ಹೀಗೊಂದು ದೆವ್ವಾಯಣ

ಹಣಮಂತ ಹಾಲಿಗೇರಿ

ಈ ಭೂಮಿ ಎಂಬೋ ಭೂಪ್ರವೇಶ ಮಾಡಿದ ದಿನದಿಂದಲೆ ದೆವ್ವಗಳೊಂದಿಗೆ ನನ್ನ ಹೆಣಗಾಟ ಪ್ರಾರಂಭವಾಯಿತೆಂದು ಹೇಳಬಹುದು. ಹುಟ್ಟಿದ ಗಳಿಗೆ ಚಲೋ ಇಲ್ಲ, ಭೂತ ಗಳಿಗೆಎಂದು ನನ್ನ ಅಜ್ಜಿ ನನ್ನನ್ನು ವಾರಗಟ್ಟಲೇ ಸ್ನಾನ ಮಾಡಿಸದೆ ಬಟಯಿಂದ ಕೇವಲ ಮೈ ಒರೆಸಿ ಅದೆ ಬಟಯಲ್ಲಿ ಸುತ್ತಿ ಇಡುತ್ತಿದ್ದಳು. ಬಹುಶಃ ಸ್ನಾನ ಮಾಡದ ನನ್ನ ಮೈಯ ದುವರ್ಾಸನೆಯನ್ನು ಸಹಿಸಿಕೊಳ್ಳಲಾರದೆ ಭೂತದ ಗಳಿಗೆ ನನ್ನನ್ನು ಬಿಟ್ಟು ಹೋಗಿರಬೇಕು. ವಾರದ ನಂತರ ಊರ ಮಾರಿಗುಡಿಗೆ ಒಯ್ದು ಪೂಜೆ ಮಾಡಿಸಿ ಭೂತದ ಗಳಿಗೆಯ ಅನಾಹುತಗಳನ್ನು ತಪ್ಪಸಿದಳಂತೆ. ಅಂಗಾತ ಇದ್ದವನು, ದಬ್ಬ ಬಿದ್ದು, ಮುಂದೆ ತೆವಳಿ, ಅಂಬೆಗಾಲಲ್ಲಿ ನಡೆದು, ತಪ್ಹೆಜ್ಜೆ ಇಟ್ಟು ಮನೆಯ ಹಿತ್ತಿಲಿನಲ್ಲಿ ಇರುವೆ ಸಾಲು ಮತ್ತು ದನದ ಕೊಟ್ಟಿಗೆಯಲ್ಲಿ ಸಗಣಿ ಹೊತ್ಲಾ ತುಳಿದು ಅಲೆದಾಡುತ್ತಾ ದೊಡ್ಡವನಾಗಲೆಂದು ನಾನು ಶತಪ್ರಯತ್ನ ಪಡುತ್ತಿದ್ದರೆ ನನ್ನ ಅವ್ವ ಮಾತ್ರ ಅಲ್ಲೆಲ್ಲಾ ಹೋಗಬೇಡ, ಗುಮ್ಮ ಬರತೈತಿ, ದೆವ್ವ ಇರತೈತಿಎನ್ನುತಾ ನನ್ನ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿದ್ಲು. ಆಗೆಲ್ಲಾ ಗುಮ್ಮನೆಂದರೆ ಎನು, ಅದು ಹೇಗಿರುತ್ತೆ, ಅದು ಕುಡುಕ ಅಪ್ಪನ ತರಾನಾ, ಅಥವಾ ಉದ್ದಕ ಜಡಿಗೂದಲಾ ಬಿಟ್ಕೊಂಡು ಭಯಾನಕವಾಗಿ ಕಾಣುತ್ತಿದ್ದ ಮಾರಿಗುಡಿ ಪುಜಾರಪ್ಪನ ತರಾನಾ ಎಂದೆಲ್ಲಾ ಅವ್ವನನ್ನು ಕೇಳುತ್ತಾ ಅವಳನ್ನು ಮುಜಗರಕ್ಕಿಡು ಮಾಡುತ್ತಿದ್ದೆ.

ಕಲೆ: ವೆಂಕಟ್ರಮಣ ಭಟ್

ಚೊಣ್ಣ ಹಾಕುವಷ್ಟು ದೊಡ್ಡವರಾದ ನಾವು ಓಣಿಯ ಹುಡುಗರೆಲ್ಲ ಅಂಗಳದಲ್ಲೊ ಹಿತ್ತಲದಲ್ಲೋ ಸೇರಿ, ಈ ದೆವ್ವಗಳ ಬಗ್ಗೆ ತುಂಬಾ ಕೂತುಹಲದಿಂದ ಚಚರ್ಿಸುತ್ತಿದವು. ದೆವ್ವ ಎಂದರೆ ಅದಕ್ಕೆ ನಮ್ಮ ಹೊಲದಲ್ಲಿನ ನೇಗಿಲಿಗಿರುವುಷ್ಟು ದೊಡ್ಡ ಮೂಗು, ಚಕ್ಕಡಿ ನಗದಷ್ಟು ದೊಡ್ಡ ಉದ್ದದ ಕಾಲುಗಳು, ಮರದಂಥಾ ಕಿವಿಗಳು, ಹಿತ್ತಾಳೆ ಕೊಡದಂಥ ಕೆಂಪು ಕಣ್ಣುಗಳು. ಹೀಗೆ ನಮ್ಮ ಹೋಲಿಕಾ ಉಪಮೆಗಳ ಪ್ರಯೋಗ ಸಾಗುತ್ತಿತ್ತು. ದೆವ್ವ ನಮ್ಮ ಆಕಳನ್ನು ಹೊತ್ತುಕೊಂಡು ಹೋಗಿತ್ತು, ದಿನಾಲು ಹುಣಸೆ ಗಿಡದಲ್ಲಿ ಕುಳಿತಿರುತ್ತೆ, ನಮ್ಮಪ್ಪನನ್ನು ದಾರಿ ತಪ್ಪಿಸಿ ಹೊತ್ತುಕೊಂಡು ಹೋಗಿತ್ತು ಎಂದೆಲ್ಲಾ ಚಡ್ಡಿ ದೋಸ್ತರು ಭಯಾನಕ ರಸದಲ್ಲಿ ತಮ್ಮ ಮುಖವನ್ನು ಅದ್ದಿ ದೆವ್ವದ ಕತೆ ಹೇಳುತ್ತಿದ್ದರು. ಅವರ ಕತೆ ಕೇಳಿದಂತೆಲ್ಲ ನನಗೆ ದೆವ್ವವನ್ನು ನೋಡಬೇಕೆಂದು ಕುತೂಹಲ ಹೆಚ್ಚುತ್ತಲೆ ಇತ್ತು. ಹುಣಸಿಗಿಡಕ್ಕೆ ಹೋಗಿ ದೆವ್ವವನ್ನು ನೊಡಿ ಬಿಡಲೆ ಎಂದು ಒಮ್ಮೊಮ್ಮೆ ಅನಿಸಿ, ಆ ಅನಿಸಿಕೆಯಿಂದ ಭಯವಗಿ ಚಡ್ಡಿಯೊಳಗ ಒದ್ದೆಯಾಗುತ್ತಿದ್ದರಿಂದ ನನ್ನ ದೆವ್ವ ದರ್ಶನದ ಪ್ರಯೋಗಕ್ಕೆ ಅಡೆತಡೆಯಾಗುತ್ತಿತ್ತು. ಆದರೂ ನಾಉ ದೊಡ್ಡವನಾದ ಮೇಲೆಯಾದರೂ ದೆವ್ವ ನೋಡಲೇ ಬೇಕು ಅಂತ ಅಂದೆ ತೀಮರ್ಾನಿಸಿ ದೆವ್ವ ನೋಡುವ ಪ್ರಯತ್ನಕ್ಕೆ ತಾತ್ಕಾಲಿಕ ತಡೆ ಹಾಕಿ ನಾನು ದೊಡ್ಡವನಾಗುವುದರತ್ತ ಲಕ್ಷ್ಯವಹಿಸಿದೆ. ನನ್ನ ಶಾಲಾ ದಿನಗಳಲ್ಲಿ ದೊಡ್ಡಮನಿ ಎನ್ನುವ ಮಾಸ್ತರರೊಬ್ಬರು `ಯಾವ ದೆವ್ವನು ಇಲ್ಲ, ದೇವರು ಇಲ್ಲ, ನಾವ$$ ಒಂದ ರೀತಿ ದೆವ್ವಗಳಿದ್ದಂಗ’ ಎಂದು ಎಲ್ಲೆಲ್ಲೊ ನೋಡುತ್ತಾ ಹೇಳಿದಾಗ ಖರೆ ಹೇಳಬೇಕಂದ್ರ ನನಗೆ ಅವರೇ ಒಂದು ರೀತಿಯಲ್ಲಿ ದೆವ್ವದಂಗ ಕಂಡಿದ್ದರು. ನಾವೆಲ್ಲಾ ಹುಡುಗರು ಓದಿಕೊಳ್ಳಲು ರಾತ್ರಿ ಅವರು ಉಳಿದುಕೊಂಡಿದ್ದ ರೂಮಿಗೆ ಹೋಗುತ್ತಿದ್ದೆವು. ಆಗ ಅವರು ಊರ ಹತ್ತಿರದ ಸ್ಮಶಾನಕ್ಕೆ ನನ್ನಂತ ಕೆಲವು ದೈರ್ಯದ ವೀರ ಹುಡುಗರನ್ನು ಕರೆದುಕೊಂಡು ಹೋಗಿ ದೆವ್ವಗಳು ಇಲ್ಲ ಎಂದು ತೋರಿಸುತ್ತಿದ್ರು. ಕೆಲವೊಮ್ಮೆ `ಯಾರು ರಾತ್ರಿ 10ಕ್ಕೆ ಸ್ಮಶಾನಕ್ಕೆ ಹೋಗಿ ಬರುತ್ತಾರೆಯೋ ಅವರಿಗೆ ಒಂದು ಸೀಸ್ ಪೆನ್ಸಿಲ್ಲು ಬಹುಮಾನ’ಎಂದು ಘೋಷಿಸಿ ಹುಡುಗರ ಮಧ್ಯೆಯೇ ಸ್ಪಧರ್ೆ ಒಡ್ಡುತ್ತಿದ್ದರು. ನಾನು ಮಾಸ್ತರರ ಮೆಚ್ಚುಗೆಯನ್ನು ಗಳಿಸಲು ಹೊರಗೆ ದೈರ್ಯವಂತನಂತೆ ಪೋಜು ಕೊಟ್ಟು ಸ್ಪಧರ್ೆಯಲ್ಲಿ ಭಗವಹಿಸತ್ತಿದ್ದರೂ ಕೂಡ ಕೆಲವೊಮ್ಮೆ ಸ್ಮಶಾನವನ್ನು ಪೂರ್ಣ ಮುಟ್ಟದೆ ಚಡ್ಡಿಯನ್ನು ತೊಯಿಸಿಕೊಂಡು ಮರಳಿ ಹಿಂದಕ್ಕೆ ಬಂದು ಗೆಳೆಯರ ನಗುವಿಗೆ ಕಾರಣವಾಗುತ್ತಿದ್ದೆ. ಹಲವೊಮ್ಮೆ ಸ್ಮಶಾನಕ್ಕೆ ಓಡೊಡುತ್ತಾ ಹೋಗಿ ಓಡೋಡುತ್ತಾ ಬಂದು ಮಾಸ್ತರರಿಂದ ಶಹಬ್ಬಾಷಗಿರಿ ಪಡೆದುಕೊಂಡದ್ದು ಇದೆ. ಆದರೆ ಆಗ ದೆವ್ವಗಳು ನನ್ನ ಕಣ್ಣಿಗೆ ಬೀಳುತ್ತಿರಲಿಲ್ಲ. ಆವಕ್ಕೂ ಮನುಷ್ಯರನ್ನು ಕಂಡರೆ ಭಯವೋ ಏನೋ? ಹೈಸ್ಕೂಲು ಸೇರಿಕೊಂಡ ಮೇಲೆ ನಮ್ಮ ತಂದೆ ಊರಲ್ಲಿನ ಮನೆ ಬಾಡಿಗೆ ಕೊಟ್ಟು ತೋಟದ ಮನೆಯಲ್ಲಿಯೇ ನೆಲೆಸಿದರು. ಒಂದು ದಿನ ಹೈಸ್ಕೂಲು ಬಿಟ ಮೇಲೆ ನೇರವಾಗಿ ತೋಟಕ್ಕೆ ಬರದೆ ಅಲ್ಲಲ್ಲಿ ಸುತ್ತಾಡಿ ತೋಟಕ್ಕೆ ಬಂದಾಗ ಸೂರ್ಯ ಮರೆಯಾಗಿ ಕತ್ತಲು ಸುರಿಯತೊಡಗಿತ್ತು. ದಿನದ ರೂಡಿಯಂತೆ ಸವತೆಕಾಯಿಯ ಮಡಿಗೆ ಹೋಗಿ ಬಗ್ಗಿ ಒಂದೆರಡು ಎಳೆ ಸವತೆಕಾಯಿ ಹರಿದುಕೊಂಡು ಮೇಲೆಳಬೆಕೆಂದಿದ್ದೆ. ಅಲ್ಲಿ ಒಬ್ಬ ನಿಂತಿದ್ದ! ಬೋಳು ತಲೆಯ, ಡೊಳ್ಳು ಹೊಟಯ, ಕೋರೆ ಹಲ್ಲಿನ, ಉದ್ದ ಮೀಸೆಯ ಸೊಂಟದ ಮೇಲೆ ಕೈಯಿಟ್ಟುಕೊಂಡಿದ್ದ ಆ ವ್ಯಕ್ತಿ ಮನುಷ್ಯರಿಗಿಂತಲೂ ಸ್ವಲ್ಪ ಎತ್ತರಕಿದ್ದುದರಿಂದ ನಾನು ಸುಲಭವಾಗಿ ಇದು ದೆವ್ವವೆ ಎಂದು ತಿಮರ್ಾನಿಸಿಬಿಟ. ಆ ಕ್ಷಣದಲಿ ನನಗೆ ಹಿರೇಮಠ ಮಾಸ್ತರನ ನೆನಪಾಗಿ ಇದು ದೆವ್ವ ಹೌದೋ ಅಲ್ಲವೋ ಎಂದು ಪರೀಕ್ಷಿಸಿಬೇಕೆಂದು ಕೊಂಡೆ. ಆದರೆ, ದೈರ್ಯ ಸಾಲುತ್ತಿಲ್ಲ. `ಯಾರು ನೀನು? ದೆವ್ವ ಹೌದೋ ಅಲ್ಲೋ? ಎಂದೆ. ಅದು ಮಾತಾಡಲೇ ಇಲ್ಲ. ನನ್ನ ಮಗಂದು ದೆವ್ವ ಅಗಿರೋದ್ರಿಂದಲೆ ಆದು ಮಾತಾಡುತ್ತಿಲ್ಲ ಎಂದು ಸಿಟ್ಟು ಬಂದಿತು. ಅಚಾನಕ್ಕಾಗಿ ನನ್ನ ಎಡಗೆ ನನ್ನ ಚಡ್ಡಿಯನ್ನು ಮುಟ್ಟಿ ನೊಡಿತು. ಆದರೆ ಚಡ್ಡಿ ಇನ್ನೂ ಒದ್ದೆಯಾಗಿಲಿಲ್ಲ. ಅಂದ್ರೆ ನನಗೆ ಇನ್ನೂ ಭಯ ಆಗಿಲ್ಲ ಎಂಬುದು ಖಾತ್ರಿಯಾಯಿತು. ನಾನು ಚಡ್ಡಿ ಒದೆಯಾಗುವ ಮುಂಚೆ ನಾನು ದೆವ್ವವನ್ನು ಪರೀಕ್ಷಿಸಬೇಕಿತ್ತು. ಅಷ್ಟರಲ್ಲಿ ನನ್ನ ಮೆಚ್ಚಿನ ನಾಯಿ ಬೀಮ್ಯಾ ಮನೆ ಕಡೆಯಿಂದ ಓಡಿ ಬಂತು. ನಾನು ಆ ನಾಯಿಯನ್ನು ಯಾವತ್ತು ಇಲ್ಲದ ಪ್ರೀತಿಯಿಂದ ಹತ್ತಿರ ಕರೆದು ಆ ದೈತ್ಯಾಕಾರದ ಸಮಿಈಪ ಹೋಗು, ಅದು ದೆವ್ವ ಹೌದೋ ಅಲ್ವೋ ನೊಡ್ಕೊಂಡು ಬಾ ಭಿಮ್ಯಾ ಎಂದೆ ಆದರ ಮೈಯನ್ನು ನೆವರಿಸುತ್ತಲೆ. ಅದು ಸಮೀಪ ಹೋಗತೊಡಗಿತು. ಸ್ವಲ್ಪ ದೋರ ಹೋಗಿತ್ತೊ ಇಲ್ವೋ. ಇವನೌನ ಇದ್ಯಾಕ ಬೇಕು ಇಲ್ಲದ ಉಸಾಬರಿ ಅನ್ಕೊಂಡು ಜೋರಾಗಿ ಬೊಗುಳುತ್ತ ಮರಳಿ ಓಡಿ ಬಂದು ನನ್ನ ಹಿಂದೆ ಬಂತು ನಿಂತ್ಕೊಂಡು ಕುಂಯಿ ಕುಂಯಿ ಎನ್ನತೊಡಗಿತು. ದೆವ್ವವನ್ನು ಪರೀಕ್ಷಿಸಬೇಕೆಂದರೆ ನಾನೆ ಆದರ ಹತ್ತಿರ ಹೋಗಬೇಕು. ಈ ನಾಯಿಯಂಥವುಗಳನ್ನು ನಂಬಿಕೊಂಡರೆ ಆಗುವುದಿಲ್ಲ ಎಂದು ನನಗೆ ಬಹಳಷ್ಟು ನಾಯಿ ಮೇಲೆ ಸಿಟ್ಟು ಬಂತು. ಶಾಲ ಮಾಸ್ತರ ದೆವ್ವದ ಕುರಿತು ಹೇಳಿದ್ದು ನೆನಪಾಗಿ ದೇಹದ ನರನಾಡಿಗಳಲ್ಲಿ ಶಕ್ತಿ ಬಂದಂತಾಯಿತು. ನನ್ನ ಜೀವವನ್ನು ದೆವ್ವಗಾಘಿ ಫಣಕ್ಕಿಡಲು ಸಿದ್ದನಾದೆ. ಎಲ್ಲ ಶಕ್ತಿ ಎಡ ತೋಳಿಗೆ ಹರಿದು, ತೋಳಿನಿಂದ ಮುಂಗೈಗೆ ಹರಿದು, ಅದು ಕಲ್ಲುಗಳನ್ನು ತೆಗೆದುಕೊಂಡಿತು. ಆದರೆ ಶಕ್ತಿ ಸಾಲದ್ದಕ್ಕೋ ದೆವ್ವದ ಭಯದಿಂದಲೋ ಆ ಕಲ್ಲುಗಳನ್ನು ಬಲಗೈಗೆ ಸರಬರಾಜು ಮಾಡಿತು. ಒಮ್ಮೆಲೆ ದೈರ್ಯ ತೆಗೆದುಕೊಂಡ ಬಲಗೈ ಕಲ್ಲು ಬೀಸೆ ಬಿಟ್ಟತು. ಕಾಲುಗಳು ಓಟ ಕೀಳಬೇಕು. ಅಷ್ಟರಲ್ಲಿ ಫಳ್ ಎನ್ನುವ ಶಬ್ದ ಆ ದೆವ್ವ ನಿಂತಿದ್ದ ದಿಕ್ಕಿನಿಂದ ಬಂದು ಸತ್ತೆನೊ ಕೆಟ್ಟನೋ ಎಂದು ಓಡಬೇಕೆಂದುಕೊಂಡೆ. ಮರುಕ್ಷಣ ನಿಶಬ್ದ. ಅದು ದೆವ್ವದ ತಲೆ ಒಡೆದಿದ್ದರಿಂದ ಬಂದ ಶಬ್ದವಾಗಿತ್ತು. ಪಾಪ, ನಮ್ಮವ್ವ ಸವತೆಕಾಯಿ ಮಡಿ ಮೇಲೆ ಯಾವುದೆ ನಾಯಿ ನರಿಗಳು ದಾಳಿ ಮಾಡಿ ಹಾಳು ಮಾಡಬಾರದು ಎಂದು ಮುಂಜಾನೆಯಿಂದ ಕಷ್ಟಪಟ್ಟು ಆ ಬೆದರುಬೊಂಬೆ ತಯಾರಿಸಿದ್ದಳಂತೆ. ಬೊಂಬೆಗೆ ದೊಡ್ಡದೊಂದು ಮಣ್ಣಿನ ಮಡಿಕೆಯನ್ನು ತಲೆಯನ್ನಾಗಿಸಿ ಅದಕ್ಕೆ ಸುಣ್ಣ ಬಳಿದು ಮೀಸೆ ಕೊರೆದು ಥೇಟ್ ದೆವ್ವವನ್ನಾಗಿಸಿದ್ದಳು. ನಾನು ಆ ಬೆರ್ಚಪ್ಪನ ತಲೆ ಒಡೆದ ನನ್ನ ವೀರತನವನ್ನು ಹೆದರುತ್ತಲೆ ಮನೆಯಲ್ಲಿ ಹೇಳಿದೆ. ಅವ್ವ ಬೈಗುಳಗಳ ಮಂಗಳಾರುತಿಯ ಜೊತೆಗೆ ದೊಣ್ಣೆ ಪ್ರಸಾದವನ್ನೂ ನೀಡಿದಳು. ಮುಂದೊಂದು ದಿನ ನಮ್ಮ ಪಕ್ಕದ ತೊಟದ ಶಂಕ್ರಪ್ಪ ಮಾಮ ಎಂಬವನೊಬ್ಬ ನಮ್ಮ ತೊಟದ ದಾರಿಯಲ್ಲಿ ಕೊಳ್ಳಿ ದೆವ್ವ ಇದೆಯಂದು ಸುದ್ದಿ ಹಬ್ಬಿಸಿತೊಡಗಿದ. ಎಂತೆಂತ ಅತಿರಥ ಮಹಾರಥ ದೈರ್ಯವಂತರೆಲ್ಲ ಆ ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ಅಡ್ಡಾಡುವುದನ್ನು ನಿಲ್ಲಿಸಿದರು. ಆತ ನನಗೆ ಬಂದು ಆ ದೆವ್ವದ ಹತ್ತಿರ ಹೋದರೆ ನಿನಗೆ ಕೋ ಬಾಡೂಟ ಹಾಕಿಸುತ್ತೇನೆ ಎಂದು ಸವಾಲು ಹಾಕತೊಡಗಿದ. ನಾನು ಕೋಳಿ ಊಟದ ಆಸೆಗಿಂತಲೂ ಆ ಕೊಳ್ಳಿ ದೆವ್ವ ಎಂಥದ್ದಿರಬಹುದು ಎಂಬ ಕುತೂಹಲದಿಂದ ನಾನು ಆ ಸವಾಲನ್ನು ಹುರುಪಿನಿಂದಲೇ ಸ್ವೀಕರಿಸಿದೆ. ಆದರೆ ರಾತ್ರಿಯಾಗುತ್ತಿದ್ದಂತೆ ಯಾಕೋ ಭಯ ಸುರುವಾಗಿ ಈ ಸಲ ಚೊಣ್ಣದ ಬದಲು ಲುಂಗಿ ಒದ್ದೆಯಾಗಬಹುದೇ ಎಂಬ ಆತಂಕವಾಗಿತ್ತು. ನಾನು ಅಷ್ಟರಲ್ಲಿ ನಾನು ಹೈಸ್ಕೂಲು ಓದುತ್ತಿದ್ದುದರಿಂದ ನನ್ನ ಅಪ್ಪ ನಾನು ದೊಡ್ಡವನಾಗಿದ್ದೇನೆ ಎಂದುಕೊಂಡು ನನಗೆ ಎರಡು ಪಟಪಟೆ ಲುಂಗಿ ತಂದಿದ್ದ. ಎನಾದರೂ ಹೆಚ್ಚು ಕಡಿಮೆಯಾದರೆ ಇರಲಿ ಎಂದು ಅವ್ವ ಈರುಳ್ಳಿ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವೊಂದನ್ನು ಸೊಂಟದಲ್ಲಿ ಇಟ್ಟುಕೊಂಡೆ. ಶಾಲೆಯ ಬೂಟುಗಳನ್ನೆ ಧರಿಸಿ, ಹನುಪ್ಪನಿಗೆ ಕಾಪಾಡಪ್ಪಾ ದೇವರೇ ನಿನಗೆ ಒಂದು ಕಾಯಿ ಒಡೆಸುತ್ತೇನೆ ಎಂದು ಮನಸ್ಸಿನಲ್ಲಿ ಬೇಡಿಕೊಂಡು ದೇವರ ಜಗುಲಿಯಲ್ಲಿದ್ದ ನಿಂಬೆಕಾಯಿಯೊಂದನ್ನು ಕಿಸೆಯಲ್ಲಿ ಇಟ್ಟುಕೊಂಡು ಆ ಆಮಾವಾಸ್ಯೆ ಕತ್ತಲ ರಾತ್ರಿಯಲ್ಲಿ ವೀರಯೋಧನಂತೆ ಹೊರಬಿದ್ದೆ. ದಾರಿಯ ಆ ಒಂದು ಗಿಡದ ಕೆಳಗೆ ನಿಜಕೂ ಒಂದು ಕೊಳ್ಳಿ ಅಡ್ಡಾಡುತ್ತಿತ್ತು. ಆಗಾಗ ಅದರ ಮುಖದಲ್ಲಿ ದೀಪದಂತೆ ಉರಿ ಹೊತ್ತಿಕೊಂಡು ಸುರ್ರ.. ಎಂದು ಶಬ್ದಮಾಡಿ ಮಿನುಗುತ್ತಾ ಉರಿದು ನಂದುತ್ತಿತ್ತು. ಯಾಕೋ ಕಾಲುಗಳು ಮುಂದೆ ಹೊಗಲಿಕ್ಕೆ ಒಪ್ಪುತ್ತಿಲ್ಲ. ಹತ್ತಿರ ಹೋದರೆ ಕೊಳ್ಳಿ ದೆವ್ವ ಮೈಮೇಲೆ ಜಗಿದು ಸುಟ್ಟು ಹಾಕತ್ತದೆ ಎಂದು ಶಂಕ್ರಪ್ಪ ಮಾಮಾ ಹೇಳಿದ್ದು ನೆನಪಾಗಿ ಮೈಯಲ್ಲಾ ಭಯ ಆವರಿಸಿ ಆ ಚಳಿ ರಾತ್ರಿಯಲ್ಲಿಯೂ ಬೇವರತೊಡಗಿದೆ. ಪುಣ್ಯಕ್ಕೆ ನನ್ನ ಜೊತೆ ಬೀಮ್ಯಾ(ನಾಯಿ) ಬಂದಿತ್ತು. ಅದು ಕೂಡಾ ಮುಂದೆ ಹೊಗಲಾರದೇ ನನ್ನನ್ನು ಬಿಟ್ಟು ಹಿಂದಕ್ಕೂ ಹೋಗಲಾರದೇ ಬೌ ಬೌ ಎಂದು ಬೊಗಳತೊಡಗಿತು. ನಾನು ದೈರ್ಯ ವಹಿಸಿ ಮತ್ತೆ ಹಿಡಿಗಲ್ಲು ಆರಿಸಿಕೊಂಡು ಕಲ್ಲು ಬೀಸತೊಡಗಿದೆ. ಆದರೆ ಆ ಕೊಳ್ಳಿ ದೆವ್ವ ಬಹಳ ಶ್ಯಾಣಾ ಇದ್ದಂತಿತ್ತು. ಅತ್ತಿತ್ತ ಸರಿದಾಡಿ ಕಲ್ಲು ಬಿಳುವುದನ್ನು ತಪ್ಪಿಸಿಕೊಳ್ಳತೊಡಗಿತು. ನಾನು ಕಲ್ಲು ಬೀಸುವುದನ್ನು ಮುಂದುವರೆಸಿಯೇ ಇದ್ದೆ. ಕೊನೆಗೊಮ್ಮೆ ಕಲ್ಲು ದೆವ್ವಿಗೆ ಬಡಿಯಿತೆಂದು ಕಾಣುತ್ತದೆ. ದೆವ್ವ ಕೊಳ್ಳಿ ಸಮೇತ ನೇಲಕ್ಕೆ ಬಿತ್ತು. ಬೀಮ್ಯಾ ದೆವ್ವದ ಹತ್ತಿರ ಓಡಿ ಹೋಗಿ ನೆಲಕ್ಕೆ ಬಿದ್ದ ದೇವ್ವವನ್ನು ಮೂಸಿ ನೋಡಿ ಬೊಗಳತೊಡಗಿತು. ಎಲ್ಲಿದ್ದನೊ ಎನೋ, ಶಂಕ್ರಪ್ಪ ಮಾಮಾ ಓಡಿಬಂದು ನೀನು ನಿಜಕ್ಕೂ ದೈರ್ಯವಂತ ಕಣಪ್ಪಾ ಎಂದು ಹೊಗುಳುತ್ತಾ ಆ ಕೊಳ್ಳಿ ದೆವ್ವದ ತಯಾರಿಕೆಯ ಹಿಂದಿನ ಗಮ್ಮತ್ತನ್ನು ಬಿಚ್ಚಿಟ್ಟ. ಉದ್ದದ ತೆಂಗಿನ ನಾರಿನ ಹಗ್ಗ ತೆಗೆದುಕೊಂಡು ಅದರಲ್ಲಿ ಅಲ್ಲೊಂದು ಇಲ್ಲೊಂದು ದೀಪದ ಕಡ್ಡಿಗಳನ್ನು ತುರುಕಿ ಆ ಹಗ್ಗವನ್ನು ಗಿಡದ ಟಂಗೆಗೆ ಕಟ್ಟುವುದಂತೆ. ಕೆಳಗೆ ಆ ಹಗ್ಗಕ್ಕೆ ಬೆಂಕಿ ಹಚ್ಚಿ ಬಿಡುವುದು. ಬೆಂಕಿ ಮೇಲಕ್ಕೆ ಉರಿಯುತ್ತಾ ಹೋಗುತ್ತದೆ ಮತ್ತು ತನ್ನ ಸ್ಪರ್ಶಕ್ಕೆ ಬರುವ ಬೆಂಕಿ ಕಡ್ಡಿಗಳನ್ನು ಹೊತ್ತಿಸಿ ಬೆಳಗಿಸುತ್ತದೆ ಅದೇ ವೇಳೆಯಲ್ಲಿ ಗಾಳಿಗೆ ಅಲುಗಾಡುತ್ತಾ ಅದು ಅಡ್ಡಾಡಿದಂತೆ ಬಾಸಾವಾಗುತ್ತದೆ. ಈ ಸರಳ ತಂತ್ರವನ್ನು ಹೂಡಿ ಶಂಕ್ರಪ್ಪ ಮಾಮಾ ನನ್ನನ್ನು ದೆವ್ವದ ಬಲಿಗೆ ಕೆಡುವುಲು ನೋಡಿದ. ಆ ಕೊಳ್ಳಿ ದೆವ್ವವನ್ನು ಕೊಂದ ನಂತರ ನನಗೆ ಕೋಳಿ ಬಾಡೂಟ ಊಟ ಉಂಡು ಆನೆಬಲ ಬರಿಸಿಕೊಂಡು ಮತ್ತೊಂದು ದೆವ್ವ ಸಿಕ್ಕರೆ ಕೊಲ್ಲಬೇಕೆಂದು ಅಣಿಯಗತೊಡಗಿದೆ. ನನ್ನ ಮತ್ತು ದೆವ್ವಗಳ ನಡುವಿನ ವೈರತ್ವ ಇತ್ತೀಚಿಗೆ ಕಡಿಮೆಯಾಯಿತು. ಹೈಸ್ಕೂಲು ಮುಗಿಸಿದ ನಂತರ ದೆವ್ವಗಳ ಹುಟ್ಟು-ಬೆಳವಣಿಗೆಗಳ ಬಗ್ಗೆ ದೊಡ್ಡ ಸಂಶೋಧನೆಯನ್ನೆ ಮಾಡಿ ದೆವ್ವದ ಸ್ಪೆಷಲ್ ವಿಜ್ಞಾನಿಯಾಗಬೇಕೆಂದು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆರಿಸಿಕೊಂಡೆ. ಕಾಲೇಜು ಸೇರಿದ ಹೊಸತರಲ್ಲಿಯೇ ರಸಾಯಣವನ್ನು ಬೋಧಿಸಬೇಕಾದ ಮೇಸ್ಟ್ರು ಒಂದು ದಿನ ಬಾನಾಮತಿಯನ್ನು ಬಿಡಿಸುವ ಸಮಾಜ ಸೇವಕರನ್ನು ಕರೆದುಕೊಂಡು ಬಂದು ದೆವ್ವಾಯಣ’ದ ಬಗ್ಗೆ ಉಪನ್ಯಾಸ ಕೊಡಿಸಿದ್ದರು. ‘ದೆವ್ವ ಎನ್ನುವುದೊಂದು ಭ್ರಮೆ. ಮನುಷ್ಯ ಸಾವಿಗೆ ಹೆದರುವುದರಿಂದ ಉರುಲು ಹಾಕ್ಕೊಂಡು, ವಿಷ ತೊಗೊಂಡು, ಕೆರೆ ಬಾವಿ ಹಾರಿ, ಆಪಘಾತವಾಗಿ ಯಾರಾದರು ಸತ್ತ ಸ್ಥಳಕ್ಕೆ ನಾವು ಏಕಾಂಗಿಯಾಗಿ ಹೋದಾಗ ಸಹಜವಾಗಿಯೇ ನಮಗೆ ಭಯವಾಗುತ್ತದೆ. ಅದರಲ್ಲಿಯೂ ಕತ್ತಲಲ್ಲಿ ನಾವು ಹೋದರೆ, ನಮ್ಮ ಪಂಚೇಂದ್ರೀಯಗಳಾದ ಕಣ್ಣು, ಕಿವಿ, ಮೂಗು, ಬಾಯಿ ಚರ್ಮಗಳು ತಮ್ಮ ಕೆಲಸ ಮಾಡುವಲ್ಲಿ ತಡಾಬಡಾಯಿಸುತ್ತಿರುತ್ತವೆ, ಸ್ವಲ್ಪ ಸಮಯದಲ್ಲಿಯೆ ನಮ್ಮ ಮನಸ್ಸು ದುರ್ಬಲವಾಗುತ್ತದೆ. ಆಗ ಸಡನ್ನಾಗಿ ಏನಾದರೂ ಶಬ್ದ ಕೇಳಿದರೆ, ನಮ್ಮ ಮೈಗೆ ಸ್ಪರ್ಶವಾದರೆ, ಕಣ್ಣಿಗೆ ಗೋಚರವಾದರೆ ಅದು ದೆವ್ವವೇ ಆಗಿರಬೇಕು ಎಂಬ ಭ್ರಮೆಗೆ ಒಳಗಾಗಿ ಇಲ್ಲದ ದೆವ್ವಿನ ಕಥೆ ಹೇಳುತ್ತೇವೆ’ ಎಂದು ಸಂಕ್ಷಿಪ್ತವಾಗಿ ವಿವರಿಸಿದರು. ಸುಡಿಗಾಡಿನಲ್ಲಿನ ಎಲುಬಿನಲ್ಲಿರುವ ರಂಜಕ ಗಾಳಿ ಸಂಪರ್ಕಕ್ಕೆ ಬಂದಾಗ ಬೆಂಕಿಯಂತೆ ಹೇಗೆ ಹೊತ್ತಿ ಉರಿಯುತ್ತದೆ ಎಂಬುದನ್ನು ಪ್ರಯೋಗ ಮಾಡಿ ತೋರಿಸಿದರು. ಎಲ್ಲಿದ್ದರೋ ಮಹಾತ್ಮರು. ಸತತ 18 ವರ್ಷಗಳಿಂದ ನನ್ನ ಮನದ ಮೂಲೆಯಲ್ಲಿ ನೆಲೆಗೊಂಡು ಕಾಡಿಸಿ, ಪೀಡಿಸುತ್ತಿದ್ದ ದೆವ್ವವನ್ನು ಒಂದೆ ಒಂದು ಉಪನ್ಯಾಸದಿಂದ ಹೊಡೆದೋಡಿಸಿಬಿಟ್ಟರು ಎಂದು ನನಗೆ ಬಹಳಷ್ಟು ಖುಷಿಯಾಯಿತು. ಮರುಕ್ಷಣವೇ ದೆವ್ವದ ಸ್ಪೆಷಲ್ ವಿಜ್ಙಾನಿಯಾಗಬೇಕೆಂದು ನನ್ನ ಮಹಾನ್ ಕನಸಿಗೆ ತಣ್ಣೀರೆರಚಿದರಲ್ಲಾ ಎಂದು ಬಹಳಷ್ಟು ಸಿಟ್ಟು ಬಂತು. ‘ಇಲ್ಲದ ದೆವ್ವದ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಂಡಿದ್ದೆನಲ್ಲಾ’ ಎಂದು ಈಗ ನೆನಿಸಿಕೊಂಡರೆ ನನ್ನ ಅಜ್ಜಾನಕ್ಕೆ ನನಗೆ ಮುಜಗುರವಾಗುತ್ತದೆ. ‘ಇವನೌನ ಮಗಂದು ದೆವ್ವ ಈ ಸಲ ಕೈಗೆ ಸಿಗಲಿ ಒಂದು ಕೈ ನೋಡಕೊಂಡು ಬೀಡ್ತಿನಿ’ ಅನಕೊಂಡು ಸಿಟ್ಟಿನಿಂದ ತೋಳೆರೆಸುತ್ತಿರುವಾಗಲೆ ‘ದೆವ್ವ ಇಲ್ಲವೇ ಇಲ್ಲ’ ಎಂಬುದು ನೆನಪಾಗಿ ನನ್ನ ಉತ್ತರ ಪೌರುಷಕ್ಕೆ ನಾನೆ ನಾಚಿಕೆಪಟ್ಟುಕೊಳ್ಳುತ್ತೇನೆ.]]>

‍ಲೇಖಕರು G

March 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: