣ್ಣ ಕಳೆದುಕೊಂಡು ಮೂಲೆಗುಂಪಾಗುತ್ತದೆ 8 ಕಾರ್ಯ-ಕಾರಣವಿಲ್ಲದೆ ಸಂಪರ್ಕ ಇರವುದಿಲ್ಲ. ಹಾಗೆ ಸುಮ್ಮನೆ ಯಾರೂ ಯಾರನ್ನೂ ಖುಷಿಗೊಳಿಸುವುದಿಲ್ಲ 9 ಮನೆ ಎಂಬ ಅಂಶ ಅನೇಕ ಮಾಪರ್ಾಡು ಕಂಡು ವ್ರದ್ಧಾಶ್ರಮ ಅನಾಥಾಶ್ರಮಗಳು ಹೆಚ್ಚಾಗುತ್ತವೆ 10 ಶಾಂತಿ ನೆಮ್ಮದಿಗಳನ್ನು ಹೊರಗೆ ಹಣ ಕೊಟ್ಟು ಕೇಂದ್ರಗಳಲ್ಲಿ ಪಡೆದುಕೊಳ್ಲಬೇಕಾಗುತ್ತದೆ ಪರ್ಯಾಯ ಚಿಂತನೆ 1 ಅಸಾಂಪ್ರದಾಯಿಕ ಶಿಕ್ಷಣಕ್ಕೆ ಮಹತ್ವ ಕೊಟ್ಟು ಪ್ರಸಿದ್ದಪಡಿಸುವುದು 2 ಅಕ್ಷರಜ್ಞಾನ ಪುಸ್ತಕದ ತಿಳುವಳಿಕೆ ಇವಷ್ಟೇ ಶಿಕ್ಷಣವಲ್ಲವೆಂದು ಅರಿಯುವುದು 3 ಜೀವನ ಮೌಲ್ಯಗಳ ಕಲಿಕೆಗೂ ಮಹತ್ವ ನೀಡುವುದು 4 ಮಾನವೀಯತೆ ಜೀವನ ಕೌಶಲ್ಯ ಕಲಿತ ಮಕ್ಕಳಿಗೆ ಸಾಮಾಜಿಕ ಮನ್ನಣೆ ನೀಡುವುದು 5 ಸ್ಥಳೀಯ ಉದ್ಯೋಗಿಗಳನ್ನು ಸ್ವ ಉದ್ಯೋಗ ನಿರತರನ್ನು ಗುರುತಿಸಿ ಸಾಮಾಜಿಕ ಮನ್ನಣೆ ನೀಡುವುದು 6 ಯೋಗ್ಯತೆಯನ್ನು ಕೇವಲ ಅಂಕಗಳಿಂದ ಅಳೆಯುವ ಕುರುಡು ಕ್ರಮ ಕಡಿಮೆ ಮಾಡುತ್ತ ಬರುವುದು 7 ಜಾಣ- ಜಾಣೆಯರಷ್ಡೇ ಅಲ್ಲ ಜಗತ್ತಿಗೆ ಮಾನವೀಯ ಸ್ಪಂದನಗಳಿರುವ ಮನುಜರು ಬೇಕೆಂದು ನಂಬುವುದು 8 ಬದುಕಿನ ಹಲವಾರು ಪಯರ್ಾಯ ಮಾದರಿಗಳಲ್ಲೂ ಸುಖವಿರುವುದನ್ನು ಪ್ರಚುರಪಡಿಸುವುದು 9 ಚಿಕ್ಕ ಪುಟ್ಟ ಕೆಲಸಗಳಲ್ಲಿದ್ದು ಸಮಾಜಮುಖಿಯಾದವರನ್ನು ಗುರುತಿಸಿ ಗೌರವಿಸಿ ಅವರ ಸಂಖ್ಯೆ ಹೆಚ್ಚಿಸುವುದು 10 ಆದರ್ಶ ಮಾದರಿಗಳಲ್ಲಿ ಬದಲಾವಣೆ ಮಾಡಿ ಬೇರೆ ಬೇರೆ ಉದ್ಯೋಗಗಳಿಗೆ ಮನ್ನಣೆ ದೊರಕಿಸುವುದು ತನ್ನ ಶಕ್ತಿಯನಳೆದು ತನ್ನ ಗುಣಗಳ ಬಗೆದು ಸನ್ನಿವೇಶದ ಸೂಕ್ಷ್ಮವರಿತು ಧ್ರತಿತಳೆದು ತನ್ನ ಕರ್ತವ್ಯ ಪರಿಧಿಯ ಉಜ್ಜುಗಿಸೆ ಪುಣ್ಯಶಾಲಿಯ ಪಾಡು ಮಂಕುತಿಮ ನಮ್ಮ ಯುವಕರು ತಾವು ಇದ್ದಲ್ಲೇ ಉದ್ಯೋಗ ಹುಡುಕಿ ಮಾಡಲಾರಂಭಿಸಿದರೆ ತ0ದೆ ತಾಯಿಗಳು ಅನಾಥರಾಗುವುದು ತಪ್ಪಿ ಹಳ್ಳಿಗಳ ನಿರ್ಜನೀಕರಣ ಸಮಸ್ಯೆಗೂ ಪರಿಹಾರ ಸಿಗಬಹುದು, ಎಲ್ಲ ಬಗೆಯ ಕೆಲಸಗಳಿಗೂ ಸಾಮಾಜಿಕ ಗೌರವ ಸಿಕ್ಕರೆ ಹಳ್ಳಿ ಹುಡುಗರಿಗೆ ಹೆಣ್ಣೂ ಸಿಗಬಹುದು ಬದುಕಿನ ಸುಖ ಹಣ ಒಂದರಲ್ಲೇ ಇಲ್ಲ ಅಂತ ತಿಳದರೆ ನಿಜವಾದ ನೆಮ್ಮದಿಗೂ ಆದ್ಯತೆ ಸಿಗಬಹುದು]]>

‍ಲೇಖಕರು G

September 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

೧ ಪ್ರತಿಕ್ರಿಯೆ

  1. ರವೀಂದ್ರ ಮಾವಖಂಡ

    ಬಹಳ ಚೆನ್ನಾಗಿದೆ. ಇನ್ನಷ್ಟು ಬರೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: