ಹೀಗೊಂದು ಶಬ್ದರೋಗದ ನೋವಿನಲ್ಲಿ…

“ರಾಗಿರೊಟ್ಟಿ” ಕಾಲಂ

urmile.jpgಊರ್ಮಿಳೆ

ರಾಮವಾಗಿ ಊಟ ಎಂಜಾಯ್ ಮಾಡ್ತಿದ್ದೆ. ಇನ್ನೊಂದು ತುತ್ತು ಬಾಯಿಗಿಡಬೇಕು ಆಗ ಬಂತು ಒಂದು ಸಣ್ಣ ಗದರಿಕೆ “ಯಾಕಷ್ಟು ಶಬ್ದ ಮಾಡ್ತೀಯಾ, ಸದ್ದಿಲ್ಲದೆ ತಿನ್ನು”. ಅಂತಹವರೆಗೂ ಆ ದಿನದವರೆಗೂ ನನಗೆ ಹೇಗೆ ತಿನ್ತೀನಿ ನಾನು ಅನ್ನೋದೇ ಗೊತ್ತಿರಲಿಲ್ಲ. ಅಥವಾ, ತಿನ್ನೋದಕ್ಕೂ ಒಂದು ರೀತಿ ನೀತಿ ಇರುತ್ತೆ ಅನ್ನೋದು ಗೊತ್ತಿರಲಿಲ್ಲ. ಏನು ಗೊತ್ತಿತ್ತು ಆಗ? ಸ್ಕೂಲ್ ಗೆ ಸೇರಿ ಎರಡು ಮೂರು ವರ್ಷ ಆಗಿತ್ತೇನೋ ಅಷ್ಟೆ. ಬೇಸಿಗೆ ರಜಕ್ಕೆ ಅಂತ ಆ ಕಾಲದಲ್ಲಿ ಪಾಷ್ ಆದ, ಹೈಫೈ ಡಾಕ್ಟರ್ ಆಂಟಿ ಮನೆಗೆ ಹೋಗಿದ್ದೆ. ಆಗಲೇ ಈ ಹುಕುಂ ಬಂದಿದ್ದು.

ಶಬ್ದ ಮಾಡ್ಕೊಂಡು ತಿನ್ನೋದ್ ಸರೀನಾ, ಶಬ್ದ ಇಲ್ದೀರಾ ತಿನ್ನೋದು ಸರೀನಾ… ಅನ್ನೋದರ ಬಗ್ಗೆ ಅವತ್ತು ಎಷ್ಟು ಕನ್ ಫ್ಯೂಷನ್ ನಲ್ಲಿದ್ದೆನೋ ಇವತ್ತೂ ಅಷ್ಟೇ ಕನ್ ಫ್ಯೂಷನ್ ಇದೆ. ಆದರೆ ಯಾರ ಬಾಯಿಂದಾನಾದ್ರೂ ಶಬ್ದ ಬಂದ್ರೆ ಮಾತ್ರ ನನ್ನ ತಲೇಲಿ ಡಾಕ್ಟರ್ ಆಂಟಿ ಎದ್ದು ಕುಳಿತುಬಿಡ್ತಾರೆ. ಪರಕಾಯ ಪ್ರವೇಶ ಮಾಡ್ತಾರೆ.

ಪಾಪ ಪುಟಾಣಿಗಳು ಟಿ.ವಿ. ಸೀರಿಯಲ್ ನಲ್ಲಿ ಕಣ್ಣು ನೆಟ್ಟುಕೊಂಡು ತಿನ್ತಾರೆ. ಏನು ತಿನ್ತಾರೆ, ಹೇಗೆ ತಿನ್ತಾರೆ ಅನ್ನೋದನ್ನ ಕೇಳೋ ಕಾಲ ಅಲ್ಲ ಇದು. ತಿಂದ್ರೆ ಸಾಕು ಅನ್ನೋ ಕಾಲ. ಅಂಥಾದ್ರಲ್ಲಿ ನನ್ನೊಳಗೆ ಆಂಟಿ ಎದ್ದು ನಿಲ್ತಾರೆ. “ಊರಿಗೆಲ್ಲಾ ಗೊತ್ತಾಗ್ಬೇಕಾ ನೀನು ತಿನ್ನೋದು” ಅನ್ನೋ ಮಾತು ದಢಾರ್ ಅಂತ ಉರುಳುತ್ತೆ. ಇದು ನಾನು ಹೇಳ್ಬೇಕಿತ್ತಾ, ಇಲ್ವಾ ಅನ್ನೋ ಗೊಂದಲ ಸಹಾ ನನ್ನ ತಲೇಲಿ ಆಟ ಆಡ್ಲಿಕ್ಕೆ ಶುರು ಮಾಡುತ್ತೆ.

oo.jpgಯಾರಾದ್ರೂ ಬಾಳೆಹಣ್ಣು ತಿನ್ನುವಾಗ, ಮೂಳೆ ಕಡಿಯುವಾಗ, ಟೀ ಹೀರುವಾಗ ಡಾಕ್ಟರ್ ಆಂಟಿ ಎದ್ದೆದ್ದೂ ಕುಣೀತಾರೆ. ಅವತ್ತಿನಿಂದ ಇವತ್ತಿನವರೆಗೂ ನನಗೆ ಈ ಶಬ್ದರೋಗ ತಗಲಿಕೊಂಡಿದೆ. ಯಾರು ಹೇಗೆ ತಿನ್ತಾರೆ ಅನ್ನೋದರ ಬಗ್ಗೆ ನನ್ನ ಡಿಟೆಕ್ಟಿವ್ ಐ ಇಟ್ಟೇ ಇರ್ತೀನಿ. ಪಾಪ ಐಟಿ ಎಕ್ಸ್ ಪರ್ಟ್ ಸುಧಾಂಶು ಟೀ ಹೀರೋ ರೀತಿ ನೋಡಿ ನಾನು ಇವನೇನು ಮಾಡ್ತಾನೆ ಐಟಿ ಮಹಾ ಅನ್ನೋ ನಿರ್ಧಾರಕ್ಕೆ ಬಂದ್ಬಿಡ್ತೀನಿ. ಅಣ್ಣ ತಟ್ಟೇಲಿ ಊಟ ಬಳಿಯೋ ರೀತಿ ನನಗೆ ಒಂದಿಷ್ಟು ಪರ್ಸೆಂಟ್ ಗೌರವ ಕಡಿಮೆ ಮಾಡಿಬಿಡುತ್ತೆ. ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ಸ್ ಆದ್ರೂ ಅನ್ನ ಉಂಡೇ ಕಟ್ಟೋದು ನೋಡಿದ್ರೆ ಒಂದಿಷ್ಟು ಬಿರುಕು ಕಾಣಿಸಿಕೊಂಡುಬಿಡುತ್ತೆ. ಬೆಂಗಾಲಿ ಫ್ರೆಂಡ್ ಗೆ ಅನ್ನ ಸಾರು ಖೀರು ರೋಟಿ ದಹಿ ಎಲ್ಲಾ ಒಂದೇ ಸಲಾ ತಟ್ಟೇಲಿ ಕೂರಬೇಕು. ಆದರೆ ಅವರ ಜೊತೆ ಊಟ ಮಾಡಿದ ದಿನ ನನಗೇ ಗೊತ್ತಿಲ್ದೆ ನಾಲ್ಕು ಮಾತು ಕಡಿಮೆ ಮಾತಾಡಿರ್ತೀನಿ.

ಒಂದ್ಸಲಾ ನನ್ನ ಫ್ರೆಂಡ್ ಹೇಳಿದ್ದ. ಮಾಂಸ ಕತ್ತರಿಸೋವಾಗ ಅವರಿವರು ಏನನ್ಕಳ್ತಾರೋ ಅಂತಾ ತಿಂದ್ರೆ ಲಾಸ್ ನಮಗೇ. ಜಗೀಬೇಕು, ಕಡೀಬೇಕು ಸುಖಾ ಸಿಗೋವರ್ಗೂ ಬಿಡಬಾರದು ಅಂತಾ. ಆದ್ರೆ ನನಗಾಗಲ್ಲ. ಎಷ್ಟೇ ಕಾಂಪ್ರೊಮೈಸ್ ಮಾಡ್ಕೊಂಡ್ರೂ ಡಾಕ್ಟರ್ ಆಂಟಿ ನನ್ನ ಬಿಡಲ್ಲ. ಕೇಳು ಯಾಕೆ ಶಬ್ದಾ ಮಾಡ್ತಾರೆ. ಮುಖಾ ವಿಕಾರ ಮಾಡ್ತಾರೆ ಅಂತ ಎದ್ದು ಕೂತುಬಿಡ್ತಾರೆ.

ಶಬ್ದ ಮಾಡ್ದೀರ ತಿಂದ್ರೆ, ತಟ್ಟೆ ನೀಟಾಗಿಟ್ಟುಕೊಂಡಿದ್ರೆ, ಸ್ಪೂನ್ ಫೋರ್ಕ್ ಬಳಸೋದು ಚನ್ನಾಗಿ ಗೊತ್ತಿದ್ರೆ ಅವರೇ ಸಿಕ್ಕಾಪಟ್ಟೆ “ಕಲ್ಚರ್ಡ್” ಅನ್ನೋ ತೀರ್ಮಾನಕ್ಕೆ ಬಂದ್ ಬಿಟ್ಟಿದೆ ನನ್ನ ಮನಸ್ಸು. ಅವರ ಮುಂದೆ ತೀರಾ ತೀರಾ ಕುಸಿದು ಹೋಗ್ತೀನಿ. ಅವರೆಲ್ಲಾ ನಾನು ತಿನ್ನೋದೇ ನೋಡ್ತಾ ಇದಾರೇನೋ ಅನ್ಸುತ್ತೆ. ಬಾಯಲ್ಲಿ ಕಿವಿ ಇಟ್ಟೀದಾರೇನೋ ಅನ್ನಿಸುತ್ತೆ. ಊಟ ಮಾಡೋ ಕೈ ತಡವರಿಸುತ್ತೆ. ಶಾಸ್ತ್ರಕ್ಕೆ ಎರಡು ತುತ್ತು ತಿಂದು ಎದ್ದು ಬಿಡ್ತೀನಿ. ಹೋಟೆಲ್ ಗೋಗೋದೆ ಹಿಂಸೆ ಅನ್ಸುತ್ತೆ. ಹೋದ್ರೆ ಬಾಯಿ ಶಬ್ದಾ ಮಾಡುತ್ತಾ ಅಂತ ಬಯಾಸ್ ಆಗ್ತೀನಿ.

ಮೊನ್ನೆ ಎಂಜಿ ರೋಡ್ ಬುಕ್ ಸ್ಟಾಲಲ್ಲಿ ಪುಸ್ತಕಗಳ ಮೇಲೆ ಕೈಯಾಡಿಸ್ತಿದ್ದಾಗ ಟೇಬಲ್ ಮ್ಯಾನರ್ಸ್ ಹೇಗೆ, ಊಟ ಮಾಡೋದು ಹೇಗೆ, ಊಟ ತಿನ್ತಾ ಇರುವಾಗ ಏನು ಮಾತಾಡ್ಬೇಕು, ಹುಡುಗರಿದ್ರೆ ಏನು ಮಾತು, ಹುಡುಗೀರಿದ್ರೆ ಏನು ಮಾತು ಅಂತೆಲ್ಲಾ ಬರೆದಿರೋ ಪುಸ್ತಕಾ ಸಿಕ್ತು. ಅದನ್ನು ನೋಡಿದ ತಕ್ಷಣ ಡಾಕ್ಟರ್ ಆಂಟಿ ಎದ್ದು ಕೂತ್ಕೊಂಡ್ರು. ನಿರಾಳವಾಗಿ ಉಸಿರು ಬಿಟ್ರು. ಈ ಪುಸ್ತಕಾ ಸಿಕ್ತಲ್ಲಾ. ಇನ್ನಾದ್ರೂ ರಿಪೇರಿ ಆಗು ಅನ್ನೋ ಥರಾ ಮುಖಾ ಮಾಡಿದ್ರು.

ಇಂಗ್ಲಿಷ್ ಪೇಪರಲ್ಲಿ ಎಟಿಕ್ವೆಟ್ಸ್ ಅಂದ್ರೆ ಹೆಂಗಿರ್ಬೇಕು ಅಂತಾ ಪ್ರತೀ ದಿನಾ ಸಪ್ಲಿಮೆಂಟ್ ನಲ್ಲಿ ಕೊಡೋದು ಇದೇ ಅಂತಾ ಅನಿಸ್ತು. ಊಟಕ್ಕೆ ಬೇಕಾಗಿರೋದು ತುತ್ತು ಅನ್ನ. ಆದರೆ ಈ ಪುಸ್ತಕಾ ಯಾಕೆ ತಿನ್ಬೇಕು ಅನಿಸ್ತು.

ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ ಅಂತಾ ಪುಣ್ಯಕೋಟಿ ಹುಲಿರಾಯನಿಗೆ ಆಫರ್ ಮಾಡ್ತಲ್ಲಾ. ಅಕಸ್ಮಾತ್ ಆ ಹುಲಿ ಪುಣ್ಯಕೋಟಿಯನ್ನ ತಿಂದಿದ್ರೆ ಹೆಂಗೆಲ್ಲಾ ಶಬ್ದ ಮಾಡ್ಕೊಂಡು ತಿಂತಿತ್ತಪ್ಪಾ ಅಂತ ನನ್ನ ಮನಸ್ಸು.

ನಾನು ವಿಲವಿಲಾ ಒದ್ದಾಡ್ತೀನಿ.

ಡಾಕ್ಟರ್ ಆಂಟಿ, ಹೇಳಿ ಪ್ಲೀಸ್ ಯಾಕೆ ಹಿಂಗ್ಮಾಡಿದ್ರಿ?

‍ಲೇಖಕರು avadhi

July 15, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This