ಹೀಗೊಬ್ಬಳು ಅಮ್ಮ…

ಬಾನಿನ ಭಗವಂತ ನಿನಗೆ ಭುವಿಯ ನನ್ನದೊಂದು ಧಿಕ್ಕಾರ

– ರಾಜ್ ಆಚಾರ್ಯ

ಈ ಬದುಕಿನ ಕ್ರೂರತೆ ಅದೆಂತಹುದೋ ನೋಡಿ ಬದುಕು ತನ್ನ ಕ್ರೂರತೆಯ ಕರಿ ನೆರಳನ್ನು ಚಾಚಿ ಕೇಕೆ ಹಾಕಿ ನಕ್ಕಾಗ ಎಂತಹ ಗಂಡೆದೆಯ ಗುಂಡಿಗೆ ಕೂಡ ಅದುರಿ ಹೋಗುವುದು ಸುಳ್ಳಲ್ಲ.ಇಂತಿಪ್ಪ ಬದುಕ ಬವಣೆಗಳ ನಡುವೆ ತನ್ನ ತನಕ್ಕೆ ಚ್ಯುತಿ ಬರದಂತೆ ತ…ಾನು ತಾನಾಗಿಯೇ ಬದುಕಲೆತ್ನಿಸುವ ಸ್ವಾಭಿಮಾನಿಯೋಬ್ಬರ ಅತ್ಯಾದ್ಭುತ ಅಮರ ಕಥನ ಇದು.ಬದುಕಿನ ಕೆಲ ರಾಜಿ ಸೂತ್ರಕ್ಕೆ ಕಟ್ಟು ಬಿದ್ದು ರಾಜಾರೋಷವಾಗಿ ಸ್ವಾಭಿಮಾನವನ್ನು ಸ್ವಾಭಾವಿಕ ಎನ್ನುವಂತು ಬಿಟ್ಟು ಬದುಕುವ??!!! ಹತ್ತು ಹಲವು ಮಂದಿಯ ನಡುವೆ ಈ ಮಹಾ ತಾಯಿಯ ಸ್ವಾಭಿಮಾನ ಆತ್ಮ ಗೌರವಕ್ಕೆ ಖುದ್ದು ಭಗವಂತನು ತನ್ನು ಸೃಷ್ಟಿಯ ಬಗ್ಗೆ ಸಮಾಧಾನಗೊಂಡಿರಲು ಸಾಕು. ಈಕೆಯ ಬಗ್ಗೆ ತಿಳಿದಾಗ ನನಗೇ ತಿಳಿಯದಂತೆ ಕಣ್ಣಾಲಿಗಳು ತೇವಗೊಂಡವು.ಆರ್ದ್ರಗೊಂಡ ಕಣ್ಣಾಲಿಗಳಲ್ಲೇ ಮಾರ್ದವತೆಯಿಂದ ಈ ವಯೋವ್ರುದ್ಧೆಯ ಜೀವನ ಪ್ರೀತಿಯಾ ಬಗ್ಗೆ ಬರೆಯಲು ಕುಳಿತಿದ್ದೇನೆ, ಆಕೆಯ ಆದ್ಯತೆ ಪ್ರತಿಯೋಬ್ಬರದಾದರೆ ಈ ಜಗತ್ತು ಅದೆಷ್ಟು ಸುಂದರವಾಗಬಹುದು ಎಂಬೊದೊಂದನ್ನು ನಿಮ್ಮ ವಿವೇಚನೆಗೆ ಬಿಡುತ್ತಿದ್ದೇನೆ. ಬದುಕಿನ ಬೇಗುದಿಗೆ ಅಳ್ಳೆದೆಯಿಂದ ಹತಾಶರಾಗಿ ಆತ್ಮ ಗೌರವ ಸ್ವಾಭಿನವನ್ನು ಅರ್ಪಿಸುವ ಕೆಲವರಿಗಾದರೂ ಇದೊಂದು ಪಾಠವಾಗಬಹುದೇ? ತನ್ನವರ ಬಗೆಗಿನ ಕಕ್ಕುಲತೆ ಅದೆಲ್ಲಕಿಂತ ಆತ್ಮ ಗೌರವವನೆಂದು ಪಣವಾಗಿಡದ ಸ್ವಾಭಿಮನವನೆಂದು ಬಿಡದ ಆಕೆಯ ಛಲಕ್ಕೆ ನನ್ನದೊಂದು ಸಲಾಂ ಹೇಳುತ್ತಾ ನಸುಕಿನಲ್ಲೇ ಬರೆದು ನಿಮ್ಮ ಕೈಗೊಪ್ಪಿಸುತ್ತಿದೇನೆ.ಒಪ್ಪಿಸಿಕೊಳ್ಳಿ. ಕಲಕತ್ತೆಯ(ಕಲ್ಕತ್ತಾ) ಗಿಜಿಗುಡವ ಬೀದಿಗಳಲ್ಲಿ ಸ್ತಿಗ್ಧ ಸಂಜೆಗಳಲ್ಲಿ ನೀವು ಎಂದಾದರು ವಿಹರಿಸುವಿರಾದರೆ ಖಂಡಿತವಾಗಿಯೂ ರಸ್ತೆ ಬದಿಯಲಿ ಹಪ್ಪಳ ಸಂಡಿಗೆ ಮಾರುವ ಈ ಸ್ವಾಭಿಮಾನಿ ಛಲಗಾತಿ ವಯೋವ್ರುದ್ಧೆ ನಿಮ್ಮ ಕಣ್ಣಿಗೆ ಬಿದ್ದೆ ಬೀಳುತ್ತಾರೆ.ಆತ್ಮಗೌರವದ ಅಳಿಸಲಾಗದ ಬೆರಗು ತುಂಬಿದ ಆಕೆಯ ಕಣ್ಣು ಖಂಡಿತವಾಗಿಯೂ ನಿಮ್ಮನ್ನು ಆಕರ್ಷಿಸದೆ ಇರದು ಕೂಡ. ಆಕೆ ಶೀಲ ಘೋಷ್.ಆಕೆಗೆ ೮೩ ರ ತುಂಬು ಹರೆಯ.ಮೂಲತಃ ಪಶ್ಚಿಮ ಬಂಗಾಳದ ಪಾಳಿ ವಾಸಿ. ದಿನಂಪ್ರತಿ ಪಾಳಿ ಇಂದ ಕಲಕತ್ತೆಗೆ (ಕಲ್ಕತ್ತಾ) ಬಸ್ಸಿನಲ್ಲೇ ಈಕೆಯ ಪಯಣ.ತಾನೋಬ್ಬಳಲ್ಲದೆ ತನ್ನೊಂದಿಗಿರುವ ಇನ್ನು ನಾಲ್ಕು ತುತ್ತಿನ ಚೀಲಗಳನ್ನು ತಾನೇ ತಯಾರಿಸಿದ ತಿಂಡಿ ತಿನಿಸುಗಳ ಮೂಲಕವೇ ತುಂಬಿಸುತ್ತಿರವ ಮಹಾ ಮಾತೃತ್ವದ ಮಹಾ ತಾಯಿ ಈಕೆ. ಈ ಮಹಾ ತಾಯಿಯ ಮೇಲಿನ ಮಮಕಾರಕ್ಕೋ ಏನೋ ದಾರಿಹೋಕರು ಆಕೆಯ ಬಗೆಗಿನ ಆದರ ಹಾಗು ಗೌರವ ಭರಿತ ಪ್ರೀತಿಯಿಂದಲೇ ಆಕೆ ತಂದ ತಿನಿಸುಗಳನ್ನು ಖರೀದಿಸುತ್ತಾರೆ.ದಿನಕ್ಕೆ ಈಕೆಯ ಕಮಾಯಿ ಬರೋಬ್ಬರಿ ೪೦೦ ರೂಪಾಯಿಗಳು.ಶ್ವಾಶಕೋಶದ ಕ್ಯಾನ್ಸೆರ್ ಗೆ ತುತ್ತಾದ ಮಗನನ್ನು ಈಗ್ಗೆ ೫ ವರ್ಷಗಳ ಹಿಂದೆಯೇ ಮಣ್ಣಿಗಿಟ್ಟರೂ ಈಕೆಯ ಜೀವನದ ಮೇಲಿನ ಪ್ರೀತಿಯಿನ್ನು ಮಾಸಿಲ್ಲ ಅದೆಂಧು ಅಧೀರಳಾಗಿಲ್ಲ ಎಂದರೆ ಈಕೆಯ ಮನದ ಅಂಥಸತ್ವ ಅದ್ಯಾವ ಪರಿಯದು ಭಗವಂತ? ದಿನಂಪ್ರತಿಯ ಪರಾವರ್ತಿತ ಪಾಳಿ ಇಂದ ಕಲಕತ್ತೆಯವರೆಗಿನ ಪಯಣದ ಈ ಪ್ರಕ್ರಿಯೆಯ ಬಗ್ಗೆ ಯಾರಾದರು ಪ್ರಶ್ನಿಸಿದರೆ ಆ ಛಲಗಾತಿಯ ಚಮತ್ಕಾರಿಕ ಉತ್ತರ: “ಕೆಲ ದಿನಗಳಲಿ ಬಸ್ಸು ತುಸು ತಡವಾಗಿ ಬಿಡುತ್ತದೆ.ಆ ದಿನಗಳಲ್ಲಿ ವ್ಯಾಪಾರ ಸ್ವಲ್ಪ ಕಷ್ಟ ಅದೊಂದು ಬಿಟ್ಟರೆ ನನಗೇ ಅಂತಹ ಯಾವುದೇ ಸಮಸ್ಯೆಯಿಲ್ಲ.ಈ ಬದುಕು ನನ್ನದು ಬಾಳು ನನ್ನದೇ.ಈ ಇಳಿ ವಯಸ್ಸಿನಲ್ಲಿ ಬೇಡಿ ತಿನ್ನಲು ಮನಸ್ಸು ಬಾರದು ಎಂದೇ ಈ ವ್ಯಾಪಾರದ ದ್ವಾರ ನನ್ನ ಮತ್ತು ನನ್ನ ನಂಬಿದ ಇನ್ನು ನಾಲ್ಕು ಹೊಟ್ಟೆ ಹೊರೆಯುತ್ತಿದ್ದೇನೆ.ಬದುಕಿನ ಬಗ್ಗೆ ನನಗೇ ಯಾವುದೇ ಪೂರ್ವಗ್ರಹಗಳಿಲ್ಲ.ಹೆಮ್ಮೆಯಿದೆ.ಕೊನೆಯ ಉಸಿರಿರುವವರೆಗೂ ದುಡಿದು ತಿನ್ನುವಂತೆ ಮಾಡು ಎಂಬೋದೊಂದೇ ಆ ದಯಾಮಯ ಭಗವಂತ ನಲ್ಲಿ ನನ್ನ ಪ್ರಾರ್ಥನೆ”. ನನ್ನ ತುಂಬಿದ ಕಣ್ಣಾಲಿಗಳಲ್ಲೇ ಕಲ್ಲು ಮನಸಿನ ಆ ಭಗವಂತನಿಗೆ ನನ್ನದೊಂದು ಧಿಕ್ಕಾರ.]]>

‍ಲೇಖಕರು G

May 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

6 ಪ್ರತಿಕ್ರಿಯೆಗಳು

 1. Basuraju

  thanks sir e lekana bardiddakke,navu pata kalivantaddu…badukigondu spoorti. Devarige nannaddondu DIKKAR…

  ಪ್ರತಿಕ್ರಿಯೆ
 2. savitri

  Ajjiyanne avalambisida 4 jeevigalu ajjigintalu durbalare? angavikalare? aakeya avalambhitaru aakeginta durbalariddu, ajji dudiyuvantagidre Bhagavantanige naanu kooda dhikkarisuve…

  ಪ್ರತಿಕ್ರಿಯೆ
 3. D.RAVI VARMA

  mothers ಡೇ ಯಲ್ಲಿ ಹತ್ತು ಹಲವು ಜನ ತಾಯಿಯ ಬಗೆಗಿನಲೇಖನ ಓದಿದೆ , ಆದರೆ ಈ ಲೇಖನ ಅಲ್ಲ ವಾಸ್ತವದ ಕಥೆ ನಿಜಕ್ಕೂ ಕರಳು ಹಿಂಡಿ ಬಿಡ್ತು ಆ ಅಮ್ಮನಿಗೂ, ಆಕೆಯ ಜೀವನ ಪ್ರೀತಿಗೂ, ಆಕೆಯ ಚಲಕ್ಕು ಒಂದು ಗೌರವದ ನಮಸ್ಕಾರ ನಿಮ್ಮ olagannu ಮತ್ತು ನಿಮ್ಮ ಸ್ಪಂದನಕ್ಕು ಅಭಿನಂದನೆಗಳು
  RAVI VARMA HOSAPETE

  ಪ್ರತಿಕ್ರಿಯೆ
 4. shama, nandibetta

  ತುಂಬಿದ ಕಣ್ಣಾಲಿಗಳಲ್ಲೇ ಕಲ್ಲು ಮನಸಿನ ಆ ಭಗವಂತನಿಗೆ ನನ್ನದೊಂದು ಧಿಕ್ಕಾರ.
  ಈಕೆಯ ಮನದಲ್ಲಿ ಆ ಪರಿಯ ಅಂತಃಸತ್ವ ತುಂಬಿ ಆಕೆಯನ್ನು ನೆಮ್ಮದಿಯಾಗಿಟ್ಟ ಅದೇ ಭಗವಂತನಿಗೆ ನಮಸ್ಕಾರ…
  ನಿಮ್ಮ ಭಾವ ಸೂಕ್ಷ್ಮತೆಗೆ ಸಹಸ್ರ ಸಲಾಂ…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: